ನಗರಗಳತ್ತ ವಲಸೆ ತಡೆಯುವುದು ಅಗತ್ಯ

0

ಬೆಂಗಳೂರು: ಫೆಬ್ರುವರಿ 01 (ಜಿಕೆವಿಕೆ) ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಕ್ಯಾಸೆಲ್ ವಿಶ್ವವಿದ್ಯಾನಿಲಯ, ಜರ್ಮನಿ, ಜಾರ್ಜ್-ಆಗಸ್ಟ್ ವಿಶ್ವವಿದ್ಯಾನಿಲಯ, ಗೊಟ್ಟಿಂಗನ್, ಜರ್ಮನಿ ಹಾಗೂ ಜೈವಿಕ ತಂತ್ರಜ್ಞಾನ ಇಲಾಖೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ಭಾರತ ಸರ್ಕಾರ, ನವದೆಹಲಿ ಇವರ ಸಂಯುಕ್ತ ಆಶ್ರಯದಲ್ಲಿ ಇಂಡೋ-ಜರ್ಮನ್ ನಗರ-ಗ್ರಾಮೀಣ ಸಮನ್ವಯತೆಯ ಕುರಿತು ಸಮ್ಮೇಳನದ ಉದ್ಘಾಟನಾ  ಸಮಾರಂಭವು ದಿನಾಂಕ: ೧ ನೇ ಜನವರಿ ೨೦೨೩ರಂದು ಜಿಕೆವಿಕೆ ಆವರಣದಲ್ಲಿ ಜರುಗಿತು.

ಡಾ. ಆಂಡ್ರಿಯಾಸ್ ಬ್ಯುಕರ್ಟ್, ಸಂಯೋಜಕರು, ಇಂಡೋ-ಜರ್ಮನ್ ಯೋಜನೆ, ಕ್ಯಾಸೆಲ್ ವಿಶ್ವವಿದ್ಯಾನಿಲಯ, ಜರ್ಮನಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು. “ಭಾರತ ಹಾಗೂ ಜರ್ಮನಿಯು ವೈಜ್ಞಾನಿಕ ಸಂಶೋಧನೆಗಳ ಜ್ಞಾನವನ್ನು ವಿನಿಮಯ ಮಾಡಿಕೊಳ್ಳುವುದರಿಂದ ಉಭಯ ದೇಶಗಳ ಬಾಂಧವ್ಯತೆ ಮತ್ತಷ್ಟು ಹೆಚ್ಚಾಗಿ ಎರಡೂ ದೇಶಗಳು ಅಭಿವೃದ್ಧಿ ಸಾಧಿಸಬಹುದು ಎಂದರು.

ಬಹಳ ಹಿಂದಿನಿAದಲೂ ಭಾರತ ಮತ್ತು ಜರ್ಮನಿಯ ಸಂಬಂಧ ಗಟ್ಟಿಯಾಗಿದೆ. ಎರಡು ದೇಶಗಳು ಕೃಷಿ, ವ್ಯಾಪಾರ ಮುಂತಾದ ವಿಷಯಗಳಲ್ಲಿ ಪರಸ್ಪರ ಉತ್ತಮ ಸಂಬAಧವನ್ನು ಹೊಂದಿರುತ್ತವೆ. ವಿಶ್ವದಲ್ಲಿ ಗ್ರಾಮೀಣ ಜನತೆಯು ಪಟ್ಟಣಗಳತ್ತ ವಲಸೆ ಹೋಗುತ್ತಿರುವುದರಿಂದ ನಗರ-ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ, ಜನಜೀವನ, ಆರ್ಥಿಕತೆ, ಸಂವಹನ ಮುಂತಾದ ವಿಷಯಗಳಲ್ಲಿ ಸಂಶೋಧನೆ ಕೈಗೊಂಡು ಸೂಕ್ತ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸುವುದು ಅವಶ್ಯಕವೆಂದು ಅವರು  ಅಭಿಪ್ರಾಯ ಪಟ್ಟರು.

ಡಾ. ಎಸ್. ವಿ. ಸುರೇಶ, ಕುಲಪತಿ, ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಅವರು ಅಧ್ಯಕ್ಷತೆ ವಹಿಸಿ ಹಳ್ಳಿಗಳಿಂದ ನಗರಗಳತ್ತ ವಲಸೆ ಬರುವುದರಿಂದ ಅನೇಕ ಸಮಸ್ಯೆಗಳು ಹುಟ್ಟಿಕೊಂಡಿರುತ್ತವೆ. ಅವುಗಳಲ್ಲಿ ಆರೋಗ್ಯ, ಆಹಾರ, ವಸತಿ ಹಾಗೂ ಪೋಷಕಾಂಶಗಳ ಕೊರತೆ ಪ್ರಮುಖವಾದುವು. ನಗರ ವಾಸಿಗಳಲ್ಲಿ ಬಹಳಷ್ಟು ಬಡಜನರು ನಗರೀಕರಣದಿಂದಾಗಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದರು.

ರಾಷ್ಟೀಯ ಪೋಷಕಾಂಶ ಸರ್ವೆಕ್ಷಣ ಬ್ಯೂರೋ  ಕೈಗೊಂಡ ಸಮೀಕ್ಷೆಯ ಪ್ರಕಾರ ನಗರದ ಕೊಳಚೆ ವಾಸಿಗಳ ಆಹಾರದಲ್ಲಿ ಶಕ್ತಿ, ವಿಟಮಿನ್‌ಗಳ ಕೊರತೆಯ ಲಕ್ಷಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಬೇಳೆ, ಹಾಲು ಮತ್ತು ಹಾಲಿನ ಪದಾರ್ಥಗಳ ಸೇವನೆ ಶಿಫಾರಸ್ಸು ಮಾಡಿದ ಪ್ರಮಾಣಕ್ಕಿಂತ ಬಹಳ ಕೆಳ ಮಟ್ಟದಲ್ಲಿ ಇದೆ. ಇದರಿಂದಾಗಿ ಅಪೌಷ್ಠಿಕತೆ ಹೆಚ್ಚಾಗಿ ಅನೇಕ ಸಮಸ್ಯೆಗಳು ಉದ್ಭವವಾಗುತ್ತಿವೆ. ಈ ದೆಸೆಯಲ್ಲಿ ನಗರೀಕರಣದಿಂದಾದ ಸಮಸ್ಯೆಗಳ ಬಗ್ಗೆ ಸಮಗ್ರ ಚಿಂತನೆ ಮಾಡುವ ಅವಶ್ಯಕತೆಯಿದೆ. ಹಳ್ಳಿಗಳಿಂದ ನಗರದ ಕಡೆ ವಲಸೆ ಬರುವವರಿಗೆÀ ವಿದ್ಯಾಬ್ಯಾಸ, ಆಹಾರ ಭದ್ರತೆ ಹಾಗೂ ಆರೋಗ್ಯದ ಬಗ್ಗೆ ಹೆಚ್ಚು ಗಮನ ವಹಿಸಬೇಕಾಗಿದೆ ಎಂದರು.

 ಈ ನಿಟ್ಟಿನಲ್ಲಿ ಅಬ್ದುಲ್ ಕಲಾಂ ಅವರ ಕನಸ್ಸಿನ ಕೂಸದ ಪುರ (PUಖಂ) ಹಳ್ಳಿಗಳಲ್ಲಿ ನಗರದಲ್ಲಿ ಸಿಗುವ ಎಲ್ಲಾ ಸೌಲಭ್ಯಗಳನ್ನು ಒದಗಿಸಿದಾಗ ಮಾತ್ರ ಗ್ರಾಮೀಣ ಪ್ರದೇಶದ ಜನರು ಪಟ್ಟಣದ ಕಡೆ ವಲಸೆ ಹೋಗುವುದನ್ನು ತಡೆಯಲು ಸಾಧ್ಯ.   ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ,  ಆರ್ಯ ಯೋಜನೆ (ಂಖಙA)ಯAತೆ ಕೃಷಿಯಲ್ಲಿ ಯುವಜನತೆಯನ್ನು ಆಕರ್ಷಿಸಿದಾಗ ಮಾತ್ರ ವಲಸೆ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ದೇಶದ ಸಮಗ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರು ಹೀಗಾಗಲೇ ಹಲವಾರು ದೇಶಗಳ ಸಂಸ್ಥೆಗಳ ಜೊತೆ ಕೃಷಿಯಲ್ಲಿ ಸಂಶೋಧನೆ ಕೈಗೊಳ್ಳಲು ಒಡಂಬಡಿಕೆ ಮಾಡಿಕೊಂಡಿದೆ. ಇತರ ದೇಶಗಳ ಜೊತೆ ಸಂಶೋಧನೆ ಕೈಗೊಳ್ಳಲು ಮತ್ತು ಸಂಶೋಧನೆ ಫಲಿತಾಂಶಗಳನ್ನು ವಿನಿಮಯ ಮಾಡಿಕೊಳ್ಳಲು ಉತ್ಸುಕವಾಗಿದೆ. ಈ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ, ಡಾ ಕೆ.ಬಿ. ಉಮೇಶ್, ಸಂಶೋಧನಾ ನಿರ್ದೇಶಕರು, ಡಾ ಹೆಚ್. ಸಿ ಪ್ರಕಾಶ್, ಡೀನ್( ಸ್ನಾತಕೋತ್ತರ), ಕೃಷಿ ವಿಶ್ವವಿದ್ಯಾನಿಲಯದ ಅಧಿಕಾರಿಗಳು ಹಾಗೂ ಜರ್ಮನಿ ದೇಶದ ೨೫ ಪ್ರತಿನಿಧಿಗಳು ಉಗಾಂಢ ದೇಶದ ಪ್ರತಿನಿಧಿ  ಸೇರಿದಂತೆ ೧೫೦ ಪ್ರತಿನಿಧಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here