ಮಳೆಗಾಲ ಜೋರಾಗಿದೆ. ಬರ್ಲಿ ಬಿಡಿ ಬರಬೇಕಾದ್ದೆ. ಹಂಗೇ ಸುಮ್ನೆ ನಿಮ್ಮ ಮನೇಮೇಲೆ ಎಷ್ಟು ನೀರು ಸುರೀತು ಲೆಕ್ಕ ಹಾಕ್ಕಳಿ.
1 ಚದರ ಮೀಟರ್ ನಲ್ಲಿ 1 ಮಿ. ಮೀ ಮಳೆ ಬಿದ್ರೆ 1 ಲೀ ನೀರು.
ಮನೆ 100 ಚದರ ಮೀ ಇದ್ರೆ ಮನೆ ಮೇಲೆ ಸುರಿಯೋ ನೀರು
1 ಮಿ ಮೀ ಮಳೆ ಆದ್ರೆ 100 ಲೀ.
10 ಮಿ ಮೀ ಮಳೆ ಆದ್ರೆ 1000 ಲೀ ನೀರು.
100 ಮಿ ಮೀ ಮಳೆ ಆದ್ರೆ 10000 ಲೀ ನೀರು.
ನಮ್ಮ ಮನೆ ಅಂದಾಜು 200 ಚದರ ಮೀ . ( ಹಳ್ಳಿಮನೆ ಅದ್ರಿಂದ ಮನೆ ಕೊಟ್ಟಿಗೆ ಎಲ್ಲಾ ಸೇರಿ) ನಮ್ಮ ಪ್ರದೇಶದ ಸರಾಸರಿ ವಾರ್ಷಿಕ ಮಳೆ 4000 ಮಿ ಮೀ. ಅಂದ್ರೆ ವರ್ಷಕ್ಕೆ ನಮ್ಮ ಮನೆ ಮೇಲೆ ಸುರಿಯೋ ನೀರು 800000 ಲೀ ( 8 ಲಕ್ಷ ಲೀಟರ್)
ನಿಮ್ಮ ಪ್ರದೇಶದಲ್ಲಿ ಆಗೋ ಮಳೆ ಎಷ್ಟು ? ನಿಮ್ಮ ಮನೆ ಅಳತೆ ಎಷ್ಟು ಲೆಕ್ಕ ಹಾಕ್ಕಳಿ. ಹಂಗೇ ಅಂಗಳ ಹಿತ್ಲು ತೋಟ ಗದ್ದೆ ಮೇಲೆಲ್ಲಾ ಬೀಳೋ ನೀರೆಷ್ಟು ಲೆಕ್ಕ ಹಾಕಿ. ಎಷ್ಟು ನೀರಲ್ವಾ! ನೀರು ಮಳೆ ರೂಪದಲ್ಲಿ ಸುರೀಬೇಕು ಭೂಮಿಯಲ್ಲಿ ಇಂಗಬೇಕು. ಹೆಚ್ಚಾಗಿದ್ದು ಹರಿದು ಹಳ್ಳ, ಕೆರೆ, ನದಿ ಸೇರಬೇಕು. ಹಾಗೇ ಹರಿದು ಸಮುದ್ರ ಸೇರಬೇಕು. ಜೊತೆಗೆ ಭೂಮಿಲಿರೋ ಪೋಷಕಾಂಶ ತಗೊಂಡು ಹೋಗಿ ಹಳ್ಳ ನದಿ ಸಮುದ್ರಕ್ಕೆ ಸೇರಿಸ್ಬೇಕು. ಅಲ್ಲಿನ ಜೀವಸಂಕುಲಗಳು ಬೆಳೀಬೇಕು. ಅದೇ ನೀರಿನ ಚಕ್ರ. ಅದು ಸರಿಯಾಗಿದ್ರೆ ಪರಿಸರ, ಜೀವವೈವಿಧ್ಯ ಕೃಷಿ ಎಲ್ಲಾ ಚೆನ್ನಾಗಿರುತ್ತೆ.
ಹಂಗೇ ಮತ್ತೊಂದು ಸಂಗತಿ ಮನೇ ಮೇಲೆ ಬಿದ್ದ ನೀರು ಹಿಡಿದು ಸಂಗ್ರಹಿಸಿ ಬಳಸ್ಕೊಂಡ್ರೆ ಅಷ್ಟು ನೀರು ಬೇರೆ ಕಡೆಯಿಂದ ಎತ್ತೋಕೆ ಖರ್ಚಾಗೋ ಶಕ್ತಿ ಉಳಿಸಬಹುದು. ನಗರಗಳಲ್ಲಿ ಇದನ್ನು ಮಾಡ್ಲೇ ಬೇಕು ಅಲ್ವ.