ಸಮಗ್ರಕೃಷಿ ಪದ್ಧತಿಯಲ್ಲಿ ಕೃಷಿಯೊಂದಿಗೆ ಉಪ ಕಸುಬುಗಳೂ ಸೇರಿಕೊಳ್ಳುತ್ತವೆ. ಉದಾಹರಣೆಗೆ ಕುರಿ, ಕೋಳಿ, ಮೀನು, ಮೊಲ ಇತ್ಯಾದಿ ಸಾಕಣೆ. ಇವುಗಳು ಪರಸ್ಪರ ಪೂರಕ.ಇವುಗಳಲ್ಲಿ ರೈತರು ತಮತಮಗೆ ಅನುಕೂಲವಾದ ಸಾಕಣೆ ಕೈಗೊಂಡು ವ್ಯವಸ್ಥಿತವಾಗಿ ನಿರ್ವಹಣೆ ಮಾಡಿದರೆ ನಿಶ್ಚಿತವಾಗಿ ಆದಾಯ ಹೆಚ್ಚಳವಾಗುತ್ತದೆ. ಈ ಕುರಿತ ಮಾಹಿತಿಗಳನ್ನು ತಜ್ಞರು ನೀಡಿದ್ದಾರೆ.
-ಸಂಪಾದಕ
Q) ಸಮಗ್ರ ಮೀನು ಕೃಷಿ ಪದ್ಧತಿ ಎಂದರೇನು?
ಸಮಗ್ರ ಮೀನು ಕೃಷಿ ಪದ್ಧತಿಯು ಮೀನಿನ ಕೊಳೆದು ಸುತ್ತ ಕೇಂದ್ರೀಕೃತವಾಗಿರುವ / ಕೃಷಿ ಬೆಳೆಗಳು / ತೋಟಗಾರಿಕೆ ಬೆಳೆಗಳು / ಜಾನುವಾರು ಸಾಕಣೆ ಮತ್ತಿತರ ಕೃಷಿಯೇತರ ಚಟುವಟಿಕೆಗಳನ್ನು ಮೀನು ಸಾಕಾಣಿಯ ಜೊತೆಗೆ ಸಂಯೋಜನೆಗೊಳಿಸುವ ಪದ್ಧತಿಗೆ ‘ಸಮಗ್ರ ಮೀನು ಕೃಷಿ ಪದ್ಧತಿ’ ಎನ್ನುತ್ತಾರೆ.
- Q) ಸಮಗ್ರ ಮೀನು ಕೃಷಿ ಪದ್ಧತಿಯ ವಿಭಿನ್ನ ವಿಧಗಳಾವುವು?
ಸಮಗ್ರ ಮೀನು ಕೃಷಿ ಪದ್ಧತಿಯಲ್ಲಿ ವಿಭಿನ್ನ ವಿಧಗಳಿದ್ದು. ಈ ಕೆಳಕಂಡ ವಿಭಾಗಗಳಲ್ಲಿ ವಿಂಗಡಿಸಲಾಗಿದೆ;
- ಕೃಷಿ ಆಧಾರಿತ ಸಮಗ್ರ ವ್ಯವಸ್ಥೆಗಳು (Agriculture based integrated systems) – ಭತ್ತ ಮತ್ತು ಮೀನು ಸಮಗ್ರ ಕೃಷಿ ಪದ್ಧತಿ
- ತೋಟಗಾರಿಕೆ ಮತ್ತು ಮೀನು ಸಮಗ್ರ ಕೃಷಿ ಪದ್ಧತಿ
- ರೇಷ್ಮೆ ಮತ್ತು ಮೀನು ಸಮಗ್ರ ಕೃಷಿ ಪದ್ಧತಿ
- ಜಾನುವಾರು ಮತ್ತು ಮೀನು ಸಮಗ್ರ ಕೃಷಿ ಪದ್ಧತಿ
- ಅಣಬೆ ಮತ್ತು ಮೀನು ಸಮಗ್ರ ಕೃಷಿ ಪದ್ಧತಿ
ಕೃಷಿ ಆಧಾರಿತ ಸಮಗ್ರ ವ್ಯವಸ್ಥೆಗಳು (Agriculture based integrated systems)
ಭತ್ತ ಮತ್ತು ಮೀನು ಸಮಗ್ರ ಕೃಷಿ ಪದ್ಧತಿ
ಈ ಬೇಸಾಯ ಪದ್ಧತಿಯಲ್ಲಿ, ಭತ್ತದ ಗದ್ದೆಗಳಲ್ಲಿ ಮೀನುಗಳನ್ನು ಸಾಕಲಾಗುತ್ತದೆ. ಭತ್ತ ಮತ್ತು ಮೀನು ಸಮಗ್ರ ಕೃಷಿ ಪದ್ಧತಿಯ ವಿಶೇಷವೇನೆಂದರೆ, ಪ್ರಬಲ ಬೇರಿನ ಭತ್ತಗಳ ಪ್ರಭೇದವನ್ನಷ್ಟೇ ಮೀನು ಕೃಷಿಗೆ ಸಂಯೋಜಿಸಲಾಗುತ್ತದೆ. ಉದಾಹರಣೆಗೆ: ತುಳಸಿ, ಪಣಿಧನ್, ಸಿಆರ್ 260 77, ಎಡಿಟಿ 6, ಎಡಿಟಿ7, ರಾಜರಾಜನ್ ಮತ್ತು ಪಟ್ಟಾಂಬಿ 15 ಮತ್ತು 16. ಹಾಗೆ ಮೀನಿನಲ್ಲಿ ಸಾಮಾನ್ಯ ಗೆಂಡೆ ಮೀನು, ಜಿಲೇಬಿ ಮೀನು ಮತ್ತು ಮರಲ್ಸ್ ಮೀನುಗಳನ್ನ ಈ ಪದ್ಧತಿಗೆ ಬಳಸಬಹುದಾಗಿದೆ.
- ತೋಟಗಾರಿಕೆ ಮತ್ತು ಮೀನು ಸಮಗ್ರ ಕೃಷಿ ಪದ್ಧತಿ
ಈ ಪದ್ಧತಿಗಳಲ್ಲಿ ಮೀನಿನ ಕೊಳದ ಕಟ್ಟೆಗಳು ಅಥವಾ ಬದುಗಳ ಮೇಲೆ ಮತ್ತು ಕೊಳದ ಅಕ್ಕಪಕ್ಕದ ಜಾಗದಲ್ಲಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಬಹುದಾಗಿದೆ. ಮೀನು ಕೊಳದಿಂದ ಎರಡು ಅಡಿ ದೂರದಲ್ಲಿ ಕುಬ್ಜ ತಳಿಯ ತೆಂಗು, ಮಾವು ಮತ್ತು ಬಾಳೆ ಬೆಳೆಗಳನ್ನು ಬೆಳೆಯಬಹುದು. ಹಾಗೂ ಕೊಳದ ಸಮೀಪದಲ್ಲಿ ಅರಿಶಿಣ, ಅನಾನಸ್, ಮೆಣಸಿನ ಕಾಯಿ, ಮತ್ತಿದ್ದೆರೆ ತೋಟಗಾರಿಕಾ ಬೆಳೆಗಳನ್ನು ಬೆಳೆಸಬಹುದು. ಮೀನು ಕೊಳದ ನೀರು ಕೃಷಿ, ತೋಟಗಾರಿಕೆ ಮತ್ತು ಅರಣ್ಯ ಮರಗಳ ಬೆಳವಣಿಗೆಗೆ ಬೇಕಾದ ಪೂರಕ ಪೌಷ್ಟಿಕಾಂಶಗಳನ್ನು ಹೊಂದಿದ್ದು. ಮೀನಿನ ಕೊಳದ ನೀರನ್ನು ಶೇಕಡ 30 ರಿಂದ 40 ಎಷ್ಟು ದಿನಂಪ್ರತಿ ಗಿಡಗಳಿಗೆ ಉಣಭಡಿಸಬಹುದು ಹಾಗೆ ಕೊಳಗಳಿಗೆ ಹೊಸ ನೀರನ್ನು ಸೇರಿಸಿದಾಗ ಮೀನು ಕೃಷಿಗೆ ಬೇಕಾದ ನೀರಿನ ಗುಣಮಟ್ಟವನ್ನು ಕಾಪಾಡುವುದರ ಜೊತೆಗೆ ತೋಟಗಾರಿಕಾ ಬೆಳೆಗಳಲ್ಲಿ ಉತ್ತಮ ಇಳುವರಿಯನ್ನು ಕಂಡುಕೊಳ್ಳಲು ಸಾಧ್ಯ. ಈ ಪದ್ಧತಿಯಿಂದ, ಉತ್ತಮ ಇಳುವರಿಯನ್ನು ತೋಟಗಾರಿಕೆ ಬೆಳೆಗಳಲ್ಲೂ ಹಾಗೂ ಮೀನು ಸಾಕಾಣಿಕೆಯಲ್ಲೂ ಏಕಕಾಲದಲ್ಲೇ ಕಾಣಬಹುದಾಗಿದೆ.
ಮುಂದುವರಿಯುತ್ತದೆ … ನಾಳೆ ರೇಷ್ಮೆ ಮತ್ತು ಮೀನು ಸಮಗ್ರ ಕೃಷಿ ಪದ್ಧತಿ, ಜಾನುವಾರು ಮತ್ತು ಮೀನು ಸಮಗ್ರ ಕೃಷಿ ಪದ್ಧತಿ ಮಾಹಿತಿ ಪ್ರಕಟವಾಗುತ್ತದೆ.