ಬೆಂಗಳೂರು: (ಜಿಕೆವಿಕೆ ಕೃಷಿಮೇಳ ಆವರಣ) ನವೆಂಬರ್ 05: ಬೆಂಗಳೂರು ಕೃಷಿಮೇಳ ಆರಂಭವಾಗಿ ಇಂದಿಗೆ ಮೂರುದಿನ. ಪ್ರತಿದಿನವೂ ಅಪಾರ ಸಂಖ್ಯೆಯ ಆಸಕ್ತರು ಆಗಮಿಸುತ್ತಿದ್ದಾರೆ. ಕೃಷಿಯ ಎಲ್ಲ ವಿಭಾಗಗಳು ಇರುವುದರಿಂದ ಸಾಕಷ್ಟು ಮಂದಿ ತಮಗೆ ಇಷ್ಟವಾದ ಮಳಿಗೆಗಳಿಂದ ಹೆಚ್ಚು ಮಾಹಿತಿ ಪಡೆಯುತ್ತಿದ್ದಾರೆ. ಇದರ ಜೊತೆಗೆ ಪ್ರತಿಯೊಬ್ಬರ ಆಕರ್ಷಣೆಗೆ ಒಳಗಾ್ಗಿರುವ ಮಳಿಗೆಗಳೂ ಇವೆ. ಅವುಗಳಲ್ಲಿ ಬ್ಯಾರಿಕ್ಸ್ ಸಂಸ್ಥೆ ಮಳಿಗೆಯೂ ಸೇರಿದೆ.
ಈ ಮಳಿಗೆಯಲ್ಲಿ ಬೆಳೆಹಾನಿ ಉಂಟು ಮಾಡುವ ಕೀಟಗಳನ್ನು ನೈಸರ್ಗಿಕ ರೀತಿಯಲ್ಲಿಯೇ ನಿಯಂತ್ರಣ ಮಾಡುವ ಸಾಧನಗಳಿವೆ. ರಾಸಾಯನಿಕ ಕೀಟನಾಶಕಗಳ ಬಳಕೆಯಿಂದ ಪ್ರಯೋಜನಗಳು ಕಾಣದೇ ಇದ್ದಾಗ ಜೈವಿಕ ವಿಧಾನದಲ್ಲಿ ಕೀಟ ನಿಯಂತ್ರಣಕ್ಕೆ ಮುಂದಾಗುತ್ತಿರುವ ಕೃಷಿಕರು ಇಂಥ ಜೈವಿಕ ನಿಯಂತ್ರಣ ಸಾಧನಗಳ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.
ಕೃಷಿಮೇಳದ ಮುಖ್ಯ ಸಭಾಂಗಣದ ಮುಂದಿರುವ ಮಳಿಗೆಯಲ್ಲಿ ಜೈವಿಕ ಕೀಟ ನಿಯಂತ್ರಿಸುವ ಬೇರೆಬೇರೆ ಸಾಧನಗಳಿವೆ. ಅವುಗಳಲ್ಲಿ ಬ್ಲೂ, ಯೆಲ್ಲೋ, ವೈಟ್ ಸ್ಟಿಕ್ಕಿ ಟ್ರಾಪ್ ಗಳು, ಹಣ್ಣಿನ ಕೀಟಗಳನ್ನು ನಿಯಂತ್ರಿಸುವ ಕೀಟ ಲೈಂಗಿಕಾರ್ಷಣೆ ಟ್ರಾಪ್ ಗಳು ಇತ್ಯಾದಿ ಸಾಧನಗಳಿವೆ. ಇದರ ಜೊತೆಗೆ ಹೈನುಗಾರಿಕೆ, ಹೈನು ಮೌಲ್ಯವರ್ಧನೆ ಘಟಕಗಳಲ್ಲಿ ಸ್ವಚ್ಛತೆಗೆ ಸವಾಲಾಗಿರುವ ನೊಣಗಳನ್ನು ಆಕರ್ಷಿಸಿ ನಿಯಂತ್ರಿಸುವ ಹೌಸ್ ಫ್ಲೈ ಡೊಮೊ ಟ್ರಾಪ್, ತೆಂಗಿನ ಬೆಳೆಯನ್ನು ಬಾಧಿಸುವ ದುಂಬಿಗಳ ನಿಯಂತ್ರಣ ಸಾಧನಗಳು ಕೃಷಿಕರಲ್ಲಿ ಕುತೂಹಲ ಉಂಟು ಮಾಡಿವೆ.
ಇವುಗಳು ಹೇಗೆ ಕಾರ್ಯನಿಯಂತ್ರಿಸುತ್ತವೆ ಎಂಬುದನ್ನು ತಿಳಿದುಕೊಂಡು ಇಂಥ ಭಾರಿ ಪ್ರಯೋಜನಕಾರಿ ಸಾಧನಗಳನ್ನು ಅಭಿವೃದ್ದಿಪಡಿಸಿರುವ ಬ್ಯಾರಿಕ್ಸ್ ಸಂಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ತಿಪಟೂರಿನ ತೆಂಗು ಬೆಳೆಗಾರ ಮಹೇಶ್ ಎಂಬುವರನ್ನು “ಅಗ್ರಿಕಲ್ವರ್ ಇಂಡಿಯಾ” ಮಾತನಾಡಿಸಿತು. “ ದುಂಬಿಗಳ ಹಾವಳಿಯಿಂದ ಸಾಕಷ್ಟು ತೆಂಗಿನ ತೋಟಗಳು ಹಾಳಾಗಿವೆ. ಅವುಗಳನ್ನು ನಿಯಂತ್ರಿಸುವುದೇ ದೊಡ್ಡ ಸವಾಲು. ಹೀಗಿರುವಾಗ ಬ್ಯಾರಿಕ್ಸ್ ಕಂಪನಿಯವರು ದುಂಬಿಗಳನ್ನು ನಿಯಂತ್ರಿಸುವ ಸಾಧನ ಅಭಿವೃದ್ದಿಪಡಿಸಿರುವುದು ತೆಂಗು ಬೆಳೆಗಾರರೆಲ್ಲರಿಗೂ ಅನುಕೂಲಕರ ಎಂದರು.
ರಾಸಾಯನಿಕ ಕೀಟನಾಶಕಗಳನ್ನು ಬಳಸದೇ ವಿವಿಧ ರೀತಿಯಲ್ಲಿ ಬೆಳೆಗಳಿಗೆ ಹಾನಿ ಉಂಟು ಮಾಡುವ ಕೀಟಗಳನ್ನು ನಿಯಂತ್ರಿಸುವ ವೈವಿಧ್ಯ ಸಾಧನಗಳು ಇಲ್ಲಿವೆ. ಕೃಷಿಮೇಳಕ್ಕೆ ಭೇಟಿ ನೀಡುವವರು ಬ್ಯಾರಿಕ್ಸ್ ಮಳಿಗೆಗೆ ಭೇಟಿ ನೀಡಬಹುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 99008 00033