ಸೆಪ್ಟೆಂಬರ್ 04 (ಅಗ್ರಿಕಲ್ಚರ್ ಇಂಡಿಯಾ) ಮುಂದಿನ 24 ಘಂಟೆಗಳಲ್ಲಿ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಶಿವಮೊಗ್ಗ, ರಾಮನಗರ, ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ
ಮುಂದಿನ 48 ಘಂಟೆಗಳಲ್ಲಿ ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ದಾವಣಗೆರೆ, ಹಾಸನ, ಮಂಡ್ಯ,ಮ್ಯ್ಸುರು, ಕೊಡಗು, ಶಿವಮೊಗ್ಗ, ರಾಮನಗರ, ತುಮಕೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ
ಮೀನುಗಾರರಿಗೆ ಎಚ್ಚರಿಕೆ: ಇಲ್ಲ. ಹೆಚ್ಚಿನ ಅಲೆಗಳ ಮುನ್ಸೂಚನೆ (INCOIS) ಕರ್ನಾಟಕ: ಇಲ್ಲ.
06ನೇ ಸೆಪ್ಟೆಂಬರ್ 2022 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:
ಮುಂದಿನ 24 ಘಂಟೆಗಳು: ದಕ್ಷಿಣ ಒಳನಾಡಿನ ಬಹುತೇಕ ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಕರಾವಳಿ ಹಲವು ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ ಮುಂದಿನ 48 ಘಂಟೆಗಳು: ರಾಜ್ಯದಾದ್ಯಂತ ಬಹುತೇಕ ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ
ಬೆಂಗಳೂರು
06 ನೇ ಆಗಸ್ಟ್ 2022 ರ ಬೆಳಗ್ಗೆ ವರೆಗೆ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:
ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲವು ಬಾರಿ ಹಗುರದಿಂದ ಸಾಧಾರಣ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.
ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿದ್ದು, ಕೆಲವು ಬಾರಿ ಹಗುರದಿಂದ ಸಾಧಾರಣ ಮಳೆ/ಗುಡುಗಿನಿಂದ ಕೂಡಿದ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 30 ಮತ್ತು 20 ಡಿಗ್ರಿ ಸೆಲ್ಸಿಯಸ್ ಆಗಿರುವ ಸಾಧ್ಯತೆಯಿದೆ.
ಭಾನುವಾರ, 04ನೇ ಸೆಪ್ಟೆಂಬರ್ 2022 /13 ನೇ ಭಾದ್ರಪದ 1943 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ: ನೈರುತ್ಯ ಮುಂಗಾರು ಕರಾವಳಿಯಲ್ಲಿ ದುರ್ಬಲವಾಗಿತ್ತು. ದಕ್ಷಿಣ ಒಳನಾಡಿನ ಹಲವು ಕಡೆಗಳಲ್ಲಿ ಹಾಗೂ ಕರಾವಳಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ.
ಇತರೆ ಮುಖ್ಯ ಮಳೆಯ ಪ್ರಮಾಣ (ಸೆಂ.ಮೀನಲ್ಲಿ): ಬೀದರ, ಬೆಂಗಳೂರು ನಗರ, ಕೊಳ್ಳೇಗಾಲ (ಚಾಮನಗರ ಜಿಲ್ಲೆ), ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಚಿಕ್ಕಮಗಳೂರು, ಬೆಂಗಳೂರು ಹೆಚ್.ಎ.ಎಲ್. ವಿಮಾನ ನಿಲ್ದಾಣ, ತುಮಕೂರು ತಲಾ 4; ಸುಬ್ರಮಣ್ಯ (ದಕ್ಷಿಣ ಕನ್ನಡ ಜಿಲ್ಲೆ), ಆಲಂದ (ಕಲಬುರ್ಗಿ ಜಿಲ್ಲೆ), ತ್ಯಗಾರ್ತಿ (ಶಿವಮೊಗ್ಗ ಜಿಲ್ಲೆ), ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಜ್ಜಂಪುರ, ಯಗತಿ (ಎರಡೂ ಚಿಕ್ಕಮಗಳೂರು ಜಿಲ್ಲೆ), ಶ್ರೀರಮಪುರ(ಚಿತ್ರದುರ್ಗ ಜಿಲ್ಲೆ) ತಲಾ 3; ಭಾಲ್ಕಿ (ಬೀದರ ಜಿಲ್ಲೆ), ಹುಣಸೂರು(ಮೈಸೂರು ಜಿಲ್ಲೆ), ಗುಬ್ಬಿ, ಶಿರಾ (ಎರಡೂ ತುಮಕೂರು ಜಿಲ್ಲೆ) ತಲಾ 2; ಚಿತ್ತಾಪುರ, ಚಿಂಚೋಳಿ (ಎರಡೂ ಕಲಬುರ್ಗಿ ಜಿಲ್ಲೆ), ಮಾನ್ವಿ (ರಾಯಚೂರು ಜಿಲ್ಲೆ), ಕಂಪ್ಲೀ, ಕೂಡ್ಲಿಗಿ, ಕುಡತಿನಿ, ಸೀರುಗುಪ್ಪ ARS(ಎಲ್ಲಾ ಬಳ್ಳಾರಿ ಜಿಲ್ಲೆ), ಪಂಚನಹಳ್ಳಿ, ಬಾಳೆಹೊನ್ನೂರು (ಎರಡೂ ಚಿಕ್ಕಮಗಳೂರು ಜಿಲ್ಲೆ), ಚಿಕ್ಕನಹಳ್ಳಿ AWS, ಮಧುಗಿರಿ (ಎರಡೂ ತುಮಕೂರು ಜಿಲ್ಲೆ), ಶಿರಾಳಕೊಪ್ಪ (ಶಿವಮೊಗ್ಗ ಜಿಲ್ಲೆ), ಚಿಕ್ಕಬಳ್ಳಾಪುರ, ಬಿ.ದುರ್ಗ, ಹೊಸದುರ್ಗ (ಎರಡೂ ಚಿತ್ರದುರ್ಗ ಜಿಲ್ಲೆ), ಹಾರಂಗಿ (ಕೊಡಗು ಜಿಲ್ಲೆ), ನಾಯಕನಹಟ್ಟಿ, ಹಿರಿಯೂರು ಹೆಚ್.ಎಂ.ಎಸ್ (ಎರಡೂ ಚಿತ್ರದುರ್ಗ ಜಿಲ್ಲೆ), ಕೃಷ್ಣರಾಜಪೇಟ್(ಮಂಡ್ಯ ಜಿಲ್ಲೆ) ತಲಾ 1.