ಬಹು ನಿರೀಕ್ಷೆಯ ಅಪ್ಪೆ ಹುಳಿ/ಗೊಜ್ಜು

0
ಚಿತ್ರ-ಲೇಖನ: ನಾಗೇಂದ್ರ ಸಾಗರ್‌, ಪ್ರಗತಿಪರ ಕೃಷಿಕರು

ಬಹು ನಿರೀಕ್ಷೆಯ ಅಪ್ಪೆ ಹುಳಿ/ಗೊಜ್ಜನ್ನು ನಮ್ಮ ಹೆಗ್ಗೋಡು ಕಾಕಲ್ ಪಿಕಲ್ಸಿನ ಗಣೇಶಣ್ಣ ನಮ್ಮ ಮಲೆನಾಡು ಗಿಡ್ಡ ಕಂಪನಿಗೆ ಮಾರಾಟ ಮಾಡಲು ಕಳುಹಿಸಿ ಕೊಟ್ಟಿದ್ದಾರೆ. ಇದು ನಮ್ಮ ಭಾಗದ ವಿಶೇಷವಾದ ಜೀರಿಗೆ ಪರಿಮಳದ ಮಾವಿನಹಣ್ಣನ್ನು ಹಿಂಡಿ ತೆಗೆದ ರಸ. ವರ್ಷಾವಧಿ ಬಾಳಿಕೆ ಬರುತ್ತದೆ.

ಈ ಅಪ್ಪೆ ಹುಳಿಗೆ ಗಣೇಶಣ್ಣ ತಮ್ಮದೇ ತೋಟದ ಫಸಲನ್ನು ಬಳಸಿದ್ದಾರೆ. ತುಂಬ ಜತನದಿಂದ ಕಾಯನ್ನು ಕೊಯ್ದು ಮುಂದೆ ಅದನ್ನು ತುಂಬಾ ಅಚ್ಚುಕಟ್ಟಾಗಿ, ಜೋಪಾನವಾಗಿ ಸಂಸ್ಕರಣೆ ಮಾಡಿದ್ದಾರೆ. ಯಾವುದೇ ಪ್ರಿಸರ್ವೇಟಿವ್ ಬಳಸಿಲ್ಲ.“ನೀವು ಮೊದಲು ಬಳಸಿ ನೋಡಿ. ಚೆನ್ನಾಗಿದೆ ಎಂದಾದರೆ ಮಾರುಕಟ್ಟೆಗೆ ಬಿಡಿ” ಎಂದು ಹೇಳಿದ್ದರು.

ನಮ್ಮ ಮನೆಯಲ್ಲಿ ಇಂದು ಅದರದೇ ಚಿತ್ರಾನ್ನ. ಎಣಿಸಿದಂತೆಯೇ ಬಾಟಲಿಯ ಮುಚ್ಚಳ ತೆಗೆಯುತ್ತಿದ್ದಂತೆ ಘಮ್ಮೆನ್ನುವ ಜೀರಿಗೆ ಮಾವಿನ ಪರಿಮಳ ಮೂಗಿಗೆ ಅಡರಿತ್ತು. ಜೀರಿಗೆ ಮಾವಿನ ಹುಳಿಯಿಂದ ಮಾಡಿದ ಚಿತ್ರಾನ್ನದ ಸವಿಯನ್ನು ಬಲ್ಲ ಮಲೆನಾಡಿನವರಿಗೆ ಇದು ಖಂಡಿತಾ ಇಷ್ಟವಾಗುತ್ತದೆ. ಮೊದಲನೆಯದಾಗಿ ಬಳಸಿದವರು ಮತ್ತೆ ಮತ್ತೆ ಇದಕ್ಕೆ ಹಾತೊರೆಯದೇ ಇರಲಾರರು.

ಜೀರಿಗೆ ಪರಿಮಳದ ಮಾವಿನಹಣ್ಣನ್ನು ಹಿಂಡಿ ತೆಗೆದ ರಸ

ಚಿತ್ರಾನ್ನವಲ್ಲದೇ, ಗೊಜ್ಜು, ನೀರು ಗೊಜ್ಜು ಅದೂ ಇಲ್ಲವಾದರೆ ಬರೀ ಅನ್ನದೊಂದಿಗೆ ಕಲಸಿ ಉಣ್ಣಲೂ ಇದು ಬರುತ್ತದೆ. ಯಾವುದಕ್ಕೂ ಇರಲಿ ಎಂದು ಗಣೇಶಯ್ಯ ಇದರೊಂದಿಗೆ ಹಿತಮಿತವಾಗಿ ಉಪ್ಪು ಮತ್ತು ಖಾರವನ್ನು ಬೆರೆಸಿದ್ದಾರೆ. ಬಳಸುವಾಗ ಅವರವರ ನಾಲಿಗೆಯ ರುಚಿಗೆ ತಕ್ಕಂತೆ ಉಪ್ಪು ಮತ್ತು ಖಾರವನ್ನು ಬೆಳೆಸಿಕೊಳ್ಳಬಹುದು…

ಸದ್ಯ ಸೀಮಿತ ಪ್ರಮಾಣದಲ್ಲಿ ಇದು ನಮ್ಮ ಕಚೇರಿಯಲ್ಲಿ ಲಭ್ಯವಿದೆ. ಬೇಕು ಎನಿಸಿದವರು ಸಾಗರದ ಜೋಸೆಫ್ ನಗರದಲ್ಲಿ ಇರುವ ನಮ್ಮ ಮಲೆನಾಡು ಗಿಡ್ಡ ಕಚೇರಿಯನ್ನು ಸಂಪರ್ಕಿಸಬಹುದು. ಸಂಪರ್ಕಕ್ಕೆ 08183228048, 8147299353 ಅಥವಾ 7676910712

LEAVE A REPLY

Please enter your comment!
Please enter your name here