ಅರಣ್ಯದಲ್ಲಿ ಹವಾಮಾನ ಬಿಕ್ಕಟ್ಟು

0
ಲೇಖಕರು: ಅಕ್ಷಿತ್‌ ಸಂಗೊಮ್ಲ
  • ಅರಣ್ಯ ಪ್ರದೇಶದ ಮರಗಳಲ್ಲಿ ಹಣ್ಣುಗಳಿಲ್ಲ
  • ಹವಾಮಾನ ಬಿಕ್ಕಟ್ಟಿನ ಭೀಕರ ಪರಿಣಾಮ ಕರ್ನಾಟಕದ ಅಣಶಿ ಅರಣ್ಯದಲ್ಲಿ ಗೋಚರ

ತೆಲೋಲಿ ಗ್ರಾಮವು ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಪ್ರಾಚೀನ ಅಣಶಿ ಅರಣ್ಯದ ಅಂಚಿನಲ್ಲಿದೆ. ಏರುತ್ತಿರುವ ತಾಪಮಾನ, ಮಳೆಯ ಮಾದರಿಗಳ ಬದಲಾವಣೆಗಳು ಮತ್ತು ಹವಾಮಾನ ವೈಪರೀತ್ಯಗಳಿಂದಾಗಿ ಇಲ್ಲಿಯ ಗ್ರಾಮೀಣರು ಹಿಂದೆಂದೂ ಕಾಣದ ರೀತಿಯಲ್ಲಿ ಅರಣ್ಯ ಬದಲಾವಣೆಯನ್ನು ಕಂಡು ಗಾಬರಿಗೊಂಡಿದ್ದಾರೆ.

2020 ರಿಂದ ಭಾರತೀಯ ಅರಣ್ಯ ಸಮೀಕ್ಷೆ (FSI) ತಾಂತ್ರಿಕ ಅಧ್ಯಯನದ ಪ್ರಕಾರ, 1951-2019 ರ ನಡುವಿನ ಹವಾಮಾನ ಬದಲಾವಣೆಗಳ ಪರಿಣಾಮಗಳಿಗೆ ಅಣಶಿ ಅರಣ್ಯ ಪ್ರದೇಶ ಹಾಟ್‌ಸ್ಪಾಟ್ ಆಗಿದೆ.

“ಈ ವರ್ಷ, ನಮ್ಮ ಹಳ್ಳಿಯಲ್ಲಿ ಅಥವಾ ಹತ್ತಿರದ ಪ್ರದೇಶಗಳಲ್ಲಿ ಮರಗಳಲ್ಲಿ ಯಾವುದೇ ವಾಟೆ ಹುಲಿ ಹಣ್ಣುಗಳು ಇರಲಿಲ್ಲ” ಎಂದು ಗ್ರಾಮದ ನಿವಾಸಿ 55 ವರ್ಷದ ಸುರೇಶ್ ಬಾಬು ಗೌಡ ಅವರು ಡೌನ್ ಟು ಅರ್ಥ್ (ಡಿಟಿಇ) ಗೆ ಒಂದೇ ಮರವನ್ನು ತೋರಿಸಿದರು. ಈ ಸಸ್ಯ ಹಳ್ಳಿ ಮತ್ತು ಅರಣ್ಯ ಪ್ರದೇಶದ ನಡುವೆ ಬೆಳೆಯುತ್ತದೆ. ವಾಟೆ ಹುಲಿ ಅಥವಾ ಮಂಕಿ ಜಾಕ್‌ಗಳು ಹುಳಿ ಹಣ್ಣುಗಳನ್ನು ಸ್ಥಳೀಯ ಜನರು ವಿಉಶೇಷವಾಗಿ ಸ್ಥಳೀಯ ಗೆಡ್ಡೆ ತರಕಾರಿಗಳೊಂದಿಗೆ ಮಸಾಲೆಯಾಗಿ ಬಳಸುತ್ತಾರೆ.

ಮಂಕಿ ಜಾಕ್‌ಗಳ ಉತ್ಪಾದನೆಯು ಇತ್ತೀಚಿನ  ವರ್ಷಗಳಲ್ಲಿ ಕಡಿಮೆಯಾಗಿದೆ ಆದರೆ ಈ ಬಾರಿ ಅತ್ಯಂತ ಕಡಿಮೆ ಪ್ರಮಾಣವು ಸ್ಥಳೀಯರಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. “ಹಿಂದೆ ನಾವು ಒಂದೇ ಮರದಿಂದ ಸುಮಾರು 50 ಕ್ವಿಂಟಾಲ್ ಹಣ್ಣುಗಳನ್ನು ಪಡೆಯುತ್ತಿದ್ದೆವು, ಇದು ಇತ್ತೀಚಿನ ವರ್ಷಗಳಲ್ಲಿ ಸುಮಾರು 30-40 ಕ್ವಿಂಟಾಲ್‌ಗಳಿಗೆ ಕಡಿಮೆಯಾಗಿದೆ. ಆದರೆ 2023 ನಮಗೆ ಆಘಾತ ತಂದಿದೆ” ಎಂದು ಸಮೀಪದ ಕುಂಬಾರವಾಡ ಗ್ರಾಮದ ಶಾಂತಾರಾಮ್ ಕಾಮತ್ ಹೇಳಿದರು. ಕಾಮತ್ ಅವರು ಕಾಳಿ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿಯನ್ನು ನಡೆಸುತ್ತಿದ್ದಾರೆ ಮತ್ತು ಅರಣ್ಯ ಪರಿಸರ ವಿಜ್ಞಾನದಲ್ಲಿ ತಜ್ಞತೆ ಹೊಂದಿದ್ದಾರೆ.

ಮಂಕಿ ಜಾಕ್‌ಗಳು ಅರೆ-ನಿತ್ಯಹರಿದ್ವರ್ಣ ಮರಗಳಾಗಿವೆ, ಅವು ಅಂಶಿ ಅರಣ್ಯದಲ್ಲಿ ಮತ್ತು ಉತ್ತರ ಕರ್ನಾಟಕದ ಪಶ್ಚಿಮ ಘಟ್ಟಗಳ ಇತರ ಪ್ರದೇಶಗಳಲ್ಲಿ ಬೆಳೆಯುತ್ತವೆ. ಅವುಗಳು ಶರತ್ಕಾಲದಲ್ಲಿ ಅಲ್ಪಾವಧಿಗೆ ಎಲೆಗಳನ್ನು ಉದುರಿಸುತ್ತವೆ. ಫೆಬ್ರವರಿಯಲ್ಲಿ ಅರಳಿ;  ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹಣ್ಣಾಗುತ್ತವೆ.

ಅವುಗಳನ್ನು ಆಹಾರ, ಮೇವು, ಮರ ಮತ್ತು ಔಷಧೀಯ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಅವುಗಳಿಗೆ ಸರಾಸರಿ ವಾರ್ಷಿಕ 700-2,000 ಮಿಲಿಮೀಟರ್ ಮಳೆಯ ಅಗತ್ಯವಿರುತ್ತದೆ. ಆದರೆ 2023ರಲ್ಲಿ ಮಳೆ ಕಡಿಮೆಯಾಗಿದೆ. ಮಾರ್ಚ್ 1ರಿಂದ ಮೇ 31ರ ನಡುವೆ ಉತ್ತರ ಕನ್ನಡ ಜಿಲ್ಲೆಯಲ್ಲಿ ವಾಡಿಕೆಗಿಂತ ಶೇ.59ರಷ್ಟು ಕಡಿಮೆ ಮಳೆಯಾಗಿದೆ.

“ನಾವು ಯಾವಾಗಲೂ ಹೋಳಿ ಮತ್ತು ಗುಡಿ ಪಾಡ್ವಾ ಸಮಯದಲ್ಲಿ ನಿರಂತರ ಮತ್ತು ಮಧ್ಯಮ ತೀವ್ರತೆಯ ಮಳೆಯನ್ನು ಪಡೆಯುತ್ತೇವೆ, ಇವೆರಡೂ ಪೂರ್ವ ಮಾನ್ಸೂನ್ ಋತುವಿನಲ್ಲಿ ಬೀಳುತ್ತವೆ. ಆದರೆ ಕಳೆದ ಕೆಲವು ವರ್ಷಗಳಿಂದ ನಿಯಮಿತವಾಗಿ ಆಗುತ್ತಿಲ್ಲ” ಎಂದು ಕಾಮತ್ ಹೇಳಿದರು.

ಮಳೆಯ ಕೊರತೆಯ ಪರಿಣಾಮವು ಈ ಪ್ರದೇಶದ ಇತರ ಪ್ರದೇಶಗಳಲಲಿಯೂ  ಕಂಡು ಬಂದಿದೆ. ಅಂಶಿ ಅರಣ್ಯ ವಿಭಾಗ ಪ್ರಾರಂಭವಾಗುವ ಕದ್ರಾದಿಂದ ಕುಂಬಾರವಾಡಕ್ಕೆ  ಪ್ರಯಾಣ ಬೆಳೆಸಿದಾಗ ಸಾಕಷ್ಟು ಒಣ ಅರಣ್ಯ ಪ್ರದೇಶವಿತ್ತು.

ಇತರ ಅರಣ್ಯ ಮೂಲದ ಉತ್ಪನ್ನಗಳಾದ ಜೇನು ಮತ್ತು ಗಡ್ಡೆ ಬೆಳೆಗಳು ಸಹ ಮಳೆಯ ಕುಸಿತದಿಂದ ಹಾನಿಗೊಳಗಾಗುತ್ತಿವೆ. ಉದಾಹರಣೆಗೆ, ಜೇನುತುಪ್ಪದ ಉತ್ತಮ ಸಂಗ್ರಹಣೆಗಾಗಿ, ಉತ್ತಮ ಪ್ರಮಾಣದ ಪೂರ್ವ ಮಾನ್ಸೂನ್ ಮಳೆಯ ಅಗತ್ಯವಿದೆ.

ಮಳೆ ಕಡಿಮೆಯಾದಾಗ, ಜೇನುತುಪ್ಪವು ದಪ್ಪವಾಗುತ್ತದೆ, ಇದು ಉತ್ಪಾದನೆಯ ಒಟ್ಟಾರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಜೇನುನೊಣಗಳು ಜೇನುತುಪ್ಪವನ್ನು ಉತ್ಪಾದಿಸಲು ಮಕರಂದದ ಮೂಲವಾಗಿರುವ ಮರಗಳು ಹೂಬಿಡಲು ಮಳೆಯ ಅಗತ್ಯವಿದೆ, ”ಎಂದು ಕಾಮತ್ ಹೇಳಿದರು. ಸುಮಾರು 4-5 ವರ್ಷಗಳ ಹಿಂದೆ, ಒಂದು ಜೇನುಗೂಡಿನಿಂದ ಸುಮಾರು 20 ಕೆಜಿ ಜೇನುತುಪ್ಪವನ್ನು ಸಂಗ್ರಹಿಸುತ್ತಿದ್ದೆವು. ಈಗ ಅದು 5 ರಿಂದ 10 ಕೆಜಿಗೆ ಇಳಿದಿದೆ   ಎಂದು ಗೌಡ ಹೇಳಿದರು.

ಇತರ ಅನೇಕ ಅರಣ್ಯ ಸಸ್ಯಗಳು ಮತ್ತು ಮರಗಳ ತಳಿಗಳು ಮೊಳಕೆಯೊಡೆಯಲು ಮತ್ತು ಇತರ ಜೀವನ ಚಕ್ರ ಚಟುವಟಿಕೆಗಳಿಗೆ ಉತ್ತಮ ಪ್ರಮಾಣದ  ಪೂರ್ವ  ಮುಂಗಾರು ಮಳೆಯ ಅಗತ್ಯವಿರುತ್ತದೆ. ಮುಂಗಾರು ಮಳೆಯು ಅವುಗಳ  ಮುಂದಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಆದರೆ ಕೋರ್ ಅರಣ್ಯ ಪ್ರದೇಶಗಳಲ್ಲಿ ಇದನ್ನು ಮೇಲ್ವಿಚಾರಣೆ ಮಾಡಲಾಗುತ್ತಿಲ್ಲ ಮತ್ತು ಯಾವುದೇ ತೀರ್ಮಾನಕ್ಕೆ ಬರಲು ನಮಗೆ ಯಾವುದೇ ಅಂಕಿಅಂಶ ಇಲ್ಲ  ಎಂದು ಕಾಮತ್ ಹೇಳಿದರು. ಇವರ ಪ್ರಕಾರ ಕಾಡಿನೊಳಗಿನ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ.

ಮತ್ತೊಂದು ಅಸಾಮಾನ್ಯ ಮತ್ತು ಹಿಂದೆಂದೂ ಸ್ಥಳೀಯರು  ನೋಡಿರದ ಘಟನೆಯೆಂದರೆ ಜುಲೈ 21, 2021 ರಂದು ಟೆಲೋಲಿ ಗ್ರಾಮದ ಹೊರಭಾಗದ ಅರಣ್ಯ ಪ್ರದೇಶದೊಳಗೆ ಸಂಭವಿಸಿದ ಭೂಕುಸಿತವಾಗಿದೆ.  ಕ್ಷೀಣಿಸಿದ ಅರಣ್ಯವು ಮೇ 2023 ರಲ್ಲಿ ಇನ್ನೂ ಸ್ಪಷ್ಟವಾಗಿ  ಗೋಚರಿಸಿದೆ.

“ಆ ದಿನ ಅಲ್ಪಾವಧಿಯಲ್ಲಿ ಸಾಕಷ್ಟು ಮಳೆ ಸುರಿಯಿತು ಮತ್ತು ಬೆಟ್ಟದ ಬದಿಯು ಜಾರಿತು. ಇಂತಹ ಕಾಡು ಮಳೆಯಿಂದ ಕೊಚ್ಚಿ ಹೋಗುತ್ತಿರುವುದು ಇದೇ ಮೊದಲ ಬಾರಿಗೆ ಈ ಪ್ರದೇಶದಲ್ಲಿ ನಡೆದಿದೆ’ ಎಂದು ಗೌಡ ಹೇಳಿದರು.

ಮಳೆಯ ಮಾದರಿಗಳ ಬದಲಾವಣೆಯು ಚಿಟ್ಟೆಗಳ ಸಂಖ್ಯೆ  ಕುಸಿತ ಮಾತ್ರವಲ್ಲದ ಅವುಗಳ  ವೈವಿಧ್ಯತೆಯ ಕುಸಿತ ಮತ್ತು ಪ್ರದೇಶದಲ್ಲಿ ವಲಸೆ ಹಕ್ಕಿಗಳ ಗಮನಾರ್ಹ ಇಳಿಕೆಯಂತಹ ಇತರ ಪರಿಸರ ದುಷ್ಪರಿಣಾಮಗಳಿಗೆ ಕಾರಣವಾಗಿದೆ. ಸ್ಥಳೀಯ ಭಾಷೆಯಲ್ಲಿ ಬಟ್ಕಿ ಎಂದು ಕರೆಯಲ್ಪಡುವ ಒಂದು ಪಕ್ಷಿಗಳು ಪ್ರತಿ ವರ್ಷ ಆಗಸ್ಟ್‌ನಿಂದ ಜನವರಿವರೆಗೆ ಈ ಪ್ರದೇಶದಲ್ಲಿ ಹೇರಳವಾಗಿ ಕಾಣ ಸಿಗುತ್ತಿದ್ದವು. ಆದರೆ ನವೆಂಬರ್ 2022 ರಲ್ಲಿ ಎರಡೇ ಎರಡು ಬಟ್ಕಿ ಪಕ್ಷಿಗಳು   ಕಾಣಿಸಿಕೊಂಡಿವೆ” ಎಂದು ಗೌಡ ಚಿಂತೆಯಿಂದ ಹೇಳಿದರು.

LEAVE A REPLY

Please enter your comment!
Please enter your name here