ನಮ್ಮ ಮಣ್ಣಿಗೆ ಸಾವಯವ ಅಂಶ ಏಕೆ ಬೇಕು ?

0
ಲೇಖಕರು: ಸಾಯಿಲ್‌ ವಾಸು

ಕಾಂಪೋಸ್ಟ್, ಕಳಿತ ತಿಪ್ಪಗೊಬ್ಬರ ಹಾಗೂ ಇನ್ನಿತರ ಸಾವಯವ ವಸ್ತುಗಳನ್ನು ಹೊಂದಿರುವ ಯಾವುದೇ ರೀತಿಯ ಗೊಬ್ಬರಗಳು ಎಂತಹ ಸಮಸ್ಯಾತ್ಮಕ ಮಣ್ಣುಗಳೇ ಇರಲಿ ಅವುಗಳನ್ನು ಸುಧಾರಿಸುತ್ತವೆ. ಅವು ಹೇಗೆ ಮತ್ತು ಏಕೆ ಎಂಬುದನ್ನು ತಿಳಿಯಬಹುದು.

ಮಣ್ಣಿಗೆ ಸಾವಯವ ಅಂಶ ಎಂದಾಗ, ಇದೊಂದು ತಾಂತ್ರಿಕ ಪದ ಎನ್ನುವುದು ನಿಜವೇ. . . ಆದರೆ ಈ ಸಾವಯವ ವಸ್ತುಗಳು ನಮ್ಮ ಹೊಲ – ತೋಟಗಳನ್ನು ಸುಂದರವಾಗಿ ರೂಪಿಸಲು ಸಹಕರಿಸುತ್ತವೆ. ಅಂತಹ ಮಾಂತ್ರಿಕ ಶಕ್ತಿ, ಸಾವಯವ ವಸ್ತುಗಳಲ್ಲಿವೆ. ಮಣ್ಣಿಗೆ ಪೂರಕವಾಗಿ ಬೆರೆಯುವಂತಹ, ಕರಗುವಂತ, ಸಸ್ಯ ಪ್ರಾಣಿ– ಇತ್ಯಾದಿಗಳಿಂದ ಸಿಗುವ ಯಾವುದೇ ವಸ್ತುಗಳನ್ನು ಸಾವಯವ ವಸ್ತುಗಳೆಂದು ತಿಳಿಯಬೇಕು,

ಮರಳು ಮಣ್ಣಿಗೆ ಸಾವಯವ ವಸ್ತು ಹೇಗೆ ಸಹಕರಿಸಬಲ್ಲದು ?

ಮರಳು ಕಣಗಳನ್ನು ಹೆಚ್ಚಾಗಿ ಹೊಂದಿರುವ ಮರಳುಮಣ್ಣಿನ ಹೊಲ – ತೋಟಗಳು ಒಂದು ರೀತಿಯಲ್ಲಿ ಸವಾಲಿನ ಮಣ್ಣುಗಳೇ ಸರಿ . ಏಕೆಂದರೆ ಮರಳು ಕಣಗಳು ಗಾತ್ರದಲ್ಲಿ ದೊಡ್ಡದಾಗಿರುತ್ತವೆ ಹಾಗೂ ಈ ಕಣಗಳು ಇದ್ದೂ ಇರದಂತೆ ಪರಸ್ಪರ ಹೊಂದಿಕೊಂಡಿರುತ್ತವೆ. ಮರಳು ಕಣಗಳ ನಡುವಿರುವ ಜಾಗದಲ್ಲಿ ನೀರು ವೇಗವಾಗಿ ಹರಿಯುತ್ತದೆ / ಇಳಿಯುತ್ತದೆ . . ಅಷ್ಟೇ ವೇಗವಾಗಿ ಮಣ್ಣನ್ನು ಒಣಗಿಸಿಯೂ ಬಿಡುತ್ತವೆ. ಈ ಬಗೆಯ ಮಣ್ಣುಗಳಲ್ಲಿ ಪೋಷಕಾಂಶಕಗಳನ್ನು ಹಿಡಿದಿಡುವ ಸಾಮರ್ಥ್ಯ ಕಡಿಮೆ .

ಮರಳು ಕರಣಗಳೇ ಪ್ರಮುಖವಾಗಿರುವ ಮರಳುಮಣ್ಣಿಗೆ ಸಾವಯವ ಅಂಶವಿರುವ ಗೊಬ್ಬರವನ್ನು ಹಾಕಿದಾಗ, ಗೊಬ್ಬರದಲ್ಲಿರುವ ಸಾವಯವ ಅಂಶ ಸ್ಪಂಜಿನಂತೆ ಪಾತ್ರವಹಿಸುತ್ತದೆ. ಬರಗಾಲದಲ್ಲಿ ನೀರನ್ನು ಹಿಡಿದಿಡುವ ಸಾಮರ್ಥ್ಯವನ್ನು ಮಣ್ಣಲ್ಲಿ ತುಂಬುತ್ತವ. ಜೊತಗೆ ಅಗತ್ಯವಾಗಿರುವ ಪೋಷಕಾಂಶಗಳನ್ನು ಗಿಡಗಳಿಗೆ ದೀರ್ಘಕಾಲದವರೆಗೂ ಸಿಗುವಂತೆ ಮಾಡುತ್ತವೆ. ಕ್ರಮೇಣ ಮಣ್ಣಲ್ಲಿಯೇ ಕರಗುವ ಸಾವಯವ ವಸ್ತುಗಳು, ಮಣ್ಣ ಕಣಕಣಗಳೂ ಪರಸ್ಪರ ಬೆರೆಯುವಂತೆ ಮಾಡುತ್ತಾ, ಮಣ್ಣು ಸವೆಯುವುದನ್ನು ತಡೆಯುತ್ತವೆ.

ಜೇಡಿ ಮಣ್ಣಿಗೆ ಸಾವಯವ ವಸ್ತು ಮಿಶ್ರಣ:

ಜೇಡಿ ಮಣ್ಣಿನ ಕಣಗಳು ಗಾತ್ರದಲ್ಲಿ ಬಹಳ ಚಿಕ್ಕವು – – – ಈ ಬಗೆಯ ಮಣ್ಣು ಕಣಕಣಗಳು ಬಲವಾಗಿ ಪರಸ್ಪರ ಬೆರೆತಿರುವುದರಿಂದ, ಇವುಗಳ ನಡುವೆ ಗಾಳಿಯಾಡುವುದೂ ಸಹ ಸ್ವಲ್ಪ ಕಷ್ಟವೇ. ಆದರೆ ಈ ಬಗೆಯ ಮಣ್ಣುಗಳು ನೀರನ್ನೂ ಹಾಗೂ ಪೋಷಕಾಂಶಗಳನ್ನೂ ದೀರ್ಘಕಾಲ ಹಿಡಿದಿಟ್ಟುಕೊಳ್ಳುತ್ತವೆ.

ಈ ಬಗೆಯ ಮಣ್ಣಿಗೆ ಸಾವಯವ ವಸ್ತುಗಳನ್ನು ಬೆರೆಸಿದಾಗ, ಸಾವಯವ ವಸ್ತುಗಳು ಅತಿ ಚಿಕ್ಕ ಗಾತ್ರದಲ್ಲಿರುವ ಮಣ್ಣ ಕಣಕಣಗಳನ್ನು ಬೇರ್ಪಡಿಸುತ್ತವೆ. ಈ ಮೂಲಕ ಕಣಗಳ ನಡುವೆ ಹೆಚ್ಚು ಗಾಳಿಯಾಡುವಂತೆ ಮಾಡುತ್ತವೆ ಹಾಗೂ ಕಣಗಳ ನಡುವೆ ಜಾಗವನ್ನು ಸೃಷ್ಟಿಸುತ್ತಿವೆ. ಹೀಗಾದಾಗ ನೀರು ಸುಲಭವಾಗಿ ಮತ್ತೊಳಗೆ ಇಳಿಯುತ್ತವೆ. ಮತ್ತು ಗಿಡಗಳ ಬೇರುಗಳೂ ಸಹ ಆಳವಾಗಿಳಿಯಲು ಸುಲಭವಾಗುತ್ತದೆ. ಸಾವಯವ ವಸ್ತು ಮಣ್ಣ ಕಣಕಣಗಳನ್ನು ಸ್ವಲ್ಪಮಟ್ಟಿಗೆ ಬೇರ್ಪಡಿಸುವುದರಿಂದ, ಮಣ್ಣು ಗಟ್ಟಿಯಾಗುವುದು ತಪ್ಪುತ್ತದೆ. ಹಾಗೂ ಹೆಚ್ಚು ಕಾಲದವರೆಗೆ ಹಗುರವೂ ಹಾಗೂ ಬಿಡಿಬಿಡಿಯಾಗಿಯೂ ಇರುತ್ತವೆ.

ಸಾವಯವ ವಸ್ತುವಿನಿಂದಾಗುವ ಇನ್ನಿತರ ಪ್ರಯೋಜನಗಳು:

ನಿಮ್ಮ ಹೊಲ / ತೋಟಗಳಲ್ಲಿರುವ ಮಣ್ಣು ಯಾವುದೇ ಬಗೆಯಿಂದಿರಲಿ : ಅಧಿಕ ಪ್ರಮಾಣದಲ್ಲಿ ಸಾವಯವ ವಸ್ತುಗಳು ಮಣ್ಣಲ್ಲಿ ಬೆರೆತಾಗ, ಮಣ್ಣಲ್ಲಿ ಉಪಯುಕ್ತ ಜೀವಾಣುಗಳಿಂದ ಎರೆಹುಳು ಇತ್ಯಾದಿ ಸೂಕ್ಷ್ಮಾಣುಜೀವಿಗಳ ಚಟುವಟಿಕೆ ಹೆಚ್ಚಾಗುತ್ತದೆ. ಮಣ್ಣುಜೀವಿಗಳು ಇನ್ನಷ್ಟು ಸಾವಯವ ಅಂಶಗಳನ್ನು ಸೃಷ್ಟಿಸುತ್ತವೆ. ಇದರಿಂದ ಮಣ್ಣು ಮತ್ತಷ್ಟು ಫಲವತ್ತಾಗುತ್ತದೆ. ಅನೇಕ ಮಣ್ಯಜೀವಿಗಳು ಸಾವಯವ ವಸ್ತುಗಳನ್ನು ಕಳಿಸುತ್ತಾ, ಮಣ್ಣಲ್ಲಿ ಮೋಷಕಾಂಶಗಳು ಸೇರುವಂತೆ ಸಹಕರಿಸುತ್ತವೆ. ಕೆಲವು ಮಣ್ಣು ಜೀವಿಗಳು ಸಸ್ಯರೋಗಗಳನ್ನು ನಿಯಂತ್ರಿಸುತ್ತಾ, ನಮ್ಮ ಹೊಲ – ತೋಟಗಳು ಆರೋಗ್ಯವಾಗಿರಲು ಸಹಕರಿಸುತ್ತವೆ.

ಸಾವಯವ ಅಂಶಗಳು ಮಣ್ಣಿನ ರಚನೆಯನ್ನು ಸುಧಾರಿಸುವುದರಿಂದ, ಬರಗಾಲದಲ್ಲಿಯೂ ಸಹ ನಮ್ಮ ಹೊಲದ ಮಣ್ಣುಗಳು ಒರಗುವುದನ್ನು ತಪ್ಪಿಸುತ್ತವೆ. ಒಮ್ಮೆ ಮಳೆಯಾದಾಗ, ಮಳೆನೀರು ಮಣ್ಣಲ್ಲಿ ಇಂಗುವುದರಿಂದ, ಕೊಚ್ಚಿಹೋಗುವ ಮಳೆನೀರಿನ ಪ್ರಮಾಣ ಗಣನೀಯವಾಗಿ ಕಡಿಮೆ ಇರುತ್ತದೆ.

LEAVE A REPLY

Please enter your comment!
Please enter your name here