ಲೇಖನದ ಶೀರ್ಷಿಕೆ ಓದಿ ಈ ರೀತಿಯ ಹಾಳೆಗಳು ಇರಲು ಸಾಧ್ಯವೇ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿರುತ್ತದೆ. ರಾಸಾಯನಿಕ ಕೀಟನಾಶಕ ತರಲು ಹಣ ಸುರಿಯದೇ, ಯಾವುದೇ ಥರದ ಕೀಟನಾಶಕ ಸಿಂಪಡಿಸದೇ ಹಾನಿಕಾರಕ ಕೀಟಗಳನ್ನು ನಿಯಂತ್ರಿಸುವ ಇಂಥ ಹಾಳೆಗಳಿಗೆ ಮ್ಯಾಜಿಕ್ ಸ್ಟಿಕ್ಕರ್ಸ್ ಎಂದು ಸಹ ಕರೆಯುತ್ತಾರೆ.
ಇವುಗಳಲ್ಲಿ ನೀಲಿ ಮತ್ತು ಹಳದಿ ಹಾಳೆಗಳಿವೆ. ಮೊದಲಿಗೆ ಹಳದಿ ಹಾಳೆಯ ವಿಶೇಷತೆಗಳನ್ನು ಗಮನಿಸೋಣ. ವಿಶೇಷ ಹಳದಿ ಅಂಟು ಬಲೆಗಳು ಹಾರುವ ಕೀಟಗಳ ಕಣ್ಣುಗಳಿಗೆ ಚಿಗುರುವ ಎಲೆಗೊಂಚಲಿನಂತೆ ಕಾಣುತ್ತವೆ. ಇದರಿಂದ ಆಕರ್ಷಿತವಾಗಿ ಬರುವ ಕೀಟಗಳು ಹಾಳೆಯ ಮೇಲೆ ಕುಳಿತೊಡನೆ ಅಲ್ಲಿರುವ ಅಂಟಿನ ಗುಣದಿಂದಾಗಿ ಬಂಧಿಯಾಗುತ್ತವೆ.
ಇನ್ನಿತರ ಅನುಕೂಲಗಳು: ಹಳದಿ ಬಣ್ಣದ ಅಂಟು ಹಾಳೆಗಳಿಂದ ಬೆಳೆಯ ಕ್ಷೇತ್ರದಲ್ಲಿರುವ ಕೀಟಗಳ ವಿಧಗಳು ಮತ್ತು ಅವುಗಳ ಸಾಂದ್ರತೆ ತಿಳಿಯಬಹುದು. ಇದು ಕೀಟಗಳ ಬಗ್ಗೆ ಅಧ್ಯಯನ ಮಾಡುವ ಕೀಟಶಾಸ್ತ್ರಜ್ಞರಿಗೂ ಸಹಾಯಕ. ಜೊತೆಗೆ ಬೆಳೆಯ ಬೆಳವಣಿಗೆಯ ಬೇರೆ ಬೇರೆ ಹಂತಗಳಲ್ಲಿ ಸಮಗ್ರ ಕೀಟ ನಿರ್ವಹಣೆ ವಿಧಾನಗಳನ್ನು ವಿಳಂಬ ಇಲ್ಲದಂತೆ ಕೈಗೊಳ್ಳುವಿಕೆ ಸಾಧ್ಯವಾಗುತ್ತದೆ. ಈ ಅಂಟು ಬಲೆಗಳ ಬಣ್ಣ ಒಂದು ಪ್ರತ್ಯೇಕ ತರಂಗಾಂತರದಲ್ಲಿದ್ದು ಕೀಟಗಳನ್ನು ತನ್ನತ್ತ ಸೆಳೆಯುವಂತೆ ವೈಜ್ಞಾನಿಕ ಸಂಶೋಧನೆ ಮಾಡಿ ತಯಾರಿಸಲಾಗಿರುತ್ತದೆ. ಹಾಳೆಯ ಎರಡೂ ಬದಿಗಳು ಈ ರೀತಿಯ ಆಕರ್ಷಣೆ ಕಾರ್ಯ ನಿರ್ವಹಿಸುತ್ತವೆ. ಇದರಿಂದ ಅಧಿಕ ಸಂಖ್ಯೆಯಲ್ಲಿ ಬೆಳೆ ಬಾಧಿಸುವ ಕೀಟಗಳನ್ನು ಆಕಷರ್ಷಣೆ ಮಾಡಿ ಅವು ಹಾಳೆಗೆ ಸಿಲುಕಿಕೊಳ್ಳುವಂತೆ ಮಾಡುವುದು ಸಾಧ್ಯವಾಗುತ್ತದೆ.
ಹೀಗೆ ಅಂಟಿಕೊಂಡ ಕೀಟಗಳ ಬಗ್ಗೆ ಕಿರುಮಾಹಿತಿ ಅಂಶಗಳನ್ನು ಹಾಳೆಯ ಮೇಲೆ ಬಾಲ್ ಪಾಯಿಂಟ್ ಪೆನ್ನಿನಿಂದ ಬರೆಯಲೂ ಸ್ಥಳವಕಾಶ ಇರುತ್ತದೆ. ಇಂಥ ಹಾಳೆಗಳನ್ನು ಬಳಸುವುದರಿಂದ ಅಪಾರ ಅನುಕೂಲಗಳಿವೆ. ಮೊದಲನೇಯದಾಗಿ ಕೀಟಗಳ ಬಾಧೆ ತಡೆಗಟ್ಟಿ ಅಪಾರ ಮೌಲ್ಯ್ ಬೆಳೆಗಳನ್ನು ಸಂರಕ್ಷಿಸಬಹುದು. ಎರಡನೇಯದಾಗಿ ಒಂದು ಪ್ರದೇಶದಲ್ಲಿ ಇರುವ ಕೀಟಗಳ ಪ್ರಬೇಧಗಳನ್ನು ತಿಳಿಯಬಹುದು. ಮೂರನೇಯದಾಗಿ ಸಮಗ್ರ ಕೀಟ ನಿಯಂತ್ರಣಾ ವಿಧಾನಗಳನ್ನು ಅನುಸರಿಸಬಹುದು. ಐದನೇಯದಾಗಿ ಕೀಟಗಳ ಬಗ್ಗೆ ವಿಶೇಷ ಅಧ್ಯಯನ ಮಾಡುವ ಕೃಷಿವಿಜ್ಞಾನಿಗಳಿಗೂ ಇದು ಸಹಾಯಕ. ಹಳದಿ ಬಣ್ಣದ ಅಂಟುಬಲೆಗಳನ್ನು ಎಲ್ಲ ರೀತಿಯ ಕ್ಷೇತ್ರಬೆಳೆ ಮತ್ತು ತೋಟಗಾರಿಕಾ ಬೆಳೆಗಳ ಕ್ಷೇತ್ರಗಳಲ್ಲಿಯೂ ಬಳಸಬಹುದು. ಇದನ್ನು ಕೋಳಿಫಾರಂಗಳಲ್ಲಿಯೂ ಬಳಸಬಹುದು. ಇದರಿಂದ ಕೀಟ ನಿಯಂತ್ರಣ ಪರಿಣಾಮಕಾರಿಯಾಗಿ ಆಗುತ್ತದೆ. ಕ್ಷೇತ್ರಬೆಳೆಗಳ ಸಂದರ್ಭದಲ್ಲಿ ಅತ್ಯುತ್ತಮ ಫಲಿತಾಂಶಕ್ಕಾಗಿ ಸಾಗುವಳಿ ಹಂತದಿಂದ ಫಸಲನ್ನು ಕೊಯ್ಲು ಮಾಡುವ ಹಂತದವರೆಗೂ ಬಳಸಬೇಕು.
ನಿಯಂತ್ರಣವಾಗುವ ಕೀಟಗಳು: ಹಣ್ಣಿನ ನೊಣಗಳು, ಎಲೆ ಕೊರೆದು ತಿನ್ನುವ ಕೀಟ, ಕ್ಯಾಪ್ಸಿಡ್ (ಲೈಗಸ್), ಸಿಯರೈಡಸ್, ತೀರದ ನೊಣಗಳು, ಎಲೆ ಗಣಿಗಾರ ನೊಣ, ಫಂಗಸ್ ಗುಂಗರೆ, ಈರುಳ್ಳಿ ನೊಣ, ಸೌತೆಕಾಯಿ ಜೀರುಂಡೆಗಳು, ಕಪ್ಪೆನೊಣ, ಪತಂಗ ಕೀಟಗಳು, ಫ್ಲಿಯಾ ಜೀರುಂಟೆಗಳು, ಎಲೆಕೋಸು ಬಿಳಿಚಿಟ್ಟೆ, ಕಪ್ಪು ಚಿಗಟಗಳು, ವಾಸ್ಟ್, ಮಿಡ್ಜಸ್ ಇತ್ಯಾದಿ ಕೀಟಗಳು ಪರಿಣಾಮಕಾರಿಯಾಗಿ ನಿಯಂತ್ರಿತವಾಗುತ್ತವೆ.
ನೀಲಿ ಬಣ್ಣದ ಜಿಗುಟಾದ ಹಾಳೆಗಳು:ಬೆಳೆಯನ್ನು ಬಾಧಿಸುವ ಕೀಟಗಳಲ್ಲಿ ಬೇರೆಬೇರೆ ವಿಧಗಳಿವೆ. ಇವುಗಳಲ್ಲಿ ಹಾರಾಡುವ ಕೀಟಗಳನ್ನು ಹಿಡಿಯಲು ನೀಲಿ ಬಣ್ಣದ ಜಿಗುಟಾದ ಹಾಳೆಗಳು ಸಹಾಯಕ. ಸುಧಾರಿತ ತಂತ್ರಜ್ಞಾನದಿಂದ ರೂಪಿಸಲಾಗಿರುವ ಈ ಜಿಗುಟಾದ ಹಾಳೆಗಳು, ಹಾರಾಡುವ ಕೀಟಗಳಿಗೆ ಚಿಗುರೊಡೆಯುತ್ತಿರುವ ಎಲೆಗಳ ಗೊಂಚಲಿನಂತೆ ಗೋಚರಿಸುತ್ತವೆ. ಇದರಿಂದ ಕೀಟಗಳು ಇತ್ತ ಆಕರ್ಷಿತವಾಗುತ್ತವೆ.
ಹಾಳೆಗಳ ಮೇಲೆ ಕುಳಿತುಕೊಂಡ ತಕ್ಷಣ ಅದರಲ್ಲಿರುವ ಜಿಗುಟಾದ ಅಂಶದಿಂದ ಅಲ್ಲೆಯೇ ಅಂಟಿಕೊಳ್ಳುತ್ತವೆ. ಕ್ರಮೇಣ ಹೀಗೆ ಹಾಳೆಗಳಿಗೆ ಸಿಲುಕಿಕೊಳ್ಳುವ ಕೀಟಗಳ ಸಂಖ್ಯೆ ಹೆಚ್ಚುತ್ತದೆ. ಇದರಿಂದ ಬೆಳೆ ಸುರಕ್ಷಿತವಾಗಿರುತ್ತದೆ. ಇವುಗಳನ್ನು ಮ್ಯಾಜಿಕ್ ಸ್ಟಿಕ್ಕರ್ಸ್ ಎಂದು ಸಹ ಕರೆಯಲಾಗುತ್ತದೆ
ಗಿಡಹೇನುಗಳು, ಬಿಳಿನೊಣ, ಜಸ್ಸಿಡ್ಗಳು, ಹಣ್ಣಿನ ನೊಣಗಳು, ಎಲೆ ಕೊರೆದು ತಿನ್ನುವ ಕೀಟ, ಕ್ಯಾಪ್ಸಿಡ್ (ಲೈಗಸ್), ಸಿಯರೈಡಸ್, ತೀರದ ನೊಣಗಳು, ಎಲೆ ಗಣಿಗಾರ ನೊಣ, ಫಂಗಸ್ ಗುಂಗರೆ, ಈರುಳ್ಳಿ ನೊಣ, ಸೌತೆಕಾಯಿ ಜೀರುಂಡೆಗಳು, ಕಪ್ಪೆನೊಣ, ಪತಂಗ ಕೀಟಗಳು, ಫ್ಲಿಯಾ ಜೀರುಂಟೆಗಳು, ಎಲೆಕೋಸು ಬಿಳಿಚಿಟ್ಟೆ, ಕಪ್ಪು ಚಿಗಟಗಳು, ವಾಸ್ಟ್, ಮಿಡ್ಜಸ್ ಇತ್ಯಾದಿ ಕೀಟಗಳು ಬ್ಯಾರಿಕ್ಸ್ ಕೀಟ ನಿಯಂತ್ರಣ ಸಾಧನಗಳಿಂದ ಪರಿಣಾಮಕಾರಿಯಾಗಿ ನಿಯಂತ್ರಿತವಾಗುತ್ತವೆ.
ಬಳಸುವ ಕ್ಷೇತ್ರ : ಆಹಾರ ಧಾನ್ಯಗಳ ಬೆಳೆಗಳು, ತೋಟಗಾರಿಕೆ ಬೆಳೆಗಳು ಅಂದರೆ ಹಣ್ಣುಗಳು-ತರಕಾರಿಗಳು, ಒಳಾಂಗಣದಲ್ಲಿ ಬೆಳೆಯುವ ಅಣಬೆಗಳು, ಇತ್ಯಾದಿ ಎಲ್ಲ ಕೃಷಿ ಉತ್ಪನ್ನಗಳನ್ನು ಕೀಟಗಳಿಂದ ಸಂರಕ್ಷಿಸಲು ನೀಲಿ ಬಣ್ಣದ ಜಿಗುಟಾದ ಹಾಳೆಗಳು ಸಹಾಯ ಮಾಡುತ್ತವೆ. ಹಸಿರು ಮನೆಗಳ ನಿರ್ವಹಣೆ ದುಬಾರಿ. ಇಂಥ ಸಂದರ್ಭದಲ್ಲಿ ಹಾನಿಕಾರಕ ಕೀಟಗಳನ್ನು ನಿಯಂತ್ರಿಸದೇ ಇದ್ದರೆ ಅಲ್ಲಿರುವ ತೋಟಗಾರಿಕೆ ಬೆಳೆ ಹಾಳಾಗುತ್ತದೆ. ಇದನ್ನು ತಡೆಗಟ್ಟಲು ಸಹ ನೀಲಿ ಬಣ್ಣದ ಜಿಗುಟಾದ ಹಾಳೆಗಳು ಸಹಾಯ ಮಾಡುತ್ತವೆ.
ಬಳಸುವ ವಿಧಾನ:ಹಸಿರು ಮನೆಗಳಲ್ಲಿ ನೀಲಿಬಣ್ಣದ ಹಾಗೂ ಹಳದಿ ಬಣ್ಣದ ಜಿಗುಟಾದ ಹಾಳೆಗಳನ್ನು ಪ್ರವೇಶ ದ್ವಾರದ ಬಳಿ, ಕಿಟಕಿಗಳಲ್ಲಿ ತೂಗು ಹಾಕಬಹುದು. ಇದರಿಂದ ಒಳನುಸುಳುವ ಕೀಟಗಳು ಆರಂಭದಲ್ಲಿಯೇ ಇತ್ತ ಆಕರ್ಷಿತವಾಗಿ ಸಿಲುಕಿಕೊಳ್ಳುತ್ತವೆ. ಧಾನ್ಯಗಳ ಬೆಳೆ ಇರುವ ಹೊಲ-ಗದ್ದೆಗಳಲ್ಲಿ ತೆನೆಗಳಿಗಿಂತ ತುಸು ಹೆಚ್ಚು ಎತ್ತರದಲ್ಲಿ ಕಟ್ಟಬೇಕು. ಬೆಳೆ ಎತ್ತರವಾದಂತೆ ಹಾಳೆಗಳನ್ನು ಅವುಗಳಿಗಿಂತ ಸ್ವಲ್ಪ ಎತ್ತರದಲ್ಲಿ ಕಟ್ಟಬೇಕು. ಮುಖ್ಯವಾಗಿ ಹಾಳೆಗಳ ಮೇಲೆ ಬೆಳಕು ಚೆನ್ನಾಗಿ ಬೀಳಬೇಕು. ಅಣಬೆಗಳನ್ನು ಬೆಳೆಯುತ್ತಿರುವ ಜಾಗದಲ್ಲಿ ಹಾಳೆಗಳನ್ನು ಬೆಂಚುಗಳ ಮೇಲೆ ಅಡ್ಡಲಾಗಿ ಇಡಬಹುದು. ತ್ರಿಪ್ಸ್, ಎಲೆಕೋಸು ಕಾಂಡದ ಹುಳು, ಎಲೆ ಕೊರೆಯುವ ಹುಳುಗಳ ಬಾಧೆ ಬಗ್ಗೆ ಆರಂಭದಲ್ಲಿಯೇ ತಿಳಿಯಬಹುದು ಜೊತೆಗೆ ತ್ವರಿತ ಗತಿಯಲ್ಲಿ ನಿಯಂತ್ರಣವೂ ಸಾಧ್ಯವಾಗುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಬ್ಯಾರಿಕ್ಸ್ ಕೃಷಿ ಸಂಶೋಧನಾ ಕೇಂದ್ರ, ಬೆಂಗಳೂರು. ಮೊಬೈಲ್ :9900800033