ಮುಂಗಾರು ಮಳೆ ಸ್ಥಿತಿ ಇನ್ನೊಂದೆರಡು ದಿನದಲ್ಲಿ ಮತ್ತಷ್ಟು ಸುಧಾರಣೆ

0

ಭಾರತದ ಕೃಷಿ ಮತ್ತು ಆರ್ಥಿಕ ಬದುಕಿನ ಜೀವನಾಡಿಯಾದ ಮುಂಗಾರು ಮಳೆ (Monsoon Rain )ಯ ಸ್ಥಿತಿಗತಿ ಇನ್ನೊಂದೆರಡು ದಿನಗಳಲ್ಲಿ ಮತ್ತಷ್ಟೂ ಸುಧಾರಿಸುವ ನಿರೀಕ್ಷೆಯಿದೆ. ಮುಂಗಾರು ವೇಗವನ್ನು ಪಡೆಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಅಭಿಪ್ರಾಯಪಟ್ಟಿದೆ.

ಭಾರತದಲ್ಲಿ ವಿಳಂಬವಾಗಿದ್ದ ಮುಂಗಾರು ಮಾರುತ (Monsoon Clouds )ಗಳು ಇನ್ನು ಒಂದು ಅಥವಾ ಎರಡು ದಿನದಲ್ಲಿ ದಕ್ಷಿಣ, ಮಧ್ಯ ಮತ್ತು ಪಶ್ಚಿಮ ರಾಜ್ಯಗಳಲ್ಲಿ ಪ್ರಮುಖವಾಗಿ ಅಕ್ಕಿ, ಸೋಯಾಬೀನ್, ಹತ್ತಿ ಮತ್ತು ಕಬ್ಬು ಬೆಳೆಯುವ ಪ್ರದೇಶಗಳನ್ನು ಆವರಿಸುವ ಸಾಧ‍್ಯತೆಯಿದೆ. ಹತ್ತಿ, ಸೋಯಾಬೀನ್ ಮತ್ತು ಬೇಳೆಕಾಳುಗಳನ್ನು ಹೆಚ್ಚಾಗಿ ದೇಶದ ಮಧ್ಯ ಭಾಗಗಳಲ್ಲಿ ಕೃಷಿ ಮಾಡಲಾಗುತ್ತದೆ.

ಮುಂಗಾರು ಮಳೆ (Monsoon Rain ) ಭಾರತದ ಜೀವನಾಡಿ. ತೋಟಗಳಲ್ಲಿ, ಜಮೀನುಗಳಲ್ಲಿ ಹಸಿರುಕ್ಕಿಸಲು ಸಹಕಾರಿ. ಕೆರೆಕಟ್ಟೆಗಳು, ಜಲಾಶಯಗಳನ್ನು ಭರ್ತಿ ಮಾಡಲು ಅಗತ್ಯವಿರುವ ಸುಮಾರು ಶೇಕಡ 70% ಮಳೆನೀರು ಮುಂಗಾರು ಮಳೆ (Monsoon Rain ) ಯಿಂದಲೇ ಒದಗುತ್ತದೆ. ಬೇಸಿಗೆ ದಿನಗಳಿಂದ ಬಸವಳಿದ ಸಕಲ ಜೀವರಾಶಿಗಳಿಗೂ ಮುಂಗಾರು ಮಳೆ ತಂಪೆರೆಯುತ್ತದೆ.

ಸಾಮಾನ್ಯವಾಗಿ ಜೂನ್ 1 ರಿಂದ ಭಾರತದ ನೈಋತ್ಯ ಕರಾವಳಿಯಲ್ಲಿ ಕೇರಳ ರಾಜ್ಯವನ್ನು ನೈರುತ್ಯ ಮುಂಗಾರು ಮಾರುತಗಳು (Southwest monsoon clouds) ಪ್ರವೇಶಿಸಿ ಮಳೆ (Rain) ಸುರಿಸಲು ತೊಡಗುತ್ತವೆ. ಜೂನ್ ಮಧ್ಯದ ವೇಳೆಗೆ ದೇಶದ ಅರ್ಧದಷ್ಟು ಭಾಗವನ್ನು ಮುಂಗಾರು ಮಳೆ (Monsoon Rain) ಆವರಿಸುತ್ತದೆ.

ಈ ವರ್ಷ, ಅರೇಬಿಯನ್ ಸಮುದ್ರದಲ್ಲಿ ತೀವ್ರ ಚಂಡಮಾರುತ ಬಿಪರ್ಜೋಯ್ ರಚನೆಯು ಮುಂಗಾರು ಮಳೆ (Monsoon Rain) ಆರಂಭವನ್ನು ವಿಳಂಬಗೊಳಿಸಿತು. ಇದರಿಂದ ಇದುವರೆಗೆ ರಾಷ್ಟ್ರದ ದೇಶದ ಒಂದು ಭಾಗಕ್ಕೆ ಅದರ ಪ್ರಗತಿ ಕುಂಠಿತವಾಗಿದೆ.

ಮುಂಗಾರು ಮಳೆ (Monsoon Rain) ಬಲಗೊಳ್ಳಲು ಪರಿಸ್ಥಿತಿಗಳು ಅನುಕೂಲಕರವಾಗುತ್ತಿವೆ. ಮುಂಗಾರು ಮಳೆ (Monsoon Rain) ಈ ವಾರಾಂತ್ಯದಿಂದ ದೇಶದ ಮಧ್ಯ, ಪಶ್ಚಿಮ ಮತ್ತು ಉತ್ತರ ಭಾಗಗಳಲ್ಲಿ ತ್ವರಿತವಾಗಿ ಪ್ರಗತಿ ಸಾಧಿಸಲಿದೆ” ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿ ಅಭಿಪ್ರಾಯ ಪಟ್ಟಿದ್ದಾರೆ.

ಭಾರತವು ಜೂನ್ನಲ್ಲಿ ಇದುವರೆಗೆ ಸಾಮಾನ್ಯಕ್ಕಿಂತ 33% ಕಡಿಮೆ ಮುಂಗಾರು ಮಳೆ (Monsoon Rain) ಯನ್ನು ಪಡೆದಿದೆ, ಕೆಲವು ರಾಜ್ಯಗಳಲ್ಲಿ ಮುಂಗಾರು ಮಳೆ (Monsoon Rain) ಕೊರತೆಯು ಶೇಕಡ 95 ರಷ್ಟು ಹೆಚ್ಚಾಗಿದೆ.

“ಈಗ ನಮಗೆ ಸಿಕ್ಕಿರುವ ಮಾಹಿತಿಯ ಆಧಾರದ ಮೇಲೆ, ಈ ವಾರ ಮುಂಗಾರು ಮಳೆ ಉತ್ತಮವಾಗಿರಲಿದೆ” ಎಂದು ಐಎಂಡಿ ಮಹಾನಿರ್ದೇಶಕರು ಈಗಾಗಲೇ ಹೇಳಿದ್ದಾರೆ. ಭಾರತೀಯ ಹವಾಮಾನ ಇಲಾಖೆ ( Meteorological Department ) ಯು ಜೂನ್ನಲ್ಲಿ ಸರಾಸರಿಗಿಂತ ಕಡಿಮೆ ಮುಂಗಾರು ಮಳೆ (Monsoon Rain) ಆಗುವ ಮುನ್ಸೂಚನೆ ನೀಡಿದೆ, ಜುಲೈ, ಆಗಸ್ಟ್ ಮತ್ತು ಸೆಪ್ಟೆಂಬರ್ನಲ್ಲಿ ಮುಂಗಾರು (Monsoon ) ಮತ್ತಷ್ಟೂ ಚುರುಕಾಗುವ ನಿರೀಕ್ಷೆಯಿದೆ.

ಸಂಪೂರ್ಣ ನಾಲ್ಕು ತಿಂಗಳ ಮುಂಗಾರು ಮಳೆ (Monsoon Rain) ಋತುವಿನಲ್ಲಿ, ಸಂಭವನೀಯ ಎಲ್ ನಿನೋ (El Nino) ಹವಾಮಾನ ವಿದ್ಯಮಾನದ ರಚನೆಯ ಹೊರತಾಗಿಯೂ ಭಾರತೀಯ ಹವಾಮಾನ ಇಲಾಖೆ ( Meteorological Department )ಯು ಸರಾಸರಿ ಪ್ರಮಾಣದ ಮುಂಗಾರು ಮಳೆ (Monsoon Rain) ಮುನ್ಸೂಚನೆ ನೀಡಿದೆ.

ಪೆಸಿಫಿಕ್ ಮಹಾಸಾಗರದಲ್ಲಿ ಸಮುದ್ರದ ಮೇಲ್ಮೈ ಬಿಸಿಯಾಗುವಿಕೆಯಿಂದ ಗುರುತಿಸಲ್ಪಟ್ಟ ಪ್ರಬಲವಾದ ಎಲ್ ನಿನೊ, ಆಗ್ನೇಯ ಏಷ್ಯಾ, ಭಾರತ ಮತ್ತು ಆಸ್ಟ್ರೇಲಿಯಾದಲ್ಲಿ ಬರವನ್ನು ಉಂಟುಮಾಡಬಹುದು, ಅದೇ ಸಮಯದಲ್ಲಿ ಯುಎಸ್ ಮಿಡ್ವೆಸ್ಟ್ ಮತ್ತು ಬ್ರೆಜಿಲ್ನಂತಹ ಪ್ರಪಂಚದ ಇತರ ಭಾಗಗಳಲ್ಲಿ ಅತೀವೃಷ್ಟಿ ಆಗಬಹುದು.

ಪ್ರಬಲವಾದ ಎಲ್ ನಿನೊದ ಹೊರಹೊಮ್ಮುವಿಕೆಯ ಕಾರಣದಿಂದ 2014 ಮತ್ತು 2015 ರಲ್ಲಿ ನಾಲ್ಕನೇ ಬಾರಿಗೆ ಬರಗಾಲದ ಸ್ಥಿತಿ ಉಂಟಾಗಿತ್ತು. ಇದು ಭಾರತದ ಬಹುತೇಕ ಕಡೆ ರೈತರಿಗೆ ಸಂಕಷ್ಟ ಉಂಟು ಮಾಡಿತ್ತು ಎಂಬುದನ್ನು ಸ್ಮರಿಸಬಹುದು.

LEAVE A REPLY

Please enter your comment!
Please enter your name here