ಬರಡು ಮಣ್ಣಿಗೆ ಜೀವ  ತುಂಬುವ  ಹಸಿರೆಲೆ ಗೊಬ್ಬರ

0
ಲೇಖಕಕರು: ಮಂಜುನಾಥ್ ಜಿ., well Labs Bangalore

ಭಾಗ – 1

ಬರಡು/ ಸತ್ವವಿಲ್ಲದ ಮಣ್ಣು

ಯಾವುದೇ ಮಣ್ಣಿನಲ್ಲಿ ಬೆಳೆ ಬೆಳೆಯಲು ಸಾಧ್ಯವಾಗದೇ ಹೋದರೆ ಆ ಮಣ್ಣನ್ನು ಬರಡು/ ಕಡಿಮೆ ಉತ್ಪಾದನಾ ಸಾಮರ್ಥ್ಯದ ಮಣ್ಣು ಎನ್ನಲಾಗುತ್ತದೆ. ಮುಖ್ಯವಾಗಿ ಬಿತ್ತಿದ ಬೀಜ ಗಿಡವಾಗಿ ಬೆಳೆದು ಉತ್ತಮ ಇಳುವರಿ ಕೊಡಬೇಕಾದರೆ ಮೂಲಾಧಾರವೇ ಈ ಆರೋಗ್ಯವಂತ ಮಣ್ಣು. ಕೆಲವು ಪ್ರದೇಶಗಳ ಭೂಮಿಯಲ್ಲಿ ಮೊದಲಿನಿಂದಲೂ ಫಲವತ್ತತೆ ಕಡಿಮೆ ಇದೆ. ಆದರೆ ಬಹುತೇಕ  ಬೇರೆ ಭಾಗಗಳಲ್ಲಿ  ಅವೈಜ್ಞಾನಿಕವಾಗಿ ಮತ್ತು ಅತಿಯಾದ ರಾಸಾಯನಿಕಗಳ ಗೊಬ್ಬರಗಳ ಬಳಕೆಯಿಂದಾಗಿ ಮಣ್ಣು ಫಲವತ್ತತೆ ಕಳೆದುಕೊಳ್ಳುತ್ತಿದೆ.

ಬರಡು ಮಣ್ಣನ್ನು ಫಲವತ್ತತೆ ಮಾಡುವುದು ಹೇಗೆ?

ಇಂತಹ ಸಂದರ್ಭದಲ್ಲಿ ಮಣ್ಣನ್ನು ಫಲವತ್ತತೆ ಮಾಡಲು ಎರಡು ದಾರಿಗಳಿವೆ  ಒಂದು ರಾಸಾಯನಿಕ ಗೊಬ್ಬರಗಳನ್ನು ವೈಜ್ಞಾನಿಕವಾಗಿ ಬಳಸಿಕೊಂಡು ಫಲವತ್ತತೆ ಹೆಚ್ಚಿಗೆ ಮಾಡಬಹುದು. ಆದ್ರೆ ಇದು ಸುಸ್ಥಿರವಲ್ಲ.  ಏಕೆಂದರೆ ಈ ಗೊಬ್ಬರಗಳಿಗಾಗಿ ಬೇರೆಯವರ ಮೇಲೆ ಅವಲಂಬನೆಯಾಗಬೇಕು.  ಜೊತೆಗೆ ಪ್ರತೀ ವರ್ಷದಿಂದ ವರ್ಷಕ್ಕೆ ಇವುಗಳ ಬೆಲೆ ಏರುತ್ತಾ ಒಳಸುರಿಯ ವೆಚ್ಚವನ್ನು ಹೆಚ್ಚಿಗೆ ಮಾಡುತ್ತಿವೆ. ಜೊತೆಗೆ ಪ್ರತೀ ವರ್ಷ ಇವುಗಳ ಅವೈಜ್ಞಾನಿಕ ಬಳಕೆಯಿಂದಾಗಿ ಕೃಷಿ ಭೂಮಿಯ ಆರೋಗ್ಯ ಹದಗೆಡುತ್ತಿದೆ ಎನ್ನುವುದು ಕೃಷಿಕರ ಅನುಭವ.

ಈ ಹಿನ್ನೆಲೆಯಲ್ಲಿ ಈ ವಿಧಾನ ದುಬಾರಿ ಮತ್ತು ಸುಸ್ಥಿರವಲ್ಲ. ಏಕೆಂದರೆ ನಾವು ಬಳಸುವ ಯಾವುದೇ ರಾಸಾಯನಿಕ ಗೊಬ್ಬರಗಳು ಕೂಡ ಲವಣಗಳು.  ಅವುಗಳನ್ನು ಭೂಮಿಗೆ ಕೊಟ್ಟ ಮೇಲೆ ಮಣ್ಣಿನಲ್ಲಿ ಕರಗಲು ಅತಿ ಹೆಚ್ಚು ನೀರಿನ ಬಳಕೆ ಮಾಡಬೇಕಾಗುತ್ತದೆ ಇದು ಮಣ್ಣಿಗೆ ಅನಗತ್ಯ ಒತ್ತಡ ನಿರ್ಮಿಸುತ್ತದೆ.  ರಾಸಾಯನಿಕ ಕೃಷಿ ಪದ್ದತಿಯಲ್ಲಿ ಇಳುವರಿ ಜಾಸ್ತಿಯಾಗಬೇಕು ಎನ್ನುವುದೊಂದೇ ಮಾನದಂಡವಾಗಿ ಸುಸ್ಥಿರ ಪದ್ಧತಿಗಳೆಲ್ಲ ಕಡಿಮೆಯಾಗುತ್ತಾ ಅತಿಯಾದ ರಾಸಾಯನಿಕಗಳ ಮೇಲೆ ಅವಲಂಬಿಸಬೇಕಾದಂತ ಪರಿಸ್ಥಿತಿ ಉಂಟಾಗಿದೆ.

ಪೂರ್ವಿಕರ ಕಾಲದಲ್ಲಿ ಇದ್ದ ಮಾದರಿ

ಪೂರ್ವಿಕರ ಕಾಲದಿಂದಲೂ ಕೂಡ ರೈತರು ಹಲವು ರೀತಿಯಲ್ಲಿ ಸುಸ್ಥಿರ ಕೃಷಿ ಜಮೀನಿನ ನಿರ್ವಹಣೆಗಳಲ್ಲಿ ಕೆಲವು ಇದ್ದವು.  ಮಳೆಗಾಲದಲ್ಲಿ ಮಳೆನೀರಿನ ಜೊತೆಗೆ ಜಮೀನುಗಳಿಂದ ಹರಿದು ಹೋಗಿದ್ದ ಮೇಲ್ಮಣ್ಣು ಕೆರೆಯಂಗಳದಲ್ಲಿ ಶೇಖರಣೆಯಾಗುತ್ತಿತ್ತು ಆ ಫಲವತ್ತಾದ ಗೋಡು ಮಣ್ಣನ್ನು ಬೇಸಿಗೆಕಾಲದಲ್ಲಿ ಚಕ್ಕಡಿಬಂಡಿ ಟ್ರಾಕ್ಟರ್ಗಳಲ್ಲಿ ವಾಪಾಸ್ ತಂದು ಕೃಷಿ ಭೂಮಿಗೆ ಹಾಕುತ್ತಿದ್ದರು ಅದರ ಜೊತೆಗೆ ಕೊಟ್ಟಿಗೆ ಗೊಬ್ಬರ ಜಾಸ್ತಿ ಕೊಡುತ್ತಿದ್ದರು. ಕೊಟ್ಟಿಗೆ ಗೊಬ್ಬರ ಜಾಸ್ತಿ ಕೊಟ್ಟಷ್ಟು ಕೂಡ ಭೂಮಿಯಲ್ಲಿ ನೀರಿಂಗಿಸುವ ತಾಕತ್ತು ಜಾಸ್ತಿ ಆಗುತ್ತಿತ್ತು. ಜೊತೆಗೆ ಮೊದಲು ಬೆಳೆಯುಳಿಕೆಗಳನ್ನೆಲ್ಲಾ ಮತ್ತೆ ಭೂಮಿಗೆ ಕೊಡುತ್ತಿದ್ದು ಇವುಗಳಿಂದಾಗಿ ಭೂಮಿಯಿಂದ ಬೆಳೆ ಬೆಳೆಯಲು ಬಳಸಿದ ಸಾರವೆಲ್ಲಾ ಮತ್ತೆ ಜಮೀನಿಗೆ ವಾಪಾಸ್ಸು ಸೇರುತ್ತಿತ್ತು  ಆದರೆ ಇಂದು ಈ ಎಲ್ಲಾ ಪದ್ದತಿಗಳು ಕ್ರಮೇಣವಾಗಿ ಮರೆಯಾಗುತ್ತಿವೆ ಎನ್ನುವುದು ಕೃಷಿಕ ಪ್ರಭಾಕರ್ ಹೇಳುತ್ತಾರೆ.

ಈಗ ಬಹಳಷ್ಟು ಕಡೆ ಕೆರೆ ಗೋಡು ಮಣ್ಣನ್ನು ಹಾಕುವ ಅಭ್ಯಾಸ ನಿಂತು ಹೋಗಿದೆ, ಜೊತೆಗೆ ಕೊಟ್ಟಿಗೆ ಗೊಬ್ಬರದ ಅಲಭ್ಯತೆ. ಹಾಗಾಗಿ ಈಗ ಪರ್ಯಾಯವಾಗಿ ಸುಸ್ಥಿರ ಮತ್ತು ಕಡಿಮೆ ದುಡ್ಡಿನಲ್ಲಿ ಸಿದ್ಧವಾಗುವ ಗೊಬ್ಬರ ಅಂದ್ರೆ ಅದು ರೈತನೇ ತನ್ನ ಜಮೀನಿನಲ್ಲಿ ಮಾಡಿಕೊಳ್ಳಬಹುದಾದ ಹಸಿರೆಲೆ ಗೊಬ್ಬರವಾಗಿದೆ. ಇವುಗಳು ರಾಸಾಯನಿಕ ಗೊಬ್ಬರಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವಲ್ಲಿ ಸಹಾಯಕವಾಗುತ್ತವೆ.

ಮುಂದುವರಿಯುತ್ತದೆ …

LEAVE A REPLY

Please enter your comment!
Please enter your name here