ಸಾವಯವ ಕೃಷಿ ತಂದ ಆದಾಯ, ಪ್ರಶಸ್ತಿಯ ಖುಷಿ

0

ಗುಂಟೂರು: ಬಾಪಟ್ಲ ಜಿಲ್ಲೆಯ ಯದ್ದನಪುಡಿ ಮಂಡಲದ ಚಿಮತಾವರಿ ಪಾಲೆಂ ಗ್ರಾಮದ 31 ವರ್ಷದ ರೈತ ಮಹಿಳೆ ಪದ್ಮಜಾ ಅವರಿಗೆ ಕೃಷಿಯ ಮೇಲೆ ಅಪಾರ ಪ್ರೀತಿ. ಆರೋಗ್ಯಕರ ಕೃಷಿ ಪದ್ಧತಿಯನ್ನು ರೂಢಿಸಿಕೊಳ್ಳುವ ಅವರ ಉತ್ಸಾಹವು ನೈಸರ್ಗಿಕ ಕೃಷಿ ಕ್ಷೇತ್ರದಲ್ಲಿ ಅದ್ಭುತಗಳನ್ನು  ಸಾಧಿಸುವಂತೆ ಮಾಡಿದೆ.

ಪದ್ಮಜಾ  ಅವರು ನೈಸರ್ಗಿಕ ಕೃಷಿಗೆ ಬದಲಾಗುವಂತೆ ಅಕ್ಷರಶಃ ನೂರಾರು ರೈತರನ್ನು ಪ್ರೇರೇಪಿಸಿದ್ದಾರೆ. ರಾಸಾಯನಿಕ ಮುಕ್ತ ಆಹಾರದ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ. ಅವರ ಸಮರ್ಪಣೆ ಮತ್ತು ಪ್ರಯತ್ನಗಳು ಅತ್ಯುತ್ತಮ ನೈಸರ್ಗಿಕ ಕೃಷಿ ಮಹಿಳಾ ವಿಭಾಗದಲ್ಲಿ ಪ್ರತಿಷ್ಠಿತ ಜೈವಿಕ್ ಪ್ರಶಸ್ತಿಯನ್ನು ತಂದುಕೊಟ್ಟಿವೆ.

ಪದವೀಧರೆಯಾದ ಪದ್ಮಜಾ ಅವರು ಉದ್ಯೋಗ ಅರಸಲು ಹೋಗಲಿಲ್ಲ. ತಮ್ಮ ಕುಟುಂಬದ ಕೃಷಿಯ ಹಾದಿಯಲ್ಲಿ ನಡೆಯುವ ಆಯ್ಕೆ ಮಾಡಿಕೊಂಡರು. “ರಾಸಾಯನಿಕ ಆಧಾರಿತ ಕೃಷಿಯ ಮೂಲಕ ನಾನು ಉತ್ತಮ ಲಾಭವನ್ನು ಗಳಿಸುತ್ತಿದ್ದರೂ, ಅದು ಆರೋಗ್ಯಕರವಲ್ಲ ಎಂದು  ತಿಳಿದಿತ್ತು. ನೈಸರ್ಗಿಕ ಕೃಷಿಯ ಕಡೆಗೆ ಹೋಗಬೇಕೆಂದು ಬಯಸಿದ್ದೆ ಆದರೆ ಹೇಗೆ ಎಂದು ಲೆಕ್ಕಾಚಾರ ಮಾಡಲು ಸಾಧ್ಯವಾಗಿರಲಿಲ್ಲ. 2016 ರಲ್ಲಿ ರೈತ ಸಾಧಕರ ಸಂಸ್ಥಾ (RySS) ಅಧಿಕಾರಿಗಳು ನನ್ನ ಗ್ರಾಮಕ್ಕೆ ಭೇಟಿ ನೀಡಿ ನೈಸರ್ಗಿಕ ಕೃಷಿಯ ಪ್ರಕ್ರಿಯೆ ಮತ್ತು ಅದರ ಪ್ರಯೋಜನಗಳನ್ನು ವಿವರಿಸಿದರು” ಎನ್ನುತ್ತಾರೆ.

 “ಹೃದಯ ಸ್ತಂಭನ ಕಾರಣದಿಂದ ನನ್ನ ತಾಯಿಯನ್ನು ಕಳೆದುಕೊಂಡೆ ಮತ್ತು ನನ್ನ ಅಜ್ಜಿ ಕ್ಯಾನ್ಸರ್ ವಿರುದ್ಧ ಹೋರಾಡುವುದನ್ನು ನೋಡಿದೆ. ಆರೋಗ್ಯವಾಗಿರಲು ಇವೆಲ್ಲ ಅಂಶಗಳೂ ಕಾರಣವಾದವು. ನಾನು ಆಯ್ಕೆ ಮಾಡಿಕೊಂಡ ಹಾದಿ ಸುಲಭದ್ದಾಗಿರಲಿಲ್ಲ. ನಾನು ಅಡುಗೆಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯದಿಂದ ‘ಘನಜೀವಾಮೃತಂ’ ಮತ್ತು ‘ದ್ರಾವಜೀವಾಮೃತಂ’ ಸೇರಿದಂತೆ ಗೊಬ್ಬರಗಳನ್ನು ತಯಾರಿಸುವ ಮೂಲಕ ಒಂದು ಎಕರೆ ಭೂಮಿಯಲ್ಲಿ ಬೀಜದಿಂದ ಬೀಜ ಎನ್ನುವ ಪರಿಕಲ್ಪನೆಯ ಶೂನ್ಯ ಬಜೆಟ್ ಕೃಷಿಯನ್ನು ಪ್ರಾರಂಭಿಸಿದೆ. ಏಳು ವರ್ಷಗಳ ನಂತರ, ನಾನು ಈಗ ಮುಂಗಾರು ಪೂರ್ವ ಒಣ ಬಿತ್ತನೆ ಪದ್ಧತಿ ಮೂಲಕ ಎರಡು ಎಕರೆ ಭೂಮಿಯಲ್ಲಿ 21 ವಿವಿಧ ಬೆಳೆಗಳನ್ನು ಬೆಳೆಯುತ್ತಿದ್ದೇನೆ ಎಂದು ವಿವರಿಸುತ್ತಾರೆ.

ಪದ್ಮಜಾ ಅವರ ಯಶಸ್ಸಿನ ಹಾದಿಯ ವಿಧಾನಗಳು ಮತ್ತು ಲಾಭಗಳು ಗ್ರಾಮಸ್ಥರಿಗೂ ಸ್ಫೂರ್ತಿ ನೀಡಿತು.  ಅವರ ಹಳ್ಳಿಯ 150 ಕ್ಕೂ ಹೆಚ್ಚು ರೈತರು ಈಗ ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದಾರೆ. ಇತರ ರೈತರಿಗೆ ತಿಳಿವಳಿಕೆ ನೀಡುವುದು ಸುಲಭದ ಕೆಲಸವಲ್ಲ ಎಂದು ವಿವರಿಸುವ ಪದ್ಮಜಾ, ”ಆರೋಗ್ಯಕರ ಆಹಾರದ ಜೊತೆಗೆ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸಹ ಮುಖ್ಯವಾಗಿದೆ ಎನ್ನುತ್ತಾರೆ.

“ಆರಂಭದಲ್ಲಿ, ಹಸುವಿನ ಸಗಣಿ, ಅಡುಗೆ ತ್ಯಾಜ್ಯ ಮತ್ತು ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವ ಮತ್ತು ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳು ಮತ್ತು ಕೀಟನಾಶಕಗಳಿಗೆ ಖರ್ಚು ಮಾಡಿದ ಹಣವನ್ನು ಉಳಿಸಲು ಮನೆಯಲ್ಲಿ ಎಲ್ಲಾ ಗೊಬ್ಬರಗಳನ್ನು ತಯಾರಿಸಿದ್ದಕ್ಕಾಗಿ ಹಲವಾರು ಜನರು ನನ್ನನ್ನು ಲೇವಡಿ ಮಾಡಿದರು. ಆದರೆ ಅಂತಿಮವಾಗಿ, ಅವರಿಗೆ ನಿಜಾಂಶ ಅರ್ಥವಾಯಿತು. ಬಂದರು.  ವಿಶೇಷವಾಗಿ ಮಹಿಳೆಯರು ಬಂದರು.  ಸಂಪೂರ್ಣವಾಗಿ ಅಲ್ಲದಿದ್ದರೂ ಭಾಗಶಃ ನೈಸರ್ಗಿಕ ಕೃಷಿಯನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದರು,” ಎಂದು ಅವರು ವಿವರಿಸುತ್ತಾರೆ. ಸಾವಯವ ಉತ್ಪನ್ನಗಳಿಗೆ ಹೆಚ್ಚುತ್ತಿರುವ ಬೇಡಿಕೆಯೊಂದಿಗೆ, ಪದ್ಮಜಾ ಈಗ ತನ್ನ ಉತ್ಪನ್ನಗಳನ್ನು

ಪದ್ಮಜಾ ಅವರು ತಾವು ಬೆಳೆಯುತ್ತಿರುವ ಕೃಷಿ ಉತ್ಪನ್ನಗಳನ್ನು ಯಾವುದೇ ಮಾರುಕಟ್ಟೆಯಲ್ಲಿ ಮಾರಾಟ ಮಾಡಬೇಕಾಗಿಲ್ಲ, ಏಕೆಂದರೆ ಅನೇಕ ವಿಶ್ವಾಸಾರ್ಹ ಗ್ರಾಹಕರು ಇವರಿದ್ದಲ್ಲಿಯೇ  ಬಂದು ಉತ್ಪನ್ನಗಳನ್ನು ನೇರವಾಗಿ ಅವರ ಜಮೀನಿನಿಂದ ಖರೀದಿಸುತ್ತಾರೆ.

ಜೈವಿಕ್ ಪ್ರಶಸ್ತಿ ಸ್ವೀಕರಿಸಿದ ಖುಷಿಯನ್ನು ಹಂಚಿಕೊಳ್ಳುವ ಪದ್ಮಜಾ ಅವರು  “ ನನ್ನ ಕೆಲಸವನ್ನು ಪ್ರೀತಿ, ಶ್ರದ್ದೆಯಿಂದ ಮಾಡುತ್ತಿದ್ದೇನೆ.   ರಾಷ್ಟ್ರೀಯ ವೇದಿಕೆಯಲ್ಲಿ ಅಂತಹ ಮನ್ನಣೆಯನ್ನು ನಾನು ಎಂದಿಗೂ ನಿರೀಕ್ಷಿಸಿರಲಿಲ್ಲ. ಅದು ನಿಜಕ್ಕೂ ಹೆಮ್ಮೆಯ ಕ್ಷಣ. ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಜನರಿಗೆ ಆರೋಗ್ಯಕರ ಆಹಾರವನ್ನು ನೀಡಲು ಶ್ರಮಿಸುವ ನನ್ನಂತಹ ಅನೇಕ ರೈತರಿಗೆ ಇದು ತುಂಬಾ ಉತ್ತೇಜನಕಾರಿಯಾಗಿದೆ ಎಂದು ನುಡಿಯುತ್ತಾರೆ.

LEAVE A REPLY

Please enter your comment!
Please enter your name here