ಈ ಜೀವಾಣು ನೀಲಿ ಹಸಿರು ಪಾಚಿ ಗೊಬ್ಬರವು ಭತ್ತಕ್ಕೆ ಅತಿ ಸೂಕ್ತ. ನೀಲಿ ಹಸಿರು ಪಾಚಿಯು ವಾಯುಮಂಡಲದಲ್ಲಿರುವ ಸಾರಜನಕವನ್ನು ಹೀರಿ ಸಸ್ಯದ ಬೆಳವಣಿಗೆಗೆ ಅನುವು ಮಾಡಿಕೊಡುತ್ತದೆ. ನೀರು ನಿಲ್ಲುವ ಗದ್ದೆ ಜಮೀನಿನಲ್ಲಿ ಇದು ಹೆಚ್ಚು ಯಶಸ್ಸಿಯಾಗಿ ಬೆಳೆಯುತ್ತದೆ.
ನೀಲಿ ಹಸಿರು ಪಾಚಿ ಬೆಳೆಸುವ ಕ್ರಮ
ಗದ್ದೆಯಲ್ಲಿ 1-3 ಸಾರಿ ಕೆಸರು ಮಾಡಿ ಭೂಮಿ ಸಿದ್ಧಪಡಿಸಿ
ಸೂಮಾರು 10 * 10 ಮೀಟರ್ ಅಳತೆಯ ಸಣ್ಣ ಮಡಿಗಳನ್ನು ಮಾಡಿ ಬದುಗಳನ್ನು ಭದ್ರಪಡಿಸಿ. ಪ್ರತಿ ಮಡಿಗೂ 1 ಕಿ.ಗ್ರಾಂ ಸೂಪರ್ ಫಾಸ್ಫೇಟ್, 50 ಗ್ರಾಂ ಸುಣ್ಣ ಹಾಗೂ 100 ಗ್ರಾಮ ಕಾರ್ಬೊಪ್ಯುರಾನ್ ಹಾಕಿ ಮಣ್ಣಿನಲ್ಲಿ ಚೆನ್ನಾಗಿ ಬೆರೆಸಿ.
ಮಡಿಗೆ ನೀರು ಹಾಯಿಸಿ 2-4 ಅಂಗುಲ ಆಳ ನೀರು ನಿಲ್ಲಿಸಿ. ನೀರು ತಿಳಿಯಾದಾಗ 1 ಕಿ.ಗ್ರಾಂ ನೀಲಿ ಹಸಿರು ಪಾಚಿಯನ್ನು ಸಮನಾಗಿ ಹರಡಿ.
ಬೇಸಿಗೆಯ ಕಾಲದಲ್ಲಿ ಪಾಚಿ ಶೀಘ್ರವಾಗಿ ಬೆಳೆದು 7-10 ದಿವಸಗಳಲ್ಲಿ ಒಂದು ದಪ್ಪನಾದ ಪದರ ಬೆಳೆದು ನೀರಿನ ಮೇಲೆ ತೇಲುತ್ತದೆ.
15 ದಿವಸಗಳ ನಂತರ ಮಡಿಗಳಲ್ಲಿ ನೀರು ಹಿಂಗಿಸಿ ಪಾಚಿ ಒಣಗಲು ಬಿಡಿ. ನಂತರ ಒಣಗಿದ ಪಾಚಿ ಶೇಖರಿಸಿ.
ಪ್ರತಿ ಮಡಿಯಲ್ಲೂ 15-20 ಕಿ. ಗ್ರಾಂ ಒಣ ಪಾಚಿ ದೊರೆಯುತ್ತದೆ. ಒಣ ಪಾಚಿ ಆಯ್ದುಕೊಂಡ ನಂತರ ಅದೇ ಮಡಿಯನ್ನು ಮತ್ತೆ ಪಾಚಿ ಬೆಳೆಸಲು ಬಳಸಬಹುದು ಸೂರ್ಯನ ರಶ್ಮಿಯಲ್ಲಿ ಒಣಗಿಸಿದ ಪಾಚಿಯನ್ನು ಬಹಳ ಕಾಲದವೆಗೆ ಶೇಖರಿಸಿ ಬಳಸಬಹುದು.
ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ, ಕೃಷಿ ಇಲಾಖೆ, ಮದ್ದೂರು