ಹವಾಮಾನ ಮುನ್ಸೂಚನೆ ; ರಾಜ್ಯದ ಎಲ್ಲೆಲ್ಲಿ ಮಳೆ ಆಗಬಹುದು ?

0

ಬುಧವಾರ, 09 ನೇ  ಆಗಸ್ಟ್ 2023 / 18ನೇ  ಶ್ರಾವಣ 1945 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ:  ನೈರುತ್ಯ ಮುಂಗಾರು ರಾಜ್ಯದಾದ್ಯಂತ ದುರ್ಬಲವಾಗಿತ್ತು.  ಕರಾವಳಿಯ ಬಹುತೇಕ ಕಡೆಗಳಲ್ಲಿ ಮತ್ತು ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗಿದೆ.

ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ): ಕೋಟ (ಉಡುಪಿ ಜಿಲ್ಲೆ), ಶಿರಾಲಿ, ಕ್ಯಾಸಲ್ ರಾಕ್ (ಎರಡೂ ಉತ್ತರ ಕನ್ನಡ ಜಿಲ್ಲೆ) ತಲಾ 3; ಪಣಂಬೂರು (ದಕ್ಷಿಣ ಕನ್ನಡ ಜಿಲ್ಲೆ), ಗೇರುಸೊಪ್ಪ, ಹೊನ್ನಾವರ (ಎರಡೂ ಉತ್ತರ ಕನ್ನಡ ಜಿಲ್ಲೆ), ಪೊನ್ನಂಪೇಟೆ, ವಿರಾಜಪೇಟೆ (ಎರಡೂ ಕೊಡಗು ಜಿಲ್ಲೆ), ಚಿಕ್ಕಬಳ್ಳಾಪುರ ತಲಾ 2; ಉಪ್ಪಿನಂಗಡಿ, ಸುಳ್ಯ (ಎರಡೂ ದಕ್ಷಿಣ ಕನ್ನಡ ಜಿಲ್ಲೆ), ಮಂಕಿ, ಗೋಕರ್ಣ, ಕುಮಟಾ, ಕದ್ರಾ (ಎಲ್ಲಾ ಉತ್ತರ ಕನ್ನಡ ಜಿಲ್ಲೆ), ಉಡುಪಿ, ಇಳಕಲ್ (ಬಾಗಲಕೋಟೆ ಜಿಲ್ಲೆ), ಬಾಗಲಕೋಟೆ ಪಿಟಿಒ, ಮಸ್ಕಿ, ಮುದಗಲ್ (ಎರಡೂ ರಾಯಚೂರು ಜಿಲ್ಲೆ), ನಾಪೋಕ್ಲು (ಕೊಡಗು ಜಿಲ್ಲೆ), ಲಿಂಗನಮಕ್ಕಿ (ಶಿವಮೊಗ್ಗ ಜಿಲ್ಲೆ), ಚಿಕ್ಕನಹಳ್ಳಿ ಎಡಬ್ಲ್ಯುಎಸ್, ಕೊನೇಹಳ್ಳಿ ಕೆವಿಕೆ (ಎರಡೂ ತುಮಕೂರು ಜಿಲ್ಲೆ) ತಲಾ 1.

11 ನೇ ಆಗಸ್ಟ್ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:

ಮುಂದಿನ 24 ಘಂಟೆಗಳು: ಕರಾವಳಿಯ ಬಹುತೇಕ ಕಡೆಗಳಲ್ಲಿ; ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು: ಕರಾವಳಿಯ ಹಲವು ಕಡೆಗಳಲ್ಲಿ; ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಭಾರೀ ಮಳೆ ಮುನ್ನೆಚ್ಚರಿಕೆ: ಇಲ್ಲ

ಗುಡುಗು /ಬಿರುಗಾಳಿ ಮುನ್ನೆಚ್ಚರಿಕೆ:

ಮುಂದಿನ 48 ಘಂಟೆಗಳು:  ಒಳನಾಡಿನ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನ ಸಾಧ್ಯತೆ ಇದ್ದು, ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿಯ ವೇಗವು ಘಂಟೆಗೆ 30-40 ಕಿ.ಮೀ. ಇರುವ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ: ಇಲ್ಲ.

ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ.

11 ನೇ ಆಗಸ್ಟ್ 2023 ರ ಬೆಳಗ್ಗೆವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:

ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರ ಮಳೆ/ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ.   ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ.  ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20  ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.

ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರ ಮಳೆ/ಗುಡುಗುಸಹಿತ ಮಳೆಯಾಗುವ ಸಾಧ್ಯತೆ ಇದೆ.   ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ.  ಗರಿಷ್ಠ ಉಷ್ಣಾಂಶ 30 ಮತ್ತು ಕನಿಷ್ಠ ಉಷ್ಣಾಂಶ 20  ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.

LEAVE A REPLY

Please enter your comment!
Please enter your name here