ತೆಂಗಿಗೆ ಹೆಚ್ಚು ಬೆಲೆ ಪಡೆಯಲು ಮುಂದಾಗಿ

0
ಲೇಖಕರು: ಅಣೆಕಟ್ಟೆ ವಿಶ್ವನಾಥ್

ತೆಂಗು ಬೆಳೆಗಾರರೆ, ನೀವು ಹೀಗೆ ಮಾಡಿದರೆ, ಒಂದು ತೆಂಗಿನಕಾಯಿಗೆ ಇಪ್ಪತ್ತೈದು ರೂಪಾಯಿ ಸಿಗುತ್ತದೆ. ಅದಕ್ಕಿಂತ ಮೊದಲು ಈ Whistle blowerಬಗ್ಗೆ ಹೇಳುವೆನು.

ವಿಷಲ್ ಬ್ಲೊಯರ್ ಅಂದರೆ ಸೀಟಿ ಹೊಡಿಯೋನು ಅಂತ ಅರ್ಥ. ಆದರೆ ನಿಜ ವಾದ ಅರ್ಥ, ಯಾರು ಒಂದು ತಂಡದಲ್ಲಿ ಅಥವಾ ಸಂಸ್ಥೆಯಲ್ಲಿ, ಒಂದು ಕ್ಷೇತ್ರದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗುಪ್ತವಾಗಿ ಬೇರೆಯವರಿಗೆ ತಿಳಿಸುವ ವ್ಯಕಿಗೆ ಸೀಟಿ ಹೊಡಿಯೋನು ಅಂತಾರೆ.

ಇಂದು ನಾನು ಸೀಟಿ ಹೊಡೆಯುವ ಕೆಲಸ ಮಾಡುತ್ತಿದ್ದೇನೆ. ಎಲ್ಲ ಬ್ಯುಸಿನೆಸ್ ಸೀಕ್ರೆಟ್ಸ್ ಹೇಳುತ್ತಿದ್ದೇನೆ. ತೆಂಗು ಬೆಳೆ ಕೈಗೆ ಸಿಕ್ಕಿದೆ; ಬೆಲೆ ಇಲ್ಲ. ಇದು ‘ಮಾರಾಟವೇ ಹೋರಾಟ’ ಎಂದು ಅರ್ಥ ಮಾಡಿಕೊಳ್ಳಬೇಕಾದ ಕಾಲ. ಗಾಂಧೀಜಿ ಉಪ್ಪಿನ ಸತ್ಯಾಗ್ರಹ ಮಾಡಿದಂತೆ, ನಮ್ಮ ಬೆಳೆಗಳನ್ನು ನಾವೇ ಉತ್ಪನ್ನಗಳನ್ನಾಗಿ ಮಾಡಿ ಮಾರಾಟ ಮಾಡಬೇಕು.

ನನಗೆ ಒಂದು ಕೊಯ್ಲಿಗೆ ಹೆಚ್ಚು ಕಡಿಮೆ ಎರಡು ಸಾವಿರ ತೆಂಗಿನಕಾಯಿ ಸಿಗುತ್ತಿದೆ. ಈ ಕಾಯಿಗಳನ್ನು ಮಾರಾಟ ಮಾಡಲು ಹೋದಾಗ ಪ್ರತಿ ತೆಂಗಿನಕಾಯಿಗೆ ಹನ್ನೆರಡು ರೂಪಾಯಿಗೆ ಕೇಳಿದರು. ಅಲ್ಲದೆ ಒಂದು ಸಾವಿರ ಕಾಯಿಗೆ ನೂರು ಕಾಯಿ ಲಾಭ ಕೊಡಬೇಕೆಂದು ಕೇಳುತ್ತಾರೆ. ಹೊಟ್ಟೆ ಉರಿಯಿತು.

ನಾನು ಬೆಳೆದ ಉತ್ಪನ್ನಗಳ ಯಾವನೋ ಹರಾಜು ಹಾಕಲು ಬಿಡಲೇಬಾರದು ಎಂದು ನಿರ್ಧರಿಸಿಬಿಟ್ಟೆ. ಅದಕ್ಕಾಗಿ ವರ್ಜಿನ್ ಕೊಕೊನಟ್ ಆಯಿಲ್ ತಯಾರಿಸಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಲು ಪ್ರಾರಂಭಿಸಿದೆ. ಇದರಿಂದ ಪ್ರತಿ ತೆಂಗಿನಕಾಯಿಗೆ ಸರಾಸರಿ ಇಪ್ಪತ್ತೈದು ರೂಪಾಯಿ ಸಿಗುತ್ತಿದೆ. ಇದನ್ನು ಎಲ್ಲಾ ರೈತರು ವೈಯಕ್ತಿಕವಾಗಿ ಅಥವಾ ಸಾಂಘಿಕವಾಗಿ ಮಾಡಲು ಸಾಧ್ಯ ಇದೆ. ಮಾರಾಟವೊಂದೆ ನಾವು ಬದುಕಲು ಇರುವ ದಾರಿ.

ನಾನು ಈ ಬಗ್ಗೆ ಅನೇಕ ರೈತರಿಗೆ ಈ ಕುರಿತು ಮಾರ್ಗದರ್ಶನ ಮಾಡಿದ್ದೇನೆ. ಅನೇಕರು ಈ ರೀತಿಯಲ್ಲಿ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ. ‌ನೀವು ಹೇಗೆ ಮಾಡಬಹುದೆಂದು ನಿಮಗೆ ಮಾರ್ಗದರ್ಶನ ಮಾಡುತ್ತೇನೆ. ಸರಾಸರಿ ಹದಿನೈದು ಕಾಯಿಗೆ ಒಂದು ಲೀಟರ್ ವರ್ಜಿನ್ ಕೊಕೊನಟ್ ಆಯಿಲ್ ಬರುತ್ತದೆ ( Rs25X15nuts =Rs375)

ಪ್ರತಿ ಲೀಟರ್ ಎಣ್ಣೆ ತೆಗೆಯಲು ಖರ್ಚು ರೂ150/- ಬಾಟಲ್ ಮತ್ತು ಸ್ಟಿಕ್ಕರ್ Rs25/-. ಸಾಗಾಣಿಕೆ ರೂ30/- ಇತರೆ ಖರ್ಚು ರೂ20/- ಒಟ್ಟು ಆರು ನೂರು ರೂಪಾಯಿ ಪ್ರತಿ ಲೀಟರ್ ಎಣ್ಣೆಗೆ ಮಾರಾಟ ಮಾಡುತ್ತಿದ್ದೇನೆ.

ನಿಮಗೆ ಗೊತ್ತಿರಲಿ, ಇಲ್ಲಿ ಗ್ರಾಹಕ ಮಹಾಶಯನೆ ದೇವರು. ದೇವರಿಗೆ ಪ್ರಸಾದ ಅರ್ಪಿಸುವಂತೆ ಪರಿಶುದ್ಧ, ಗುಣಮಟ್ಟದ ಎಣ್ಣೆ ತಯಾರಿಸಿ ನಾವು ಒದಗಿಸಬೇಕು. ಮಾರಾಟದ ನೀತಿಗಳಿರಬೇಕು.‌ ದುರಾಸೆಯಿರಬಾರದು. ರೈತರಾಗಿ ನಮಗೂ ಒಂದಿಷ್ಟು ಮೌಲ್ಯಗಳಿರಬೇಕು. ಹೆಚ್ಚಿನ ಮಾಹಿತಿಗೆ ಹಾಗೂ ನಿಮಗೆ ವರ್ಜಿನ್ ಕೊಕೊನಟ್ ಆಯಿಲ್ ಬೇಕಾಗಿದ್ದರೆ ಕರೆಮಾಡಿ. 8088890138.

LEAVE A REPLY

Please enter your comment!
Please enter your name here