ಸಾಧಕ ಕೃಷಿಕ ಪಟೇಲರ ಮುಡಿಗೆ ಗೌರವ ಡಾಕ್ಟರೇಟ್

1

ವಿಶ್ವವಿದ್ಯಾಲಯಗಳು ಸಾಮಾನ್ಯವಾಗಿ ಸಿನೆಮಾ, ಸಾಹಿತ್ಯ  ಇತ್ಯಾದಿ ಕ್ಷೇತ್ರಗಳಲ್ಲಿ  ಗಣನೀಯ ಸಾಧನೆ ಮಾಡಿದವರಿಗೆ ಗೌರವ ಡಾಕ್ಟರೇಟ್ ನೀಡುವುದು ಸಾಮಾನ್ಯ. ಆದರೆ ಕೃಷಿಕ್ಷೇತ್ರದ ಸಾಧಕರಿಗೆ ಇಂಥ ಅತ್ಯುನ್ನತ ಗೌರವ ಪ್ರದಾನ ಮಾಡುವುದು ಅಪರೂಪದ ವಿದ್ಯಮಾನ. ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು ಇಂಥದ್ದೊಂದು ಪರಂಪರೆ ಆರಂಭಿಸಿದೆ.

ಗೌರವ  ಗೌರವ ಡಾಕ್ಟರೇಟ್ ಗೆ ಪಾತ್ರರಾಗಿರುವ ಕೃಷಿ ಸಾಧಕ ಎನ್.ಸಿ. ಪಟೇಲರವಿವರಗಳನ್ನು ಈ ಮುಂದೆ ನೀಡಲಾಗಿದೆ.ರ

ಎನ್.ಸಿ. ಪಟೇಲ್ ಅವರು ಬೆಂಗಳೂರು ನಗರ ಜಿಲ್ಲೆಯ, ಬೆಂಗಳೂರು ಉತ್ತರ ತಾಲ್ಲೂಕಿನ ನಾಗದಾಸನ ಹಳ್ಳಿಯ  ಚಿಕ್ಕ ಕೆಂಪಯ್ಯ ಮತ್ತು  ಮುನಿಯಮ್ಮ ದಂಪತಿಗಳ ಮಗನಾಗಿ, 1944ರ ಫೆಬ್ರವರಿ 01 ರಂದು ಜನಿಸಿದರು. ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ., ಬಿ.ಎಲ್., ಪದವಿಗಳನ್ನು ಸಂಪಾದಿಸಿದ್ದರೂ, ಕೃಷಿಯನ್ನೇ ವೃತ್ತಿ ಮತ್ತು ಪ್ರವೃತ್ತಿಯನ್ನಾಗಿಸಿಕೊಂಡು ಕೃಷಿಯಿಂದಲೇ ತನು ಮನ ಧನಗಳಿಂದ ಶ್ರೀಮಂತರಾದ ಪ್ರಗತಿಪರ ಮಾದರಿ ರೈತರು.

ತಮ್ಮ ಕುಟುಂಬದ 75 ಎಕರೆ ಜಮೀನಿನಲ್ಲಿ ಖುಷ್ಕಿ ಮತ್ತು ಕೊಳವೆ ಬಾವಿ ಆಶ್ರಯದಡಿಯಲ್ಲಿ ಆಧುನಿಕ ನೀರಾವರಿ ತಾಂತ್ರಿಕತೆ ಮತ್ತು ಸುಧಾರಿತ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡು ವಿವಿಧ ಆಹಾರ ಹಾಗೂ ದ್ವಿದಳಧಾನ್ಯ ಮತ್ತು ತೋಟಗಾರಿಕೆ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

ಕೈಗೊಂಡ ಕೃಷಿ ಚಟುವಟಿಕೆಗಳಲ್ಲಿ ಎದುರಾಗುತ್ತಿರುವ ಸಮಸ್ಯೆಗಳಿಗೆ, ಕೃಷಿ ವಿಶ್ವವಿದ್ಯಾನಿಲಯ ಮತ್ತು ಸಂಶೋಧನಾ ಸಂಸ್ಥೆಗಳು ಬಿಡುಗಡೆ ಮಾಡಿರುವ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪರಿಹಾರಗಳನ್ನು ಕಂಡುಕೊಳ್ಳುತ್ತ ಕೃಷಿಯನ್ನು ಲಾಭದಾಯಕ ವೃತ್ತಿಯನ್ನಾಗಿಸಿಕೊಂಡಿದ್ದಾರೆ.

ತೆರೆಮರೆಯಲ್ಲಿದ್ದ ರೆಡ್ ಗ್ಲೋಬ್ ದ್ರಾಕ್ಷಿ, ಬೆಂಗಳೂರು ನೀಲಿದ್ರಾಕ್ಷಿ, ಸೀಬೆ, ಹಲಸು, ಬೆಣ್ಣೆಹಣ್ಣು, ಚಕ್ಕೋತ, ನೇರಳೆ ಮುಂತಾದ ಹಣ್ಣಿನ ಬೆಳೆಗಳ ಕೃಷಿಯನ್ನು ಕೈಗೊಂಡು, ಕೃಷಿಯಲ್ಲಿ ನಿರಂತರ ಲಾಭವನ್ನು ಕಾಯ್ದುಕೊಂಡವರು. ಜೊತೆಗೆ, ಮರೆಯಲ್ಲಿದ್ದ ಹಣ್ಣಿನ ಬೆಳೆಗಳ ಕೃಷಿಯನ್ನು ರಾಜ್ಯದ ಕೃಷಿ ಕ್ಷೇತ್ರದಲ್ಲಿ ಮುನ್ನೆಲೆಗೆ ತಂದವರಲ್ಲಿ ಪ್ರಮುಖರು.

ವಿವಿಧ ಕೃಷಿ ವಿಶ್ವವಿದ್ಯಾನಿಲಯ, ಕೃಷಿ ಸಂಶೋಧನಾ ಹಾಗೂ ವಿಸ್ತರಣಾ ಸಂಸ್ಥೆಗಳ ಅಧಿಕಾರಿ ಹಾಗೂ ವಿಜ್ಞಾನಿಗಳೊಂದಿಗೆ ನಿರಂತರ ಸಂಪರ್ಕ ಹೊಂದಿ ನವೀನ ಕೃಷಿಜ್ಞಾನದಿಂದ ಪುನರ್ ಚೇತನಗೊಳ್ಳುತ್ತ ಕೃಷಿಯಲ್ಲಿ ಹೆಚ್ಚು ವೈಜ್ಞಾನಿಕತೆಯನ್ನು ಅಳವಡಿಸಿಕೊಂಡವರು. ರೇಡಿಯೋ, ಟಿ.ವಿ. ಹಾಗೂ ನಿಯತಕಾಲಿಕೆಗಳ ಪ್ರಸರಣೆಯ ಕೃಷಿ ಜ್ಞಾನ ತಿಳಿವಿನಿಂದ ಪ್ರಯೋಗಶೀಲ ಕೃಷಿಕರಾಗಿ ರೈತ-ವಿಜ್ಞಾನಿಯಾಗಿ ರೂಪುಗೊಂಡವರು.

ಎನ್.ಸಿ. ಪಟೇಲ್ ಅವರು ತಮ್ಮ ಕೃಷಿ ಜಮೀನಿನಲ್ಲಿ ಅಗತ್ಯವೆನಿಸಿದೆಡೆ ವ್ಯವಸ್ಥಿತ ಅಡ್ಡ ಮತ್ತು ಸಮಪಾತಳಿ ಬದುಗಳ ನಿರ್ಮಾಣ, ಕೃಷಿ ಹೊಂಡ ನಿರ್ಮಾಣ ಮತ್ತು ಕಾಲಕಾಲಕ್ಕೆ ಕೆರೆಗೋಡು ಹಾಕುತ್ತಾರೆ, ಕಾಂಪೋಸ್ಟ್/ಹಸಿರೆಲೆ ಗೊಬ್ಬರದಿಂದ ಸಮಗ್ರ ಪೋಷಕಾಂಶಗಳ ನಿರ್ವಹಣೆ, ಯಾಂತ್ರಿಕ ಸಾಧನಗಳಿಂದ ಉಳುಮೆ ಮುಂತಾದ ತಂತ್ರಗಳಿAದ ಜಮೀನಿನ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಕ್ರಿಯಾಶೀಲರಾಗಿದ್ದಾರೆ..

ಸಾಂದರ್ಭಿಕವಾಗಿ ಜೈವಿಕ ಮತ್ತು ರಾಸಾಯನಿಕ ಕೀಟ ನಿರ್ವಹಣೆ ವಿಧಾನಗಳನ್ನು ಬಳಸಿ, ಬೆಳೆ ರಕ್ಷಣೆ ಮಾಡಿಕೊಳ್ಳುವಲ್ಲಿ ಪ್ರಯೋಗಶೀಲತೆಯನ್ನು ಅನುಸರಿಸಿದವರು. ಕೃಷಿಯಲ್ಲಿ ನೂತನ ಯಾಂತ್ರೀಕರಣ, ನೂತನ ತಳಿಗಳ ಅವಿಷ್ಕಾರ, ಕಸಿ ಗಿಡಗಳ ನೆಡುವಿಕೆ, ಪ್ರೂನಿಂಗ್ ಅಳವಡಿಕೆ ಮುಂತಾದ ಚಟುವಟಿಕೆಗಳಿಂದ ಕೃಷಿ ವೃತ್ತಿಯಲ್ಲಿ ಆತ್ಮವಿಶ್ವಾಸವನ್ನು ಸಾಧಿಸಿಕೊಂಡ ಚಿಂತನಶೀಲ ರೈತರು.

 ಹಣ್ಣಿನ ಬೆಳೆಗಳಿಗೆ ತಮ್ಮ ತೋಟದಲ್ಲಿಯೇ ಸುಸಜ್ಜಿತ ದಾಸ್ತಾನು ಮಳಿಗೆಯನ್ನು ನಿರ್ಮಿಸಿಕೊಂಡಿರುವುದು, ಅವುಗಳನ್ನು ಬಳಕೆದಾರರಿಗೆ ಕಡಿಮೆ ಬೆಲೆಗೆ ಒದಗಿಸುವ ವಿನೂತನ ಮಾರುಕಟ್ಟೆ ನೀತಿಯನ್ನು ಅನುಸರಿಸಿ ತಮ್ಮ ಪ್ರಯೋಗಶೀಲ ಪ್ರಯತ್ನದಿಂದ ಕೃಷಿಯನ್ನು ಲಾಭವಾಗಿಸಿಕೊಂಡವರು.

ಪಟೇಲರು ತಮ್ಮ ಲಾಭದಾಯಕ ಕೃಷಿ ಅನುಭವಗಳನ್ನು ಪ್ರಸಾರ ಮಾಧ್ಯಮಗಳ ಮೂಲಕ ನಾಡಿನ ರೈತಬಾಂದsÀವರೊಂದಿಗೆ ಹಂಚಿಕೊಳ್ಳುತ್ತ ಅವರಿಗೆ ಕೃಷಿ ವೃತ್ತಿಯಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತ, ಕೃಷಿಕನಾಗಿ ಅಭಿಮಾನಿಗಳನ್ನು ಸಂಪಾದಿಸಿದವರು.

ತಮ್ಮ ಕೃಷಿ ಜಮೀನಿಗೆ ರಾಜ್ಯ ಮತ್ತು ನೆರೆಯ ತೆಲಂಗಾಣ, ತಮಿಳುನಾಡು, ಮಹಾರಾಷ್ಟç ರಾಜ್ಯಗಳ ಪ್ರಗತಿಪರ ರೈತರು ಸಂದರ್ಶಿಸಲು ಪ್ರೇರಣೆಕಾರರು. ಅಲ್ಲದೆ ಸಂದರ್ಶಿಸಿದ ರೈತರಿಗೆ ತಮ್ಮ ಕೃಷಿ ಯಶಸ್ಸಿನ ಅನುಭವಗಳನ್ನು ಹಂಚಿ ಮಾರ್ಗದರ್ಶನ ಮಾಡಿದವರು. ಅಂದಿನ ಉಪ ಪ್ರಧಾನ ಮಂತ್ರಿಗಳಾದ  ದೇವಿಲಾಲ್  ಅವರು ಪಟೇಲ್ ಅವರ ಕ್ಷೇತ್ರಕ್ಕೆ ಭೇಟಿ ನೀಡಿದಾಗ, ಇವರ ಹನಿ ನೀರಾವರಿ ಪದ್ಧತಿಯನ್ನು ಪ್ರಶಂಸಿಸಿದ್ದಾರೆ.

ಅಂದು ಇವರ ತೋಟದಲ್ಲಿಯೇ ದೇಶದ ಕೃಷಿ ಬಾಂಧವರು ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿದಲ್ಲಿ, ರೈತರು ಭರಿಸುವ ವೆಚ್ಚದಲ್ಲಿ ಶೇ.50 ಸಹಾಯಧನ ನೀಡಲಾಗುವುದೆಂದು ಘೋಷಿಸಲು ಕಾರಣವಾದದ್ದು

 `ಪಟೇಲ್ ಪಸಂದ್’ ಎಂಬ ಮಾವಿನ ಹೊಸ ತಳಿಯನ್ನು ಅಭಿವೃದ್ಧಿ ಪಡಿಸಿದ್ದು ಈಗ ದೇಶದ ಕೃಷಿ ಚರಿತ್ರೆಯ ಭಾಗವಾಗಿದೆ. ಇಂಥ ಹಲವು ಮಹತ್ವದ ಹೆಜ್ಜೆಗಳಿಗೆ ಕಾರಣರಾದ  ಎನ್.ಸಿ. ಪಟೇಲ್ ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಮೊದಲಗೊಂಡು ನಾಡಿನ ಹಲವು ಗೌರವದ ಪ್ರಶಸ್ತಿಗಳಿಗೆ ಭಾಜನರಾದವರು.

ಇಂಥ ಪ್ರತಿಭಾವಂತ, ಚಿಂತನಶೀಲ, ಪ್ರಭಾವಿತ ರೈತ-ವಿಜ್ಞಾನಿಯಾದ ಎನ್.ಸಿ. ಪಟೇಲ್ ಅವರಿಗೆ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು 2022ರ ಸೆಪ್ಟಂಬರ್ 9ರಂದು ತನ್ನ 56ನೇ ವಾರ್ಷಿಕ ಘಟಿಕೋತ್ಸವ ಸಂದರ್ಭದಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತಿದೆ.

1 COMMENT

  1. ಕೃಷಿ ಕ್ಷೇತ್ರದ ಮಾಂತ್ರಿಕ, ಎಲ್ಲರಿಗೂ ಮಾದರಿ ಶ್ರೀ ಪಟೇಲ್.

LEAVE A REPLY

Please enter your comment!
Please enter your name here