ಲೇಖಕರು : ವಿದ್ಯಾ ಮಹೇಶ್

ಕೃಷಿವಿಜ್ಞಾನವು ಗಿಡಗಳಿಗೆ ಬೇಕಾದ ಸುಮಾರು ಹದಿನಾರು ಸೂಕ್ಷ್ಮ ಪೋಷಕಾಂಶಗಳನ್ನ ಬಹುಮುಖ್ಯ ಎಂದು ಕಂಡು ಕೊಂಡಿದೆ. ಸ್ವಾಭಾವಿಕ ಕಾಡುಗಳಲ್ಲಿ ಮರಗಿಡಗಳ ಬೇರುಗಳು ಮಣ್ಣಿನ ಆಳಕ್ಕೆ ಇಳಿದು ಬೇಕಾದ ಪೋಷಕಾಂಶಗಳನ್ನು ಹೀರಿಕೊಳ್ಳುತ್ತವೆ. ಕಲ್ಲುಗಳ ಸವಕಳಿ, ಉದುರಿದ ಎಲೆಗಳು, ಸತ್ತ ಪ್ರಾಣಿ ತ್ಯಾಜ್ಯಗಳು ಕೊಳೆತು ಅವುಗಳ ಪೋಷಕಾಂಶಗಳು ಭೂಮಿಯ ಒಡಲನ್ನು ಸೇರುತ್ತವೆ.
ಕೃತಕ ವ್ಯವಸಾಯ ಪದ್ಧತಿಯಲ್ಲಿ ಈ ಪೋಷಕಾಂಶ ಸರಪಳಿ ಕಷ್ಟಸಾಧ್ಯ. ಸಹಜ ಕೃಷಿ ಅಳವಡಿಸಿರುವ ಭೂಮಿ ಫಲವತ್ತಾಗಿರುತ್ತದೆ, ಆದ್ರೆ ಸಾಮನ್ಯ ಕೃಷಿಯಲ್ಲಿ ಇದು ಕಷ್ಟ. ಬೋರಾನ್, ಕ್ಲೋರಿನ್, ಕಾಪರ್, ಕಬ್ಬಿಣ, ಮ್ಯನ್ಗನೀಸ್,ಮಾಲಿಬ್ಡಿನಮ್ (molybdenum), ನಿಕಲ್ ಹಾಗು ಜಿಂಕ್ ಈ ಎಂಟು ಬಹು ಮುಖ್ಯ ಪೋಷಕಾಂಶಳು ಜೊತೆಗೆ ಕೊಬಾಲ್ಟ್ ಸಿಲಿಕಾನ್, ಸೆಲಿನೀಯ್ಂ ಹಾಗು ವನಡಿಯ್ಂ ಇತ್ಯಾದಿ.
ಇವುಗಳ ಹಸರನ್ನು ಕೇಳಿ ಅರಿಯದ ನಾವು ಬೆಳೆಗೆ ನೀಡುವುದಾದರು ಹೇಗೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳ ಬೇಕಿದೆ. ಈ ಎಲ್ಲ ಪೋಷಕಾಂಶಗಳು ಬೆಳೆಗಳ ಆರೋಗ್ಯಕರ ಬೆಳವಣಿಗೆ,ಅಧಿಕ ಹಾಗ ಉತ್ಕೃಷ್ಟ ಮಟ್ಟದ ದವಸ ಧಾನ್ಯಗಳ ಉತ್ಪಾದನೆಗೆ, ಬೇರುಗಳ ಬೆಳವಣಿಗೆಗೆ, ಸತ್ವಯುತ ಹಣ್ಣು ಹಂಪಲುಗಳನ್ನು ನೀಡಲು ಬೇಕೇ ಬೇಕು. ಬೆಳೆಗಳಿಗೆ ಇವುಗಳು ಅತಿಯಾದರು ವಿಷ, ಕೊರತೆಯಾದರು ಕಷ್ಟ. ಸಸ್ಯಗಳು ಕುಂಠಿತ ಬೆಳವಣಿಗೆಯೊಂದಿ, ಸರಿಯಾದ ಇಳುವರಿಯನ್ನು ನೀಡದೆ ಬೆಳೆಗಳು ರೈತರ ಕೈ ಹಿಡಿಯುವುದಿಲ್ಲ.


ಬೆಳೆಗಳ ಪೋಷಕಾಂಶಗಳ ಬಗೆಗೆ ನಾವೇಕೆ ಗಮನ ಹರಿಸಬೇಕು: ಇಂದಿನ ದೈನಂದಿನ ಬದುಕಿನಲ್ಲಿ ನಾವು ತಿನ್ನುವ ಆಹಾರದಲ್ಲಿ ಸ್ವಾದವಿರಲಿ, ಸತ್ವವು ಇಲ್ಲ. ಇದರಿಂದಾಗಿಯೇ ಈ ಪೀಳಿಗೆಯ ಯುವಕರು, ಮಕ್ಕಳು ಅತಿಯಾಗಿ ಅನಾರೋಗ್ಯಕ್ಕೆ ತುತ್ತಾಗುವುದು. ಭೂಮಿಯಲ್ಲಿರುವ ಸತ್ವಗಳನ್ನ ನೇರವಾಗಿ ನಾವು ಸೇರಿಸಲು ಸಾಧ್ಯವಿಲ್ಲ. ಅವು ಗಿಡಗಳನ್ನು ಸೇರಿ ಅವುಗಳ ಮೂಲಕ ನಮ್ಮನ್ನು ಸೇರುತ್ತವೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಕಬ್ಬಿಣಾಂಶ ಕೊರತೆಯೂ ಇತ್ತೀಚಿನ ಮಕ್ಕಳಲ್ಲಿ ಅತಿಯಾಗಿದ್ದು ,ಈ ಅಪೌಷ್ಟಿಕತೆಯಿಂದಾಗಿ ರೋಗ ನಿರೋಧಕ ಶಕ್ತಿ ಕ್ಷೀಣಿಸಿದ್ದು, ಮಕ್ಕಳ ಕಲಿಯುವಿಕೆ, ಬೆಳವಣಿಗೆಯಲ್ಲು ವ್ಯತಿರಿಕ್ತ ಪರಿಣಾಮ ಬೀರಿದೆ ಎನ್ನಲಾಗಿದೆ.
ಬೆಳೆಗಳಲ್ಲಿ ಈ ಪೋಷಕಾಂಶಗಳ ಕೊರತೆ ಹೇಗೆ :
1.ಅತಿಯಾದ ರಸಾಯನಿಕ ಗೊಬ್ಬರ ಕ್ರಿಮಿನಾಶಕಗಳಿಂದ ಭೂಮಿಯಲ್ಲಿನ ಕ್ಷಾರತೆ ಹೆಚ್ಚಿಸುತ್ತದೆ. ಇದರಿಂದಾಗಿ ಸೂಕ್ಷ್ಮ ಪೋಷಕಾಂಶಗಳ ಪ್ರಮಾಣ ತಗ್ಗುತ್ತದೆ.
2. ಕಲುಷಿತ/ಕೈಗಾರಿಕಾ ತ್ಯಾಜ್ಯ ನೀರು ಭೂಮಿಯಲ್ಲಿ ನಿಲ್ಲುವುದರಿಂದ ಜೊತೆಗೆ ಕೆಲವು ಶಿಲೀಂಧ್ರನಾಶಕಗಳ ಸಿಂಪಡಣೆ  ಬೆಳೆಗಳಿಗೆ ವಿಷಕಾರಿಯಾಗಿ ಪರಿಣಮಿಸುತ್ತದೆ.
ಸೂಕ್ಷ್ಮ ಪೋಷಕಾಂಶಗಳ ಕೊರತೆಯಿಂದ ಉಂಟಾಗುವ ಪರಿಣಾಮಗಳಿಗೆ ನಾವು ಎಷ್ಟೇ ನೀರು, ಯೂರಿಯ, ರಂಜಕ ಅಥವ ಇನ್ನಾವುದೇ ಪೋಷಕಾಂಶ ಹಾಕಿದರೂ ಅದು ವ್ಯರ್ಥ. ಮಣ್ಣಿನ ಪರೀಕ್ಷೆಯ ಮೂಲಕವಷ್ಟೆ ಪೋಷಕಾಂಶಗಳ ಮಣ್ಣಿನ ಫಲವತ್ತತೆಯನ್ನು ತಿಳಿಬೇಕು. ಸೂಕ್ಷ್ಮ ಪೋಷಕಾಂಶಗಳ ಪ್ರಮಾಣವನ್ನು ಬೆಳೆಯ ಮೂರು ಹಂತದಲ್ಲಿ ಪರಿಕ್ಷೀಸಬೇಕು. ಯಾವುದೇ ಬೆಳೆಯನ್ನು ಬೆಳೆಯುವ ಮುನ್ನ, ಬೆಳೆಯ ಬೆಳವಣಿಗೆಯ ಹಂತ ಹಾಗೂ ಹೂ ಬಿಡುವ ಕಾಲದಲ್ಲಿ ಪರೀಕ್ಷೆ ನಡೆಯಬೇಕು.
ಸಾವಯವ ಕೃಷಿ ನಡಿಸಿದಾಗ್ಯೂ ಕೆಲವೊಮ್ಮೆ ಸೂಕ್ಷ್ಮ ಪೋಷಕಾಂಶ ಕೊರತೆ ಕಾಣಿಸಿಕೊಳ್ಳುವುದು ಉಂಟು. ಆದರಿಂದ ಆಗಾಗ್ಗೆ ಮಣ್ಣಿನ ಪರೀಕ್ಷೆ ಮಾಡಿಸಬೇಕು. ಪರೀಕ್ಷೆಯ ವರದಿ ಪ್ರಕಾರ ಅಗತ್ಯನುಸಾರ ಸೂಕ್ಷ್ಮ ಪೋಷಕಾಂಶಗಳನ್ನು ಮಣ್ಣಿಗೆ ಪೂರೈಸಬೇಕು ಅಥವಾ ನೀರಿನಲ್ಲಿ ಕರಗಿಸಿ ಎಲೆಗಳಿಗೆ ಸಿಂಪಡಿಸಬಹುದು.

LEAVE A REPLY

Please enter your comment!
Please enter your name here