ಸಿಟಿ ಲೈಪೂ ಜೊತೆಜೊತೆಗೆ ಕೃಷಿಕಾಯಕ

ರಾಸಾಯನಿಕ ಕೃಷಿಪದ್ಧತಿಯಿಂದ ಏನೆನ್ನೆಲ್ಲ ಅನಾಹುತಗಳಾಗುತ್ತವೆ ಎಂಬ ವಿಷಯ ನಿಮಗೂ ಗೊತ್ತು. ಆದ್ದರಿಂದ ಕೃಷಿ ಮಾಡುವುದಾದರೆ ಅದು ಸಾವಯವ ಪದ್ಧತಿಯದೇ ಆಗಿರಬೇಕು ಎಂದು ನಿಶ್ಚಯ ಮಾಡಿದೆವು. ಈ ಪದ್ಧತಿಯ ಕೀಟನಾಶಕಗಳನ್ನೂ ನಾವು ಬಳಸಲು ಹೋಗಲಿಲ್ಲ. ಒಂದೆರಡು ಬೆಳೆಗಳಿಗೆ ಕೀಟಬಾಧೆ ಹೆಚ್ಚಾಯಿತು ಎನಿಸಿದರೂ ನಷ್ಟವೇನೂ ಆಗಲಿಲ್ಲ. ಸಣ್ಣ ಪ್ರಮಾಣದಲ್ಲಿ ಕೃಷಿ ಮಾಡಿದ್ದರಿಂದ ಹೀಗನ್ನಿಸಿರಬಹುದು. ನಿಸರ್ಗವೇ ಸಾಧ್ಯವಾದಷ್ಟೂ ಮಟ್ಟಿಗೆ ಹಾನಿಕಾರಕ ಕೀಟ ನಿಯಂತ್ರಣ ಮಾಡುತ್ತದೆ ಎನಿಸಿತು. ಇದರ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿಯಬೇಕಿದೆ.

1
ಲೇಖಕರು: ದಿವ್ಯಾ ಮಂಜುನಾಥ್

ಟೈಟಲ್ ನೋಡಿ ಸಿಟಿಯಲ್ಲಿ ಇರುವ ಮನೆಯಲ್ಲಿ ವಾಸವಿದ್ದುಕೊಂಡು ಹಳ್ಳಿಯಲ್ಲಿ ಇರುವ ಜಮೀನಿಗೆ ಹೋಗಿಬಂದು ವ್ಯವಸಾಯ ಮಾಡುತ್ತಿರುವವರ ಬಗ್ಗೆ ಬರೆದಿರಬಹುದು ಎಂದುಕೊಂಡರೆ ನಿಮ್ಮ ಅಂದಾಜು ತಪ್ಪು. ಬೆಂಗಳೂರೆಂಬೊ ಮಹಾನಗರಿಯ ಅಂಚಿನಲ್ಲಿರುವ ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಬ್ಯಾಕಿಂಗ್ ವಲಯದ ಉದ್ಯೋಗಿ ಆಗಿರುವ  ಯುವಕ ಮತ್ತು ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಎಂಬಿಎ ಮಾಡಿರುವ ಯುವತಿ  ಈ ಇಬ್ಬರು ಯುವದಂಪತಿ ತಮ್ಮ ಬಾಡಿಗೆ ಮನೆ ಸುತ್ತಲಿನ ವಿಶಾಲ ಜಾಗದಲ್ಲಿ ಮಾಡುತ್ತಿರುವ ಕೃಷಿಕಾಯದ ಸ್ಟೋರಿಯಿದು. ತಾವು ಮಾಡುತ್ತಿರುವ ಕೃಷಿಯ ಅನುಭವವನ್ನು ದಿವ್ಯಾ ಮಂಜುನಾಥ್ ಹಂಚಿಕೊಂಡಿದ್ದಾರೆ. ನೀವೂ ಓದಿ, ಆಸಕ್ತರಿಗೂ ಫಾರ್ವರ್ಡ್ ಮಾಡಿ…

ಇಂದು ನಾವು ಆಹಾರ ಸೇವಿಸುವ ಮುನ್ನ ಒಮ್ಮೆ ಅದರ ಮೂಲ ತಿಳಿದು ಉಪಯೋಗಿಸುವ ಪರಿಸ್ಥಿತಿಯಿದೆ. ಒಂದು ಕಡೆ ಆಹಾರಕ್ಕೆ ಹಾಹಾಕಾರ, ಮತ್ತೊಂದೆಡೆ ಕೃಷಿಭೂಮಿಯ ನಾಶ. ಕೃಷಿಯ ಉಳಿವಿಕೆಗಾಗಿ ಎಲ್ಲರೂ ಕೈ ಜೊಡಿಸಬೇಕು. ಮಕ್ಕಳಿಗೆ ಆಹಾರದ ಬಗ್ಗೆ ಪಠ್ಯಕ್ರಮದಲ್ಲಿ ಅಳವಡಿಸುವುದರ ಜೊತೆಗೆ ವಿದ್ಯಾಭ್ಯಾಸಕ್ಕೆ ಪೂರಕವಾದ ಪ್ರಾಯೋಗಿಕವಾಗಿ ಬೆಳೆಯುವುದನ್ನೂ ಕಲಿಸಬೇಕು. ಇವೆಲ್ಲ ನನ್ನ ಚಿಂತನೆಯಾಗಿತ್ತು. ನನ್ನ ಪತಿ ಮಂಜುನಾಥ್ ಅವರದೂ ಇದೇ ಚಿಂತನೆ.

ನನಗೆ ಇದ್ದಿದ್ದು ಕೃಷಿ ಆಸಕ್ತಿ ಮಾತ್ರ. ಕೃಷಿ ಕುಟುಂಬದಿಂದ ಬಂದ ಮಂಜುನಾಥ್ ಅವರಿಗೆ ಆಸಕ್ತಿ ಜೊತೆಗೆ ಒಂದಷ್ಟು ಅನುಭವವೂ ಇತ್ತು. ಈ ಹಿನ್ನೆಲೆಯಲ್ಲಿ ಮನೆಯ ಆವರಣದಲ್ಲಿಯೇ ಕೃಷಿ ಮಾಡಲು ಯೋಜಿಸಿದ್ದೆವು. ಪಕ್ಕಾ ಪ್ಲಾನ್ ಮಾಡಿಕೊಂಡಿದ್ದರಿಂದ ಯಾವ ಹಂತದಲ್ಲಿಯೂ ಕಷ್ಟವೆನ್ನಿಸಲಿಲ್ಲ. ನಷ್ಟವೂ ಉಂಟಾಗಲಿಲ್ಲ. ಖರ್ಚು ಮಾಡಿದ ಪ್ರತಿ ರೂಪಾಯಿ ಲೆಕ್ಕವನ್ನು ಇಡುವ ಕಾರಣ ಈ ಮಾತನ್ನು ಧೈರ್ಯವಾಗಿ ಹೇಳಲು ಸಾಧ್ಯವಾಗಿದೆ.

ರಾಸಾಯನಿಕ ಕೃಷಿಪದ್ಧತಿಯಿಂದ ಏನೆನ್ನೆಲ್ಲ ಅನಾಹುತಗಳಾಗುತ್ತವೆ ಎಂಬ ವಿಷಯ ನಿಮಗೂ ಗೊತ್ತು. ಆದ್ದರಿಂದ ಕೃಷಿ ಮಾಡುವುದಾದರೆ ಅದು ಸಾವಯವ ಪದ್ಧತಿಯದೇ ಆಗಿರಬೇಕು ಎಂದು ನಿಶ್ಚಯ ಮಾಡಿದೆವು. ಈ ಪದ್ಧತಿಯ ಕೀಟನಾಶಕಗಳನ್ನೂ ನಾವು ಬಳಸಲು ಹೋಗಲಿಲ್ಲ. ಒಂದೆರಡು ಬೆಳೆಗಳಿಗೆ ಕೀಟಬಾಧೆ ಹೆಚ್ಚಾಯಿತು ಎನಿಸಿದರೂ ನಷ್ಟವೇನೂ ಆಗಲಿಲ್ಲ. ಸಣ್ಣ ಪ್ರಮಾಣದಲ್ಲಿ ಕೃಷಿ ಮಾಡಿದ್ದರಿಂದ ಹೀಗನ್ನಿಸಿರಬಹುದು. ನಿಸರ್ಗವೇ ಸಾಧ್ಯವಾದಷ್ಟೂ ಮಟ್ಟಿಗೆ ಹಾನಿಕಾರಕ ಕೀಟ ನಿಯಂತ್ರಣ ಮಾಡುತ್ತದೆ ಎನಿಸಿತು. ಇದರ ಬಗ್ಗೆ ಇನ್ನೂ ಹೆಚ್ಚಿಗೆ ತಿಳಿಯಬೇಕಿದೆ.

ನೈಸರ್ಗಿಕ ಸಂಪನ್ಮೂಲದ ಪೂರ್ಣ ಬಳಕೆ ಆಗಬೇಕು. ಭೂಮಿಯನ್ನು ಹಾಳು ಮಾಡಬಾರದು ಎಂಬ ಸದುದ್ದೇಶದಿಂದ ಸ್ವಯಂ ಉತ್ತೇಜಕರಾಗಿ 2.5 ಎಕರೆ ಪಾಳು ಭೂಮಿಯಲ್ಲಿ ಪ್ರಪ್ರಥಮವಾಗಿ ಕೃಷಿಯ ಚಟುವಟಿಕೆ ಮಾಡಿದೆವು. ಅಲ್ಲಿನ ಜಮೀನಿನದು ಬೆರಕೆ ಮಣ್ಣು ಮತ್ತು ಅಂರ್ತಜಲದ ನೀರಿನ ಮಟ್ಟ ಅಷ್ಟಕಷ್ಟೆ. ಆದ್ದರಿಂದ ಬೆಳೆಗಳಿಗೆ ಮಳೆಯೇ ಆಧಾರವಾಗಿತ್ತು. ಬೆಳೆಗಳಾದ ರಾಗಿ, ಅಲಸಂದೆ, ಅವರೆಕಾಳು, ಹುರಳಿಕಾಳು, ತೊಗರಿಕಾಳು, ಹೆಸರುಕಾಳು, ಮಿಶ್ರ ತರಕಾರಿಗಳು (ಟೊಮೆಟೊ, ಬಂಡೆಕಾಯಿ, ಬೇಬಿಕಾನ್, ಮೂಲಂಗಿ, ಹುರಳಿಕಾಯಿ, ಸೊರೆಕಾಯಿ, ಸೌತೆಕಾಯಿ, ಹೀರೆಕಾಯಿ, ಬದನೆಕಾಯಿ, ಆಲೂಗೆಡ್ಡೆ, ಬೀಟ್ರೂಟ್, ಕ್ಯಾರೇಟ್) ಮತ್ತು ವಿವಿಧ ಸೊಪ್ಪುಗಳು. ಇವುಗಳನ್ನು ಹಂತಹಂತವಾಗಿ ಬೆಳೆದೆವು. ತೀರಾ ಅನಿವಾರ್ಯ ಸಂದರ್ಭಗಳಲ್ಲಿ ಮಾತ್ರ ಕೃಷಿ ಕಾರ್ಮಿಕರ ಸಹಾಯ ತೆಗೆದುಕೊಳ್ಳುತ್ತಿದ್ದೆವು. ಉಳಿದಂತೆ ನಾನು, ನನ್ನ ಪತಿ ಮಂಜುನಾಥ್ ಇಬ್ಬರೇ ಸಾಧ್ಯವಾದಷ್ಟೂ ಕೆಲಸ ಮಾಡುತ್ತಿದ್ದೆವು.

ಮನಸ್ಸು ಮಾಡಿದರೆ ಎಲ್ಲವೂ ಸಾಧ್ಯ ಎನ್ನುವಂತೆ ಪ್ರತಿ ದಿನ ಮುಂಜಾನೆ ಒಂದು ತಾಸು ಜಮೀನಿನ ಕೆಲಸ. ಸಾವಯವ ಕೃಷಿ ಪದ್ಧತಿ ಮತ್ತು ಮಿಶ್ರ ಬೆಳೆಯ ಫಸಲು ತುಂಬಾ ಚೆನ್ನಾಗಿ ಬಂತು. ಕೃಷಿಯು ಸಾರ್ವಕಾಲಿಕ. ಎಷ್ಟೋ ಭೂಮಿಯನ್ನು ಜನ ಅದರ ಬೆಲೆ ಗೊತ್ತಿಲ್ಲದೆ ಹಾಳುಮಾಡುತ್ತಿದ್ದಾರೆ. ಆದಷ್ಟೂ ಮಟ್ಟಿಗೆ ಭೂಮಿಯನ್ನು ಕೃಷಿ ಚಟುವಟಿಕೆಗೆ ಬಳಸಿದರೆ ವಿಷಮುಕ್ತ ಆಹಾರ ಪಡೆಯುವುದರ ಜೊತೆಗೆ ಭೂತಾಯಿಯ ಸೇವೆ ಮಾಡಬಹುದು, ತೃಪ್ತಿಯ ಅನುಭವ ಹಾಗು ಆರೋಗ್ಯಕರ ಜೀವನವನ್ನೂ ನಡೆಸಬಹುದು. ಒಬ್ಬರ ಅನುಭವ ಮತ್ತೊಬ್ಬರಿಗೆ ಪ್ರೇರಣೆ ನೀಡುತ್ತದೆ. ಸ್ವಯಂ ಅಭಿವೃದ್ಧಿಯ ಜೊತೆಗೆ ದೇಶದ ಅಭಿವೃದ್ಧಿಯು ಸಾಧ್ಯ.

ಮುಂದುವರಿಯುತ್ತದೆ …

1 COMMENT

  1. Congratulations good work it’s is a lesson to youngsters they can involve like this in a village where they are staying

LEAVE A REPLY

Please enter your comment!
Please enter your name here