ರೈತರ ಸಮಸ್ಯೆಗಳಿಗೆ ಪರಿಹಾರವೇ ಸಹಕಾರ ತತ್ವ

ಜಿಲ್ಲೆಯಲ್ಲಿ, ಇದ್ದ ಒಂದೆರಡು ಸಹಕಾರಿ ಹತ್ತಿ ನೂಲಿನ ಗಿರಣಿಗಳೂ ನಾಯಕರ ಧೂರ್ತತನ, ಸ್ವಾರ್ಥಕ್ಕಾಗಿ ಬಲಿಯಾಗಿ ಹಾಳು ಬಿದ್ದಿವೆ. ಇದ್ದ ಏಕೈಕ ಸಹಕಾರಿ ಸಕ್ಕರೆ ಕಾರಖಾನೆಯೂ, ಮತ್ತದೇ ನಾಯಕರ ಸ್ವಾರ್ಥಕ್ಕೆ ಬಲಿಯಾಗಿ ಖಾಸಗಿಯವರ ಕೈಯಲ್ಲಿದೆ. ನನಗೆ ಈಗಲೂ ಒಂದು ಕನಸಿದೆ, ನನ್ನ ಹಾವೇರಿ ಜಿಲ್ಲೆಯ ರೈತರನ್ನ ಸಂಘಟಿಸಿ, ಜಿಲ್ಲೆಯಲ್ಲಿ ಒಂದು ಸಹಕಾರಿ ಗೋವಿನಜೋಳ ಸಂಸ್ಕರಣಾ ಕಾರಖಾನೆ ಕಟ್ಟಬೇಕು ಅಂತಾ. ಈಗಲೂ, ನಾನು ಈ ಕನಸನ್ನ, ಆಸೆಯನ್ನ ಹಾಗೇ ಪೋಷಿಸುತ್ತಲೇ ಇದ್ದೇನೆ. ಖಂಡಿತ ಒಂದು ದಿನ ನಾನು ಇದರಲ್ಲಿ ಯಶಸ್ವಿ ಆಗುತ್ತೇನೆ.

0
ಲೇಖಕರು: ಲಿಂಗರಾಜ ರೊಡ್ಡಣನವರ್

TSS_Sirasi ಇಡೀ ರಾಜ್ಯಕ್ಕೆ ಮಾದರಿ. ಪ್ರಾಮಾಣಿಕ, ದಕ್ಷ, ಹಾಗೂ ಕ್ರಿಯಾಶೀಲ ನಾಯಕತ್ವ ಇದ್ದರೆ ಸಹಕಾರಿ ಸಂಘ ಹೇಗೆ ಒಂದು ಕಾರ್ಪೋರೆಟ್ ಕಂಪೆನಿಯಂತೆ ಕಾರ್ಯನಿರ್ವಹಿಸುತ್ತಾ, ಸರಕಾರ ಒದಗಿಸಬೇಕಾದ ಸೌಕರ್ಯಗಳನ್ನ ತನ್ನ ಸದಸ್ಯ ರೈತರಿಗೆ ಒದಗಿಸಬಹುದು ಎನ್ನುವುದಕ್ಕೆ ಶಿರಸಿಯ ತೋಟಗಾರರ ಸಹಕಾರಿ ಸಂಘ ಅತ್ಯುತ್ತಮ ಉದಾಹರಣೆ.

TSS , ಶಿರಸಿಯ ರೈತರ ಜೀವನದಲ್ಲಿ ಬೀರುತ್ತಿರುವ ಪ್ರಭಾವ ಅವರ್ಣನೀಯ. ಅಡಿಕೆ, ಕಾಳು ಮೆಣಸು, ಏಲಕ್ಕಿ, ಗೇರು ಗಳಿಗೆ tender ಮೂಲಕ ನಡೆಯುವ ನೇರ ಮಾರುಕಟ್ಟೆ, e- ಸೇವೆಗಳು, ಅತೀ ದೊಡ್ಡ ಸೂಪರ್ ಮಾರ್ಕೆಟ್ , ಮಧ್ಯಾಹ್ನದ ಖಾನಾವಳಿ, ಮದುವೆ ಸೇವೆ, ATMs, ಕಲ್ಯಾಣ ಮಂಟಪ, ದೊಡ್ಡ ಆಸ್ಪತ್ರೆ, ಬ್ಯಾಂಕ್ ಸೇವೆ, ರೈತ ತರಬೇತಿಗಳು, ಶುದ್ಧ ಸಾವಯವ ಗೊಬ್ಬರಗಳು, ಪಶು ಆಹಾರ, ಟ್ರಾವೆಲ್, ಪೆಟ್ರೊಲ್ ಬಂಕ್ ಇವಿಷ್ಟೇ ಅಲ್ಲದೆ ಗ್ರಾಮೀಣ ಸೊಗಡಿನ ಹಲವಾರು ವಿಶಿಷ್ಠ ತಿಂಡಿ ತಿನಿಸುಗಳನ್ನು ಬೆಂಗಳೂರಲ್ಲಿ ನೆಲೆಸಿರುವವರಿಗೂ ತಲುಪಿಸುವ ಸರ್ವಿಸ್ ಗಳನ್ನು ನಡೆಸುತ್ತಿದೆ.


ಶಿರಸಿ-ಸಿದ್ದಾಪುರದ ಸರ್ವತೋಮುಖ ಅಭಿವೃದ್ಧಿಯೂ TSS_ಕೊಡುಗೆ ಅಂದ್ರೆ ತಪ್ಪಿಲ್ಲ. ಈ_ಮಾಡೆಲ್ ಅನ್ನು ರಾಜ್ಯ, ಅಷ್ಟೇ ಯಾಕ , ದೇಶದ ತುಂಬೆಲ್ಲಾ, ಅಲ್ಪಸ್ವಲ್ಪ ಮಾರ್ಪಾಡುಗಳೊಂದಿಗೆ ಅಳವಡಿಸಿಕೊಂಡರೆ ಕೇಂದ್ರ ಸರಕಾರದ ರೈತರ ಆದಾಯ ದ್ವಿಗುಣ ಗೊಳಿಸುವ ಧೈಯ ಖಂಡಿತವಾಗಲೂ ಈಡೇರುತ್ತದೆ.

ನನ್ನ ಜಿಲ್ಲೆ ಹಾವೇರಿಯ ರೈತರು ಅತೀ ಹೆಚ್ಚು ಹತ್ತಿ ಹಾಗೂ ಗೋವಿನ ಜೋಳ ಬೆಳೆಯುತ್ತಾರೆ, ತಮ್ಮದೇ ಒಂದು ಸಹಕಾರ ಸಂಘ ಕಟ್ಟಿಕೊಂಡು ಹತ್ತಿ ಸಂಸ್ಕರಣಾ ಕಾರ್ಖಾನೆಗಳನ್ನೋ, ಗೋವಿನಜೋಳದ starch extraction ಕಾರಖಾನೆಯನ್ನೋ ಎಂದು ಶುರು ಮಾಡುತ್ತಾರೋ ಅಂದೇ ಅವರ ಉದ್ಧಾರ ಆಗತೈತಿ.

ಜಿಲ್ಲೆಯಲ್ಲಿ, ಇದ್ದ ಒಂದೆರಡು ಸಹಕಾರಿ ಹತ್ತಿ ನೂಲಿನ ಗಿರಣಿಗಳೂ ನಾಯಕರ ಧೂರ್ತತನ, ಸ್ವಾರ್ಥಕ್ಕಾಗಿ ಬಲಿಯಾಗಿ ಹಾಳು ಬಿದ್ದಿವೆ. ಇದ್ದ ಏಕೈಕ ಸಹಕಾರಿ ಸಕ್ಕರೆ ಕಾರಖಾನೆಯೂ, ಮತ್ತದೇ ನಾಯಕರ ಸ್ವಾರ್ಥಕ್ಕೆ ಬಲಿಯಾಗಿ ಖಾಸಗಿಯವರ ಕೈಯಲ್ಲಿದೆ.

ನನಗೆ ಈಗಲೂ ಒಂದು ಕನಸಿದೆ, ನನ್ನ ಹಾವೇರಿ ಜಿಲ್ಲೆಯ ರೈತರನ್ನ ಸಂಘಟಿಸಿ, ಜಿಲ್ಲೆಯಲ್ಲಿ ಒಂದು ಸಹಕಾರಿ ಗೋವಿನಜೋಳ ಸಂಸ್ಕರಣಾ ಕಾರಖಾನೆ ಕಟ್ಟಬೇಕು ಅಂತಾ. ಈಗಲೂ, ನಾನು ಈ ಕನಸನ್ನ, ಆಸೆಯನ್ನ ಹಾಗೇ ಪೋಷಿಸುತ್ತಲೇ ಇದ್ದೇನೆ. ಖಂಡಿತ ಒಂದು ದಿನ ನಾನು ಇದರಲ್ಲಿ ಯಶಸ್ವಿ ಆಗುತ್ತೇನೆ.

LEAVE A REPLY

Please enter your comment!
Please enter your name here