ಸಕ್ಕರೆ ಕಾರ್ಖಾನೆಗಳಲ್ಲಿ ಒಂದು ಟನ್ (1000 ಕೆಜಿ ) ಕಬ್ಬನ್ನು ನುರಿಯುವುದರಿಂದ ದೊರೆಯುವ ಉತ್ಪನ್ನಗಳ ಸರಾಸರಿ ಪ್ರಮಾಣ ಮತ್ತು ಅವುಗಳ ಅಂದಾಜು ಬೆಲೆ ಕೆಳಕಂಡಂತೆ ಅಂದಾಜಿಸಬಹುದು.
1)100-120 ಕೆಜಿ ಸಕ್ಕರೆ
@ ರೂ 38/ ಕೆಜಿ
2)250-300 ಕೆಜಿ ಸಿಪ್ಪೆ(Bagasse)
@ರೂ 03/ಕೆಜಿ
3)40-45 ಕೆಜಿ ಕಾಕಂಬಿ(Molasses)
@ರೂ 09/ಕೆಜಿ
4)30-35 ಕೆಜಿ ಪ್ರೆಸ್ ಮಡ್
@ರೂ 02/ಕೆಜಿ
ಮೇಲಿನ ದರ ಮತ್ತು ಪ್ರಮಾಣಕ್ಕೆ ಅನುಗುಣವಾಗಿ ಲೆಕ್ಕಚಾರ ಮಾಡಿದಾಗ ಅಂದಾಜು ಮೌಲ್ಯ ಸುಮಾರು ರೂ 5000/ ಗಳಾಗುತ್ತದೆ.
01 ಟನ್ ಕಬ್ಬನ್ನು ನುರಿದಾಗ ಸಕ್ಕರೆ ಜೊತೆಗೆ ದೊರೆಯುವ ಉತ್ಪನ್ನಗಳ ಪ್ರಮಾಣ ಮತ್ತು ದರ ಕೆಳಕಂಡಂತೆ ಪರಿಗಣಿಸಬಹುದು.
1)ಸಕ್ಕರೆ-100 ಕೆಜಿ
@ ರೂ 38/ಕೆಜಿ
2)ಈಥನೋಲ್ -10 ಲೀಟರ್
@ ರೂ 60/ ಲೀಟರ್
3)ವಿದ್ಯುತ್ ಉತ್ಪಾದನೆ -70 ಯೂನಿಟ್
@ ರೂ 4.50/ ಯೂನಿಟ್
4)ಪ್ರೆಸ್ ಮಡ್ -35 ಕೆಜಿ
@ ರೂ 02/ಕೆಜಿ
ಮೇಲಿನ ಉತ್ಪಾದನೆ ರೀತಿ ಇವುಗಳ ಮೌಲ್ಯ ಸುಮಾರು ರೂ 4800/ ಗಳಾಗುತ್ತದೆ. ಸಕ್ಕರೆ ಹೊರತುಪಡಿಸಿ ಒಂದು ಟನ್ ಕಬ್ಬನ್ನು ನುರಿದು,ನೇರವಾಗಿ ಕಬ್ಬಿನ ರಸದಿಂದ ಈಥನೋಲ್ ಉತ್ಪಾದನೆ ಮಾಡಿದಾಗ ದೊರೆಯುವ ಪ್ರಮಾಣ ಮತ್ತು ದರ ಕೆಳಕಂಡಂತೆ ಅಂದಾಜಿಸಬಹುದು.
1)ಈಥನೋಲ್ -70 ಲೀಟರ್
@ ರೂ 60/ಲೀಟರ್
2)ವಿದ್ಯುತ್ ಉತ್ಪಾದನೆ -70 ಯೂನಿಟ್
@ ರೂ 4.50/ ಯೂನಿಟ್
3)ಪ್ರೆಸ್ ಮಡ್ -35 ಕೆಜಿ
@ ರೂ 02/ ಕೆಜಿ
ಮೇಲಿನ ಉತ್ಪಾದನೆ ರೀತಿ ಇವುಗಳ ಮೌಲ್ಯ ಸುಮಾರು 4600/ ಗಳಾಗುತ್ತದೆ.
ಮೇಲಿನ 03 ರೀತಿಯಲೂ ಪರಿಗಣಿಸಿದಾಗ,01 ಟನ್ ಕಬ್ಬನ್ನು ಕಾರ್ಖಾನೆಗಳಲ್ಲಿ ನುರಿದಾಗ ಅದರಲ್ಲಿ ಬರುವ ಉತ್ಪನ್ನಗಳ ಬೆಲೆಯನ್ನು ಇಂದಿನ ದರಕ್ಕೆ ಹೋಲಿಕೆ ಮಾಡಿದಾಗ ಸರಾಸರಿ ಇದರ ಮೌಲ್ಯ ರೂ 4500/ ಗಳಾಗುತ್ತದೆ.
01 ಟನ್ ಕಬ್ಬು ಕಟ್ಟಾವು ಮತ್ತು ಸಾಗಾಟ ವೆಚ್ಚ ಕನಿಷ್ಠ ರೂ 1000/ ಮತ್ತು ಅದಕ್ಕೂ ಮೇಲ್ಪಟ್ಟಗುತ್ತಿದೆ (ಮುಖ್ಯ ರಸ್ತೆಯಿಂದ),ಕಟ್ಟಾವು ಮತ್ತು ಸಾಗಾಟದ ವೆಚ್ಚ ಪ್ರತಿ ವರ್ಷವೂ ವ್ಯತ್ಯಾಸವಾಗುತ್ತದೆ.ರೈತರು ಮತ್ತು ಕಾರ್ಖಾನೆಯವರು ಇಬ್ಬರು ಸಮಾನವಾಗಿ ಕಟ್ಟಾವು ಮತ್ತು ಸಾಗಾಟದ ವೆಚ್ಚವನ್ನು ಭರಿಸುವಂತಾಗಬೇಕು.
ಕಟ್ಟಾವು ಮತ್ತು ಸಾಗಾಟದ ವೆಚ್ಚವನ್ನು ಇಬ್ಬರು ಸಮಾನವಾಗಿ ಭರಿಸಿದ ನಂತರ ಉಳಿಯುವ ಮೊತ್ತದಲ್ಲಿ ರೈತರಿಗೆ ಶೇ 70% ಮತ್ತು ಕಾರ್ಖಾನೆಯವರಿಗೆ ಶೇ 30% ರೀತಿ ಹಂಚಿಕೆ ಮಾಡುವುದು ಸೂಕ್ತವಾಗಿರುತ್ತದೆ.
ಉದಾಹರಣೆಗೆ ರೂ 4500/ ಗಳಲ್ಲಿ ಕಟ್ಟಾವು ಮತ್ತು ಸಾಗಾಟದ ವೆಚ್ಚ ರೂ 1000/ ಕಳೆದ ನಂತರ ಉಳಿಯುವ ರೂ 3500/ ಗಳಲ್ಲಿ ರೈತರಿಗೆ ಶೇ 70% ಅಂದರೆ ರೂ 2450/, ಕಾರ್ಖಾನೆಯವರಿಗೆ ಶೇ 30% ಅಂದರೆ ರೂ 1050/.
ಪ್ರತಿ ವರ್ಷ ಸಕ್ಕರೆ, ಈಥನೋಲ್,ವಿದ್ಯುತ್ ದರ ಪರಿಷ್ಕರಣೆ ರೀತಿ ಕಬ್ಬಿನ ದರ ನಿಗದಿಯಾಗಲಿ,ಮೇಲಿನ ರೀತಿಯಲ್ಲಿ ನಿಯಮ ಅನುಸರಿಸಿಕೊಂಡಾಗ ರೈತರು ಮತ್ತು ಕಾರ್ಖಾನೆಯವರು ಇಬ್ಬರಿಗೂ ನಷ್ಟವಾಗದಂತೆ ಮುಂದುವರಿಸಿಕೊಂಡು ಹೋಗಬಹುದು.ಕಬ್ಬಿನ ಉತ್ಪನ್ನಗಳಿಂದ ಸರ್ಕಾರಕ್ಕೆ ಬರುತ್ತಿರುವ ನೇರ ಮತ್ತು ಪರೋಕ್ಷ ತೆರಿಗೆ ಹಣವನ್ನು ಪರಿಶೀಲನೆ ಮಾಡಿ ಅದಕ್ಕೆ ಅನುಗುಣವಾಗಿ ರೈತರಿಗೆ ಮತ್ತು ಕಾರ್ಖಾನೆಯವರಿಗೆ ಸರ್ಕಾರ ಧನ ಸಹಾಯ ನೀಡಲಿ.
ಹೆಚ್ಚಿನ ಮಾಹಿಇಗೆ ಸಂಪರ್ಕಿಸಿ: 9342434530