ಭಾರತದ ಹಲವೆಡೆ ಭಾರೀ ಮಳೆ ಆರ್ಭಟಕ್ಕೆ ಕ್ಷಣ ಗಣನೆ, ರೆಡ್ ಅಲರ್ಟ್ ಘೋಷಣೆ

0

ಮುಂಗಾರು ಹಂಗಾಮು   ಸಕ್ರಿಯ ಹಂತವನ್ನು ಪ್ರವೇಶಿಸುತ್ತಿದೆ.  ಅತ್ಯಂತ ಭಾರೀ ಮಳೆಯು ಪ್ರಸ್ತುತ ಭಾರತದ ಹಲವಾರು ಪ್ರದೇಶಗಳ ಮೇಲೆ ಪರಿಣಾಮ ಬೀರುತ್ತಿದೆ. ಪಶ್ಚಿಮ ಮಧ್ಯಪ್ರದೇಶ, ಪೂರ್ವ ರಾಜಸ್ಥಾನ, ಗುಜರಾತ್, ಕೊಂಕಣ ಪ್ರದೇಶ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದೆ.  ಈ ಪ್ರದೇಶಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ವಿಜ್ಞಾನಿ ಡಾ.ನರೇಶ್ ಕುಮಾರ್ ಹೇಳಿದರು.

ಅತೀ ಭಾರಿ ಮಳೆ ನಿರೀಕ್ಷೆ ನಡುವೆಯೂ  ದೆಹಲಿ-ಎನ್‌ಸಿಆರ್ ಪ್ರದೇಶವು ಮುಂದಿನ ಎರಡು ದಿನಗಳವರೆಗೆ ಶುಷ್ಕವಾಗಿರುವ ಸಾಧ್ಯತೆ ಇದೆ.

ಉತ್ತರ ಮತ್ತು ಮಧ್ಯ ಭಾರತದಲ್ಲಿ ಭಾರೀ ಮಳೆ

ಉತ್ತರ ಮತ್ತು ಮಧ್ಯ ಭಾರತದ ಹಲವು ರಾಜ್ಯಗಳಲ್ಲಿ ಇಂದು ಭಾನುವಾರ ಭಾರೀ ಮಳೆಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಗಂದರ್‌ಬಾಲ್ ಜಿಲ್ಲೆಯಲ್ಲಿ, ಚೆರ್ವಾನ್ ಕಂಗನ್ ಪ್ರದೇಶದಲ್ಲಿ ಮೇಘಸ್ಫೋಟವು ಭತ್ತದ ಗದ್ದೆಗಳಿಗೆ ಗಮನಾರ್ಹ ಹಾನಿಯನ್ನುಂಟುಮಾಡಿದೆ, ಹಲವಾರು ವಾಹನಗಳು ಅವಶೇಷಗಳಲ್ಲಿ ಸಿಕ್ಕಿಹಾಕಿಕೊಂಡಿದೆ.  ನೀರು ವಸತಿ ಪ್ರದೇಶಗಳಿಗೆ ಪ್ರವೇಶಿಸಲು ಕಾರಣವಾಯಿತು. ಪಡವ್‌ಬಾಲ್‌ ಬಳಿಯ ಎಸ್‌ಎಸ್‌ಜಿ ರಸ್ತೆಯಲ್ಲಿ ಕಾಲುವೆ ತುಂಬಿ ಹರಿದ ಪರಿಣಾಮ ರಸ್ತೆಯಲ್ಲಿ ಮಣ್ಣು ಸಂಗ್ರಹವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ

ಹಿಮಾಚಲ ಪ್ರದೇಶದಲ್ಲಿ, ದುರಂತದ ಮೇಘಸ್ಫೋಟಗಳು ಹಲವಾರು ಪ್ರದೇಶಗಳಲ್ಲಿ ಅಪ್ಪಳಿಸಿ, ದುರಂತಕ್ಕೆ ಕಾರಣವಾಗಿವೆ. ಶಿಮ್ಲಾ ಜಿಲ್ಲೆಯ ರಾಂಪುರ ಸಮೀಪದ ಸಮೇಜ್ ಗ್ರಾಮದಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಲಾಹೌಲ್ ಮತ್ತು ಸ್ಪಿತಿಯಲ್ಲಿ ಎರಡು ಸೇತುವೆಗಳು ಕೊಚ್ಚಿಹೋಗಿವೆ.

ಉತ್ತರಾಖಂಡದಲ್ಲಿ, ಜುಲೈ 31 ರಿಂದ ಭಾರೀ ಮಳೆಯಾಗುತ್ತಿದೆ. ಇದರಿಂದ ಕೇದಾರನಾಥ ಯಾತ್ರೆ ಮೇಲೆ ತೀವ್ರ ಪರಿಣಾಮ  ಉಂಟಾಗಿದೆ. ಉತ್ತರಾಖಂಡ ವಿಪತ್ತು ನಿರ್ವಹಣೆ ಮತ್ತು ಪುನರ್ವಸತಿ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ಪ್ರಕಾರ, ಕೇದಾರನಾಥ ಯಾತ್ರೆಯ ಮಾರ್ಗದಲ್ಲಿ ಸಿಲುಕಿರುವ ಒಟ್ಟು 9,099 ಜನರನ್ನು ಆಗಸ್ಟ್ 3 ರವರೆಗೆ ರಕ್ಷಿಸಲಾಗಿದೆ. ಸಮರೋಪಾದಿಯಲ್ಲಿ ಕಾರ್ಯಾಚರಣೆಗಳು ನಡೆಯುತ್ತಿವೆ.

ಮುಂಜಾಗ್ರತೆ ವಹಿಸಿ:

ಅತ್ಯಧಿಕ ಮಳೆಯಾಗುವ ರಾಜ್ಯಗಳಿಗೆ ಕೆಲಸದ ಮೇಲೆ ತೆರಳುವವರು ಮುಂಜಾಗ್ರತೆ ವಹಿಸಿ. ಈ ನಿಟ್ಟಿನಲ್ಲಿ ಭಾರೀ ಮಳೆಯ ನಡುವೆ ಸುರಕ್ಷಿತವಾಗಿರಲು ಕೆಲವು ಮಾರ್ಗಗಳು ಇಲ್ಲಿವೆ

ನಿರಂತರ ಮಾಹಿತಿ ಪಡೆಯಿರಿ. ಇತ್ತೀಚಿನ ಹವಾಮಾನ ವರದಿಗಳು ಮತ್ತು ಅಧಿಕಾರಿಗಳ ಮುನ್ಸೂಚನೆಗಳನ್ನು ಗಮನಿಸಿ.  ಪ್ರವಾಹ ಪ್ರದೇಶಗಳಲ್ಲಿ ಸಂಚರಿಸುವುದನ್ನು  ತಪ್ಪಿಸಿ. ಪ್ರವಾಹಕ್ಕೆ ಒಳಗಾದ ರಸ್ತೆಗಳು ಅಥವಾ ಪ್ರದೇಶಗಳಲ್ಲಿ ನಡೆಯಲು ಅಥವಾ ಓಡಲು  ಪ್ರಯತ್ನಿಸಬೇಡಿ. ನಿಮ್ಮ ಬಳಿಯಲ್ಲಿ ಎಮರ್ಜೆನ್ಸಿ ಕಿಟ್ ಇರಲಿ. ಇದರಲ್ಲಿ ನೀರು, ಆಹಾರ, ಔಷಧಿಗಳು ಮತ್ತು ಪ್ರಮುಖ ದಾಖಲೆಗಳಂತಹ ಅಗತ್ಯ ವಸ್ತುಗಳನ್ನು ಇಟ್ಟಿರಿ. ನೀವು ತಗ್ಗು ಪ್ರದೇಶದಲ್ಲಿದ್ದರೆ ತಕ್ಷಣವೇ ಎತ್ತರದ ಪ್ರದೇಶಕ್ಕೆ ತೆರಳಿ.

ಭಾರೀ ಮಳೆಯ ಸಮಯದಲ್ಲಿ  ನಿಮ್ಮ ಮನೆಯೊಳಗೆ  ಅಥವಾ ಕಚೇರಿಯಲ್ಲಿರಿ. ಅನಗತ್ಯ ಪ್ರಯಾಣವನ್ನು ತಪ್ಪಿಸಿ. ಸ್ಥಳೀಯ ಅಧಿಕಾರಿಗಳು ನೀಡುವ ಯಾವುದೇ ಸ್ಥಳಾಂತರಿಸುವ ಆದೇಶಗಳು ಅಥವಾ ಸುರಕ್ಷತಾ ಸೂಚನೆಗಳಿಗೆ ಗಮನ ಕೊಡಿ.

LEAVE A REPLY

Please enter your comment!
Please enter your name here