ಲೇಖಕರು: ಪ್ರಸಾದ್ ರಕ್ಷಿದಿ, ರಂಗಭೂಮಿ ತಜ್ಞರು, ಕಾಫಿ ಬೆಳೆಗಾರರು

“ಸ್ವಲ್ಪವೂ ಲಾಭವಿಲ್ಲದೆ ನಷ್ಟವಿಲ್ಲ” ಲಾರಾ ಇಂಗಲ್ಸ್ ರ ಕಾದಂಬರಿಗಳನ್ನು ಓದಿದವರಿಗೆ ಮತ್ತೆ ಮತ್ತೆ ನೆನಪಾಗುವ ಅಮೆರಿಕನ್ ಗಾದೆ ಮಾತು, ಅದಕ್ಕೆ ಹೋಲಿಕೆಯಾಗುವ ಗಾದೆ ಮಾತು ನಮ್ಮಲ್ಲೂ ಇದೆ. ಈವರ್ಷ ಬಂದ ಅಕಾಲಿಕ ಮಳೆಯಿಂದ ಕಾಫಿ ಬೆಳೆಗಾರರು ಕಂಗಾಲಾದರು. ಗಿಡದಲ್ಲಿದ್ದ ಕಾಫಿ ಉದುರಿತು, ಅಂಗಳದಲ್ಲಿ ಒಣಗಲು ಹಾಕಿದ್ದು ಕೊಚ್ಚಿಕೊಂಡು ಹೋಯಿತು. ಒಂದು ವಾರದ ಮೋಡದ ವಾತಾವರಣದಿಂದ ಒಣಗಿದ ಕಾಫಿ ಮುಗ್ಗಿತು… ಹೀಗೆ ಬೆಳೆಗಾರರು ಹೈರಾಣಾದರು.

ಈಗ ಮತ್ತೆ ಸಾರ್ವತ್ರಿಕ ವಾಗಿ ಮಳೆಯಾಗಿದೆ. ಕಾಫಿ ನಾಡಿನ ಎಲ್ಲ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ. ಅರೇಬಿಕಾ ಕಾಫಿಗೆ ಸ್ವಲ್ಪ ಬೇಗ ಅನ್ನಿಸಿದರೂ ರೊಬಸ್ಟ ಬೆಳೆಗೆ ಸರಿಯಾದ ಕಾಲದ ಮಳೆ ಎನ್ನಬಹುದು. ಹೀಗಾಗಿ ಕಾಫಿ ನಾಡಿನಲ್ಲಿ ಉತ್ತಮ ಹೂವಿನ ಮಳೆ

ಸರ್ಕಾರ ಕಣ್ಣು ಬಿಡದಿದ್ದರೂ ಪ್ರಕೃತಿ ಕರುಣೆ ತೋರಿತು. ನೀರಾವರಿಗೆಂದು ಬಳಕೆ ಮಾಡಬೇಕಿದ್ದ ಲಕ್ಷಾಂತರ ಲೀಟರ್ ಡೀಸೆಲ್… ಉಳಿಯಿತು. ಬೆಳೆಗಾರರಿಗೆ ಅವರವರ ಹಿಡುವಳಿಯ ಗಾತ್ರಕ್ಕೆ ತಕ್ಕಂತೆ ಹಣ ಉಳಿತಾಯ  ವಾಯಿತು.ಕೆಲವರಿಗೆ ಇನ್ನೂ ಹಣ್ಣಿನ‌ಕೊಯ್ಲೇ ಮುಗಿದಿಲ್ಲ. ಕೆಲಸಗಾರರ ಕೊರತೆ, ಉಳಿದಿರುವ ಹಣ್ಣು ಉದುರುತ್ತದೆ ನಿಜ. ಆದರೆ ಅರಳಿದ ಹೂವನ್ನು ನೋಡಿ ಅದನ್ನು ಮರೆತಿದ್ದಾರೆ.

ಲಕ್ಷಾಂತರ ಎಕರೆ ಪ್ರದೇಶದಲ್ಲಿ ಏಕಕಾಲಕ್ಕೆ ಹೂ ಅರಳಿರುವುದರಿಂದ, ಜೇನ್ನೊಣಗಳು ಇಲ್ಲ, ಇರುವ ಪ್ರಮಾಣ ಸಾಕಾಗುತ್ತಿಲ್ಲ. ಪರಾಗಸ್ಪರ್ಶಕ್ಕೆ ಕೆಲವ ಜಾತಿಯ ಇರುವೆಗಳು, ಚಿಟ್ಟೆಗಳು, ಸ್ವಲ್ಪಮಟ್ಟಿಗೆ ಸಹಕಾರಿಗಳು. ಮತ್ತೆ ಬೀಸುವ ಗಾಳಿಯೇ ಆಧಾರ.

ರೊಬಸ್ಟ ಕಾಫಿ ಸಂಪೂರ್ಣವಾಗಿ ಪರಕೀಯ ಪರಾಗ ಸ್ಪರ್ಶದ ಮೂಲಕವೇ ಫಲ ಕಚ್ಚುವುದು. ಈಗ ಬಂದಿರುವ ಹೆಚ್ಚಿನ ಮಳೆ ಭೂಮಿಯನ್ನು ತಂಪಾಗಿಸಿದೆ. ಬ್ಯಾಕಿಂಗ್ ಷವರ್ ಗೆ ಇಪ್ಪತ್ತು ದಿನಗಳವರೆಗೂ ಕಾಯಬಹುದು. ಅಷ್ಟರಲ್ಲಿ ಮತ್ತೆ ಮಳೆ ಬೀಳಬಹುದೆಂದು ನಿರೀಕ್ಷೆ. ಅಂತೂ ಸ್ವಲ್ಪವೂ ಲಾಭವಿಲ್ಲದೆ ನಷ್ಟವಿಲ್ಲ…

LEAVE A REPLY

Please enter your comment!
Please enter your name here