ಹವಾಮಾನ ಮುನ್ಸೂಚನೆ: ಕರ್ನಾಟಕದ ಬಹುತೇಕ ಕಡೆ ಮಳೆ ಸಾಧ್ಯತೆ

0

ಮಂಗಳವಾರ, 25 ನೇ  ಜುಲೈ 2023 / 03ನೇ  ಶ್ರಾವಣ 1945 ಶಕ ಬೆಳಿಗ್ಗೆ 0830 ಘಂಟೆಗೆ ದಾಖಲಿಸಿರುವ ವೀಕ್ಷಣೆಯ ಸಾರಾಂಶ:  ನೈರುತ್ಯ ಮುಂಗಾರು ರಾಜ್ಯದಾದ್ಯಂತ ಚುರುಕಾಗಿತ್ತು  ರಾಜ್ಯದ  ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ.

ಅತಿ ಭಾರೀ ಮಳೆಯ ಪ್ರಮಾಣಗಳು (ಸೆಂ.ಮೀ. ನಲ್ಲಿ):

ಭಾಗಮಂಡಲ (ಕೊಡಗು ಜಿಲ್ಲೆ) 19; ಕ್ಯಾಸಲ್ ರಾಕ್ (ಉತ್ತರ ಕನ್ನಡ ಜಿಲ್ಲೆ) 17; ಮೂಲ್ಕಿ, ಸುಬ್ರಹ್ಮಣ್ಯ (ಎರಡೂ ದಕ್ಷಿಣ ಕನ್ನಡ ಜಿಲ್ಲೆ), ಜಗಲಬೆಟ್ (ಉತ್ತರ ಕನ್ನಡ ಜಿಲ್ಲೆ), ಕೊಟ್ಟಿಗೆಹಾರ (ಚಿಕ್ಕಮಗಳೂರು ಜಿಲ್ಲೆ) ತಲಾ 16; ಸುಳ್ಯ (ದಕ್ಷಿಣ ಕನ್ನಡ ಜಿಲ್ಲೆ), ಗೇರುಸೊಪ್ಪ (ಉತ್ತರ ಕನ್ನಡ ಜಿಲ್ಲೆ) ತಲಾ 15; ಶಿರಾಲಿ ಪಿಟಿಒ (ಉತ್ತರ ಕನ್ನಡ ಜಿಲ್ಲೆ), ಮಾಣಿ (ದಕ್ಷಿಣ ಕನ್ನಡ ಜಿಲ್ಲೆ), ಲಿಂಗನಮಕ್ಕಿ (ಶಿವಮೊಗ್ಗ ಜಿಲ್ಲೆ) ತಲಾ 14; ಜಯಪುರ (ಚಿಕ್ಕಮಗಳೂರು ಜಿಲ್ಲೆ) 13; ಉಪ್ಪಿನಂಗಡಿ, ಮಂಗಳೂರು ವಿಮಾನ ನಿಲ್ದಾಣ, ಮಂಗಳೂರು, ಪುತ್ತೂರು, ಪಣಂಬೂರು (ಎಲ್ಲವೂ ದಕ್ಷಿಣ ಕನ್ನಡ ಜಿಲ್ಲೆ), ಕೊಲ್ಲೂರು (ಉಡುಪಿ ಜಿಲ್ಲೆ), ಶೃಂಗೇರಿ (ಚಿಕ್ಕಮಗಳೂರು ಜಿಲ್ಲೆ) ತಲಾ 12.

ಭಾರೀ ಮಳೆಯ ಪ್ರಮಾಣಗಳು (ಸೆಂ.ಮೀ. ನಲ್ಲಿ):

ಸಿದ್ದಾಪುರ (ಉಡುಪಿ ಜಿಲ್ಲೆ), ಹೊನ್ನಾವರ, ಕದ್ರಾ (ಎರಡೂ ಉತ್ತರ ಕನ್ನಡ ಜಿಲ್ಲೆ), ಕೊಪ್ಪ (ಚಿಕ್ಕಮಗಳೂರು ಜಿಲ್ಲೆ), ವಿರಾಜಪೇಟೆ (ಕೊಡಗು ಜಿಲ್ಲೆ), ತಾಳಗುಪ್ಪ (ಶಿವಮೊಗ್ಗ ಜಿಲ್ಲೆ) ತಲಾ 11; ಬೆಳ್ತಂಗಡಿ (ದಕ್ಷಿಣ ಕನ್ನಡ ಜಿಲ್ಲೆ), ಜೋಯಿಡಾ (ಉತ್ತರ ಕನ್ನಡ ಜಿಲ್ಲೆ), ಕಮ್ಮರಡಿ (ಚಿಕ್ಕಮಗಳೂರು ಜಿಲ್ಲೆ), ಸೋಮವಾರಪೇಟೆ (ಕೊಡಗು ಜಿಲ್ಲೆ) ತಲಾ 10; ಧರ್ಮಸ್ಥಳ (ದಕ್ಷಿಣ ಕನ್ನಡ ಜಿಲ್ಲೆ), ಕುಂದಾಪುರ (ಉಡುಪಿ ಜಿಲ್ಲೆ), ಕಾರವಾರ, ಮಂಕಿ, ಸಿದ್ದಾಪುರ (ಎಲ್ಲವೂ ಉತ್ತರ ಕನ್ನಡ ಜಿಲ್ಲೆ), ಉಡುಪಿ, ನಿರ್ಣಾ (ಬೀದರ್ ಜಿಲ್ಲೆ), ಹುಡಕೆರೆ, ನಾಪೋಕ್ಲು, ಪೊನ್ನಂಪೇಟೆ (ಎಲ್ಲ ಕೊಡಗು ಜಿಲ್ಲೆ) ತಲಾ 9; ಯಲ್ಲಾಪುರ, ಮಂಚಿಕೆರೆ (ಎರಡೂ ಉತ್ತರ ಕನ್ನಡ ಜಿಲ್ಲೆ), ಕಾರ್ಕಳ (ಉಡುಪಿ ಜಿಲ್ಲೆ), ಲೋಂಡಾ (ಬೆಳಗಾವಿ ಜಿಲ್ಲೆ), ಮೂಡಬಿ (ಬೀದರ್ ಜಿಲ್ಲೆ), ಕಳಸ (ಚಿಕ್ಕಮಗಳೂರು ಜಿಲ್ಲೆ), ಮೂರ್ನಾಡು (ಕೊಡಗು ಜಿಲ್ಲೆ), ಹುಂಚದಕಟ್ಟೆ (ಶಿವಮೊಗ್ಗ ಜಿಲ್ಲೆ) ತಲಾ 8; ಕುಮಟಾ, ಬೇಲಿಕೇರಿ (ಎರಡೂ ಉತ್ತರ ಕನ್ನಡ ಜಿಲ್ಲೆ), ಕೋಟ (ಉಡುಪಿ ಜಿಲ್ಲೆ), ಬಾಳೆಹೊನ್ನೂರು, ಮೂಡಿಗೆರೆ ಕೆವಿಕೆ (ಎರಡೂ ಚಿಕ್ಕಮಗಳೂರು ಜಿಲ್ಲೆ), ಮಂಡಗದ್ದೆ (ಶಿವಮೊಗ್ಗ ಜಿಲ್ಲೆ) ತಲಾ 7.

ಇತರೆ ಮುಖ್ಯ ಮಳೆ ಪ್ರಮಾಣಗಳು (ಸೆಂ.ಮೀ. ನಲ್ಲಿ):

ಮಂಠಾಳ (ಬೀದರ್ ಜಿಲ್ಲೆ), ಸಕಲೇಶಪುರ (ಹಾಸನ ಜಿಲ್ಲೆ), ಶನಿವಾರಸಂತೆ, ಗೋಣಿಕೊಪ್ಪಲು ಕೆವಿಕೆ (ಎರಡೂ ಕೊಡಗು ಜಿಲ್ಲೆ), ತ್ಯಾಗರ್ತಿ (ಶಿವಮೊಗ್ಗ ಜಿಲ್ಲೆ) ತಲಾ 6; ಅಂಕೋಲಾ (ಉತ್ತರ ಕನ್ನಡ ಜಿಲ್ಲೆ), ರಾಜೇಶ್ವರ, ಹುಮನಾಬಾದ್ (ಎರಡೂ ಬೀದರ್ ಜಿಲ್ಲೆ), ಚಿಂಚೋಳಿ (ಕಲಬುರ್ಗಿ ಜಿಲ್ಲೆ), ಕೊಣನೂರು (ಹಾಸನ ಜಿಲ್ಲೆ) ತಲಾ 5; ಬನವಾಸಿ, ಗೋಕರ್ಣ (ಎರಡೂ ಉತ್ತರ ಕನ್ನಡ ಜಿಲ್ಲೆ), ಸೇಡಂ, ಚಿತ್ತಾಪುರ, ಮಹಾಗಾವ್ (ಎಲ್ಲವೂ ಕಲಬುರ್ಗಿ ಜಿಲ್ಲೆ), ಸೈದಾಪುರ (ಯಾದಗಿರಿ ಜಿಲ್ಲೆ), ಹಾಸನ, ಸಾಲಿಗ್ರಾಮ (ಮೈಸೂರು ಜಿಲ್ಲೆ), ಹಾರಂಗಿ (ಕೊಡಗು ಜಿಲ್ಲೆ) ತಲಾ 4; ಹಳಿಯಾಳ, ಕಿರವತ್ತಿ, ಮುಂಡಗೋಡ (ಎಲ್ಲಾ ಉತ್ತರ ಕನ್ನಡ ಜಿಲ್ಲೆ), ಮುಧೋಳೆ, ಸುಲೇಪೇಟ, ಅಡಕಿ, ಕಮಲಾಪುರ, ನಿಂಬರ್ಗಾ ತಾಂಡಾ (ಎಲ್ಲಾ ಕಲಬುರ್ಗಿ ಜಿಲ್ಲೆ), ಬೆಳಗಾವಿ ನಗರ, ಔರಾದ್, ಸಾಯಿಗಾಂವ್ (ಎರಡೂ ಬೀದರ್ ಜಿಲ್ಲೆ), ಕಲಘಟಗಿ (ಧಾರವಾಡ ಜಿಲ್ಲೆ), ಸಿಂದಗಿ (ವಿಜಯಪುರ ಜಿಲ್ಲೆ), ಶಹಾಪುರ (ಯಾದಗಿರಿ ಜಿಲ್ಲೆ), ಕಲಬುರ್ಗಿ, ಧಾರವಾಡ, ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಎನ್ ಆರ್ ಪುರ, ತರೀಕೆರೆ (ಎರಡೂ ಚಿಕ್ಕಮಗಳೂರು ಜಿಲ್ಲೆ), ಭದ್ರಾವತಿ, ಆನವಟ್ಟಿ (ಎರಡೂ ಶಿವಮೊಗ್ಗ ಜಿಲ್ಲೆ), ಸಿ ಆರ್ ಪಟ್ಣ, ಅರಕಲಗೂಡು (ಎರಡೂ ಹಾಸನ ಜಿಲ್ಲೆ), ಕೃಷ್ಣರಾಜಪೇಟೆ (ಮಂಡ್ಯ ಜಿಲ್ಲೆ), ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ ಜಿಲ್ಲೆ), ಕೋಲಾರ ತಲಾ 3; ಆಳಂದ, ಯಡ್ರಾಮಿ, ನೆಲೋಗಿ, ಗುಂಡಗುರ್ತಿ, ಜೇವರ್ಗಿ, ಅಫಜಲಪುರ, ಫರಹತಾಬಾದ್ (ಎಲ್ಲಾ ಕಲಬುರ್ಗಿ ಜಿಲ್ಲೆ), ಕುಂದಗೋಳ, ಹುಬ್ಬಳ್ಳಿ, ಧಾರವಾಡ ಪಿಟಿಒ (ಎಲ್ಲಾ ಧಾರವಾಡ ಜಿಲ್ಲೆ), ದೇವರಹಿಪ್ಪರಗಿ, ಜಳಕಿ ಕ್ರಾಸ್, ಟಿಕ್ಕೋಟ, ಇಂಡಿ (ಎಲ್ಲವೂ ವಿಜಯಪುರ ಜಿಲ್ಲೆ), ಹಿರೇಕೆರೂರು, ಶಿಗ್ಗಾವಿ, ಅಕ್ಕಿಆಲೂರು, ಗುತ್ತಲ, ಹಾನಗಲ್ (ಎಲ್ಲ ಹಾವೇರಿ ಜಿಲ್ಲೆ), ರಾಯಚೂರು, ಗಬ್ಬೂರು, ಜಾಲಹಳ್ಳಿ, ಮುದಗಲ್, ಮಾನ್ವಿ (ಎಲ್ಲಾ ರಾಯಚೂರು ಜಿಲ್ಲೆ), ಕುಷ್ಟಗಿ, ಹನುಮಸಾಗರ (ಎರಡೂ ಕೊಪ್ಪಳ ಜಿಲ್ಲೆ), ಸಂಕೇಶ್ವರ, ಸದಲಗಾ (ಎರಡೂ ಬೆಳಗಾವಿ ಜಿಲ್ಲೆ), ವಿಜಯಪುರ, ಬೀದರ್, ಬೀದರ್ ಪಿ‌ಟಿ‌ಓ, ಸಂತಪುರ (ಬೀದರ್ ಜಿಲ್ಲೆ), ಶೋರಾಪುರ, ಕವಡಿಮಟ್ಟಿ ಏ‌ಆರ್‌ಜಿ, ಕೆಂಭಾವಿ (ಎಲ್ಲ ಯಾದಗಿರಿ ಜಿಲ್ಲೆ), ಪರಶುರಾಮಪುರ (ಚಿತ್ರದುರ್ಗ ಜಿಲ್ಲೆ), ಶಿವಮೊಗ್ಗ, ಚಿಕ್ಕಮಗಳೂರು, ಶ್ರವಣಬೆಳಗೊಳ (ಹಾಸನ ಜಿಲ್ಲೆ), ಬೆಳ್ಳೂರು (ಮಂಡ್ಯ ಜಿಲ್ಲೆ), ಕೆಎಸ್ಎನ್ ಡಿಎಂಸಿ ಕ್ಯಾಂಪಸ್, ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣ (ಎರಡೂ ಬೆಂಗಳೂರು ನಗರ ಜಿಲ್ಲೆ), ಸರಗೂರು (ಮೈಸೂರು ಜಿಲ್ಲೆ), ಅಜ್ಜಂಪುರ (ಚಿಕ್ಕಮಗಳೂರು ಜಿಲ್ಲೆ), ಉಚ್ಚಂಗಿದುರ್ಗ (ದಾವಣಗೆರೆ ಜಿಲ್ಲೆ), ಮಾಲೂರು (ಕೋಲಾರ ಜಿಲ್ಲೆ), ಹಡಗಲಿ (ವಿಜಯನಗರ ಜಿಲ್ಲೆ) ತಲಾ 2; ಬಳಗನೂರು, ಮಸ್ಕಿ, ಲಿಂಗಸೂಗೂರು, ದೇವದುರ್ಗ, ಸಿಂಧನೂರು, ಕುರ್ಡಿ (ಎಲ್ಲವೂ ರಾಯಚೂರು ಜಿಲ್ಲೆ), ಹಾವೇರಿ ಪಿಟಿಒ, ಹಾವೇರಿ ಎಪಿಎಂಸಿ, ಸವಣೂರು (ಎರಡೂ ಹಾವೇರಿ ಜಿಲ್ಲೆ), ತಾವರಗೇರಾ, ಕಾರಟಗಿ, ಕುಕನೂರ (ಎಲ್ಲವೂ ಕೊಪ್ಪಳ ಜಿಲ್ಲೆ), ಆಲಮಟ್ಟಿ, ನಲ್ವತವಾಡ, ಬಿ ಬಾಗೇವಾಡಿ, ತಾಳಿಕೋಟೆ (ಎಲ್ಲವೂ ವಿಜಯಪುರ ಜಿಲ್ಲೆ), ಅಣ್ಣಿಗೇರಿ (ಧಾರವಾಡ ಜಿಲ್ಲೆ), ಖಜೂರಿ (ಕಲಬುರ್ಗಿ ಜಿಲ್ಲೆ), ನಾರಾಯಣಪುರ, ಕಕ್ಕೇರಿ (ಎರಡೂ ಯಾದಗಿರಿ ಜಿಲ್ಲೆ), ಬಾಗಲಕೋಟೆ ಪಿಟಿಒ, ಕೂಡಲಸಂಗಮ, ಲೋಕಾಪುರ, ಬಿಳಗಿ, ಇಳಕಲ್, ಕೆರೂರು (ಎಲ್ಲ ಬಾಗಲಕೋಟೆ ಜಿಲ್ಲೆ), ನಿಪ್ಪಾಣಿ, ಬೆಳಗಾವಿ ವಿಮಾನ ನಿಲ್ದಾಣ, ಕಣಬರ್ಗಿ AWS, ಹುಕ್ಕೇರಿ (ಎಲ್ಲವೂ ಬೆಳಗಾವಿ ಜಿಲ್ಲೆ), ರೋಣ, ಲಕ್ಷ್ಮೇಶ್ವರ, ಮುಂಡರ್ಗಿ (ಎಲ್ಲವೂ ಗದಗ ಜಿಲ್ಲೆ), ಹುಣಸೂರು (ಮೈಸೂರು ಜಿಲ್ಲೆ), ಬೇಲೂರು (ಹಾಸನ ಜಿಲ್ಲೆ), ಕೊಟ್ಟೂರು, ಹೊಸಹಳ್ಳಿ, ಹರಪನಹಳ್ಳಿ, ಹಗರಿಬೊಮ್ಮನಹಳ್ಳಿ (ಎಲ್ಲವೂ ವಿಜಯನಗರ ಜಿಲ್ಲೆ), ಹೆಬ್ಬೂರು, ಬರಗೂರು, ವೈ ಎನ್ ಹೊಸಕೋಟೆ, ಮಿಡಿಗೇಶಿ, ಗುಬ್ಬಿ (ಎಲ್ಲಾ ತುಮಕೂರು ಜಿಲ್ಲೆ), ಹೊಸಕೋಟೆ (ಬೆಂಗಳೂರು ಗ್ರಾಮಾಂತ ಜಿಲ್ಲೆ),  ಶ್ರೀರಂಗಪಟ್ಟಣ, ಕೃಷ್ಣರಾಜಸಾಗರ (ಎರಡೂ ಮಂಡ್ಯ ಜಿಲ್ಲೆ), ಬಂಡೀಪುರ (ಚಾಮರಾಜನಗರ ಜಿಲ್ಲೆ), ನಾಯಕನಹಟ್ಟಿ, ಹೊಸದುರ್ಗ (ಎರಡೂ ಚಿತ್ರದುರ್ಗ ಜಿಲ್ಲೆ), ದಾವಣಗೆರೆ, ಹೊನ್ನಾಳಿ, ದಾವಣಗೆರೆ ಪಿಟಿಒ, ಸಂತೆಬೆನ್ನೂರು (ಎಲ್ಲವೂ ದಾವಣಗೆರೆ ಜಿಲ್ಲೆ), ರಾಯಲ್ಪಾಡು, ಟಮಕ ಕೆವಿಕೆ (ಎರಡೂ ಕೋಲಾರ ಜಿಲ್ಲೆ), ಶಿವನಿ, ಯಗಟಿ (ಎರಡೂ ಚಿಕ್ಕಮಗಳೂರು ಜಿಲ್ಲೆ), ಕಂಪ್ಲೀ, ಸೀರುಗುಪ್ಪ (ಎರಡೂ ಬಳ್ಳಾರಿ ಜಿಲ್ಲೆ), ಮೈಸೂರು ತಲಾ 1.

27 ನೇ ಜುಲೈ 2023 ರ ಬೆಳಗ್ಗೆ ವರೆಗಿನ ರಾಜ್ಯದ ಮಳೆ ಮುನ್ಸೂಚನೆ:

ಮುಂದಿನ 24 ಘಂಟೆಗಳು: ರಾಜ್ಯದಾದ್ಯಂತ  ಬಹುತೇಕ ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು: ರಾಜ್ಯದಾದ್ಯಂತ ಬಹುತೇಕ ಕಡೆಗಳಲ್ಲಿ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.

ಭಾರೀ ಮಳೆ ಮುನ್ನೆಚ್ಚರಿಕೆ:

ಮುಂದಿನ 24  ಘಂಟೆಗಳು: ಕರಾವಳಿಯ ಉತ್ತರ ಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಭಾರಿಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಒಂದೆರಡು ಕಡೆಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಾಗೂ ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯ ಒಂದೆರಡು ಕಡೆಗಳಲ್ಲಿ ಭಾರಿಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಬೀದರ್, ಕಲಬುರ್ಗಿ, ವಿಜಯಪುರ ಮತ್ತು ದಕ್ಷಿಣ ಒಳನಾಡಿನ ಬಳ್ಳಾರಿ, ಹಾಸನ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಮುಂದಿನ 48 ಘಂಟೆಗಳು: ಕರಾವಳಿಯ ಎಲ್ಲ ಜಿಲ್ಲೆಗಳ ಕೆಲವು ಕಡೆಗಳಲ್ಲಿ;  ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಕಲಬುರ್ಗಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರಿಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಉತ್ತರ ಒಳನಾಡಿನ ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ದಕ್ಷಿಣ ಒಳನಾಡಿನ ಹಾಸನ, ಬಳ್ಳಾರಿ, ಚಿತ್ರದುರ್ಗ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.

ಗುಡುಗು ಮುನ್ನೆಚ್ಚರಿಕೆ:

ಮುಂದಿನ 24 ಘಂಟೆಗಳು: ರಾಜ್ಯದಾದ್ಯಂತ ಒಂದೆರಡು ಕಡೆಗಳಲ್ಲಿ ಬಿರುಗಾಳಿ ಸಹಿತ ಮಿಂಚು ಗುಡುಗಿನ ಸಾಧ್ಯತೆ ಇದ್ದು, ಬಿರುಗಾಳಿಯ ವೇಗವು ಘಂಟೆಗೆ 40-50 ಕಿ.ಮೀ. ಇರುವ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ: ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-45 ಕಿಮೀ ಇಂದ 55 ಕಿಮೀ ವೇಗದಲ್ಲಿ ಬೀಸುವ ವಾತಾವರಣವಿರುತ್ತದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚಿಸಲಾಗಿದೆ.

ಮುಂದಿನ 24 ಘಂಟೆಗಳ ಹೊರನೋಟ: ರಾಜ್ಯದ ಹವಾಮಾನದಲ್ಲಿ ಹೆಚ್ಚಿನ ಬದಲಾವಣೆ ಇಲ್ಲ.

27 ನೇ ಜುಲೈ 2023 ರ ಬೆಳಗ್ಗೆವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:

ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಮೋಡ ಕವಿದ ಆಕಾಶವಿರುತ್ತದೆ. ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.   ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ.  ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 20  ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.

ಮುಂದಿನ 48 ಗಂಟೆಗಳು: ಬೆಂಗಳೂರು ನಗರದಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರುತ್ತದೆ. ಹಗುರದಿಂದ ಸಾಧಾರಣ ಮಳೆಯಾಗುವ ಬಹಳಷ್ಟು ಸಾಧ್ಯತೆ ಇದೆ.   ಕೆಲವೊಮ್ಮೆ ಬಲವಾದ ಮೇಲ್ಮೈ ಗಾಳಿ ಬೀಸುವ ಸಾಧ್ಯತೆ ಇದೆ.  ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 20  ಡಿಗ್ರಿ ಸೆಲ್ಷಿಯಸ್ ಇರುವ ಬಹಳಷ್ಟು ಸಾಧ್ಯತೆಗಳಿರುತ್ತದೆ.

LEAVE A REPLY

Please enter your comment!
Please enter your name here