ಮೈಕೋರಿಜಾ, ಫಲವತ್ತು ಮಣ್ಣಲ್ಲಿ ಕಂಡು ಬರುವ ಒಂದು ಬಗೆಯ ಫಂಗಿ ಜೀವಿ. ಈ ಸೂಕ್ಷ್ಮಜೀವಿಗಳು ಗಿಡಗಳ ಬೆಳವಣಿಗೆಯಲ್ಲಿ ಈ ಜೀವಿಗಳು ವಹಿಸುವ ಪಾತ್ರ ಗಮನಿಸುವುದೇ ಒಂದು ರೋಚಕ ಅನುಭವ.
ಸಸ್ಯಗಳ ಬೇರುಗಳ ಮೂಲಕ ಪೋಷಕಾಂಶಕಗಳನ್ನು ಒದಗಿಸುವ ಪ್ರಕ್ರಿಯೆ ನಮ್ಮನ್ನು ವಿಸ್ಮಯಗೊಳಿಸುತ್ತದೆ. ರೋಗಗಳಿಂದ ಗಿಡಗಳ ಮುಕ್ಕಾಗದಂತೆ ನೋಡಿಕೊಳ್ಳುವ ಈ ಫಂಗಿ ಜೀವಾಣು, ತನ್ನಲ್ಲಿರುವ ಅಸಾಮಾನ್ಯ ನೆಟ್ ವರ್ಕ್ ವ್ಯವಸ್ಥೆಯಿಂದ ಮಣ್ಣಲ್ಲಿರುವ ಪ್ರಾಕೃತಿಕ ವಲಯವನ್ನೇ ಚಲನಶೀಲವನ್ನಾಗಿ ಮಾರ್ಪಡಿಸುತ್ತದೆ. ಮಣ್ಣಿನ ರಚನೆ ಸುಧಾರಿಸುವುದರ ಮೂಲಕ ಮಣ್ಣಲ್ಲಿ ಇಂಗಾಲಾಂಶ ವೃದ್ಧಿಸಲು ಸಹಕರಿಸುತ್ತದೆ.
ಇಷ್ಟೆಲ್ಲಾ ಉಪಯುಕ್ತ ಕೆಲಸ ಮಾಡುವ ಇಂತಹ ಮಣ್ಣು ಜೀವಾಣುಗಳನ್ನು ನಾವು ಹಲವಾರು ವರ್ಷಗಳಿಂದಲೂ ನಿರ್ಲ್ಯಕ್ಷಿಸುತ್ತಲೇ ಇದ್ದೇವೆ. ಮಣ್ಣಲ್ಲಿರುವ ಜೀವಾಣುಗಳನ್ನು ರಕ್ಷಿಸುವಂತಹ ಯಾವುದೇ ಬಗೆಯ ಕೆಲಸಗಳನ್ನು ಮಾಡುತ್ತಿಲ್ಲ.
ಲೇಖಕರು: ಸಾಯಿಲ್ ವಾಸು
Hege rakshisbahudhu antha helidhre prayathna madthivi