ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದೆ. ಹಾಗೆ ಕೃಷಿ ಕ್ಷೇತ್ರದತ್ತ  ಮರಳುತ್ತಿರುವ ಪದವೀಧರರ ಸಂಖ್ಯೆ ಕಡಿಮೆಯಾಗಿದೆ. ವಿಶೇಷವೆಂದರೆ ಕೃಷಿ ಕ್ಷೇತ್ರದಲ್ಲಿ ವಿದ್ಯಾವಂತ ಯುವಕರು ತೊಡಗಿಕೊಂಡಿರೋದು ಒಂದು ರೀತಿಯ ಕೃಷಿಕ್ರಾಂತಿ ಅಂತಲೇ ಹೇಳಬಹುದು. ಕ್ರಮವಾಗಿ  ಇಂಜಿನಿಯರಿಂಗ್ ಮತ್ತು  ಎಂ.ಬಿ.ಎ. ಪದವೀಧರರಾಗಿರುವ  ಅಭಿಷೇಕ್ ಧಮ ಮತ್ತು ವಿಶಾಲ್ ಶೌಕೀನ್  ತಮ್ಮ ಸಂಪೂರ್ಣ ಜೀವನವನ್ನು ವ್ಯವಸಾಯಕ್ಕಾಗಿ ಮೀಸಲಿಡುವ ನಿರ್ಧಾರ ಮಾಡಿದ್ದಾರೆ. ಯುವ ಕೃಷಿಕರಾಗಿ ತಮ್ಮ ಪ್ರಯಾಣ ಆರಂಭಿಸಿದ್ದಾರೆ.

ಆರಂಭದಲ್ಲಿ ಹಲವು ಕುತೂಹಲಗಳಿದ್ದವು: ಭಾರತದ ರಾಜಧಾನಿ ನವದೆಹಲಿ ಸಮೀಪದ ಪಲ್ಲಾ ಗ್ರಾಮದಲ್ಲಿ ವಾಸವಾಗಿರುವ ಅಭಿ‍ಷೇಕ್ ಧಮ ತಾವು ಕೃಷಿಕೆಲಸ ಮಾಡುವುದಾಗಿ ತಮ್ಮ ಕುಟುಂಬದ ಜೊತೆ ಅಭಿಷೇಕ್ ಹಂಚಿಕೊಂಡಾಗ ಸ್ವತಃ ಅವರ ಕುಟುಂಬವೇ ಅದನ್ನು ನಂಬಿರಲಿಲ್ಲವಂತೆ. ನೈಸರ್ಗಿಕ ಗೊಬ್ಬರಗಳನ್ನು ಬಳಸಿಕೊಂಡು ಪಾರಂಪರೀಕ ಕೃಷಿವಿಜ್ಞಾನವನ್ನು ಅನುಸರಿಸಲು ಮುಂದಾದಾಗ ಊರಿನ ಜನರೇ ಮಿಸ್ಟರ್ ಸೀವಿಯಾ ಎಂದು ಅಪಹಾಸ್ಯ ಮಾಡಿದ್ದರಂತೆ.

ಇನ್ನೂ ಗೋವಾ ಮೂಲದ ಅಜಯ್ ನಾಯಕ್  ಓದಿದ್ದು ಕಂಪ್ಯೂಟರ್ ಸೈನ್ಸ್ ನಂತರ ಇಂಜಿನಿಯರ್ ವೃತ್ತಿ ಆರಂಭಿಸಿದರು. ಆದರೆ  ಇದೀಗ ತರಕಾರಿಗಳ ಗುಣಮಟ್ಟ ಕಾಯ್ದುಕೊಳ್ಳಲು ನೈಸರ್ಗಿಕವಾಗಿ ಯಾವ ರೀತಿ ತರಕಾರಿಗಳ ಕೃಷಿ ಮಾಡಬಹುದು ಎಂಬುದರ ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. ಅದಷ್ಟೆ ಅಲ್ಲದೆ ಲೆಸೆಟ್ರಾ ಅಗ್ರೈಟ್ಸ್ ಪ್ರಾರಂಭಿಸಿದ್ದಾರೆ. ಈ ಮೂಲಕ ಮಣ್ಣಿನ ಬದಲಿಗೆ ಪೌಷ್ಟಿಕ ಸಮೃದ್ಧ ನೀರನ್ನು ಬಳಸಿಕೊಳ್ಳುವ ಭಾರತದ ಮೊದಲ ಒಳಾಂಗಣ ಲಂಬ ಜಲಕೃಷಿ ತೋಟ ಮಾಡಿದ್ದಾರೆ. ಯಾವುದೇ ಕೀಟನಾಶಕಗಳಿಲ್ಲದೆ  ಸಾಂಪ್ರಾದಾಯಿಕವಾಗಿ ಆರೋಗ್ಯಕರ ಆಹಾರ ಬೆಳೆಯುವುದು ಅಜಯ್ ನಾಯಕ್ ಉದ್ದೇಶವಾಗಿದೆ.  ಸುಮಾರು 10 ವರ್ಷಗಳ ಕಾಲ  ಐ.ಟಿ ಕ್ಷೇತ್ರದಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿರುವ ಅಜಯ್ ನಾಯಕ್ ಅವರ ಕೃಷಿ  ಚಟುವಟಿಕೆಗಳು ಯುವಕರಿಗೆ ಮಾದರಿಯಾಗಿವೆ.

ಅಭಿಷೇಕ್ ಅವರ ತಂದೆ ಸಿಂಘಾನಿಯಾ ರಾಸಾಯನಿಕಗಳನ್ನ ಕೃಷಿಗೆ ಬಳಸುವುದರಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ತಂದೆಯವರ ಅನಾರೋಗ್ಯವೆ ಅಭಿಷೇಕ್ ಗೆ ಕೃಷಿಯತ್ತ ಆಸಕ್ತಿ ಮೂಡಲು ಕಾರಣವಾಗಿತ್ತು. ಜೈವಿಕ ಕೃಷಿ ವಿಧಾನಗಳನ್ನು ಅನುಸರಿಸುವ ಮೂಲಕ ಉತ್ತಮವಾಗಿ ಆಹಾರ ಬೆಳೆಗಳನ್ನು ಹೇಗೆ ಬೆಳೆಯಬಹುದು ಎಂದು ತರಬೇತಿ ಸಹ ನೀಡುತ್ತಿದ್ದಾರೆ.

ಇನ್ನೂ ಅಭಿಷೇಕ್ ಸಂಬಂಧಿ ವಿಶಾಲ್ ‍ಷೌಕೀನ್ ಅವರಿಗೂ ಗೂ ಸಹ ಕೃಷಿ ಕ್ಷೇತ್ರದಲ್ಲಿ ನೈಸರ್ಗಿಕ ಕೃಷಿ ಅನುಸರಿಸುವ ಮೂಲಕ ಹಲವು ಪ್ರಯೋಗಗಳನ್ನು ಮಾಡುವ ಬಯಕೆಯಂತೆ. ಹಾಗಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಓದಿರುವುದು ಇಂಜಿನಿಯರಿಂಗ್ ಆದರೂ ಕೃಷಿ ಮಾಡುವುದು ತನಗೆ ಹೆಮ್ಮೆಯ ವಿಷಯ ಎನ್ನುತ್ತಾರಿವರು. ಪಾಲಿಥೀನ್ ನಿಂದ ತಯಾರಿಸಿದ ಹಸಿರುಮನೆ , ಪಾಲಿಥಿನ್ ಹೌಸ್ ಕುರಿತು ಅಧ್ಯಯನ ಮಾಡಿದ್ದಾರೆ. ಹನಿ ನೀರಾವರಿ ವ್ಯವಸ್ಥೆಯನ್ನು ಬಳಸಿಕೊಂಡು ಕೃಷಿ ನಡೆಸುತ್ತಿದ್ದಾರೆ. ಮಾತ್ರವಲ್ಲದೆ ಕೃಷಿ ಸಂಬಂಧಿತ ಕಾರ್ಯ ಚಟುವಟಿಕೆಗಳ ಕುರಿತು ಇತರರಿಗೆ ಮಾಹಿತಿ ನೀಡುತ್ತಿದ್ದಾರೆ.

ಇನ್ನೂ ಐಬಿಎಂ ನಲ್ಲಿ ಕಾರ್ಯ ನಿರ್ವಾಹಕ ಮ್ಯಾನೇಜರ್ ಆಗಿದ್ದ ವೆಂಕಟ್ ಅಯ್ಯರ್ ತಮ್ಮ ಮೊದಲ ಬೆಳೆ ನಾಶವಾದಾಗ ತಮ್ಮ ಕೆಲಸವನ್ನು ಬಿಟ್ಟು ಸಂಪೂರ್ಣವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡರು.  ಮುಂಬೈನಲ್ಲಿರುವ ದಹನೂ ತಾಲೂಕಿನ ಪೆತ್ ಗ್ರಾಮದಲ್ಲಿ 4.5 ಎಕರೆ ಖರೀಧಿಸಿದ ಅಯ್ಯರ್ ತಮ್ಮ ಹೊಲದಲ್ಲಿ ಹಲವು ವಿಧಧ ಕೃಷಿ ಬೆಳೆಗಳನ್ನು ಬೆಳೆಯುವ ಮೂಲಕ ಪ್ರಯೋಗ ನಡೆಸುತ್ತಿದ್ದಾರೆ.

ಸಾಂದರ್ಭಿಕ ಚಿತ್ರ

ಬೆಳಿಗ್ಗೆಯಿಂದ ರಾತ್ರಿವರೆಗೂ ಯಂತ್ರ ಮಾನವರಂತೆ ಐ.ಟಿ. ಕ್ಷೇತ್ರದಲ್ಲಿ ದುಡಿಯುತ್ತಿದ್ದ  ಇಂಜಿನಿಯರ್ ಗಳು, ಐಟಿ. ಟೆಕ್ಕಿಗಳಿಗೆ ವ್ಯವಸಾಯದ ಮೇಲೆ ಆಸಕ್ತಿ ಬಂದಿರೋದು ಒಂದು ರೀತಿಯ ಮಹತ್ತರ ಬದಲಾವಣೆ ಎಂದರೂ ತಪ್ಪಿಲ್ಲ. ಇಂಥದ್ದೊಂದು ಬದಲಾವಣೆ ಕೃಷಿ ಕ್ಷೇತ್ರದ ಬೆಳವಣಿಗೆ ಕಾರಣವಾಗಲಿದೆ ಅನ್ನೋದು ತಜ್ಞರ ಮಾತಾಗಿದೆ.

ಇಂಗ್ಲಿಷ್ ಲೇಖನ ಕೃಪೆ ಎಕನಾಮಿಕ್ ಟೈಮ್ಸ್. ಕನ್ನಡಕ್ಕೆ ಅನುವಾದಿಸಿದವರು: ರಮ್ಯ ವರ್ಷಿಣಿ . ಎ.ಎಸ್.

 

LEAVE A REPLY

Please enter your comment!
Please enter your name here