ರೈತರ ಮಕ್ಕಳ ವೃತ್ತಿಪರ ಶಿಕ್ಷಣಕ್ಕೆ ಹಣದ ಕೊರತೆಯೇ ? ಚಿಂತಿಸಬೇಡಿ

0

ಬಹುತೇಕರು ಉಳಿತಾಯ ಮಂತ್ರವನ್ನು ಜಪಿಸುತ್ತಲೇ ಇರುತ್ತಾರೆ. ಆದರೆ ಎಲ್ಲರಿಗೂ ಅದನ್ನು ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ಬರುವ ಕಡಿಮೆ ಆದಾಯದಲ್ಲಿ (ಬೆಳೆ ವಿಫಲವಾದರೆ ಕಡಿಮೆ ಆದಾಯಕ್ಕೂ ಖೋತಾ ಆಗುವ ಪ್ರಸಂಗಗಳಿವೆ) ಇವುಗಳ ಮಧ್ಯೆಯೂ ಅಷ್ಟೋ ಇಷ್ಟನ್ನು ಉಳಿತಾಯ ಮಾಡಿದರೂ ಅನಿರೀಕ್ಷಿತವಾಗಿ ಬರುವ ಕಾಯಿಲೆ ಕಸಾಲೆ ಇತ್ಯಾದಿಗಳಿಂದ ಖರ್ಚಾಗಿ ಹೋಗುತ್ತದೆ.

ಹೀಗೆಂದುಕೊಂಡೇ ಹೆಚ್ಚಿನ ಕೃಷಿಕರು ತಮ್ಮ ಮಕ್ಕಳು ವೃತ್ತಿಪರ ಶಿಕ್ಷಣಕ್ಕೆ ಸೇರ್ಪಡೆಯಾಗುವ ಹಂತದಲ್ಲಿ ವಿದ್ಯಾಭ್ಯಾಸದ ಖರ್ಚುವೆಚ್ಚಕ್ಕೆ ಹೆದರಿ ಖರ್ಚಿಲ್ಲದ ಯಾವುದಾರೊಂದು ಕೋರ್ಸಿಗೆ ಸೇರ್ಪಡೆಯಾಗು ಎಂದು ಹೇಳುತ್ತಾರೆ.  ವೆಚ್ಚಕ್ಕೆ ಬೆದರಿ ಹೀಗೆ ಹೇಳದೇ ಮಕ್ಕಳು ಇಷ್ಟಪಟ್ಟ ವೃತ್ತಿಪರ ಕೋರ್ಸುಗಳಿಗೆ ಅವರನ್ನು ಸೇರಿಸಬಹುದು.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಅಧಿಕಾರಿಯಾಗಿರುವ ಲಿಂಗರಾಜ್ ರೊಡ್ಡಣವರ್ ಅವರು ವಿದ್ಯಾರ್ಥಿಗಳಿಗೆ ವೃತ್ತಿಪರ ಶಿಕ್ಷಣಕ್ಕಾಗಿ ದೊರೆಯುವ ಬಡ್ಡಿರಹಿತ ಸಾಲದ ಬಗ್ಗೆ ಸವಿವರ ಮಾಹಿತಿ ನೀಡಿದ್ದಾರೆ. ಅವರು ನೀಡಿರುವ ಮಾಹಿತಿ ಮುಂದಿದೆ.

ಲಿಂಗರಾಜ್ ರೊಡ್ಡಣವರ್

ಇದೀಗ CET/NEET result ಬಂದಿವೆ. ಲಕ್ಷಾಂತರ ಯುವ ವಿದ್ಯಾರ್ಥಿಗಳು ತಮ್ಮ ಕನಸಿನ ಕೋರ್ಸಿಗೋ, ತಮ್ಮಿಷ್ಟದ ಕಾಲೇಜಿಗೋ/ ಯೂನಿವರ್ಸಿಟಿ/ ಸಂಸ್ಥೆಗೋ ಪ್ರವೇಶ ಪಡೆಯಲು ತಯಾರಿ ನಡೆಸಿರುತ್ತಾರೆ. ಎಷ್ಟೋ ವಿದ್ಯಾರ್ಥಿಗಳಿಗೆ ಸೀಟು ಸಿಕ್ಕರೂ ಆರ್ಥಿಕ ಚೈತನ್ಯವಿಲ್ಲದೇ ಕಡಿಮೆ ಫೀಜಿನ ಕೋರ್ಸು/ ಕಾಲೇಜಿಗೆ ಸೇರಿಕೊಳ್ಳಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ.

ಅಂಥವರಿಗೆ ದಯವಿಟ್ಟು ಈ ಮೆಸೇಜನ್ನ ತಿಳಿಸಿರಿ. ಬಹುತೇಕ ಎಲ್ಲಾ ಬ್ಯಾಂಕುಗಳೂ ವಿದ್ಯಾರ್ಥಿಗಳು ತಾವು ಇಷ್ಟಪಟ್ಟು ಪ್ರವೇಶ ಪಡೆದ   ಕೋರ್ಸು/ಕಾಲೇಜುಗಳಲ್ಲಿ ಓದಲು ಹಣದ ಸಹಾಯ, ಸಾಲದ ರೂಪದಲ್ಲಿ ನೀಡುತ್ತವೆ.

ವೃತ್ತಿಪರ ಕೋರ್ಸುಗಳಿಗೆ ಮಾತ್ರ

👉🏽 B.Sc Agri, Horti, Forestry, Fisheries, BVSc,

 👉🏽 BE, B.Tech,

 👉🏽B.Ed.,

 👉🏽LLB, MBA, BBA

 👉🏽MBBS, BAMS, BHMS, BDS, Nursing

 👉🏽 JOURNALISM,

👉🏽 Diploma Course ಗಳು, NTTF

ಯಾವ ಬ್ಯಾಂಕುಗಳಲ್ಲಿ ಪಡೆಯುಬಹುದು ?

ಎಲ್ಲ ರಾಷ್ಟ್ರೀಕೃತ/ಸರಕಾರಿ ಬ್ಯಾಂಕುಗಳಲ್ಲಿ (ಕೆನರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, SBI, PNB, ಯೂನಿಯನ್ ಬ್ಯಾಂಕು, ಬ್ಯಾಂಕ್ ಆಫ್ ಇಂಡಿಯಾ), ನಿಮ್ಮ ಹತ್ತಿರದ ಗ್ರಾಮೀಣ ಬ್ಯಾಂಕು (KVGB ಅಥವಾ KGB) ಅಥವಾ ಯಾವುದೇ ಖಾಸಗಿ ಬ್ಯಾಂಕುಗಳಲ್ಲೂ  (Karantaka Bank, HDFC, AXIS, ICICI, Federal Bank) ಆದಷ್ಟೂ ಸರಕಾರಿ ಬ್ಯಾಂಕುಗಳಲ್ಲಿ ಪಡೆಯುವುದೇ ಒಳಿತು.

ಸಾಲ ಪಡೆಯಲು ಅಗತ್ಯ ಇರುವ  ದಾಖಲೆ ಪತ್ರಗಳು

1) 10th/ 12th Exam marks Card

2) NEET/CET Ranking certificate

3)NEET/CET ಯವರು ನಿಮಗೆ ಯಾವ ಕಾಲೇಜು/ಕೋರ್ಸಿಗೆ allot ಮಾಡಿದಾರೆ ಅನ್ನುವ Allotment Letter

4) ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್

5 ) ನೀವು ಹದಿನೆಂಟು ವರ್ಷದ ಒಳಗಿನವರಾಗಿದ್ದರೆ ನಿಮ್ಮ ಪಾಲಕರು ನಿಮ್ಮ ಜೊತೆ ಜಂಟಿಯಾಗಿ ಸಾಲ ಪಡೆಯಬೇಕು (ಪಾಲಕರ ಆಧಾರ್/ವೋಟರ್/ಪ್ಯಾನ್ ಕಾರ್ಡ್)

6) ನೀವು ಪ್ರವೇಶ ಪಡೆದಿರುವ ಕಾಲೇಜಿನ Principal/Dean ಕಡೆಯಿಂದ Bonafide Certificate/ ಪ್ರವೇಶ ಪಡೆದಿರುವ ಬಗ್ಗೆ ದೃಢೀಕರಣ ಪತ್ರ

7) ನೀವು ಪ್ರವೇಶ ಪಡೆದಿರುವ ಕಾಲೇಜಿನ Principal/Dean ಕಡೆಯಿಂದ ನಿಮ್ಮ ಕೋರ್ಸು ಮುಗಿಸಲು ಬೇಕಾಗುವ ಒಟ್ಟು ಖರ್ಚು ವೆಚ್ಚಗಳ

(ಹಾಸ್ಟೆಲ್, ಮೆಸ್, ಕಾಲೇಜ್ ಫೀ, ಬಸ್ ಪಾಸ್, ಲ್ಯಾಪ್ ಟಾಪ್, ಅಗತ್ಯ ಪುಸ್ತಕಗಳ) ಕುರಿತಾಗಿ ಒಂದು ಅಂದಾಜು ಪತ್ರ Expenditure estimation letter.

ಸಾಲಕ್ಕೆ ಜಾಮೀನು ಹಾಗೂ ಭದ್ರತೆ

₹ 4,00,000/- ರೂಪಾಯಿಗಳವರೆಗೆ ಯಾವುದೇ ತರಹದ ಜಾಮೀನು ಅವಶ್ಯಕತೆ ಇಲ್ಲ, ಯಾವುದೇ Security (ಆಸ್ತಿ ಅಡ) ಅವಶ್ಯಕತೆ ಇಲ್ಲ. ನಿಮ್ಮ ಪಾಲಕರ ಜೊತೆ ಜಂಟಿಯಾಗಿ ಸಾಲವನ್ನ ನೀಡುತ್ತಾರೆ.

₹ 4,00,000/- ಮೇಲಿನ 7,50,000/- ವರೆಗಿನ ಸಾಲಕ್ಕೆ ಯಾವುದೇ ತರಹದ ಆಸ್ತಿ security ಯ ಅವಶ್ಯಕತೆ ಇಲ್ಲ, ಆದರೆ ಜಾಮೀನು(Guarantor ) ಬೇಕು. ₹ 7,50,000/-  ಕ್ಕಿಂತ ಹೆಚ್ಚಿನ ಸಾಲಕ್ಕೆ ಜಾಮೀನು ಹಾಗೂ ಆಸ್ತಿ ಅಡಮಾನ ಬೇಕಾಗಬಹುದು

ಸಾಲ ತೀರಿಸುವುದು ಹೇಗೆ

ಸಾಲವನ್ನು ನಿಮ್ಮ ಶಿಕ್ಷಣ ಮುಗಿದು, ಕೆಲಸ ಸಿಕ್ಕ 6 ತಿಂಗಳಿಗೆ ಅಥವಾ ಶಿಕ್ಷಣ ಮುಗಿದು (ಕೆಲಸ ಸಿಗದೇ ಇದ್ದರೂ) 1 ವರ್ಷಕ್ಕೆ ಸಾಲದ ಕಂತನ್ನ ತುಂಬಲು ಪ್ರಾರಂಭಿಸಲೇಬೇಕು.

ಬಡ್ಡಿ

ಬ್ಯಾಂಕುಗಳು ವಾರ್ಷಿಕ 12% ರಿಂದ14% ವರೆಗೂ ಬಡ್ಡಿಯನ್ನು ವಿಧಿಸುತ್ತವೆ.  ನಿಮ್ಮ ಸಾಲದ ಮರುಪಾವತಿ ಕಂತು ಶುರೂ ಆಗುವವರೆಗೂ ತಗುಲುವ ಬಡ್ಡಿಯನ್ನು ಸಂಪೂರ್ಣವಾಗಿ ಕೇಂದ್ರ ಸರಕಾರ (ಹೆಚ್ಚಿನ ಮಾಹಿತಿಗೆ CSIS ಅನ್ನು Google ಮಾಡಿ ನೋಡಿ) ಬಡ್ಡಿ ಸಬ್ಸಿಡಿಯಾಗಿ ನೀಡುತ್ತದೆ. 2022-23 ಶೈಕ್ಷಣಿಕ ವರ್ಷದಿಂದ ಎಲ್ಲಾ ಜಾತಿ/ಧರ್ಮದ (ಪೋಷಕರ ಆದಾಯಕ್ಕೆ ಮಿತಿ ಇದೆ) ಪ್ರತಿಭಾವಂತ ವಿದ್ಯಾರ್ಥಿಗಳು ತಾಂತ್ರಿಕ/ವೃತ್ತಿಪರರ ಕೋರ್ಸುಗಳಿಗೆ ಬಡ್ಡಿ ರಹಿತ ಸಾಲವನ್ನ ಪಡೆಯಬಹುದು.

ಶಿಕ್ಷಣ ಸಾಲ ನಿರಾಕರಿಸುವಂತಿಲ್ಲ

ನೀವು CET/ಪ್ರವೇಶ ಪರೀಕ್ಷೆಯ ಮುಖಾಂತರ ಯಾವುದೇ ವೃತ್ತಿಪರ/   professional course ಗೆ ಮೆರಿಟ್ ಸೀಟ್ ಪಡೆದಿದ್ದೇ ಆದಲ್ಲಿ, ನಿಮಗೆ ಯಾವುದೇ ಬ್ಯಾಂಕಿನವರೂ ಶಿಕ್ಷಣ ಸಾಲವನ್ನ ನಿರಾಕರಿಸುವಂತಿಲ್ಲ ಹಾಗಿಲ್ಲ. ಇಲ್ಲಿ ನೀಡಿದ

https://www.vidyalakshmi.co.in

ವಿದ್ಯಾ ಲಕ್ಷ್ಮೀ ಪೋರ್ಟಲ್ ನಲ್ಲಿ ನಿಮ್ಮ (SB Account) ಉಳಿತಾಯ ಖಾತೆ ಇರುವ ಬ್ಯಾಂಕಿಗೆ ಅರ್ಜಿ ಹಾಕಬಹುದು.

ನೆನಪಿಡಿ, ಹಣದ ಕೊರತೆಯಿಂದಾಗಿ ಯಾವ ಪ್ರತಿಭಾವಂತ ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳುವುದು ಒಂದು ನಾಗರಿಕ ಸಮಾಜದ/ ಸರಕಾರದ ಜವಾಬ್ದಾರಿ. ಹಾಗೆಯೇ ಪಡೆದ ಸಾಲವನ್ನು ಸರಿಯಾಗಿ ಸಕಾಲದಲ್ಲಿ ತುಂಬಿ ಸಮಾಜದ ಋಣ ತೀರಿಸುವುದೂ ಆ ವಿದ್ಯಾರ್ಥಿಗಳ ಕರ್ತವ್ಯ.

LEAVE A REPLY

Please enter your comment!
Please enter your name here