ಬೆಂಗಳೂರು: 7 ಮೇ (ಅಗ್ರಿಕಲ್ಚರ್‌ ಇಂಡಿಯಾ)  ರಾಜ್ಯ ಬಜೆಟ್‌ನಲ್ಲಿ ಘೋಷಿಸಿದಂತೆ ನಾಳೆ ವಿಶ್ವಬ್ಯಾಂಕ್ ನೆರವಿನ ರಾಷ್ಟ್ರೀಯ ಮಟ್ಟದ ವರ್ಲ್ಡ್ ಬ್ಯಾಂಕ್ ಅಸಿಸ್ಟೆಡ್ ” ರಿವಾರ್ಡ್” ಉದ್ಘಾಟನೆ ಹಾಗೂ ರೈತ ಉತ್ಪಾದಕ ಸಂಸ್ಥೆಗಳಿಗೆ ಸ್ಪರ್ಧೆಗಳ ಬ್ಯ್ಯಾಂಡಿಂಗ್ ಲೋಗೋ ಲೋಕಾರ್ಪಣೆಗೊಳ್ಳಲಿದೆ.

ಮೇ‌8 ರಂದು ಜಿಕೆವಿಕೆ ರಾಜೇಂದ್ರ‌ಪ್ರಸಾದ್ ಅಂತಾರಾಷ್ಟ್ರೀಯ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಈ ಕಾರ್ಯಕ್ರಮಗಳು ಆರಂಭವಾಗಲಿದೆ. ವಿಶ್ವ ಬ್ಯಾಂಕ್ ನೆರವಿನ ‘ ಪುರಸ್ಕಾರ ” ಕಾರ್ಯಕ್ರಮದ ರಾಷ್ಟ್ರೀಯ ಮಟ್ಟದ ಉದ್ಘಾಟನೆಯನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ನೆರವೇರಿಸಲಿದ್ದಾರೆ.  ಅತ್ಯುತ್ತಮ ಎಫ್‌ಪಿಒಎಸ್‌ಗಾಗಿ ಭಾರತ ಸರ್ಕಾರದ ಪ್ರಶಸ್ತಿಯನ್ನು ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಉಕ್ಕಿನ ಸಚಿವ ಫಗ್ಗನ್ ಸಿಂಗ್ ಕುಲಸ್ತೆ  ಬಿಡುಗಡೆ ಮಾಡಲಿದ್ದಾರೆ.

ರಿವಾರ್ಡ್” ಕಾರ್ಯಕ್ರಮದ ಸಾಕ್ಷ್ಯಚಿತ್ರವನ್ನು ಒಡಿಶಾದ ಕೃಷಿ ಮತ್ತು ರೈತರ ಸಬಲೀಕರಣ ಸಚಿವ ಅರುಣ್ ಕುಮಾರ್ ಸಾಹೂ ಬಿಡುಗಡೆ ಮಾಡಲಿದ್ದಾರೆ ಹಾಗೂ ರೈತೋತ್ಪಾದಕ ಸಂಸ್ಥೆಗಳಿಗೆ ಯೂನಿಫಾರಂ ಆಪ್ ಬ್ರ್ಯಾಂಡಿಂಗ್ ಸ್ಪರ್ಧೆಯನ್ನು ಕೇಂದ್ರದ ರಾಜ್ಯ ಕೃಷಿ ಮತ್ರು ರೈತರ ಕಲ್ಯಾಣಾಭಿವೃದ್ಧಿ ಸಚಿವೆ ಶೋಭಾ ಕರಂದ್ಲಾಜೆ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದ್ದಾರೆ.

ಏನಿದು ರಿವಾರ್ಡ್ :

ವಿಶ್ವಬ್ಯಾಂಕಿನ ನೆರವಿನೊಂದಿಗೆ ಕರ್ನಾಟಕ ಮತ್ತು ಓಡಿಶಾ ರಾಜ್ಯಗಳಲ್ಲಿ ರಿವಾರ್ಡ್ ಯೋಜನೆಯನ್ನು ಮುಂದಿನ ಐದು ವರ್ಷ ಕರ್ನಾಟಕ‌ ಸರ್ಕಾರದಿಂದ 30 % ರಷ್ಟು ಅನುದಾನ ಭೂ ಸಂಪನ್ಮೂಲ ಸಮೀಕ್ಷೆಯನ್ನು ಕೈಗೊಂಡು ರೈತರಿಗೆ ಮಣ್ಣಿನ‌ ಭೌತಿಕ ಮತ್ತು ರಾಸಾಯನಿಕ‌ಗುಣಗಳ ಮಾಹಿತಿ ಸಂಗ್ರಹಿಸಿ ರೈತರಿಗೆ ವೈಜ್ಞಾನಿಕ ಮಾಹಿತಿ ನೀಡಲಾಗುವುದು.ಯೋಜನೆಯಲ್ಲಿ ಜಲಾನಯನ ಉತ್ಕೃಷ್ಟತಾ ಅಧ್ಯಯನ‌ ಕೇಂದ್ರ ಸ್ಥಾಪಿಸಿ ರಾಷ್ಟ್ರ‌ಮತ್ತು ರಾಜ್ಯಮಟ್ಟದಲ್ಲಿ ಜಲಾನಯನ‌ ನಿರ್ವಹಣೆ ತರಬೇತಿಯನ್ನು ಪಾಲುದಾರರಿಗೆ ನೀಡಲಾಗುವುದು.ರಿವಾರ್ಡ್ ಯೋಜನೆಯ ಅನುಷ್ಠಾನದಿಂದ ಜಲಾನಯನ ಅಭಿವೃದ್ಧಿಯ 7-8 ವರ್ಷಗಳಿಗಿದ್ದ ಯೋಜನಾ ಅವಧಿಯನ್ನು 2-3 ವರ್ಷಗಳಿಗೆ ಕಡಿತಗೊಳಿಸಿ ಪರಿಣಾಮಗೊಳಿಸಬಹುದಾಗಿದೆ.

ಏನಿದು ರೈತ ಉತ್ಪಾದಕ ಸಂಸ್ಥೆಗಳಿಗೆ ಸ್ಪರ್ಧೆಗಳ ಬ್ಯ್ಯಾಂಡಿಂಗ್: ಭಾರತದಲ್ಲಿ ಮೊದಲ ಬಾರಿಗೆ ಕರ್ನಾಟಕ ರಾಜ್ಯವು ರೈತ ಉತ್ಪಾದಕ ಸಂಸ್ಥೆಗಳ ಮೂಲಕ , ಅತಿ ಸಣ್ಣ ರೈತರನ್ನು ಒಗ್ಗೂಡಿಸಿ ಅವರ ಉತ್ಪನ್ನಗಳಿಗೆ ವಿಶಿಷ್ಟ ಹಾಗೂ ವಿನೂತನವಾದ ಬ್ರಾಂಡಿಂಗ್ ಅನ್ನು ವಿನ್ಯಾಸಗೊಳಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸುವ ಉದ್ದೇಶ ಹಾಗೂ ಸ್ವಾವಲಂಬಿ ರೈತ ಉತ್ಪನ್ನದಿಂದ ಮಾರಾಟದವರೆಗೂ ಲಾಭಪಡೆಯಲು ಅನಾವರಣಗೊಳಿಸಲಾಗುತ್ತಿದೆ ಸುಂದರವಾದ ಬ್ರಾಂಡ್ ಹೆಸರು, ವಿಶಿಷ್ಟ ಟ್ಯಾಗ್ ಲೈನ್ ಮತ್ತು ಆಕರ್ಷಕವಾದ ಲೊಗೋ ರೂಪಿಸಲು ಅತ್ಯುತ್ತಮವಾದ ಬ್ರಾಂಡ್ ಹೆಸರು . ಲೋಗೊ ಮತ್ತು ವಿಶಿಷ್ಟ ಟ್ಯಾಗ್ ಲೈನ್ ಅನ್ನು ಗುರುತಿಸಿ ಬಹುಮಾನ ನೀಡಲಾಗುವುದು.
ಸೃಜನಾತ್ಮಕ ಏಕರೂಪದ ಬ್ರಾಂಡ್‌ನ್ನು ವಿನ್ಯಾಸಗೊಳಿಸಲು ಪ್ರಾರಂಭಿಕ ಹಂತವಾಗಿ ನಾಳೆ ಸ್ಪರ್ಧೆಯನ್ನು ಅನಾವರಣಗೊಳಿಸಲಾಗುತ್ತಿದೆ . ಇನ್ನು ಇದರೊಂದಿಗೆ ಪ್ರಮುಖವಾಗಿ 100ಸಸ್ಯ ಆರೋಗ್ಯ ಚಿಕಿತ್ಸಾ ವಾಹನ “ಕೃಷಿ ಸಂಜೀವಿನಿ” ವಾಹನಗಳು ಲೋಕಾರ್ಪಣೆಗೊಳ್ಳಲಿವೆ. ಏಕರೂಪದ ಬ್ಯಾಂಡ್ ವಿನ್ಯಾಸ ಸ್ಪರ್ಧೆಯ ವಿಜೇತರನ್ನು ಮುಖ್ಯಮಂತ್ರಿಗಳು ಗೌರವಿಸಿ ಪ್ರಶಸ್ತಿಗಳನ್ನು ವಿತರಿಸಲಿದ್ದಾರೆ.

LEAVE A REPLY

Please enter your comment!
Please enter your name here