ಕೃಷಿಮೇಳ: ಮಾಹಿತಿ ಪ್ರದರ್ಶನ ಮಳಿಗೆ ಆಕರ್ಷಣೆ

0

ಬೆಂಗಳೂರು, ನವೆಂಬರ್ 17: ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಆಯೋಜಿಸಿರುವ ಕೃಷಿಮೇಳದಲ್ಲಿ ನಿರ್ಮಿಸಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ರಾಜ್ಯ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಪ್ರದರ್ಶನದ ಮಳಿಗೆ ವೀಕ್ಷಕರ ಪಾಲಿಗೆ ಸರ್ಕಾರದ ಸೌಲಭ್ಯಗಳ ಮಾಹಿತಿ ಕೋಶವಾಗಿ ಮಾರ್ಪಡಿಸಿದೆ.

ಕೃಷಿಮೇಳದ ಮಳಿಗೆಗಳ ಪ್ರದೇಶದಲ್ಲಿ ಮೊದಲ ಸಾಲಿನಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಹಿತಿ ಪ್ರದರ್ಶನ ಮಳಿಗೆಯ ವಿನ್ಯಾಸಯು ವಿಶೇಷವಾಗಿದ್ದು, ಛಾಯಾಚಿತ್ರಗಳನ್ನು ತೆಗೆಸಿಕೊಳ್ಳಲು ಇಚ್ಛಿಸುವ ಆಸಕ್ತರಿಗೆ ಆಕರ್ಷಣೆಯ ಜೊತೆಯಲ್ಲಿ ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಸ್ಥಳವಾಗಿದೆ.

ಮಾಹಿತಿ ಪ್ರದರ್ಶನ ಮಳಿಗೆಯಲ್ಲಿ ಅಳವಡಿಸಿರುವ ಫಲಕಗಳಲ್ಲಿ ಸರ್ಕಾರದ ಜನಪ್ರಿಯ ಹಾಗೂ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳ ಮಾಹಿತಿಯ ಜೊತೆಗೆ ಕನ್ನಡ ನಾಡು ನುಡಿಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳನ್ನೂ ಸಹ ಪ್ರದರ್ಶಿಸಲಾಗಿದೆ.

ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಕಾರ್ಯಕ್ರಮಗಳಾದ ಸರ್ಕಾರಿ ಬಸ್ ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಮಾಡಲು ಅನುವು ಮಾಡಿರುವ “ಶಕ್ತಿ” ಯೋಜನೆ, ಮನೆಯ ಯಜಮಾನಿಯರಿಗೆ ಆರ್ಥಿಕ ನೆರವು ಕಲ್ಪಿಸುವ, ಸ್ತ್ರೀ ಸ್ವಾವಲಂಬನೆ ಯತ್ತ ದಿಟ್ಟ ಹೆಜ್ಜೆ “ಗೃಹಲಕ್ಷ್ಮಿ” ಯೋಜನೆ, ಮನೆ-ಮನ ಬೆಳಗುವ ಭಾಗ್ಯದ ಬೆಳಕು “ಗೃಹಜ್ಯೋತಿ” ಯೋಜನೆ, ಪ್ರತಿ ಫಲಾನುಭವಿಗೆ 10 ಕೆಜಿ ಉಚಿತ ಆಹಾರಧಾನ್ಯ ನೀಡುವ “ಅನ್ನಭಾಗ್ಯ” ಯೋಜನೆ ಹಾಗೂ ಯುವಕರ ಶ್ರೇಯೋಭಿವೃದ್ಧಿಗಾಗಿ “ಯುವನಿಧಿ” ಯೋಜನೆಯ ಮಾಹಿತಿ ಪ್ರದರ್ಶಿಸಲಾಗಿದೆ.

ರಾಜ್ಯ ಸರ್ಕಾರದ ಜನಪ್ರಿಯ ಕಾರ್ಯಕ್ರಮ ಗಳಾದ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವ “ಜನತಾದರ್ಶನ”, ಪಿಟಿಸಿಎಲ್ ಕಾಯ್ದೆಗೆ ತಿದ್ದುಪಡಿ, ಇಂದಿರಾ ಕ್ಯಾಂಟೀನ್ ಮರು ಪ್ರಾರಂಭ, ಕ್ಷೀರಾಭಾಗ್ಯಕ್ಕೆ ಹತ್ತರ ಸಂಭ್ರಮ, ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ, ಬ್ರ್ಯಾಂಡ್ ಬೆಂಗಳೂರು, ಸಾಮಾಜಿಕ ಮಾಧ್ಯಮ ನಿರ್ವಹಣಾ ಕೋಶ ಸೇರಿದಂತೆ ಹಲವು ಪ್ರಮುಖ ಕಾರ್ಯಕ್ರಮಗಳ ಕುರಿತು ಮಾಹಿತಿ ಪ್ರದರ್ಶನ ಮಾಡಲಾಗಿದೆ.

ಅಷ್ಷೇ ಅಲ್ಲದೇ, ಮಾಹಿತಿ ಪ್ರದರ್ಶನ ಮಳಿಗೆಯಲ್ಲಿ ಭಾರತ ರತ್ನ ಪಡೆದ ಕನ್ನಡಿಗರು, ಕರ್ನಾಟಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಕರ್ನಾಟಕ ರತ್ನ ಪುರಸ್ಕೃತರು, ಭಾರತವನ್ನು ಚಂದ್ರನ ಅಂಗಳಕ್ಕೆ ತಲುಪಿಸಿದ ಇಸ್ರೋ ವಿಜ್ಞಾನಿಗಳಿಗೆ ಸರ್ಕಾರ ಅಭಿನಂದಿಸಿ ಸಲ್ಲಿಸಿರುವ ಗೌರವ, ಭಾರತದ ಸಂವಿಧಾನ ಪೀಠಿಕೆಯ ಜಾಗತಿಕ ವಾಚನದ ವಿಶ್ವ ದಾಖಲೆ, ಕರ್ನಾಟಕ 50ರ ಸಂಭ್ರಮ ವಿಷಯಗಳ ಮಾಹಿತಿಗಳು ಸಹ ಪ್ರದರ್ಶಿಸಲಾಗಿದೆ.

ಈ ಮಾಹಿತಿ ಪ್ರದರ್ಶನ ಮಳಿಗೆಯನ್ನು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಉದ್ಘಾಟಿಸಿದ್ದು, ಈ ಸಂದರ್ಭದಲ್ಲಿ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here