
RCEP ಬಗ್ಗೆ ನಾನು ಅಭಿಪ್ರಾಯ ಹೇಳುವುದಿಲ್ಲ. ಅಂಕಿ ಅಂಶ ಕೊಡುತ್ತೇನಷ್ಟೆ! ಆಸ್ಟ್ರೇಲಿಯಾ ದಲ್ಲಿ ವರ್ಷಕ್ಕೆ ಒಂಬೈನೂರಾ ಮೂವತ್ತು ಕೋಟಿ ಲೀಟರು ಹಾಲು ಉತ್ಪಾದನೆ ಆಗುತ್ತದೆ. ಜನಸಂಖ್ಯೆ ಎರಡೂವರೆ ಕೋಟಿ. ಒಬ್ಬರು ಸರಾಸರಿ ನೂರೈವತ್ತು ಲೀಟರು ಹಾಲು ಕುಡಿಯುತ್ತಾರೆ ಎಂದು ಅಂದಾಜಿಸಲಾಗಿದೆ.
ಮುನ್ನೂರೈವತ್ತು ಕೋಟಿ ಲೀಟರ್ ಹಾಲು ಖರ್ಚಾದರೂ ವರ್ಷಕ್ಕೆ ಒಂಬೈನೂರು ಕೋಟಿ ಹತ್ತಿರತ್ತಿರ ಲೀಟರುಗಳು ಹಾಗೇ ಉಳಿಯುತ್ತದೆ. ಹಾಲು ಉತ್ಪಾದಕರಿಗೆ ಲೀಟರಿಗೆ ನಲವತ್ತೇಳು ಸೆಂಟ್ ಹಣ (ಇಪ್ಪತ್ತೆರಡು ರೂ) ಕೊಡಲಾಗುತ್ತದೆ. ದೊಡ್ಡ ದೊಡ್ಡ ಶೈತ್ಯಾಗಾರ ಹಡಗುಗಳಲ್ಲಿ ಹಾಲನ್ನು ಇಂಡಿಯಾಗೆ ಸಾಗಿಸಲು ಲೀಟರಿಗೆ ಹೆಚ್ಚೆಂದರೆ ಒಂದು ರೂಪಾಯಿ ಸಾಕು.
ಸ್ವಂತಕ್ಕೆ ಒಂದು ರೂಪಾಯಿ ಇಟ್ಟುಕೊಂಡರೂ ಡೀಲರು ಸ್ಟೊರೆಜ್ ವೇಸ್ಟೇಜ್ ಎಲ್ಲಾ ತೆಗೆದು ಮೂವತ್ತು ರೂಪಾಯಿಗೆ ಲೀಟರು ಹಾಲು ಮಾರಬಹುದು. ಇವು ಎಂತಹ ದೊಡ್ಡ ಬಂಡವಾಳದ ಬಲ ಹೊಂದಿರುವ ಕಂಪನಿಗಳೆಂದರೆ ಒಂದೆರಡು ವರ್ಷ ಲಾಸ್ ಮಾಡಿಕೊಂಡು ಇನ್ನೂ ಕಡಿಮೆ ಬೆಲೆಗೆ ಕೊಟ್ಟರೂ ಕೊಟ್ಟವೇ! ಏಕೆಂದರೆ ನಮಗೆ ಹತ್ತು ರೂಪಾಯಿ ಅವರಿಗೆ ಇಪ್ಪತ್ತು ಸೆಂಟ್ ಗಳು ಮಾತ್ರ. ಅಷ್ಟು ಸಮಯ ಅಮೂಲ್ ನಂದಿನಿಗಳು ದಿವಾಳಿಯಾಗಲು ಸಾಕು. ಇಂಡಿಯಾದ ಜನಸಂಖ್ಯೆಗೆ ವಾರ್ಷಿಕ ಕನಿಷ್ಠ ಬರೋಬ್ಬರಿ ಒಂಬೈನೂರು ಕೋಟಿ ರೂಪಾಯಿ ವ್ಯವಹಾರ! ಯಾರಿಗುಂಟು ಯಾರಿಗಿಲ್ಲ?
ಇದು ಬರೀ ಹಾಲಷ್ಟೇ! ಚೀಸ್ ಮೊಸರು ಹಣ್ಣು ಕಾಳು ಇತ್ಯಾದಿ ಲೆಕ್ಕ ಹಾಕಿ. ಎಲ್ಲ ಕಡೆ ಮಷೀನಿಗಳ ಸಹಾಯದಿಂದ ಎಷ್ಟು ಅತಿ ಉತ್ಪಾದನೆ ಆಗುತ್ತಿದೆಯೆಂದರೆ ವರ್ಷಗಟ್ಟಲೆ ಶೈತ್ಯಾಗಾರದಲ್ಲಿ ಇಟ್ಟು ಮಾರಲಾಗುತ್ತದೆ. ಆಸ್ಟ್ರೇಲಿಯಾದಲ್ಲಿ ನಾವು ತಿನ್ನುವ ಹಣ್ಣುಗಳು ಒಂದು ವರ್ಷ ಹಳೆಯವು! ಹಾಲು ವಾರದಿಂದ ತಿಂಗಳು ಹಳೆಯದು. ನಂದಿನಿ ಹಾಲು ಹಿಂದಿನ ಸಂಜೆಯದು! ಈಗ ಈ ಕಸವನ್ನೆಲ್ಲ ಹಣವಾಗಿ ಇಂಡಿಯಾದಿಂದ ಹಿಂಪಡೆಯಲಾಗುತ್ತದೆ. ಕಾಂಗ್ರೆಸ್, ಬಿಜೆಪಿ ಇದರಲ್ಲಿ ಸಮಪಾಪಿಗಳಾದ್ದರಿಂದ ಇದರ ಬಗ್ಗೆ ಜನರೇ ಅಭಿಪ್ರಾಯ ರೂಪಿಸಿಕೊಳ್ಳಬೇಕು.