ಗೊಬ್ಬರಕ್ಕೆ ಜೀವಾಮೃತ ಪರ್ಯಾಯವೇ ?

0
ಲೇಖಕರು: ಪ್ರಶಾಂತ್‌ ಜಯರಾಮ್

*ಜೀವಾಮೃತ/ಗೋಕೃಪಾಮೃತಇತ್ಯಾದಿ ಇವುಗಳನ್ನು ಗೊಬ್ಬರ ಎಂದು ತಪ್ಪಾಗಿ ತಿಳಿಯಬಾರದು ಮತ್ತು ರಾಸಾಯನಿಕ ಗೊಬ್ಬರಕ್ಕೆ ಇದು ಪರ್ಯಾಯವಲ್ಲ ಎಂದು ತಿಳಿಯಬೇಕು.

*ರಾಸಾಯನಿಕ ಕೃಷಿಯಲ್ಲಿ ಬಳಸುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಕ್ಕಾಗಿ ಬದಲಿಯಾಗಿ ಸಾವಯವ ಕೃಷಿಯಲ್ಲಿ ಜೀವಾಮೃತ/ಗೋಕೃಪಾಮೃತ ಬಳಕೆ ಮಾಡಬಹುದು ಎಂದು ಕೆಲವರು ತಪ್ಪಾಗಿ ಬಿಂಬಿಸುತ್ತಿದ್ದಾರೆ ಮತ್ತು ಇದನ್ನು ರೈತರು ಕೂಡ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಜೀವಾಮೃತ/ಗೋಕೃಪಾಮೃತ ದ್ರಾವಣದ;ಲ್ಲಿ ಸೂಕ್ಷ್ಷ್ಮಾಣು ಜೀವಿಗಳಿರುತ್ತವೆ, ಸೂಕ್ಷ್ಷ್ಮಾಣುಜೀವಿಗಳು ಭೂಮಿಯಲ್ಲಿ ಲಭ್ಯವಿರುವ ಸಾವಯವ ತ್ಯಾಜ್ಯಗಳನ್ನು ವಿಘಟನೆ ಮಾಡಿ ಅದನ್ನು ತಮ್ಮ ಆಹಾರವಾಗಿ ಬಳಕೆ ಮಾಡಿಕೊಂಡು ಪೋಷಕಾಂಶವನ್ನು ಗಿಡಗಳಿಗೆ ಪೂರೈಸುತ್ತದೆ.

*ಪೋಷಕಾಂಶವಿರುವುದು ಸಾವಯವ ತ್ಯಾಜ್ಯದಲ್ಲಿ. ಅದನ್ನು ವಿಭಜಿಸಿ ಗಿಡಗಳಿಗೆ ಪೂರೈಸುವುದು ಸೂಕ್ಷ್ಮಣುಜೀವಿಗಳ ಕೆಲಸ, ಪೋಷಕಾಂಶ ಪೂರೈಸುವ ಸೂಕ್ಷ್ಷ್ಮಾಣುಗಳು ಸಹಜವಾಗಿ ಮಣ್ಣಿನಲ್ಲಿ ಲಭ್ಯವಿರುತ್ತದೆ.

*ಒಂದು ಗ್ರಾಂ ಉತ್ತಮ ದರ್ಜೆಯ ಮಣ್ಣಿನಲ್ಲಿ 30 ರಿಂದ 200 ಕೋಟಿ ಸೂಕ್ಷ್ಷ್ಮಾಣುಜೀವಿಗಳಿರುತ್ತದೆ, ಒಂದು ಎಕರೆ ಪ್ರದೇಶದ ಮೇಲಿನ ಆರು ಅಂಗುಲದ ಮೇಲ್ಮಣ್ಣಿನಲ್ಲಿ 400 ರಿಂದ 2200 ಕೆಜಿ ತೂಗುವ ಸೂಕ್ಷ್ಷ್ಮಾಣುಗಳು ಇರುವುದಾಗಿ ಮಣ್ಣು ವಿಜ್ಞಾನಕ್ಕೆ ಸಂಬಂಧಪಟ್ಟ ಸಂಶೋಧನೆಗಳು ತಿಳಿಸುತ್ತವೆ.

*ಕಾಡಿನ ಮಣ್ಣನ್ನು ಅತ್ಯುತ್ತಮ ದರ್ಜೆಯ ಮಣ್ಣೆಂದು ಪರಿಗಣಿಸಲಾಗುತ್ತದೆ, ಅಲ್ಲಿ ಮಣ್ಣು ಉತ್ತಮಗೊಳ್ಳಲು ಭೂಮಿಯ ಮೇಲೆ ಬೆಳೆದ ಅಸಂಖ್ಯಾತ ಕಳೆ /ಗಿಡಗಳು ಮತ್ತು ಮರದಿಂದ ಉದುರಿದ ಎಲೆಗಳು/ಕಾಂಡ/ಕೊಂಬೆಗಳು ಭೂಮಿಯಲ್ಲಿ ಕಳೆತ ಕಾರಣವೇ ಹೊರತು ಯಾವುದೇ ದ್ರವಣದ ಸಹಾಯದಿಂದಲ್ಲ ಮತ್ತು ಪ್ರಾಣಿಗಳ ಮಲ-ಮೂತ್ರದಿಂದಲ್ಲ.

*ಜೀವಾಮೃತ/ಗೋಕೃಪಾಮೃತಕ್ಕಿಂತ ಅಗತ್ಯವಾಗಿ ಮಣ್ಣಿನಲ್ಲಿ ಸಾವಯವ ತ್ಯಾಜ್ಯ ಇರುವಂತೆ ನೋಡಿಕೊಳ್ಳಬೇಕು,ಸಾವಯವ ತ್ಯಾಜ್ಯ ಭೂಮಿಗೆ ಸೇರಿಸದೆ ಬರೀ ಜೀವಾಮೃತ/ಗೋಕೃಪಾಮೃತ ಸೇರಿಸುವುದರಿಂದ ಯಾವುದೇ ಉಪಯೋಗವಿಲ್ಲ ಮತ್ತು ಸೂಕ್ಷ್ಮಜೀವಿಗಳು ಬದುಕುಳಿಯಲು ಆಹಾರ ಕೂಡ ಸಿಗುವುದಿಲ್ಲ.

*ಜೀವಾಮೃತ/ಗೋಕೃಪಾಮೃತ ಇಲ್ಲದೇ ಕೂಡ ಸಾವಯವ ತ್ಯಾಜ್ಯವನ್ನು ಮಣ್ಣಿಗೆ ಸೇರಿಸಿ ಮಣ್ಣನ್ನು ಉತ್ತಮಪಡಿಸಬಹುದು ,ಆದರೆ ಸಾವಯವ ತ್ಯಾಜ್ಯ ಭೂಮಿಗೆ ಸೇರಿಸದೇ ಮಣ್ಣಿನ ಗುಣಮಟ್ಟ ಸುಧಾರಿಸಲಾಗುವುದಿಲ್ಲ.

*ಭೂಮಿಯಲ್ಲಿ ಬೆಳೆಯುವ ಯಾವುದೇ ರೀತಿಯ ಕಳೆ/ಬೆಳೆಯನ್ನು ಮತ್ತೆ ಭೂಮಿಗೆ ಪ್ರಾಣಿಗಳ ಮಲ/ಮೂತ್ರದ ಮೂಲಕ ಅಥವಾ ಮುಚ್ಚಿಗೆ ಮಾಡುವುದರ ಮೂಲಕ ಹಿಂದುರಿಗಿಸುವುದರಿಂದ ಭೂಮಿಯ ಫಲವತ್ತತೆ ಕಾಪಾಡಬಹುದು.

*ಹಸು ಸಾಕಾಣಿಕೆ ಮಾಡಲಾಗದವರು ಕೂಡ ಸೂಕ್ಷ್ಷ್ಮಾಣುಜೀವಿ ದ್ರವಣ ಉಪಯೋಗಿಸುವ ಇಚ್ಛೆಯಿದ್ದಲ್ಲಿ ಕೃಷಿ ವಿಶ್ವವಿದ್ಯಾಲಯಗಳು  ಸಿದ್ದಪಡಿಸಿದ ದ್ರವಣಗಳನ್ನು ಬಳಕೆ ಮಾಡಬಹುದು. ಸೂಕ್ಷ್ಷ್ಮಾಣುಜೀವಿಗಳನ್ನು ವಿವಿಧ ಮೂಲದಿಂದ ಸ್ವತಃ ತಯಾರಿಸಿಕೊಳ್ಳಬಹದು.

*ಜೀವಾಮೃತ/ಗೋಕೃಪಾಮೃತ ಇವುಗಳಿಗೆ ಬಳಸುವ ಬೆಲ್ಲದ ಬದಲಿಯಾಗಿ ತೆಂಗಿನನೀರು/ಎಳ್ಳನೀರು ಉಪಯೋಗಿಸಬಹುದು.

*ಸಾವಯವ/ನೈಸರ್ಗಿಕ ಕೃಷಿ ಮಾಡುವ ಮುನ್ನ ಮೂಲ ತತ್ವ ಮತ್ತು ಪರಿಸರದ ಇತಿಮಿತಿಗಳನ್ನು ತಿಳಿದುಕೊಳ್ಳಬೇಕು,ಸಾವಯವ ಕೃಷಿಯನ್ನು ರಾಸಾಯನಿಕ ಕೃಷಿಯಲ್ಲಿ ಸಿಗುವ ಪದಾರ್ಥಗಳಿಗೆ ಪರ್ಯಾಯವಾಗಿ ಸಿಗುವ ಪದಾರ್ಥಗಳನ್ನು ಹಾಕಿ ಮಾಡುವ ಕೃಷಿ ಎಂಬ ತಪ್ಪು ಕಲ್ಪನೆಗಳಿಂದ ಹೊರಬರಬೇಕು.

*ಸೂರ್ಯನ ಶಕ್ತಿಯನ್ನು ಸಸ್ಯ ಸಂಪತ್ತಿನ ಮೂಲಕ ಬಂಧಿಸುವುದು,ಸಸ್ಯ ಸಂಪತ್ತನ್ನು ಭೂಮಿಗೆ ಸೇರಿಸಿ ಮಣ್ಣನ್ನು ಶಕ್ತಿಯುತ್ತಗೊಳಿಸಲು ನಿಸರ್ಗ ಸೃಷ್ಟಿಸಿರುವ ಏಕೈಕ ಮಾರ್ಗ.ನಿಸರ್ಗ ಸೃಷ್ಟಿಸಿರುವ ಮಾರ್ಗ ಬಿಟ್ಟು ಅನ್ಯ ಮಾರ್ಗಗಳು/ಪದಾರ್ಥಗಳ ಮೂಲಕ ಮಣ್ಣಿಗೆ ಶಕ್ತಿ ತುಂಬುವ ಎಲ್ಲಾ ರೀತಿಯ ಪ್ರಯೋಗಗಳು/ಪ್ರಯತ್ನಗಳು ಅರ್ಥಹೀನ.

LEAVE A REPLY

Please enter your comment!
Please enter your name here