Home Blog Page 94
ಪ್ರಾಚೀನ ಭಾರತೀಯರು ಉಪಕಾರಿ-ಅಪಕಾರಿ ಕೀಟ, ಪ್ರಾಣಿಗಳ ಬಗ್ಗೆ ಅನೇಕ ಜಾನಪದ ಕಥೆಗಳನ್ನು ಸೃಷ್ಟಿಸಿದ್ದಾರೆ. ಪ್ರಾಚೀನ ಗ್ರೀಕ್ ಸಮುದಾಯದವರು ಇದಕ್ಕೆ ಹೊರತಲ್ಲ. ಜೇಡಗಳ ರೂಪುಗೊಳ್ಳುವಿಕೆ ಕುರಿತು ಮನಮಿಡಿಸುವ ಜಾನಪದ ಕಥೆಯಿದೆ. ಇದರ ಪ್ರಕಾರ ಅರ್ಚನೆ ಎಂಬ ಹೆಸರಿನ ಕಲಾತ್ಮಕ ನೇಯ್ಗೆಗಾರ್ತಿಯೊಬ್ಬಳು ಪ್ರಾಚೀನ ಗ್ರೀಕ್ ನಲ್ಲಿ ಇದ್ದಳು. ಈಕೆ ಮಾಡುತ್ತಿದ್ದ ಕಸೂತಿ ಕೆಲಸ, ಬಟ್ಟೆಗಳ ನೇಯ್ಗೆ ಮನಮೋಹಕವಾಗಿರುತ್ತಿತ್ತು. ಈಕೆ ನೇಯ್ದ ಬಟ್ಟೆಯನ್ನು ಧರಿಸುವುದು ಪ್ರತಿಷ್ಠೆಯ ಸಂಗತಿಯಾಗಿತ್ತು. ತನ್ನ ಕೆಲಸ-ಕಾರ್ಯಗಳಿಗೆ ಅಪಾರ ಬೆಲೆಯಿದ್ದರೂ ಅರ್ಚನೆ ನಿರ್ಗವಿ, ಸರಳ ಸ್ವಭಾವದವಳು. ತನ್ನ ಕೆಲಸದಿಂದಲೇ ಆತ್ಮತೃಪ್ತಿ ಕಾಣುತ್ತಿದ್ದಾಕೆ.ಈಕೆಯ ನೇಯ್ಗೆ ಹೇಗಿರುತ್ತಿತ್ತೆಂದರೆ ದೇವತೆಗಳು...
"ನಾಡವೈದ್ಯರಿಗೆ ಗಿಡಮೂಲಿಕೆಗಳ ಬಗ್ಗೆ ಇದ್ದ ಜ್ಞಾನ ಅಪಾರ. ಆದರೆ ಅದೆಷ್ಟೋ ಅಮೂಲ್ಯ ಮಾಹಿತಿ ದಾಖಲೀಕರಣವಾಗಿಲ್ಲ" ಎಂದು ಪರಿಸರ ತಜ್ಞ ಪೂರ್ಣಚಂದ್ರ ತೇಜಸ್ವಿ ವಿಷಾದಿಸುತ್ತಿದ್ದರು. ಅರಣ್ಯದಲ್ಲಿನ ಔಷಧಯುಕ್ತ ಗಿಡಗಂಟೆ, ಬೇರುಬಳ್ಳಿಗಳ ಬಗ್ಗೆ ಇವರುಗಳಿಗೆ ತಿಳಿದಿತ್ತು. ಯಾವುದು ಯಾವ ಕಾಯಿಲೆಗೆ ಮದ್ದು ಎಂದು ಪಾರಂಪಾರಿಕ ತಿಳಿವಳಿಕೆಯಿಂದ ಅರಿತು ಚಿಕಿತ್ಸೆ ನೀಡುತ್ತಿದ್ದರು. ನಾಡಿನಲ್ಲಿದ್ದು ಕಾಡಿಗೆ ಬರುವ ನಾಡವೈದ್ಯರಿಗೆ ಈ ಪರಿಯ ಅರಿವು ಇರುವಾಗ ಇನ್ನು ಕಾಡಿನಲ್ಲಿಯೇ ಸಾವಿರಾರು ವರ್ಷಗಳಿಂದ ಜೀವನ ಮಾಡಿಕೊಂಡು ಬಂದಿರುವ ಆದಿವಾಸಿಗಳಿಗಿರುವ ಜ್ಞಾನ ಅಪಾರ. ಆದರೆ ಈ ಜ್ಞಾನದಲ್ಲಿ ದಾಖಲಾಗಿರುವುದಕ್ಕಿಂತ ದಾಖಲಾಗದೇ ಉಳಿದಿರುವುದೇ ಹೆಚ್ಚು ಎನಿಸುತ್ತದೆ....
ಕೃಷಿ ಜಮೀನಿನಲ್ಲಿ ಹೊಸದಾಗಿ ತೋಟ ಕಟ್ಟುವವರಿಗೆ ಮತ್ತು ಹಾಲಿ ತೋಟ ಕಟ್ಟಿರುವವರಿಗೆ ಉಪಯುಕ್ತವಾಗುವ ಕೆಲವು ಮಾಹಿತಿಗಳನ್ನು ವಿವರಿಸುವ ಉದ್ದೇಶದಿಂದ ಮೇಲಿನ ಚಿತ್ರದಲ್ಲಿ 04 ಎಕರೆ ಜಮೀನನಲ್ಲಿ ಬೆಳೆ/ಗಿಡ/ಮರ ಆಯೋಜನೆ ಮುನ್ನ ಯಾವ ರೀತಿ ವಿನ್ಯಾಸ ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ಅವರ ಜಮೀನಿನ ಹಿಡುವಳಿಗೆ ಅನುಗುಣವಾಗಿ ಪ್ರತಿ ಎಕರೆ ಪ್ರದೇಶವನ್ನು ಒಂದು ಭಾಗ ಮಾಡಿ, ಪ್ರತಿ ಭಾಗದಲ್ಲಿ ಅವರು ಇಚ್ಛೆಪಟ್ಟ ಬೆಳೆಗಳನ್ನು ಆಯೋಜನೆ ಮಾಡಬಹುದು. ಬೆಳೆ ಆಯೋಜನೆ ಮುನ್ನ ಜಮೀನಿನ ವಿನ್ಯಾಸ (ಲೇಔಟ್ ಪ್ಲಾನ್ ) ಕಡ್ಡಾಯವಾಗಿ ಮಾಡಿಕೊಳ್ಳಿ, ವಿನ್ಯಾಸ ಮಾಡದೇ ತೋಟ...
*ಜೀವಾಮೃತ/ಗೋಕೃಪಾಮೃತಇತ್ಯಾದಿ ಇವುಗಳನ್ನು ಗೊಬ್ಬರ ಎಂದು ತಪ್ಪಾಗಿ ತಿಳಿಯಬಾರದು ಮತ್ತು ರಾಸಾಯನಿಕ ಗೊಬ್ಬರಕ್ಕೆ ಇದು ಪರ್ಯಾಯವಲ್ಲ ಎಂದು ತಿಳಿಯಬೇಕು. *ರಾಸಾಯನಿಕ ಕೃಷಿಯಲ್ಲಿ ಬಳಸುವ ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಕ್ಕಾಗಿ ಬದಲಿಯಾಗಿ ಸಾವಯವ ಕೃಷಿಯಲ್ಲಿ ಜೀವಾಮೃತ/ಗೋಕೃಪಾಮೃತ ಬಳಕೆ ಮಾಡಬಹುದು ಎಂದು ಕೆಲವರು ತಪ್ಪಾಗಿ ಬಿಂಬಿಸುತ್ತಿದ್ದಾರೆ ಮತ್ತು ಇದನ್ನು ರೈತರು ಕೂಡ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಜೀವಾಮೃತ/ಗೋಕೃಪಾಮೃತ ದ್ರಾವಣದ;ಲ್ಲಿ ಸೂಕ್ಷ್ಷ್ಮಾಣು ಜೀವಿಗಳಿರುತ್ತವೆ, ಸೂಕ್ಷ್ಷ್ಮಾಣುಜೀವಿಗಳು ಭೂಮಿಯಲ್ಲಿ ಲಭ್ಯವಿರುವ ಸಾವಯವ ತ್ಯಾಜ್ಯಗಳನ್ನು ವಿಘಟನೆ ಮಾಡಿ ಅದನ್ನು ತಮ್ಮ ಆಹಾರವಾಗಿ ಬಳಕೆ ಮಾಡಿಕೊಂಡು ಪೋಷಕಾಂಶವನ್ನು ಗಿಡಗಳಿಗೆ ಪೂರೈಸುತ್ತದೆ. *ಪೋಷಕಾಂಶವಿರುವುದು ಸಾವಯವ ತ್ಯಾಜ್ಯದಲ್ಲಿ. ಅದನ್ನು ವಿಭಜಿಸಿ ಗಿಡಗಳಿಗೆ ಪೂರೈಸುವುದು...
ಬೆಳಗಾವಿಯ ಗ್ರಾಮೀಣ ಹಿರಿಯರ ಬಾಯಲ್ಲಿ ಅನೇಕ ದೇಸಿ ಬೀಜಗಳ ಹೆಸರು ಪ್ರಜಲಿತದಲ್ಲಿವೆ.ಅದರಲ್ಲಿ ಕೆಲವು ನಶಿಸಿ ಹೋಗಿವೆ. ಇನ್ನೂ ಕೆಲವು ಇಂದಿಗೂ ತಮ್ಮ ಅಸ್ಮಿತೆ ಉಳಿಸಿಕೊಂಡಿವೆ. ಅದರಲ್ಲಿ ಖನಗಾಂವ ಸವತೆ, ಗಿರಿಯಾಲ ಸವತೆ, ಅವರಾದಿ ಬದನೆ,ಇವುಗಳು ತಮ್ಮ ಗುಣವಿಶೇಷತೆಯಿಂದ ಹೆಸರುವಾಸಿಯಾಗಿವೆ.  ಇವುಗಳಿಂದ ಗುಣಮಟ್ಟದ ಆಹಾರ ದೊರೆಯುತ್ತಿದೆ. ಅವುಗಳಲ್ಲಿ ಈ ಮುಚ್ಚಂಡಿ ಸವತೆಯೂ ಒಂದಾಗಿದೆ. ಈ ಸವತೆಯನ್ನು ಮಿಶ್ರಬೆಳೆಯಾಗಿ ಬೆಳೆದು ಯಶ ಕಂಡಿರುವ ಬೈಲಹೊಂಗಲ ತಾಲೂಕಿನ ತಿಗಡಿ ಗ್ರಾಮದ ಚಂದ್ರಕಾಂತ ವಿರುಪಾಕ್ಷಪ್ಪ ಕೋಟಗಿ ಅವರು ಕೃಷಿಯಲ್ಲಿ ಹಲವು ಪ್ರಯೋಗಗಳನ್ನು ಅಳವಡಿಸಿಕೊಂಡು ಯಶಸ್ವಿಯಾಗಿದ್ದಾರೆ. ಭೂಮಿಯ ಹದ ಇವರದ್ದು ಅವಿಭಕ್ತ ಕುಟುಂಬ. ೧೨...
Care must be taken from the planting stage to grow quality crops. Proper control measures must be adopted to protect crops from these insect-flies. This should be followed by biological control methods. Doing so can provide high yields and quality crops. Blue sticky sheets & yellow colored glue assistants in this regard. The most advanced pheromone traps and lures...
`ಕೃಷಿಗೆ ನೀರಿರಬೇಕು. ಆಗಷ್ಟೆ ರೈತರಿಗೆ ಖುಷಿ. ಆದ್ರೆ ಕೆಲವೊಮ್ಮೆ ಮಳೆಯ ಅನಿಶ್ಚತತೆ ಕಾಡುತ್ತಿದೆ. ಮಳೆ ಇಲ್ಲದ ಮೇಲೆ ಇಳೆಯ ಒಳಗೆ ಜಲವೆಲ್ಲಿ? ಒಟ್ಟಾರೆ ನಮ್ಮ ಪಾಲಿಗೆ ಕೃಷಿ-ಖುಷಿ ನೀರ ಮೇಲಿನ ಗುಳ್ಳೆ. ಈ ಕಾರಣಕ್ಕೆ ನಾನು ಮಳೆ ಅಪರೂಪ ಆದರೂ, ಬೋರ್‌ವೆಲ್ ನಿಂತರೂ ಒಮ್ಮಿಂದೊಮ್ಮೆಗೆ ಒಣಗದ ಜೊತೆಗೆ ಲಭ್ಯ ಅಲ್ಪ ನೀರಿನಲ್ಲಿಯೇ ಅಚ್ಚುಕಟ್ಟಾಗಿ ಬೆಳೆ ತೆಗೆಯುವ ಬಗ್ಗೆ ಯೋಚಿಸುತ್ತೇನೆ. ಮಣ್ಣಿನ ಸತ್ವದ ಕಡೆ ಲಕ್ಷ ಕೊಡುತ್ತೇನೆ. ಅದರ ಫಲವೇ ನಿವೀಗ ನೋಡುತ್ತಿರುವ ಬೆಳೆಗಳು....’ ಎನ್ನುತ್ತಾ ಕಾರ್ತೀಕೇಶ್ವರ ರಾಮಘಡ್ ತಮ್ಮ ಹೊಲದ ಮಧ್ಯಕ್ಕೆ ಕರೆದ್ಯೊಯ್ದು...
ನಿಸರ್ಗದ ಅತಿಯಾದ ಬಳಕೆಯಿ೦ದ ಮಣ್ಣಿನ ಸವಕಳಿ, ಅ೦ತರ್ಜಲ ಮಟ್ಟದಲ್ಲಿ ಇಳಿಕೆ, ಭೂಮಿ ಬ೦ಜರು ಬೀಳುವಿಕೆ, ಪರಿಸರ ಮಾಲಿನ್ಯವಾಗಿದೆ ಹಾಗೂ ಅರಣ್ಯ ಸ೦ಪತ್ತು ನಾಶವಾಗುತ್ತಿದೆ. ಮಣ್ಣು ಮತ್ತು ನೀರು ನಿಸರ್ಗದ ಕೊಡುಗೆ, ಇವು ನಮ್ಮ ಜೀವನಾಧಾರ ಸ೦ಪತ್ತು. ಅತಿಯಾದ ಶೀಲಿಂದ್ರನಾಶಕಗಳ ಬಳಕೆಯಿಂದ ಮಣ್ಣು ಹಾಗು ನೀರು ಮಲೀನವಾಗಿದೆ. ಸಾವಯವ ಕೃಷಿಯಲ್ಲಿ ಟ್ರೈಕೋಡರ್ಮಾದ ಬಳಕೆ ಅತಿಮುಖ್ಯ. ಸಾವಯವದ ಮಹತ್ವ ತಿಳಿದಮೇಲೆ, ಹಲವಾರು ಪರಿಸರ ಪೂರಕ ಮಾರ್ಗೋಪಾಯಗಳು ರೈತರ ಜಮೀನಿನಲ್ಲಿ ಅನುಶೋಧನೆಗೊಳಗೊಂಡವು. ರೋಗ ಮತ್ತು ಕೀಟಗಳ ಬಾಧೆ ಎಲ್ಲ ಬೆಳೆಗಳಲ್ಲೂ ಕಂಡು ಬರುತ್ತದೆ. ಅದರಲ್ಲೂ ಮಣ್ಣಿನಿಂದ ಬರುವ ರೋಗಗಳಿಂದ...
ಕತ್ತಿಯಿಂದ ಬೆಟ್ಟದ ಇಳಿ ಜಾರಿನ ಕಾಡು ಸವರಿ, ಬೆಂಕಿಯಿಂದ ಸುಟ್ಟು,ಮರಗಿಡಗಳ.ಬೇರು,ಕಲ್ಲು ಕಿತ್ತು  ಗುದ್ದಲಿಯಿಂದ  ಕೊಚ್ಚುತ್ತಾ ಭೂಮಿಯನ್ನು ಸಮತಟ್ಟು ಮಾಡಿ ಭತ್ತದ ಬೇಸಾಯಕ್ಕೆ ಅಣಿಗೊಳಿಸಿದ್ದು  ಶತ ಶತಮಾನಗಳ ಹಿಂದೆ!.ಇದು ಮನುಷ್ಯ ಶ್ರಮದಲ್ಲಿ  ಆಗಿದ್ದು. ಇದಾದ ನಂತರ ಕೃಷಿ ನೆರವಿಗೆ ಎತ್ತು ಕೋಣಗಳು ಬಂದು ಮರದ ನೇಗಿಲಿನ ಮೂಲಕ ಉಳುಮೆ ಶುರು ಆಯ್ತು. ನಿಧಾನಕ್ಕೆ ಗುದ್ದಲಿಯಲ್ಲಿ ಕಡಿದು ಕಡಿದು  ಇಲ್ಲಿನ ಮಳೆ ಸ್ವರೂಪ ಗಮನಿಸಿ ಇಳಿಜಾರಿಗೆ ಅಡ್ಡಲಾಗಿ ಬದು ನಿರ್ಮಾಣ ಮಾಡಿದ್ದು ಕೃಷಿ ತಂತ್ರ. ಒಂದಾನೊಂದು ಕಾಲದಲ್ಲಿ ಕಾಡಿಗೆ ಬೆಂಕಿ ಹಾಕಿ ಬೂದಿಯಲ್ಲಿ ಬೀಜ ಬಿತ್ತಿ ರಾಗಿ,ಭತ್ತ...
ಕೃಷಿಕರು, ಕೃಷಿಭೂಮಿಗೆ ಕಾಲಿಟ್ಟ ಕೂಡಲೇ ಮಣ್ಣುಮುಟ್ಟಿ ನಮಸ್ಕರಿಸುವುದು ಸಾಮಾನ್ಯ. ಈಗಲೂ ಬಹಳಷ್ಟು ಮಂದಿ ಪಾದರಕ್ಷೆ ಹಾಕಿಕೊಂಡು ಕೃಷಿಭೂಮಿಯ ಮಣ್ಣನ್ನು ತುಳಿಯುವುದಿಲ್ಲ. ಇಲ್ಲಿನ ಮಣ್ಣಿನ ಮಹತ್ವ ಅಪಾರ. ಇದರ ಫಲವತ್ತತೆ ಉಳಿಸಲು, ವೃದ್ಧಿಸಲು ಕೋಟ್ಯನುಕೋಟಿ ಸೂಕ್ಷ್ಮಾಣುಗಳು ನಿರಂತರವಾಗಿ ಶ್ರಮಿಸುತ್ತಿರುತ್ತವೆ. ಆದ್ದರಿಂದಲೇ ಮಣ್ಣು ಜೀವಂತ. ಇದರಿಂದಾಗಿಯೇ ಸಸ್ಯಗಳು ಸಮೃದ್ಧವಾಗಿ ಬೆಳೆಯಲು ಸಾಧ್ಯ. ಪ್ರಸ್ತುತ ಸಸ್ಯಾಭಿವೃದ್ಧಿಯಲ್ಲಿ ಗಣನೀಯ ಪಾತ್ರ ವಹಿಸುವ ಸಿಲಿಸಿಕ್ ಆ್ಯಸಿಡ್ ಕುರಿತು ತಿಳಿದುಕೊಳ್ಳೋಣ. ಸಿಲಿಕಾನ್ ಡೈ ಆಕ್ಸೈಡ್ ಮಣ್ಣಿನಲ್ಲಿ ಸೂಕ್ಷ್ಮಾಣು ಜೀವಿಗಳ ಚಟುವಟಿಕೆ ಅಬಾಧಿತವಾಗಿ ನಡೆಯುವಾಗ ಸಿಲಿಸಿಕ್ ಆ್ಯಸಿಡ್ ಆಗಿ ಪರಿವರ್ತಿತವಾಗುತ್ತದೆ.  ಈ ಅಂಶ ಸಸ್ಯಗಳಿಗೆ...

Recent Posts