ಕಾಡು ಗದ್ದೆಯ ಬದು ಹಾಗೂ ಶತಮಾನದ ಮೆಲುಕು

0
ಲೇಖಕರು: ಶಿವಾನಂದ ಕಳವೆ

ಕತ್ತಿಯಿಂದ ಬೆಟ್ಟದ ಇಳಿ ಜಾರಿನ ಕಾಡು ಸವರಿ, ಬೆಂಕಿಯಿಂದ ಸುಟ್ಟು,ಮರಗಿಡಗಳ.ಬೇರು,ಕಲ್ಲು ಕಿತ್ತು  ಗುದ್ದಲಿಯಿಂದ  ಕೊಚ್ಚುತ್ತಾ ಭೂಮಿಯನ್ನು ಸಮತಟ್ಟು ಮಾಡಿ ಭತ್ತದ ಬೇಸಾಯಕ್ಕೆ ಅಣಿಗೊಳಿಸಿದ್ದು  ಶತ ಶತಮಾನಗಳ ಹಿಂದೆ!.ಇದು ಮನುಷ್ಯ ಶ್ರಮದಲ್ಲಿ  ಆಗಿದ್ದು. ಇದಾದ ನಂತರ ಕೃಷಿ ನೆರವಿಗೆ ಎತ್ತು ಕೋಣಗಳು ಬಂದು ಮರದ ನೇಗಿಲಿನ ಮೂಲಕ ಉಳುಮೆ ಶುರು ಆಯ್ತು. ನಿಧಾನಕ್ಕೆ ಗುದ್ದಲಿಯಲ್ಲಿ ಕಡಿದು ಕಡಿದು  ಇಲ್ಲಿನ ಮಳೆ ಸ್ವರೂಪ ಗಮನಿಸಿ ಇಳಿಜಾರಿಗೆ ಅಡ್ಡಲಾಗಿ ಬದು ನಿರ್ಮಾಣ ಮಾಡಿದ್ದು ಕೃಷಿ ತಂತ್ರ.

ಒಂದಾನೊಂದು ಕಾಲದಲ್ಲಿ ಕಾಡಿಗೆ ಬೆಂಕಿ ಹಾಕಿ ಬೂದಿಯಲ್ಲಿ ಬೀಜ ಬಿತ್ತಿ ರಾಗಿ,ಭತ್ತ ಬೆಳೆಯುತ್ತಿದ್ದ ಕಾಲದಿಂದ ನೆಲಕ್ಕೆ ಗದ್ದೆಯ ಇಂಥ ರೂಪ ಬರಲು ಶತಮಾನಗಳು ಬೇಕಾಗಿವೆ.

ಜೆಸಿಬಿ ಬಂದ ಈ ಕಾಲದಲ್ಲಿ ಎರಡು ದಿನಕ್ಕೆ ಇದನ್ನು ಸಮತಟ್ಟು ಮಾಡುವ ತಾಕತ್ತು ನಮಗೆ ಬಂದಿದೆ. ಭತ್ತ ಹೋಗಿ ಅರೆಕ್ಷಣದಲ್ಲಿ ಅಡಿಕೆ ತೋಟ ಏಳುವ ಪರಿ ನಮ್ಮ ಕಣ್ಣೆದುರು ಇದೆ.

ನಮ್ಮ ಅನ್ನ, ಅರಣ್ಯದಲ್ಲಿ ಕಂಡ ಕಾಲದ ಇತಿಹಾಸ ನಿತ್ಯ ನೆನಪಿರಲಿ. ಇಳಿಜಾರಿಗೆ ಬದು ರೂಪಿಸುತ್ತ ಶತ ಮಾನದ ಬೇಸಾಯ ನಡೆಸಿದ ಹಿರಿಯರ ಹಾದಿ ಮರೆಯಲು ಸಾಧ್ಯವಿಲ್ಲ.  ಈ ಗುಡ್ಡಗಾಡಿನಲ್ಲಿ ಓಟಕ್ಕಿಂತ ನಿಧಾನ ಗತಿಯ ಹೆಜ್ಜೆಯಲ್ಲಿ ಅಪಾಯ ಕಡಿಮೆ.

ಛಾಯಾಗ್ರಹಕರು: ಶಿವಾನಂದ ಕಳವೆ

LEAVE A REPLY

Please enter your comment!
Please enter your name here