ಗುಲಾಬಿ ಬಣ್ಣದ ಕಾಯಿ ಕೊರಕ ; ಕಡಿವಾಣಕ್ಕೆ ಬಂತು ಟ್ರ್ಯಾಪರ್

0
????????????????????????????????????????????????????????????

ಭಾರತದಲ್ಲಿ ಹತ್ತಿಬೆಳೆಯನ್ನು12-12.5 ಮಿಲಿಯನ್ ಹೆಕ್ಟೇರ್ಗಳಿಗಿಂತಲೂ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆಯಲಾಗುತ್ತದೆ. ಇದಕ್ಕೆ ಬಾಧೆ ನೀಡಿದ, ನೀಡುತ್ತಿರುವ ಕೀಟಗಳಲ್ಲಿ ಗುಲಾಬಿ ಬಣ್ಣದ ಕಾಯಿ ಕೊರಕ ಪ್ರಮುಖ. ಇದರಿಂದಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಹತ್ತಿ ನಾಶವಾಗಿದೆ. ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅಪಾಯಗಳೇನು ?
ಗುಲಾಬಿ ಕಾಯಿಕೊರಕ ಅಥವಾ ಪಿಂಕ್ ಬೋಲ್ ವರ್ಮ್ ಅಥವಾ ಗುಲಾಬಿ ಬೂದಿ ಹುಳು ಅಥವಾ ಗುಲಾಬಿ ಸುಂಡಿ ಎಂದು ಕರೆಯಲ್ಪಡುವ ಈ ಕೀಟದ ಬಾಧೆಯಿಂದಾಗಿ ಮೊಗ್ಗುಗಳು ಅರಳುವುದಿಲ್ಲ. ಗಿಡದ ಬೀಜಕೋಶ ಉದುರಿ ಹೋಗುತ್ತದೆ. ಹತ್ತಿಯ ನಾರಿಗೆ ಹಾನಿಯಾಗುತ್ತದೆ. ಇದರಿಂದ ಗುಣಮಟ್ಟದ ಹತ್ತಿ ದೊರಕುವುದಿಲ್ಲ. ಕೊನೆಯ ಹಂತದಲ್ಲಿ ಇಳುವರಿ ಶೇಕಡ 90ರಷ್ಟು ಕಡಿಮೆಯಾಗುತ್ತದೆ.
ಆರಂಭಿಕ ಹಂತ
ಹತ್ತಿ ಬೆಳೆಯ ಆರಂಭಿಕ ಹಂತದಲ್ಲಿಯೇ ಗುಲಾಬಿ ಬಣ್ಣದ ಕಾಯಿಕೊರಕ ಬಾಧೆ ಗುರುತಿಸಲು ಸಾಧ್ಯವಾಗುವುದಿಲ್ಲ. ಕಾರಣವೇನೆಂದರೆ ಗುಲಾಬಿ ಬೋಲ್ ವರ್ಮ್ ಹತ್ತಿ ಗಿಡವನ್ನು ಒಳಗಿನಿಂದ ಹೀರುತ್ತದೆ. ಇದರಿಂದ ಗಮನಾರ್ಹ ಪ್ರಮಾಣದ ಇಳುವರಿ ನಷ್ಟವಾಗುತ್ತದೆ.
ಜೀವನ ಚಕ್ರ ಅವಧಿ
ಪಿಂಕ್ ಬೋಲ್ ವರ್ಮ್ 30 ದಿನಗಳ ಜೀವನಚಕ್ರವನ್ನು ಹೊಂದಿದೆ ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಹತ್ತಿ ಬೆಳೆ ಕೊಯ್ಲು ಮಾಡಲು ಸುಮಾರು 170 ದಿನಗಳ ಅವಧಿ ತೆಗೆದುಕೊಳ್ಳುತ್ತದೆ. ಈ ಅವಧಿಯಲ್ಲಿ ಗುಲಾಬಿ ಬಣ್ಣದ ಕಾಯಿ ಕೊರಕ 3 ರಿಂದ 4 ಬಾರಿ ತೀವ್ರ ಬಾಧೆ ನೀಡುತ್ತದೆ. ಇದರಿಂದ ರೈತರ ಪರಿಶ್ರಮ, ಸಮಯ, ಹಣ ವ್ಯರ್ಥವಾಗುತ್ತದೆ.
ಪಿಂಕ್ ಬೋಲ್ ವರ್ಮ್ ಭಾರತೀಯ ಹತ್ತಿ ಬೆಳೆಗಾರರಿಗೆ ವಿನಾಶಕಕಾರಿಯಾಗಿದೆ. ಗುಲಾಬಿ ಬೂಷ್ಟು ದಾಳಿಯಿಂದ ಇಳುವರಿ ನಷ್ಟವು 30-90 ಪ್ರತಿಶತದಷ್ಟು ಇರುತ್ತದೆ ಎಂದು ಹತ್ತಿಬೆಳೆ ಕುರಿತು ಅಧ್ಯಯನ ಮಾಡುವ ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ


ಗುಲಾಬಿ ಬೋಲ್ವರ್ಮ್ ಎಂದರೇನು ಮತ್ತು ಅದು ಎಷ್ಟು ವಿನಾಶಕಾರಿ?
ವಿವಿಧ ಅಧ್ಯಯನಗಳ ಟಿಪ್ಪಣಿಯ ಪ್ರಕಾರ, ಗುಲಾಬಿ ಬೋಲ್ ವರ್ಮ್ ಅಥವಾ ಪೆಕ್ಟಿನೋಫೊರಾ ಗಾಸಿಪಿಯೆಲ್ಲಾ, ಪ್ರಪಂಚದಾದ್ಯಂತ ಹತ್ತಿ ತೋಟಗಳಿಗೆ ಸೋಂಕು ತಗುಲಿಸುವ ಸಾಮಾನ್ಯ ಕೀಟಗಳಲ್ಲಿ ಒಂದಾಗಿದೆ ಮತ್ತು ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಇದು ಪ್ರಮುಖ ಹಾನಿಕಾರಕ ಕೀಟವಾಗಿದೆ.
ಗುಜರಾತಿನಲ್ಲಿ 2013-14ರಲ್ಲಿ ಪಿಂಕ್ ಬೋಲ್ ವರ್ಮ್ ಏಕಾಏಕಿ ಮೊದಲ ಬಾರಿಗೆ ವರದಿಯಾಗಿದೆ, ಅಲ್ಲಿಂದ ಅದು ತ್ವರಿತವಾಗಿ ವೃದ್ಧಿಯಾಗಿ ದೇಶದ ಇತರ ಭಾಗಗಳಾದ ಮಹಾರಾಷ್ಟ್ರ, ಆಂಧ್ರ ಪ್ರದೇಶ ಮತ್ತು ತೆಲಂಗಾಣ, ಕರ್ನಾಟಕಕ್ಕೆ ಹರಡಿದೆ
ಕಳೆದ ಕೆಲವು ವರ್ಷಗಳಿಂದ, ಉತ್ತರ ಭಾರತದ ಪ್ರಮುಖ ಹತ್ತಿ ಬೆಳೆಯುವ ಪ್ರದೇಶಗಳಾದ ಪಂಜಾಬ್, ಹರಿಯಾಣ ಮತ್ತು ಉತ್ತರ ರಾಜಸ್ತಾನ, ಮಧ್ಯ ಪ್ರದೇಶದ ಹತ್ತಿಬೆಳೆಯನ್ನು ಗುಲಾಬಿ ಬಣ್ಣದ ಕಾಯಿಕೊರಕಗಳು ಅತಿಯಾಗಿ ಬಾಧಿಸಿ ಬೆಳೆಹಾನಿ ಉಂಟು ಮಾಡಿ ರೈತರ ಆರ್ಥಿಕ ಪರಿಸ್ಥಿತಿ ಹದಗೆಡಿಸಿವೆ
ರಾಸಾಯನಿಕ ಕೀಟನಾಶಕ ಪರಿಹಾರವಲ್ಲ
ಗುಲಾಬಿ ಬಣ್ಣದ ಕಾಯಿಕೊರಕಗಳ ಬಾಧೆ ನಿಯಂತ್ರಿಸಲು ರಾಸಾಯನಿಕ ಕೀಟನಾಶಕಗಳು ಪರಿಣಾಮಕಾರಿಯಲ್ಲ. ಏಕೆಂದರೆ ಈಗಾಗಲೇ ಈ ಕೀಟಗಳು ಕೀಟನಾಶಕಗಳಿಗೆ ನಿರೋಧಕತೆಯನ್ನು ಬೆಳೆಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಹತ್ತಿ ಬೆಳೆಯುವ ಪ್ರದೇಶಗಳ ಹಲವಾರು ರೈತರು ಬೇರೆಬೇರೆ ಕೀಟನಾಶಕಗಳನ್ನು ಮಿಶ್ರಣ ಮಾಡಿ ಸಿಂಪಡಿಸುತ್ತಾರೆ. ಆಗಲೂ ಸಹ ಪಿಂಕ್ ಬೋಲ್ ವರ್ಮ್ ನಿಯಂತ್ರಣವಾಗದೇ ಇರುವುದು ಅಧ್ಯಯನಗಳಿಂದ ಸಾಬೀತಾಗಿದೆ.
ಬಿಟಿ ಹತ್ತಿಗೂ ಬಾಧೆ
ಆರಂಭದಲ್ಲಿ ಬಿಟಿ ಹತ್ತಿ ಭಾರತದ ಹೊಲಗಳನ್ನು ಪ್ರವೇಶಿಸಿದಾಗ ಇದು ಕೀಟ ನಿರೋಧಕತೆ ಹೊಂದಿದೆ ಎಂದೇ ಪ್ರಚಾರ ಮಾಡಲಾಯಿತು. ಆದರೆ ಇದು ಕೂಡ ಹುಸಿಯೆಂದು ಸಾಬೀತಾಯಿತು. ಏಕೆಂದರೆ ಪಿಂಕ್ ಬೋಲ್ ವರ್ಮ್ ಬಿಟಿ ಹತ್ತಿ ಬೆಳೆಯನ್ನೂ ಬಾಧಿಸಲಾರಂಭಿಸಿತು. ಭಾರಿ ಹಾನಿಯನ್ನೂ ಉಂಟು ಮಾಡಿತು


ಪರಿಹಾರವೇನು ?
ರಾಸಾಯನಿಕ ಕೀಟನಾಶಕಗಳು ಪಿಂಕ್ ಬೋಲ್ ವರ್ಮ್ ಬಾಧೆ ನಿಯಂತ್ರಿಸಲು ಪರಿಣಾಮಕಾರಿಯಲ್ಲ ಎಂದಮೇಲೆ ಪರಿಹಾರವೇನು ಎಂಬ ಪ್ರಶ್ನೆ ಉದ್ಬವವಾಗುತ್ತದೆ. ಇದಕ್ಕೆ ಉತ್ತರ ಲೈಂಗಿಕಾರ್ಷಣೆ ಬಲೆಗಳು. ಇವುಗಳು ಈ ಕೀಟಗಳ ಬಾಧೆಯನ್ನು ಸಮರ್ಥವಾಗಿ ನಿಯಂತ್ರಣ ಮಾಡುತ್ತವೆ. ಹತ್ತಿಬೆಳೆಯನ್ನು ಉಳಿಸುತ್ತವೆ.
ಲೈಂಗಿಕಾರ್ಷಣೆ ಬಲೆಯಿಂದ ಅಪಾಯವಿಲ್ಲವೇ ?
ರಾಯನಿಕ ಕೀಟನಾಶಕಗಳು ಭೂಮಿಯ ಆರೋಗ್ಯ, ಮನುಷ್ಯರ ಆರೋಗ್ಯ, ಜಾನುವಾರುಗಳ ಆರೋಗ್ಯ, ಅಂತರ್ಜಲದ ಮೇಲೆ ದುಷ್ಪರಿಣಾಮ ಉಂಟು ಮಾಡುತ್ತವೆ. ಇದೇ ರೀತಿ ಲೈಂಗಿಕಾರ್ಷಣೆ ಬಲೆ ದುಷ್ಪರಿಣಾಮ ಉಂಟು ಮಾಡಬಹುದೇ ಎಂಬುದು ಕೆಲವರ ಪ್ರಶ್ನೆ. ಇದಕ್ಕೆ ಉತ್ತರ ಖಂಡಿತ ಯಾವುದೇ ಥರದ ಹಾನಿ ಉಂಟಾಗುವುದಿಲ್ಲ
ರಾಸಾಯನಿಕ ಕೀಟನಾಶಕಗಳಿಗೆ ಪರ್ಯಾಯ
ಪಿಂಕ್ ಬೋಲ್ ವರ್ಮ್ ಕೀಟಗಳ ಲೈಂಗಿಕಾರ್ಷಣೆ ಬಲೆಗಳು ರಾಸಾಯನಿಕ ಕೀಟನಾಶಕಗಳಿಗೆ ಪರ್ಯಾಯ. ಇದರಿಂದ ಕೀಟನಾಶಕದ ಬಳಕೆಯನ್ನು ತ್ಯಜಿಸಬಹುದಾದರೂ ಹಲವಾರು ರೈತರು ರಾಸಾಯನಿಕ ಕೀಟನಾಶಕಗಳನ್ನು ಸಿಂಪಡಿಸಲು ಮುಂದಾಗುತ್ತಾರೆ. ಅಂಥವರು ಹತ್ತಿಬೆಳೆಯ ಒಂದು ಆವರ್ತನದಲ್ಲಿ 12 ರಿಂದ 15 ಬಾರಿ ಕೀಟನಾಶಖ ಸಿಂಪಡಿಸುತ್ತಾರೆ. ಅವರು ಈ ಸಂಖ್ಯೆಯನ್ನು ಎರಡು ಅಥವಾ ಗರಿಷ್ಠವೆಂದರೆ ಮೂರಕ್ಕೆ ಸೀಮಿತಗೊಳಿಸಬಹುದು. ಇದರಿಂದ ಅಪಾರ ಪ್ರಮಾಣದ ಹಣ ಉಳಿತಾಯವಾಗುತ್ತದೆ.


ಬಂದಿದೆ ಬ್ಯಾರಿಕ್ಸ್ ಟ್ರ್ಯಾಪರ್
ಬೆಂಗಳೂರಿನ ಪೀಣ್ಯದಲ್ಲಿರುವ ಬ್ಯಾರಿಕ್ಸ್ ಕೃಷಿ ಸಂಶೋಧಣಾ ಸಂಸ್ಥೆ ಪಿಂಕ್ ಬೋಲ್ ವರ್ಮ್ ಬಾಧೆಯನ್ನು ಸಮರ್ಥವಾಗಿ ನಿಯಂತ್ರಣ ಮಾಡುವ ಲೈಂಗಿಕಾರ್ಷಣೆ ಬಲೆಯನ್ನು ಅಭಿವೃದ್ಧಿಪಡಿಸಿದೆ. ಇದು ಹಲವಾರು ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ.
ಲೈಂಗಿಕಾರ್ಷಣೆ ಜೊತೆಗೆ ಬೆಳೆಗೆ ಹಾನಿ ಉಂಟು ಮಾಡುವ ಇತರ ಕೀಟಗಳನ್ನು ಆಕರ್ಷಿಸುವಂತೆ ಇದನ್ನು ವಿನ್ಯಾಸಗೊಳಿಸಲಾಗಿದೆ. ಹಳದಿ ಬಣ್ಣದ ಪಿರಮಿಡ್ ಆಕೃತಿಯ ಮೇಲ್ಬಾಗದಲ್ಲಿ ಲೈಂಗಿಕಾರ್ಷಣೆ ಲ್ಯೂರ್ ಅನ್ನು ಸಿಕ್ಕಿಸಲಾಗಿರುತ್ತದೆ. ಇದು ನಿಧಾನವಾಗಿ ತನ್ನ ಪರಿಮಳ ಹೊರ ಸೂಸುತ್ತಿರುತ್ತದೆ. ಪಿಂಕ್ ಬೋಲ್ ವರ್ಮ್ ಗಂಡುಕೀಟಗಳನ್ನು ಆಕರ್ಷಿಸಿ ಬಂಧಿಯಾಗಿಸುತ್ತದೆ. ಇದರಿಂದ ಈ ಕೀಟಗಳ ಸಂತಾನಾಭಿವೃದ್ಧಿ ಆಗದೇ ಅವುಗಳ ಸಂಖ್ಯೆ ಗಣನೀಯವಾಗಿ ಕುಗ್ಗುತ್ತದೆ. ಬೆಳೆಗೆ ಬಾಧೆಯೂ ಉಂಟಾಗುವುದಿಲ್ಲ
ಯಾವ ಹಂತದಲ್ಲಿ ಅಳವಡಿಸಬೇಕು
ಹತ್ತಿ ಹೂ ಬಿಡುವುದಕ್ಕೂ ಒಂದಷ್ಟು ದಿನಗಳ ಮೊದಲೇ ಬ್ಯಾರಿಕ್ಸ್ ಟ್ರ್ಯಾಪರ್ ಗಳ ಬಳಕೆ ಶುರು ಮಾಡುವುದು ಸೂಕ್ತ. ಒಂದು ಎಕರೆಗೆ ನಾಲ್ಕು ಟ್ರ್ಯಾಪರ್ ಗಳು ಸಾಕಾಗುತ್ತವೆ.
ಬ್ಯಾರಿಕ್ಸ್ ಟ್ರ್ಯಾಪರ್ ಗಳ ಬಳಕೆಯಿಂದ ಪಿಂಕ್ ಬೋಲ್ ವರ್ಮ್ ಪರಿಣಾಮಕಾರಿ ನಿಯಂತ್ರಣವಾಗುತ್ತದೆ. ಇದರಿಂದ ರೈತರ ಪರಿಶ್ರಮ. ಸಮಯ, ಹಣಕ್ಕೆ ಸೂಕ್ತ ಮೌಲ್ಯ ದೊರಕುತ್ತದೆ. ಅವರ ಮೊಗಗಳಲ್ಲಿ ಮಂದಹಾಸ ಅರಳುತ್ತದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 99008 00033

LEAVE A REPLY

Please enter your comment!
Please enter your name here