ಈಗಾಗಲೇ ಹಿಂಗಾರಿ ಮಳೆಗಳ ಆರಂಭದಲ್ಲಿ ವಿಳಂಬ ಆಗಿರುವುದರಿಂದ ಕೆಲ ವಿಶೇಷ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯ.
ಹಿಂಗಾರಿ ಜೋಳ
* ಜೋಳ ಬಿತ್ತುವವರು ಒಣ ಬಿತ್ತನೆ ಮಾಡಬಹುದು.
* 3 ಮಿಲೀ ಕ್ಲೋರ್ ಪೈರಿಫಾಸ್, 3 ಗ್ರಾಂ ಕಾರ್ಬೆಂಡೆಜಿಂ ನಿಂದ ಪ್ರತಿ ಕೆಜಿ ಬೀಜಗಳನ್ನು ಉಪಚರಿಸಿ ಬಿತ್ತಬಹುದು. ಮಳೆ ಬಂದ ನಂತರ ಬೀಜಗಳು ಹುಟ್ಟುವವು. ಒಣ ಬಿತ್ತನೆ ಮಾಡಲು ಪೂರ್ಣವಾಗಿ ಒಣ ಮಣ್ಣು ಇರಬೇಕು.
* ಮಣ್ಣಿನಲ್ಲಿ ತೇವಾಂಶ ಇದ್ದರೆ, ರಾತ್ರಿ ಇಡೀ ಬೀಜಗಳನ್ನು ನೀರಿನಲ್ಲಿ ನೆನೆಸಿ, ನೆರಳಲ್ಲಿ ಆರಿಸಬೇಕು. ನಂತರ ಬೀಜೋಪಚಾರ ಮಾಡಿ 18 ಅಂಗುಲ ಅಂತರದ ಸಾಲುಗಳಲ್ಲಿ ಬಿತ್ತಬೇಕು. ಇಂತಹ ಸ್ಥಿತಿಯಲ್ಲಿ ಬಳುಗುಂಟೆಯನ್ನು ತಕ್ಷಣ ತಕ್ಷಣ ಹೊಡೆಯಬೇಕು.
* ಬೇಗ ಬಿತ್ತಿದಷ್ಟು ಒಳ್ಳೆಯದು. ಬಹಳ ದಿನಗಳಿಂದ ಮಳೆಯಾಗಿಲ್ಲವಾದ್ದರಿಂದ, ಗರಿಷ್ಟ ಎಂದರೆ 25 ಕೆಜಿ 20:20:0:13 ಗೊಬ್ಬರ ಕೊಡಬಹುದು.
ಕಡಲೆ
* ಪ್ರತಿ ಕೆಜಿ ಬೀಜಗಳನ್ನು 3 ಮಿಲೀ ಕ್ಲೋರ್ ಪೈರಿಫಾಸ್ ಮತ್ತು 3 ಗ್ರಾಂ ಕಾರ್ಬೆಂಡೆಜಿಂ ಗಳಿಂದ ಉಪಚರಿಸಬೆಕು.
* ಪ್ರತಿ ಎಕರೆಗೆ ಬಳಸುವ 25 ಕೆಜಿ ಬೀಜಗಳನ್ನು 150 ಗ್ರಾಂ ರೈಜೋಬಿಯಂ ಅಣುಜೀವಿ ಗೊಬ್ಬರ ಲೇಪಿಸಿ 12 ಅಂಗುಲ ಅಂತರದ ಸಾಲುಗಳಲ್ಲಿ ಬಿತ್ತಬೇಕು.
* ಬಿತ್ತುವಾಗ ಗರಿಷ್ಟ ಪ್ರತಿ ಎಕರೆಗೆ 25 ಕೆಜಿ ಡಿಎಪಿ ಒದಗಿಸಬೇಕು.
* ಕಡಲೆಯನ್ನು ಕುಸುಬೆಯೊಂದಿಗೆ 4:2 ಸಾಲುಗಳಲ್ಲಿ; ಜೋಳ ದೊಂದಿಗೆ 6:2 ಸಾಲುಗಳಲ್ಲಿ ಅಕ್ಕಡಿಯಾಗಿ ಬೆಳೆಯಬಹುದು. ಅಕ್ಕಡಿ ಬೆಳೆಗಳ ಬೀಜಗಳನ್ನು ಸಹ ಉಪಚರಿಸುವುದು ಅಗತ್ಯ.
ಕುಸುಬೆ
* ಪ್ರತಿ ಕೆಜಿ ಬೀಜಗಳನ್ನು 3 ಮಿಲೀ ಕ್ಲೋರ್ ಪೈರಿಫಾಸ್ ಮತ್ತು 3 ಗ್ರಾಂ ಕಾರ್ಬೆಂಡೆಜಿಂ ಗಳಿಂದ ಉಪಚರಿಸಬೆಕು.
* ಪ್ರತಿ ಎಕರೆಗೆ ಬಳಸುವ 25 ಕೆಜಿ ಬೀಜಗಳನ್ನು 150 ಗ್ರಾಂ ಅಜೋಸ್ಪಿರಿಲಂ ಅಣುಜೀವಿ ಗೊಬ್ಬರ ಲೇಪಿಸಿ 2 ಅಡಿ ಅಂತರದ ಸಾಲುಗಳಲ್ಲಿ ಬಿತ್ತಬೇಕು.
* ಬಿತ್ತುವಾಗ ಗರಿಷ್ಟ ಪ್ರತಿ ಎಕರೆಗೆ 25 ಕೆಜಿ 12:32:16 ಗೊಬ್ಬರ ಒದಗಿಸಬೇಕು.
* ಕುಸುಬೆಯನ್ನು ಯನ್ನು ಕಡಲೆ ಯೊಂದಿಗೆ 2:4 ಸಾಲುಗಳಲ್ಲಿ; ಜೋಳ ದೊಂದಿಗೆ 2:6 ಸಾಲುಗಳಲ್ಲಿ ಅಕ್ಕಡಿಯಾಗಿ ಬೆಳೆಯಬಹುದು. ಅಕ್ಕಡಿ ಬೆಳೆಗಳ ಬೀಜಗಳನ್ನು ಸಹ ಅಗತ್ಯವಾಗಿ ಉಪಚರಿಸಬೇಕು.
ಸಾಮಾನ್ಯ ಸಲಹೆಗಳು
* ಗೋಧಿ ಬಿತ್ತುವವರು ಮಟ್ಟವಾದ ತಗ್ಗು ಜಮೀನಿನಲ್ಲಿ ಮಳೆಯಾಶ್ರಯದಲ್ಲಿ ಜೋಳ, ಕುಸುಬೆ ಬೆಳೆಗಳಿಗೆ ತಿಳಿಸಿದಂತೆ ಬೀಜೋಪಚಾರ ಮಾಡಿ ಬಿತ್ತಬೇಕು.
* ಕಡಲೆ, ಜೋಳಗಳಲ್ಲಿ ಕೊತ್ತಂಬರಿ ಯನ್ನು ಮಿಶ್ರ ಬೆಳೆಯಾಗಿ ಬೆಳೆಯುವುದು ಸೂಕ್ತ.
* ನೀರಾವರಿಯಲ್ಲಿ ಗೋಧಿಯನ್ನು ನವಂಬರ್ ಎರಡನೇ ವಾರದ ( ಅಂದರೆ ಚಳಿ ಶುರುವಾದ ) ನಂತರವೇ ಬಿತ್ತನೆ ಮಾಡಬೇಕು.
* ಗೋಧಿಗೆ ಸಹ ಬೀಜೋಪಚಾರ ಕಡ್ಡಾಯ. ಸಾಸುವೆ, ಗುರೆಳ್ಳು, ಎಳ್ಳು ಗಳನ್ನು ಮಿಶ್ರ ಬೆಳೆಗಳಾಗಿ ಬೆಳೆಯಬಹುದು.
ಇಂದ:
ವರದಾ ಕೃಷಿಕರ ವೇದಿಕೆ