ಲೇಖಕರು: ಡಾ. ವೈ.ಜಿ. ಷಡಕ್ಷರಿ. ಸಂಶೋಧನಾ ನಿರ್ದೇಶಕರು, ವಿಶ್ವವಿದ್ಯಾಲಯ, ಬೆಂಗಳುರು

ನಮ್ಮ ದೈನಂದಿನದ ಆಹಾರ ಪದ್ಧತಿಯನ್ನು ಕೋವಿಡ್-19 ಸಾಂಕ್ರಾಮಿಕ ಪುನರ್ ವ್ಯಾಖ್ಯಾನಿಸುವಂತೆ ಮಾಡಿದೆ. ಈ ನಿಟ್ಟಿನಲ್ಲಿ ಆರೋಗ್ಯಕರ ಆಹಾರದ ಸೇವನೆ, ಸಾರ್ವಜನಿಕ-ಆರೋಗ್ಯ, ಆಹಾರ ಮತ್ತು ಕೃಷಿ ಕ್ಷೇತ್ರಗಳ ಸಹಯೋಗದ ಸಬಲೀಕರಣ,  ಮತ್ತಷ್ಟೂ ವೈವಿಧ್ಯ ಬೆಳೆಗಳನ್ನು ಬೆಳೆಯುವುದಕ್ಕೆ ರೈತರನ್ನು ಉತ್ತೇಜಿಸಬೇಕಾಗುತ್ತದೆ. ಇದಕ್ಕಾಗಿ ದೀರ್ಘಕಾಲಿಕ ಕ್ರಮಗಳನ್ನು ಅಳವಡಿಸುವುದು ಅಗತ್ಯವಾಗಿದೆ. ಆಹಾರ ವ್ಯವಸ್ಥೆಗಳನ್ನು ಪರಿವರ್ತಿಸಿ ಕೈಗೆಟುಕುವಂತಹ ಆರೋಗ್ಯಕಾರಿ ಆಹಾರವನ್ನು ಒದಗಿಸುವ ನಿಟ್ಟಿನಲ್ಲಿ, ಕೃಷಿ ಸಂಶೋಧನೆಯು ಪ್ರಮುಖ ಪಾತ್ರವಹಿಸುತ್ತದೆ.

ಈ ಹಿನ್ನಲೆಯಲ್ಲಿ ಪ್ರಸ್ತುತ ಪರಿಸ್ಥಿತಿಗೆ ಆದ್ಯತೆ ನೀಡುತ್ತ ಕೃಷಿ ವಿಶ್ವವಿದ್ಯಾನಿಲಯವು 2019-20ರ ಸಂಶೋಧನಾ ಕಾರ್ಯಕ್ರಮಗಳನ್ನು ಮರು-ಸಂಘಟಿಸಿ ಕಾರ್ಯಗತಗೊಳಿಸಿತು. .ಪ್ರಸ್ತುತ ವರ್ಷದಲ್ಲಿ ಪೋಷಕಾಂಶಭರಿತ ಬೆಳೆಗಳಾದ ಸಿರಿ ಧಾನ್ಯಗಳ ಮತ್ತು ಬೀಜದ ದಂಟಿನ ತಳಿಗಳನ್ನು ಕ್ಷೇತ್ರ ಪ್ರಯೋಗಕ್ಕಾಗಿ ಗುರುತಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ಬೆಳೆಗಳನ್ನು ಆಹಾರಕ್ರಮದಲ್ಲಿ ಮತ್ತೆ ಪರಿಚಯಿಸಬಹುದು. ಇದಲ್ಲದೆ, ಪರಿಣಾಮಕಾರಿ ಮತ್ತು ಪರಿಸರ ಸಮರ್ಥನೀಯ ಬೆಳೆ ಉತ್ಪಾದನೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಲಾಗಿದೆ.

ಆಹಾರ ಭದ್ರತೆಯನ್ನು ಖಾತರಿಪಡಿಸುವುದರ ಜೊತೆಗೆ ಉತ್ಪಾದಕತೆಯನ್ನು ಹೆಚ್ಚಿಸಬೇಕಾಗಿದೆ. ಯಾವುದೇ ವ್ಯತಿರಿಕ್ತ ಪರಿಣಾಮಗಳಿಲ್ಲದೆ ಕೃಷಿ ಸಂಪನ್ಮೂಲಗಳ ದಕ್ಷತೆಯನ್ನು ಹೆಚ್ಚಿಸುವ ಹಾಗೂ ರೈತರ ಆದಾಯ ಮತ್ತು ಸಾಮಾಜಿಕ ಸ್ಥಿತಿಯ ಗುಣಮಟ್ಟವನ್ನು ಸುಧಾರಿಸುವಂತಹ ಹಾಗು ಸಣ್ಣ ಹಿಡುವಳಿದಾರರು ಮತ್ತು ಕೃಷಿ ಮಹಿಳೆಯರ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾನಿಲಯವು 10 ಜಿಲ್ಲೆಗಳಲ್ಲಿರುವ ತನ್ನ 13 ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ನಿರ್ದಿಷ್ಟ ಕಾರ್ಯತಂತ್ರಗಳನ್ನು ಮತ್ತು ನಿರೀಕ್ಷಿತ ಸಂಶೋಧನಾ ಕಾರ್ಯಕ್ರಮಗಳನ್ನು ರೂಪಿಸಿದೆ.

ನೂತನ ತಳಿಗಳ ಬಿಡುಗಡೆ: 2019-20 ರಲ್ಲಿ ನೆಲಗಡಲೆ, ಅಲಸಂದೆ ಮತ್ತು ಮೇವಿನ ಅಲಸಂದೆಯಮೂರು ಹೊಸ ತಳಿಗಳನ್ನು ರೈತ ಸಮುದಾಯ ಹಾಗೂ ಇತರೆ ಪಾಲುದಾರರಿಗೋಸ್ಕರ ಬಿಡುಗಡೆ ಮಾಡಲಾಗಿದೆ.

ನೆಲಗಡಲೆ: ಜಿಕೆವಿಕೆ-27. ಅವಧಿ: 110 – 115 ದಿನಗಳು. ಇಳುವರಿ: 12 – 13 ಕ್ವಿ/ಎಲೆ ಚುಕ್ಕೆ ಮತ್ತು ಎಲೆ ತುಕ್ಕು ರೋಗಗಳಿಗೆ ಸಾಧಾರಣ ನಿರೋಧಕತೆಯನ್ನು ಹೊಂದಿದೆ. ಮುಂಗಾರು (ಜೂನ್-ಜುಲೈ) ಮತ್ತುಬೇಸಿಗೆ (ಡಿಸೆಂಬರ್-ಜನವರಿ)ಬಿತ್ತನೆಗೆಸೂಕ್ತವಾದ ತಳಿ. ವಲಯ – 5ಕ್ಕೆ ಶಿಫಾರಸ್ಸು ಮಾಡಲಾಗಿದೆ.

ಅಲಸಂದೆ: ಕೆಸಿ-8 (ಕೆಬಿಸಿ-11). ಅವಧಿ: 80 – 85 ದಿನಗಳು. ಇಳುವರಿ: 5.0- 5.5ಕ್ವಿ/ಪೂರ್ವ ಹಾಗು ತಡ ಮುಂಗಾರು ಮತ್ತು ಜನವರಿ – ಫೆಬ್ರವರಿ ಬಿತ್ತನೆಗೆ ಸೂಕ್ತವಾದ ತಳಿ. ಬೀಜಗಳು ಮಧ್ಯಮ ದಪ್ಪ ಮತ್ತು ತಿಳಿ ಕಂದುಬಣ್ಣದ್ದಾಗಿರುತ್ತವೆ. ವಲಯ – 5ಕ್ಕೆ ಶಿಫಾರಸ್ಸು ಮಾಡಲಾಗಿದೆ.

ಮೇವಿನ ಅಲಸಂದೆ: ಎಂ.ಎಫ್.ಸಿ-09-3. ಇಳುವರಿ: 8.5 – 9.5 ಟ/ಎ (ಹಸಿರು ಮೇವು). 1.8 – 2.0 ಕ್ವಿ/ಎ (ಕಾಳಿನ ಇಳುವರಿ). ಎಲೆ ಕಾಂಡ ಅನುಪಾತ: 0.75-078. ಹಳದಿ ಎಲೆ ನಂಜು, ತುಕ್ಕು ರೋಗ ಹಾಗೂ ಎಲೆ ಚುಕ್ಕೆ  ರೋಗಗಳಿಗೆ ಸಹಿಷ್ಣುತೆ ಹೊಂದಿದೆ. ವಲಯ – 5 ಮತ್ತು6ಕ್ಕೆ ಶಿಫಾರಸ್ಸು ಮಾಡಲಾಗಿದೆ.

ಸುಧಾರಿತ ಬೇಸಾಯ ಪದ್ಧತಿಗಳು; ಕೈಪಿಡಿಯಲ್ಲಿ ಸೇರ್ಪಡೆಗೆ ಅಭಿವೃದ್ಧಿಪಡಿಸಲಾದ ನವೀನ ತಂತ್ರಜ್ಞಾನಗಳು

ಬೆಳೆ ಅಭಿವೃದ್ಧಿ: ಬೀಜ ವಿಜ್ಞಾನ ಮತ್ತು ತಂತ್ರಜ್ಞಾನ: ರಾಗಿ ಬೆಳೆಯ ಸಸಿಮಡಿಯಲ್ಲಿ ಬೆಂಕಿ ರೋಗ ನಿರ್ವಹಣೆ: ರಾಗಿ ಸಸಿಮಡಿಯಲ್ಲಿ ಬೆಂಕಿ ರೋಗದ ನಿರ್ವಹಣೆಗೆ ಶಿಲೀಂಧ್ರನಾಶಕಗಳಾದ ಟ್ರೈಸೈಕ್ಲಾಜೋಲ್ ಶೇ.75 ಡಬ್ಲ್ಯೂ ಪಿ @ 3.0 ಗ್ರಾಂ/ಕೆ.ಜಿ ಅಥವಾ ಟೆಬೂಕೊನಜೋಲ್ ಶೇ.50 + ಟ್ರೈಪ್ಲಾಕ್ಸಿಸ್ಟ್ರೋಬಿನ್ ಶೇ.25 ಡಬ್ಲ್ಯೂ ಜಿ @ 1.0 ಗ್ರಾಂ/ಕೆ.ಜಿ ಬೀಜಕ್ಕೆ ಬೀಜೋಪಚಾರ ಮಾಡಲು ಬಳಸಬಹುದು.

ಬೆಳೆ ಉತ್ಪಾದನೆ . ಬೇಸಾಯ ಶಾಸ್ತ್ರ: ಸಾಮೆಯಲ್ಲಿ ಪೊಟ್ಯಾಸಿಯಂ ಗೊಬ್ಬರದ ಬಳಕೆ: ಸಾಮೆಯಲ್ಲಿ ಹೆಕ್ಟೇರಿಗೆ 20 ಕೆ.ಜಿ ಯಷ್ಟು ಪೊಟ್ಯಾಸಿಯಂ ಬಳಸುವುದರಿಂದ ಶೇ.17.85 ಹೆಚ್ಚಿನ ಧಾನ್ಯದ ಇಳುವರಿಮತ್ತು ಶೇ.13.72 ಮೇವಿನ ಇಳುವರಿ ಪಡೆಯಬಹುದು. ಹೆಚ್ಚಿನ ಇಳುವರಿಯೊಂದಿಗೆ ರೂ.22729/- ನಿವ್ವಳ ಲಾಭ ಮತ್ತು 2.01 ಲಾಭ ವೆಚ್ಚ ಅನುಪಾತ ಪಡೆಯಬಹುದು.

ನವಣೆಯಲ್ಲಿ ಪೊಟ್ಯಾಸಿಯಂ ಗೊಬ್ಬರದ ಬಳಕೆ : ನವಣೆಯಲ್ಲಿ ಹೆಕ್ಟೇರಿಗೆ 20 ಕೆ.ಜಿ.ಯಷ್ಟು ಪೊಟ್ಯಾಸಿಯಂ ಬಳಸುವುದರಿಂದ ಶೇ.15 ಹೆಚ್ಚಿನ ಧಾನ್ಯದ ಇಳುವರಿ ಮತ್ತು ಶೇ. 10.3 ಮೇವಿನ ಇಳುವರಿ ಪಡೆಯಬಹುದು. ಹೆಚ್ಚಿನ ಇಳುವರಿಯೊಂದಿಗೆ ರೂ.30495/- ನಿವ್ವಳ ಲಾಭ ಮತ್ತು 2.33 ಲಾಭ ವೆಚ್ಚ ಅನುಪಾತ ಪಡೆಯಬಹುದು.

ನಾಟಿ ಭತ್ತದಲ್ಲಿ ನೀರಿನ ಬಳಕೆ ದಕ್ಷತೆಗಾಗಿ ನೀರು ಹಾಯಿಸುವ ಮತ್ತು ಒಣಗಿಸುವ ನೀರು ನಿರ್ವಹಣೆ ವಿಧಾನ: ಭತ್ತದಲ್ಲಿ ನೀರು ಹಾಯಿಸುವ ಮತ್ತು ಒಣಗಿಸುವ (ನೀರು ಇಂಗಿದ 3 ದಿನದ ನಂತರ 5 ಸೆಂ.ಮೀ. ಹಾಯಿಸುವುದು) ವಿಧಾನವನ್ನು ಭತ್ತ ಗರ್ಭಾಂಕುರವಾಗುವವರೆಗೆ ಅಳವಡಿಸಿ ನಂತರದಲ್ಲಿ 3 ಶ 2 ಸೆಂ.ಮೀ. ಎತ್ತರದವರೆಗೆ ನೀರು ನಿಲ್ಲಿಸುವುದರಿಂದ, ಸರಾಸರಿ ಧಾನ್ಯದ ಇಳುವರಿ ಶೇಕಡ 6.00 ರಿಂದ 11.0 ಭಾಗ ಅಧಿಕವಾಗಿ ಹಾಗು ನೀರಿನ ಬಳಕೆಯಲ್ಲಿ ಶೇ.37 ಭಾಗ ಉಳಿತಾಯವಾಗುತ್ತದೆ.

ಭತ್ತದ ಬೆಳೆಯ ಅವಧಿ ಪೂರ್ತಿ 3 ರಿಂದ 2 ಸೆಂ.ಮೀ. ಎತ್ತರದವರೆಗೆ ನೀರು ನಿಲ್ಲಿಸುವ ವಿಧಾನಕ್ಕೆ ಹೋಲಿಕೆ ಮಾಡಿದಾಗ ಇದು ದಾಖಲಾಗಿರುತ್ತ್ತದೆ, ಈ ವಿಧಾನದಲ್ಲಿ ಭತ್ತ ಬೆಳೆಯಲು ಒಟ್ಟು 1165 ಹೆ. ಮೀ.ಮಿ. ನೀರು ಬೇಕಾಗಿದ್ದು ಮತ್ತು ಇದರ ನೀರಿನ ಬಳಕೆ ದಕ್ಷತೆಯು ಪ್ರತಿ ಹೆ. ಮಿ.ಮೀ. ನೀರಿಗೆ 4.92 ಕೆ.ಜಿ ಧಾನ್ಯ ಉತ್ಪಾದನೆಯಾಗಿರುತ್ತದೆ. ಇದು ಇತರೆ ವಿಧಾನಗಳಾದ ಅವಧಿ ಪೂರ್ತಿ ನೀರು ನಿಲ್ಲಿಸುವ (1852 ಹೆ. ಮಿ.ಮೀ ಮತ್ತು 2.90 ಕೆ.ಜಿ/ಹೆ.-ಮಿ.ಮೀ. ಅನುಕ್ರಮವಾಗಿ) ಅಥವಾ ಗದ್ದೆಯಲ್ಲಿ ಸಂತೃಪ್ತಿ ತೇವಾಂಶವನ್ನು ಭತ್ತ ಗರ್ಭಾಂಕುರದವರೆಗೆ ನೀಡುವ (1395 ಹೆ. ಮಿ.ಮೀ. ಮತ್ತು 4.18 ಕೆ.ಜಿ/ಹೆ.- ಮಿ.ಮೀ, ಅನುಕ್ರಮವಾಗಿ) ವಿಧಾನಗಳಿಗಿಂತ ಉತ್ತಮವಾಗಿ ದಾಖಲಾಗಿರುತ್ತದೆ.

ನೀರಾವರಿ ರಾಗಿಯಲ್ಲಿ ರಾಸಾಯನಿಕ ಕಳೆ ನಿರ್ವಹಣೆ: ನಾಟಿಯಾದ ದಿವಸ ಅಥವಾ 3 ದಿವಸಗಳ ಒಳಗೆ ಬೆನ್ಸಲ್ಪೂರಾನ್ ಮಿಥೈಲ್ + ಪ್ರಿಟಿಲಾಕ್ಲೋರ್ 6.6% ಅನ್ನು ಪ್ರತಿ ಎಕರೆಗೆ 1.20 ಕೆ.ಜಿ. ಯಂತೆ 300 ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಕಳೆಗಳನ್ನು ಹತೋಟಿ ಮಾಡಬಹುದು. ಹೆಚ್ಚಿನ ಲಾಭ: ವೆಚ್ಚದ ಅನುಪಾತ (2.56) ಪಡೆಯಬಹುದು.

ಮುಸುಕಿನ ಜೋಳದಲ್ಲಿ ಅಂತರ ಬೆಳೆ:45/75 ಸೆಂ. ಮೀ. ಅಂತರದ ಮುಸುಕಿನ ಜೋಳದ ಜೋಡಿ ಸಾಲುಗಳ ನಡುವೆ 2 ಸಾಲು ಉದ್ದು ಅಥವಾ ಹೆಸರನ್ನು ಬಿತ್ತುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಾಗುವುದಲ್ಲದೆ ಹೆಚ್ಚಿನ ಮುಸುಕಿನ ಜೋಳದ ಸಮನಾಂತರ ಇಳುವರಿ (18%), ನಿವ್ವಳ ಲಾಭ(ರೂ. 62,000/ಹೆ.) ಮತ್ತು ಆದಾಯ ಮತ್ತು ಖಚರ್ಿನ ಅನುಪಾತ (1.95)ವನ್ನು ಪಡೆಯಬಹುದು.

ಜಲ ಕೃಷಿಯಲ್ಲಿ ಮೇವಿನ ಮುಸುಕಿನ ಜೋಳ ಹಾಗೂ ಮೇವಿನ ಅಲಸಂದೆ ಉತ್ಪಾದನಾ ತಾಂತ್ರಿಕತೆ: ಜಲಕೃಷಿ ಪದ್ಧತಿಯಲ್ಲಿ ಮೇವಿಗಾಗಿ ಮುಸುಕಿನ ಜೋಳವನ್ನು ಬೆಳೆಯುವಾಗ ಪ್ರತಿ ಚದರ ಮೀಟರ್ ತಟ್ಟೆಗಳಲ್ಲಿ 2.5 ಕೆ.ಜಿ ಬಿತ್ತನೇ ಬೀಜವನ್ನು ಬಳಸಿ ಬಿತ್ತಿದ 10 ರಿಂದ 14 ದಿವಸಗಳೊಳಗಾಗಿ ಕಟಾವು ಮಾಡುವುದರಿಂದ ಪ್ರತೀ ಕೆ.ಜಿ ಬೀಜಕ್ಕೆ 4-7 ಕೆ.ಜಿ ಉತ್ತಮ ಗುಣಮಟ್ಟದ ಮೇವನ್ನು ಪಡೆಯಬಹುದು.

ಜಲಕೃಷಿ ಪದ್ಧತಿಯಲ್ಲಿ ಮೇವಿಗಾಗಿ ಅಲಸಂದೆ ಬೆಳೆಯುವಾಗ ಪ್ರತಿ ಚದರ ಮೀ. ತಟ್ಟೆಗಳಲ್ಲಿ 2.5 ರಿಂದ 3 ಕೆ.ಜಿ ಬಿತ್ತನೆ ಬೀಜವನ್ನು ಬಳಸಿ ಬಿತ್ತಿದ 11 ರಿಂದ 13 ದಿವಸಗಳೊಳಗಾಗಿ ಕಟಾವು ಮಾಡುವುದರಿಂದ ಪ್ರತೀ ಕೆ.ಜಿ ಬೀಜಕ್ಕೆ ಸರಾಸರಿ 5.5 ಕೆ.ಜಿ ಉತ್ತಮ ಗುಣಮಟ್ಟದ ಮೇವನ್ನು ಪಡೆಯಬಹುದು.

ಅಗಸೆ ಗಿಡ ಮರದಲ್ಲಿ ನೇಪಿಯರ್ ಹುಲ್ಲನ್ನು ಅಂತರ ಬೆಳೆಯಾಗಿ ಬೆಳೆಯುವುದು: ಜೋಡಿ ಸಾಲು (1 ಮೀ. ಅಂತರದಲ್ಲಿ) ಅಗಸೆ ಬೆಳೆಯಲ್ಲಿ 2 ಮೀ ಅಂತರದ ನಡುವೆ 1 ಸಾಲು ನೇಪಿಯರ್ ಹುಲ್ಲನ್ನು ಗಿಡದಿಂದ ಗಿಡಕ್ಕೆ 60 ಸೆಂ.ಮೀ. ಅಂತರದಲ್ಲಿ ಅಥವಾ ಬಹುವಾರ್ಷಿಕ ಜೋಳ (ಸಿಓಎಫ್ಎಸ್-29) ವನ್ನು 30 ಸೆಂ.ಮೀ. ಅಂತರದಲ್ಲಿ 6 ಸಾಲು ಬೆಳೆಯುವುದರಿಂದ ಅಗಸೆ ಹಸಿರು ಸೊಪ್ಪಿನ ಮೇಲೆ ಯಾವುದೇ ದುಷ್ಪರಿಣಾಮವಿಲ್ಲದೆ ಹೆಚ್ಚಿನಹಸಿರು ಹುಲ್ಲನ್ನು (240-245 ಕ್ವಿ/ಎ) ನಿವ್ವಳ ಆದಾಯ (ರೂ. 21,000-22,000/ಎ) ಮತ್ತು ಲಾಭವೆಚ್ಚದ ಅನುಪಾತವನ್ನು (2.23) ಪಡೆಯಬಹುದು.

ಮಣ್ಣು ಮತ್ತು ಕೃಷಿ ರಸಾಯನ ಶಾಸ್ತ್ರ: ಹೆಚ್ಚಿನ ಉತ್ಪಾದನೆಗಾಗಿ ಆಲೂಗೆಡ್ಡೆ ಬೆಳೆಯಲ್ಲಿ ಡಯಾಟೊಮೇಸಿಯಸ್ ಅರ್ಥ್ ಬಳಕೆ: ಸುಧಾರಿತ ಬೇಸಾಯ ಪದ್ಧತಿಗಳ ಶಿಫಾರಸ್ಸಿನ ಶೇ.50 ಗೊಬ್ಬರ + 25 ಟನ್ಕೊಟ್ಟಿಗೆ ಗೊಬ್ಬರ ಪ್ರತಿ ಹೆ., ಜೊತೆಗೆ 150 ಕಿ.ಗ್ರಾಂ./ಹೆ. ಡಯಾಟೊಮೇಸಿಯಸ್ಅಥರ್್ ಬಳಸಿದಾಗ ಶೇ.24.90ರಷ್ಟು ಹೆಚ್ಚಿನ ಆಲೂಗೆಡ್ಡೆಯ ಇಳುವರಿಯನ್ನು ಪಡೆಯಬಹುದು (16.80 ಟನ್/ಹೆ.) ಹಾಗೂ 2.03ರಷ್ಟು ಆದಾಯ : ವೆಚ್ಚ ಪಡೆಯಬಹುದು.

LEAVE A REPLY

Please enter your comment!
Please enter your name here