ಕುಸಿದ ಮಣ್ಣಿನ ಫಲವತ್ತತೆ ; ಕುಲಪತಿ ಕಳವಳ

0

ವಾಯು ಮಾಲಿನ್ಯ, ಜಲ ಮಾಲಿನ್ಯಗಳು ಕಣ್ಣಿಗೆ ಕಾಣಿಸುತ್ತವೆ. ಆದರೆ ಮಣ್ಣಿನ ಮಾಲಿನ್ಯ ಕಣ್ಣಿಗೆ ಕಾಣಿಸುವುದಿಲ್ಲ. ಮಣ್ಣು ಪ್ರತಿ ಜೀವಸಂಕುಲಕ್ಕೂ ಅತ್ಯಗತ್ಯ. ವಿಶ್ವದ ಎಲ್ಲೆಡೆ ಶೇ.33 ರಷ್ಟು ಮಣ್ಣಿನ ಫಲವತ್ತತೆ ಕುಸಿದಿದ್ದು 2050ಕ್ಕೆ ಶೇ.50 ರಷ್ಟು ಮಣ್ಣಿನ ಫಲವತ್ತತೆ ಕುಸಿಯಲಿದೆ ಎಂದು ಅಂದಾಜಿಸಲಾಗಿದೆ ಎಂದು ಕೃಷಿ ವಿಶ್ವವಿ,ದ್ಯಾಲಯ, ಬೆಂಗಳೂರು ಕುಲಪತಿ ಡಾ. ಎಸ್.ವಿ.ಸುರೇಶ ಕಳವಳ ವ್ಯಕ್ತಪಡಿಸಿದರು.

ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ ವಿಭಾಗ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು  ಇಂದು  ಆಯೋಜಿಸಿದ್ದ “ವಿಶ್ವ ಮಣ್ಣು ದಿನಾಚರಣೆ – 2022ರ ಸಮಾರಂಭದಲ್ಲಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡಿದರು ಮಾತನಾಡಿದರು.

ಮಣ್ಣಿನ ಸವಕಳಿ, ಮಾಲಿನ್ಯ ಮತ್ತು ಪೋಷಕಾಂಶಗಳಕೊರತೆ ಆಹಾರ ಭದ್ರತೆಗೆ ಬಹುದೊಡ್ಡ ಧಕ್ಕೆಯನ್ನು ತರುತ್ತವೆ ಹಾಗೂ ರೈತರ ಬಡತನಕ್ಕೆ ಪರೋಕ್ಷ ಕಾರಣವಾಗುತ್ತದೆ. ಈ ನಿಟ್ಟಿನಲ್ಲಿ ಮಣ್ಣು ಪೋಷಕಾಂಶಗಳ ಸಮರ್ಪಕ ಪೂರೈಕೆ ಹಾಗೂ ಆರೋಗ್ಯಕ್ಕೆ ಒತ್ತು ಕೊಟ್ಟು ಕೃಷಿಯಲ್ಲಿ ನಿರ್ವಹಣಾ ಕ್ರಮಗಳಾದ ಬೆಳೆ ಬದಲಾವಣೆ, ಸಮಗ್ರ ಪೋಷಕಾಂಶಗಳ ನಿರ್ವಹಣೆ, ನೀರಿನ ಸಂರಕ್ಷಣೆ ಹಾಗೂ ಹವಾಮಾನಕ್ಕೆ ತಕ್ಕಂತೆ ಬೆಳೆ ಬದಲಾವಣೆ ಮಾಡುವುದರಿಂದ ನಾವು ಮಣ್ಣಿನ ಆರೋಗ್ಯವನ್ನು ಕಾಪಾಡಬಹುದು ಎಂದು ತಿಳಿಸಿದರು.

.ಈ ನಿಟ್ಟಿನಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ನಿರಂತರ ಸಂಶೋಧನೆಗಳನ್ನು ಕೈಗೊಳ್ಳುವುದರ ಜೊತೆಗೆ ಮಣ್ಣಿನ ಆರೋಗ್ಯವನ್ನು ಕಾಪಾಡಲು ಸಿಬ್ಬಂದಿ ತರಬೇತಿ ಘಟಕದ ವತಿಯಿಂದ ನಿರಂತರವಾಗಿ ಸಮಗ್ರ ಪೋಷಕಾಂಶಗಳ ನಿರ್ವಹಣೆ ಕೋರ್ಸ್ನ್ನು ಹಮ್ಮಿಕೊಳ್ಳಲಾಗುತ್ತಿದೆ. ಜೊತೆಗೆ ದೇಸೀ ವಿರ್ದ್ಯಾಥಿಗಳಿಗೆ ಸಮಗ್ರ ಪೋಷಕಾಂಶಗಳ ಹಾಗೂ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ಒಂದು ವರ್ಷದ ಕೋರ್ಸ್ನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಹಿರಿಯ ವಿಜ್ಞಾನಿ ಡಾ. ಜಿ.ಎಸ್.ದಾಸೋಗ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅವರು ಮಾತನಾಡಿ ವಿಶ್ವ ಮಣ್ಣಿನ ದಿನಾಚರಣೆಯನ್ನು ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ. ಇದರಿಂದಾಗಿ ಹೆಚ್ಚಿನ ಜನರಲ್ಲಿ ಅರಿವು ಮೂಡಿಸಲು ಸಹಕಾರಿಯಾಗುತ್ತದೆ. ಶೇ.95ರಷ್ಟು ಆಹಾರ ಮಣ್ಣಿನ ಮೂಲದಿಂದ ಬಂದಿದೆ ಎಂದರು.

ಒಂದು ಸೆಂಟಿಮೀಟರ್ ಮಣ್ಣು ನಿರ್ಮಾಣವಾಗಲು ಒಂದು ಸಾವಿರ ವರ್ಷ ಬೇಕಾಗುತ್ತದೆ. ಒಂದು ಚಮಚ ಮಣ್ಣಿನಲ್ಲಿ ಒಂಬತ್ತು ಮಿಲಿಯನ್ ಸೂಕ್ಷ್ಮಾಣು ಜೀವಿಗಳಿರುತ್ತವೆ. ಪಂಚಭೂತಗಳಲ್ಲಿ ಒಂದಾಗಿರುವ ಮಣ್ಣನ್ನು ಸಂರಕ್ಷಿಸಬೇಕು ಎಂದು ಅಭಿಪ್ರಾಯಪಟ್ಟರು.

 ಕಾರ್ಯಕ್ರಮದಲ್ಲಿ ಡಾ. ಎನ್.ಬಿ. ಪ್ರಕಾಶ್, ಡೀನ್ (ಕೃಷಿ), ಕೃಷಿ ಮಹಾವಿದ್ಯಾಲಯ, ಜಿಕೆವಿಕೆ, ಡಾ. ಕೆ.ಸಿ. ನಾರಾಯಣಸ್ವಾಮಿ, ಶಿಕ್ಷಣ ನಿರ್ದೇಶಕರು, ಡಾ. ಕೆ. ನಾರಾಯಣಗೌಡ, ವಿಸ್ತರಣಾ ನಿರ್ದೇಶಕರು, ಡಾ. ಕೆ.ಬಿ. ಉಮೇಶ್, ಸಂಶೋಧನಾ ನಿರ್ದೇಶಕರು ಮತ್ತು ಡಾ. ಹೆಚ್.ಸಿ. ಪ್ರಕಾಶ್. ಡೀನ್(ಸ್ನಾತಕೋತ್ತರ), ಕೃವಿವಿ, ಜಿಕೆವಿಕೆ, ಬೆಂಗಳೂರು, ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here