ಬಾಯಿಗೂ ಜೇಬಿಗೂ ಸಿಹಿ, ಜೇನು ಕೃಷಿ

0

ಲಾಭದಾಯಕ ಉದ್ದಿಮೆ

ಜೇನು ಕೃಷಿ ಎಲ್ಲಾ ಪ್ರದೇಶಗಳ ರೈತರು ಉಪಕಸುಬಾಗಿ ಅಥವಾ ಮುಖ್ಯ ಕಸುಬಾಗಿ ಕಡಿಮೆ ಬಂಡವಾಳದಿAದ ನಿರ್ವಹಿಸಬಹುದಾದ ಒಂದು ಲಾಭದಾಯಕ ಉದ್ಧಿಮೆಯಾಗಿದೆ. ಜೇನು ಕೃಷಿಗೆಂದೇ ಪ್ರತ್ಯೇಕ ಜಮೀನು, ನೀರು ವಿದ್ಯುತ್‌ಶಕ್ತಿಯ ಅವಶ್ಯಕತೆ ಇರುವುದಿಲ್ಲ.

ಮಕರಂದ

ಈ ಉದ್ಧಿಮೆಯು ಕೃಷಿ , ತೋಟಗಾರಿಕೆ, ಕೃಷಿ ಅರಣ್ಯ , ಕೃಷಿ ಪಶುಪಾಲನೆ ಮುಂತಾದ ಯಾವುದೇ ಸಮ್ಮಿಶ್ರ ಕೃಷಿ ಪದ್ಧತಿಗಳ ಸಂಪನ್ಮೂಲಗಳಿಗೆ ಸ್ಪರ್ಧೆಯೊಡ್ಡದೇ ನಿಸರ್ಗದಲ್ಲಿ ವ್ಯರ್ಥವಾಗಬಹುದಾದ ಸಂಪನ್ಮೂಲಗಳಾದ ಪರಾಗ ಮತ್ತು ಮಕರಂದವನ್ನು ಬಳಸಿಕೊಂಡು ಕೃಷಿಕರಿಗೆ ಲಾಭವನ್ನು ತಂದುಕೊಡುತ್ತದೆ. ಸುಲಭ ತಾಂತ್ರಿಕತೆಯಿರುವ ಇದನ್ನು ಆಸಕ್ತಿ ಇರುವ ಯಾರು ಬೇಕಾದರೂ ಮಾಡಬಹುದು.

ಔಷಧಗುಣ

ಜೇನು ಕುಟುಂಬದ ಮುಖ್ಯ ಉತ್ಪನ್ನವಾದ ಜೇನುತುಪ್ಪವು ಹಲವಾರು ಔಷಧ ಗುಣಗಳನ್ನು ಹೊಂದಿದೆ. ಇದರ ನಿಯಮಿತ ಸೇವನೆ ಆರೋಗ್ಯವನ್ನು ವರ್ಧಿಸುತ್ತದೆ. ಜೇನುಗೂಡಿನಿಂದ ದೊರೆಯಬಹುದಾದ ಇನ್ನಿತರ ಉತ್ಪನ್ನಗಳಾದ ಮೇಣ, ಜೇನು ಅಂಟು, ಜೇನು ವಿಷ, ಪರಾಗ, ರಾಜಶಾಹಿರಸ ಮುಂತಾದವುಗಳು ಕೂಡ ಕೃಷಿಕರ ಆದಾಯ ಹೆಚ್ಚಿಸುವುದರಲ್ಲಿ ಸಹಕಾರಿಯಾಗಬಲ್ಲದು.

ವೈಜ್ಞಾನಿಕ ಕಲೆ

ಜೇನು ಸಾಕಣೆಯು ಒಂದು ವೈಜ್ಞಾನಿಕ ಕಲೆಯಾಗಿ ಬೆಳೆದು ಮಾನವ ಜೀವನದ ಒಂದು ಅಂಗವಾಗಿದೆ. ಜೇನು ಕೃಷಿಯು ಸುಮಾರು 3000 ವರ್ಷಗಳಿಂದಲೂ ಬಳಕೆಯಲ್ಲಿರುವ ಕೃಷಿ ಉಪಕಸುಬಾಗಿದೆ. 1930 ರಿಂದ ಜೇನು ಕೃಷಿಯನ್ನು ನವೀನ ರೀತಿಯ ಪದ್ಧತಿಯಲ್ಲಿ (ಜೇನು ಪೆಟ್ಟಿಗೆಗಳಲ್ಲಿ) ಪ್ರಾರಂಭಿಸಲಾಯಿತು. ಈಗ ಜೇನು ಕೃಷಿ ಜನಪ್ರಿಯವಾಗಿರುವ ಬಹು ಉಪಯೋಗಿ ಸಣ್ಣ ಕೈಗಾರಿಕೆ ಉದ್ಯಮವಾಗಿದೆ. ಜೇನು ತುಪ್ಪವು ಮಾನವನಿಗೆ ನಿಸರ್ಗವಿತ್ತ ಕೊಡುಗೆಯಾಗಿದೆ.

ಜೇನುಗೂಡಿನ ರಚನೆ

ಜೇನುನೊಣಗಳು ಸಂಘ ಜೀವಿಗಳು. ಜಾತಿ ಹಾಗೂ ವಯಸ್ಸಿಗನುಗುಣವಾಗಿ ಗೂಡಿನ ವಿವಿಧ ಚಟುವಟಿಕೆಗಳಲ್ಲಿ ನಿರಂತರವಾಗಿತ್ತದೆ. ಜೇನು ಕುಟುಂಬದಲ್ಲಿ ರಾಣಿ, ಕೆಲಸಗಾರ ಹಾಗೂ ಗಂಡುನೊಣಗಳೆಂಬ ಮೂರು ಜಾತಿಯ ನೊಣಗಳಿರುತ್ತವೆ. ಒಂದು ಕುಟುಂಬದಲ್ಲಿ ಒಂದೇ ಒಂದು ರಾಣಿ , ಸಾವಿರಾರು ಕೆಲಸಗಾರ ನೊಣಗಳು ಹಾಗೂ ನೂರಾರು ಗಂಡುನೊಣಗಳು ಇರುತ್ತವೆ.

ರಾಣಿ ಜೇನು ಹುಳು:

ಇದು ಗೂಡಿನಲ್ಲಿ ಅತೀ ದೊಡ್ಡದಾದ ಏಕಮಾತ್ರ ನೊಣ. ಇದರ ಪ್ರಮುಖ ಕೆಲಸವೆಂದರೆ ಗೂಡಿನಲ್ಲಿ ಮೊಟ್ಟೆಗಳನ್ನು ಇಟ್ಟು ತನ್ನ ಸಂತಾನವನ್ನು ಹೆಚ್ಚಿಸುತ್ತದೆ ಹಾಗೂ ಹುಳುಗಳನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳುತ್ತದೆ. ಅದಕ್ಕಾಗಿಯೇ ತಯಾರಿಸಿದ “ರಾಜ ಶಾಹಿ” (ರಾಯಲ್ ಜೆಲ್ಲಿ) ರಸವನ್ನು ಉಣಿಸುತ್ತವೆ.

ಕೆಲಸಗಾರ ಜೇನು ನೊಣಗಳು:
ಈ ನೊಣಗಳು ರಾಣಿ ಜೇನು ನೊಣ ಮತ್ತು ಗಂಡು ಜೇನು ನೊಣಗಳಿಗಿಂತ ಗಾತ್ರದಲ್ಲಿ ಚಿಕ್ಕದಾಗಿತ್ತವೆ. ಇವು ಹೆಣ್ಣು ಜೇನು ನೊಣಗಳಾಗಿದ್ದು ಸಂತಾನೋತ್ಪತ್ತಿಯ ಕೆಲಸ ಬಿಟ್ಟು ಎಲ್ಲ ಕೆಲಸ ಕಾರ್ಯಗಳನ್ನು ಮಾಡುತ್ತವೆ. ಕೊನೆಯ ಎರಡು ಕಾಲುಗಳು ಪರಾಗ ತರುವ ವ್ಯವಸ್ಥೆಯನ್ನು ಹೊಂದಿವೆ. ಚುಚ್ಚಿದರೆ ವಿಪರೀತ ಉರಿಯಾಗುವಂತಹ ಚುಚ್ಚುವ ಕೊಂಡಿಗಳನ್ನು ಹೊಂದಿವೆ ಅಪಾಯದ ಸಂದರ್ಭಗಳಲ್ಲಿ ತನ್ನ ಗೂಡಿನ ರಕ್ಷಣೆಗೆ ಅದನ್ನು ಉಪಯೋಗಿಸುತ್ತವೆ.

ಗಂಡು ನೊಣ (ಡ್ರೋನ್):

ಈ ನೊಣಗಳು ಗೂಡಿನಲ್ಲಿ ಅಲ್ಪ ಸಂಖ್ಯೆಯಲ್ಲಿರುತ್ತವೆ.  ಬೇಕಾದಾಗ ರಾಣಿ ಜೇನು ನೊಣದೊಂದಿಗೆ ಸಮಾಗಮ ಹೊಂದುತ್ತವೆ. ಹೊಸ ರಾಣಿಯ ಗರ್ಭದಾರಣೆ ಆದ ನಂತರ ಉಳಿಯುವ ಗಂಡು ನೊಣಗಳನ್ನು ಕೆಲಸಗಾರ ನೊಣಗಳು ಕ್ರಮೇಣ ಕೊಂದು ಹೊರಹಾಕುತ್ತವೆ ಅಥವಾ ಆ ಗಂಡುನೊಣಗಳು ಸ್ವಾಭಾವಿಕ ಸಾವನ್ನೇ ಹೊಂದಬಹುದು.

ಮೇಣ

ಜೇನು ಕುಟುಂಬದಲ್ಲಿ ಎರಿಗಳ ರಚನೆ ಮೇಣದಿಂದ ಆಗಿರುತ್ತದೆ. ಒಂದು ಎರಿಯ ಎರಡೂ ಬದಿಯಲ್ಲಿ ಸಾವಿರಾರು ಷದ್ಭುಜಾಕೃತಿಯ ಕಣಗಳಿರುತ್ತವೆ. ಸಾಮಾನ್ಯವಾಗಿ ಎರಿಯ ಮೇಲ್ಭಾಗದಲ್ಲಿ ಜೇನಿನ ಸಂಗ್ರಹಣೆ, ನಂತರದಲ್ಲಿ ಪರಂಗದ ಸಂಗ್ರಃಣೆ ಇರುತ್ತದೆ. ಇನ್ನುಳಿದ ಹೆಚ್ಚು ಭಾಗದಲ್ಲಿ ಮೊಟ್ಟೆ, ಮರಿ ಹಾಗೂ ಕೋಶಾವಸ್ಥೆಯ ಹುಳುಗಳು ಕಂಡುಬರುತ್ತವೆ. ಹೊಸ ರಾಣಿಯನ್ನು ಬೆಳೆಸುವ ಸಂದರ್ಭದಲ್ಲಿ ಕಡಲೆಕಾಯಿ ಆಕಾರದ ರಾಣಿ ಕಣಗಳು ಎರಿಗಳ ಕೆಳಭಾಗದಲ್ಲಿ ಕಂಡು ಬರುತ್ತವೆ.

ಜೇನು ನೊಣ ಗಳ ವಿಧಗಳು:

ಸಾಮಾನ್ಯ ಬಳಕೆಯ ಹೆಸರು ವೈಜ್ಞಾನಿಕ ಹೆಸರು
ಕೋಲು ಜೇನು ಎಪಿಸ್ ಫ್ಲೋರಿಯಾ
ಹೆಜ್ಜೇನು ಎಪಿಸ್ ಡಾರ್ಸೇಟಾ
ತುಡುವೆ ಜೇನು (ಪೆಟ್ಟಿಗೆ ಜೇನು) ಎಪಿಸ್ ಸೆರಾನಾ
ಯುರೋಪಿಯನ್ ಜೇನು ಮಲ್ಲಿಫೆರ ಜೇನು(ಪೆಟ್ಟಿಗೆ ಜೇನು) ಎಪಿಸ್ ಮೆಲ್ಲಿಫೆರಾ

ಮೊದಲೆರಡು ಪ್ರಭೇದಗಳು ಸಾಮಾನ್ಯವಾಗಿ ಕಾಡುಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತವೆ. ಇವು ಗಾಳಿ ಬೆಳಕನ್ನು ಆಶ್ರಯಿಸಿ ಒಂದೇ ಏರಿಯನ್ನು (ಕಾಂಬ್) ಕಟ್ಟಿ ವಾಸಿಸುತ್ತವೆ. ವಲಸೆ ಹೋಗುವ ಸ್ವಭಾವ ಹೆಚ್ಚು. ಉಳಿದ ಎರಡು ತಳಿಯನ್ನು ಸಾಕಲು ಯೋಗ್ಯ.

ಜೇನು ಕೃಷಿಗೆ ಬೇಕಾದ ಉಪಕರಣಗಳು:
1. ಜೇನು ಪೆಟ್ಟಿಗೆ: ಪೆಟ್ಟಿಗೆಯನ್ನು ಯಾವಾಗಲೂ ತೂಕ ಕಡಿಮೆಯಿರುವ ಮತ್ತು ಹೆಚ್ಚುಬಾಳಿಕೆ ಬರುವ ಮರದಿಂದ ತಯಾರಿಸಿ ಉಪಯೋಗಿಸಬೇಕು.
2. ಪೆಟ್ಟಿಗೆ ಇಡುವ ಆಧಾರ: ಪೆಟ್ಟಿಗೆಯನ್ನು ಇರುವ ಮತ್ತು ಇಲಿಗಳ ತೊಂದರೆಯಿAದ ರಕ್ಷಿಸಿಕೊಳ್ಳುವಂತಹ ರೀತಿಯ ಆಧಾರ ಅಂದರೆ ಸ್ಟಂಡ್ ಅನ್ನು ಉಪಯೋಗಿಸಬೇಕು.
3. ಹೊಗೆಯಾಡಿಸುವ ಉಪಕರಣ
4. ಶುಚಿಗೊಳಿಸುವ (ಪೆಟ್ಟಿಗೆ) ಸಾಧನ
5. ಮುಖ ಪರದೆ
6. ರಾಣಿಯನ್ನು ಪ್ರತಿ ಬಂಧಿಸುವ ಪಂಜರ
7. ರಾಣಿ ತಡೆಗೇಟು
8. ಮೊಹರು ತೆಗೆಯುವ ಚಾಕು
9. ಜೇನು ತೆಗೆಯುವ ಯಂತ್ರ
10. ಕೃತಕ ಎರಿ ಮಾಡುವ ಯಂತ್ರ

ಜೇನು ಕುಟುಂಬಗಳನ್ನು ಕೂಡಿಸುವಿಕೆ (ಸಂಗ್ರಹಣೆ):

ಜೇನು ಕುಟುಂಬಗಳನ್ನು ಪ್ರಾಕೃತಿಕವಾಗಿ ಮರಿ ಹಾರಿಸುವಾಗ ಕೂಡಿಸಿಕೊಳ್ಳಬಹುದು. ಅಥವಾ ಒಂದೆಡೆಯಿಂದ ಇನ್ನೊಡೆಗೆ ವಲಸೆ ಬಂದ ಜೇನು ಕುಡಿಗಳನ್ನು ಸೇರಿಸಿಕೊಳ್ಳಬಹುದು.
1. ಜೇನು ಕುಡಿಗಳನ್ನು ಇತರ ಜೇನು ಕೃಷಿಕರಿಂದಲೂ ಹೆಚ್ಚಿನ ಕುಡಿಗಳಿದ್ದರೆ ಸಂಗ್ರಹಿಸಿಕೊಳ್ಳಬಹುದು. ಇತರ ಜೇನಿನ ಸಂಘ ಸಂಸ್ಥೆಗಳಿಂದ ಜೇನು ಕುಡಿಗಳನ್ನು ಕೊಂಡು ಸಹ ಸೇರಿಸಿಕೊಳ್ಳಬಹುದು.
2. ಜೇನು ಪೆಟ್ಟಿಗೆಗಳಿಗೆ ಮೇಣವನ್ನು ಲೇಪಿಸಿ ಕಾಡಿನಲ್ಲಿಡುವುದರಿಂದ ಜೇನು ಕುಡಿಗಳು ಮರಿ ಹಾರಿಸುವ ಸಂದರ್ಭದಲ್ಲಿ ತಾವಾಗಿಯೇ ಪೆಟ್ಟಿಗೆಗಳನ್ನು ಸೇರಿಕೊಳ್ಳುತ್ತವೆ. ಆಂತಹ ಪೆಟ್ಟಿಗೆ ಜೇನನ್ನು ತಂದು ಸಾಕಿಕೊಳ್ಳಬಹುದು.

ಜೇನಿನ ನಿರ್ವಹಣೆಗೆ ಕ್ರಮಗಳು
ಅ) ಮಳೆಗಾಲ:
• ಈ ಕಾಲವನ್ನು ಜೇನು ಅಭಾವದ ಕಾಲ ಎಂದು ಕರೆಯಲಾಗುತ್ತದೆ.
• ಈ ಕಾಲದಲ್ಲಿ ಜೇನು ನೊಣಗಳಿಗೆ ಪ್ರಕೃತಿಯಲ್ಲಿ ಆಹಾರದ ಅಭಾವವಿದ್ದು, ಸಕ್ಕರೆ ಮತ್ತು ನೀರನ್ನು ಸೇರಿಸಿ ಜೇನು ಕುಟುಂಬಗಳಿಗೆ ಪೆಟ್ಟಿಗೆಯಲ್ಲಿ ಒದಗಿಸಬೇಕು.
• ಜೇನು ಪೆಟ್ಟಿಗೆಯಲ್ಲಿರುವ ಜೇನು ಕುಟುಂಬದ ಶಿಥಿಲಗೊಂಡ ಎರಿಗಳನ್ನು ತೆಗೆದು ಹೊಸ ಮೇಣದ ಹಾಳೆಗಳನ್ನು ಅಳವಡಿಸಬೇಕು.
• ಜೇನುಗೂಡಿನ ಸಂಖ್ಯೆಗಳಿಗನುಗುಣವಾಗಿ ಒತ್ತರಿಸುವ ಹಲಿಗೆಯನ್ನು ನೇಡಬೇಕು.
ಆ) ಚಳಿಗಾಲ:
* ಈ ಕಾಲವನ್ನು ಜೇನುಮರಿ ಮಾಡುವ ಕಾಲ ಎಂದು ಕರೆಯಲಾಗುತ್ತದೆ.
* ಈ ಕಾಲದಲ್ಲಿ ಜೇನು ನೊಣಗಳೆಗೆ ಪ್ರಕೃತಿಯಲ್ಲಿ ಆಹಾರ ಲಭ್ಯವರುತ್ತದೆ.
* ಜೇನು ಪೆಟ್ಟಿಗೆಯಲ್ಲಿರುವ ವಿವಿಧ ಹಂತದ ಜೇನು ನೊಣಗಳು ಸಸ್ಯಗಳಲ್ಲಿ ಲಭ್ಯವಿರುವ ಮರಕಂಧವನ್ನು ಜೇನುಗೂಡುಗಳಲ್ಲಿ ಶೇಖರಿಸಿಡುತ್ತವೆ.
* ರಾಣಿ ನೊಣಕ್ಕೆ ಕೆಲಸಗಾರ ನೊಣಗಳು ಹೆಚ್ಚು ಹೆಚ್ಚು ಆಹಾರವನ್ನು ಒದಗಿಸಿ ರಾಣಿಯು ಹೆಚ್ಚು ಮೊಟ್ಟೆಯನ್ನು ಇಡುವಂತೆ ಪ್ರೇರೇಪಿಸುತ್ತವೆ.
* ರಾಣಿಯು ಒಂದು ದಿನಕ್ಕೆ 500 ರಿಂದ 1000 ಮೊಟ್ಟೆಗಳನ್ನು ಇಡುತ್ತದೆ.
* ಉತ್ಪತ್ತಿಯಾದ ಮರಿ (6 ರಿಂದ 9 ದಿನ) ನೊಣಗಳ ತಲೆಯಲ್ಲಿನ ಹೈಪೋಪೆರೆಂಜಿಯಲ್ ಗ್ರಂಥಿಯಲ್ಲಿ ರಾಜಶಾಹಿ ರಸ ಉತ್ಪತ್ತಿಯಾಗುತ್ತದೆ. ಈ ರಾಜಶಾಹಿ ರಸವನ್ನು ವೆಚ್ಚ ಮಾಡಲು ರಾಣಿ ಕಣಗಳನ್ನು ನಿರ್ಮಿಸಿ, ರಾಣಿ ಮೊಟ್ಟೆಯಿಡುವಂತೆ ಪ್ರೇರೇಪಿಸುತ್ತವೆ. ಈ ರಾಣಿ ಕಣಗಳಿಗೆ ಆಹಾರವಾಗಿ ರಾಜಶಾಹಿ ರಸವನ್ನು ಉಣಿಸುತ್ತವೆ.
* ಈ ಕಾಲದಲ್ಲಿ ಹೊಸ ಜೇನು ಪೆಟ್ಟಿಗೆಗಳಿಗೆ ಜೇನು ಕುಟುಂಬಗಳನ್ನು ವರ್ಗಾಯಿಸಿ, ಅವುಗಳ ಸಂಖ್ಯೆಯನ್ನು ಹೆಚ್ಚಿಸಬಹುದಾಗಿದೆ.

ಕೀಟ ಮತ್ತು ರೋಗ ಬಾಧೆ

ನೊಣಗಳ ಪ್ರಮುಖವಾದ ಶತೃಗಳೆಂದರೆ ಮೇಣದ ಪತಂಗ, ಇರುವೆಗಳು, ನುಸಿಗಳು, ಇತ್ಯಾದಿ. ಅಡಿ ಹಲಗೆಯನ್ನು ಆಗಾಗ ಸ್ವಚ್ಚಗೊಳಿಸುತ್ತಿರಬೇಕು. ಪೆಟ್ಟಿಗೆಯಲ್ಲಿ ಬಿರುಕುಗಳಿಲ್ಲದಂತೆ ನೋಡಿಕೊಂಡು, ನೊಣಗಳಿಂದಾವೃತವಾಗದ ಎರಿಗಳನ್ನು ತೆಗೆದುಹಾಕುವುದರ ಮುಖಾಂತರ ಮೇಣದ ಪತಂಗಗಳನ್ನು ಸುಲಭವಾಗಿ ನಿರ್ವಹಿಸಬಹುದು.

ಇರುವೆಗಳ ಬಾಧೆ

ಮಳೆಗಾಲದಲ್ಲಿ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಜೇನು ಧಾಮದ ಸುತ್ತಲಿನಲ್ಲಿ ಕಂಡುಬರುವ ಇರುವೆ ಗೂಡುಗಳನ್ನು ನಾಶಪಡಿಸುವುದು. ಪೆಟ್ಟಿಗೆಯನ್ನು ಒಂದು ಸ್ಟ್ಯಾಂಡ್ ಮೇಲಿರಿಸಿ ಕೆಳಗೆ  ನೀರನ್ನು ಇರಿಸುವುದರ ಮುಖಾಂತರ ಇರುವೆಗಳ ಭಾದೆಯನ್ನು ತಡೆಯಬಹುದು.

ರೋಗಗಳಲ್ಲಿ, ಥೈಸಾಕ್ ಬ್ರೂಡ್ ನಂಜುರೋಗ ಪ್ರಮುಖವಾಗಿದ್ದು, ರೋಗಲಕ್ಷಣ ಕಾಣಿಸಿಕೊಂಡ ಹೊಸದರಲ್ಲಿಯೇ ರಾಣಿಯನ್ನು 10 ದಿನಗಳ ಕಾಲ ಪಂಜರದೊಳಗೆ ಇರಿಸುವುದರ ಮುಖಾಂತರ ರೋಗಬಾಧೆದೆ ತಡೆಯಬಹುದು.

ಉತ್ಪಾದನೆ, ಉತ್ಪನ್ನಗಳು ಮತ್ತು ಉಪಯೋಗಗಳು

* ಒಂದು ಜೇನು ಪೆಟ್ಟಿಗೆಯಿಂದ ಸರಾಸರಿ 5 ರಿಂದ 7 ಕೆ.ಜಿ. ಜೇನುತುಪ್ಪವನ್ನು 8 ರಿಂದ 10 ದಿನಗಳ ಅಂತರದಲ್ಲಿ ಒಟ್ಟು ನಾಲ್ಕು ಬಾರಿ ಏಪ್ರಿಲ್ ನಿಂದ ಮೇ ವರೆಗೆ ಪಡೆಯಬಹುದು.
* ಒಂದು ಜೇನು ಪೆಟ್ಟಿಗೆಯಿಂದ ಸರಾಸರಿ 2 ರಿಂದ 3 ಮರಿಜೇನು ಕುಟುಂಬಗಳನ್ನು ಡಿಸೆಂಬರ್ ಮತ್ತು ಜನವರಿ ತಿಂಗಳುಗಳಲ್ಲಿ ಪಡೆಯಬಹುದು.
* ದೇಶದಲ್ಲಿ ಸುಮಾರು 2.5 ಲಕ್ಷ ಜೇನು ಸಾಕಾಣಿಕೆದಾರರಿದ್ದು 52,000 ಟನ್‌ಗಳಷ್ಟು ಉತ್ತಮ ಗುಣಮಟ್ಟದ ಜೇನುತುಪ್ಪವನ್ನು ಉತ್ಪಾದಿಸಲಾಗುತ್ತಿದೆ.  ರೂ.350 ಕೊಟಿಗೂ ರಫ್ತು ವಹಿವಾಟು ನಡೆಯುತ್ತಿದೆ.
* ಜೇನು ಕೃಷಿಯಿಂದ ಜೇನು ತುಪ್ಪ, ಜೇನು ಮೇಣ, ರಾಜಶಾಹಿರಸ, (ರಾಯಲ್ ಜೆಲ್ಲಿ), ಜೇನು ವಿಷ ಮತ್ತು ಜೇನು ಅಂಟು ಉತ್ಪಾದನೆಯಾಗುತ್ತದೆ.
* ಜೇನು ತುಪ್ಪವನ್ನು ಮನೆ ಔಷಧವಾಗಿ, ಸೌಂದರ್ಯ ವೃದ್ಧಿಗಾಗಿ ಹಾಗೂ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ.
* ಜೇನು ತುಪ್ಪ, ರಾಜಶಾಹಿರಸಗಳನ್ನು ಆಹಾರ ಸಂಸ್ಕರಣಾ ಘಟಕಗಳಲ್ಲಿ ಕಚ್ಚಾ ಸಾಮಾಗ್ರಿಗಳನ್ನಾಗಿ ಉಪಯೋಗಿಸುತ್ತಾರೆ.
* ಜೇನು ಮೇಣ ಮತ್ತು ಜೇನು ಅಂಟುಗಳನ್ನು ಬಣ್ಣದ ತಯಾರಿಕಾ ಘಟಕಗಳಲ್ಲಿ ಉಪಯೋಗಿಸುತ್ತಾರೆ.
* ಜೇನು ಕೃಷಿಯಲ್ಲಿ ಮುಖ್ಯವಾಗಿ ಜೇನುನೊಣ ಸಾಕಾಣಿಕೆ ಮತ್ತು ಜೇನು ಪೆಟ್ಟಿಗೆಗಳ ನಿರ್ವಹಣೆ ಪ್ರಮುಖವಾಗಿರುತ್ತದೆ.

ಜೇನುತುಪ್ಪ

ಜೇನು ನೊಣಗಳು ತಮ್ಮ ಹೀರು ಕೊಳವೆಗಳ ಮೂಲಕ ಹೂಗಳಲ್ಲಿನ ಮಕರಂದ ಹೀರಿ ಮಧು ಚೀಲದಲ್ಲಿ ಶೇಖರಿಸಿಕೊಳ್ಳುತ್ತವೆ. ನಂತರ ಅನೇಕ ಕಿಣ್ವಗಳೊಂದಿಗೆ ಸಂಯೋಜನೆಗೊಂಡ ಸುಕ್ರೋಸ್ ಸಕ್ಕರೆಯನ್ನು ಗ್ಲೂಕೋಸ್ ಮತ್ತು ಫ್ರಕ್ಟೋಸ್‌ಗಳಾಗಿ ಪರಿವರ್ತನೆ ಮಾಡುವ ಸಮಯದಲ್ಲಿ ಜೇನುನೊಣಗಳು ತಮ್ಮ ರೆಕ್ಕೆಗಳಿಂದ ಗಾಳಿ ಬೀಸಿ ನೀರಿನ ಅಂಶವನ್ನು ಕಡಿಮೆ ಮಾಡುತ್ತವೆ. ಈ ಮಕರಂದವೇ ಜೇನುತುಪ್ಪ.

ಇಳುವರಿ ಮತ್ತು ಜೇನು ಕೃಷಿ ಆರ್ಥಿಕತೆ 

ಪ್ರತಿ ಕುಟುಂಬದಿಂದ ಆಯಾ ಪ್ರದೇಶಕ್ಕೆ ಅನುಗುಣವಾಗಿ ಜೇನಿನ ಇಳುವರಿ 8-25 ಕಿ.ಗ್ರಾಂ ತುಡುವೆ ಜೇನಿನಿಂದ ಹಾಗೂ 30-35 ಕಿ.ಗ್ರಾಂ ಯುರೋಪಿಯನ್ ಜೇನಿನಿಂದ ದೊರೆಯುತ್ತದೆ. ಖರ್ಚು ಕಳೆದು ಉತ್ತಮ ನಿವ್ವಳ ಆದಾಯ ಪಡೆಯಬಹುದು. ಅಲ್ಲದೆ ಬೆಳೆಗಳ ಇಳುವರಿಯೂ ಸಹ ಜೇನುನೊಣಗಳ ಪರಾಗಸ್ಪರ್ಶದಿಂದಾಗಿ ಗಮನಾರ್ಹವಾಗಿ ಹೆಚ್ಚಾಗುತ್ತದೆ.

ಜೇನುಕೃಷಿಯಿಂದ ರೈತರಿಗೆ ಹೆಚ್ಚು ಲಾಭ:

ಜೇನುನೊಣಗಳು ಪರಾಗಸ್ಪರ್ಶದ ಮೂಲಕ ನಮ್ಮ ಹಲವಾರು ಬೆಳೆಗಳಲ್ಲಿ ಉತ್ಪಾದನೆಯ ಹೆಚ್ಚಳಕ್ಕೆ ಕಾರಣವಾಗಿ, ಪರೋಕ್ಷವಾಗಿ ರೈತರ ಆದಾಯವನ್ನು ಹೆಚ್ಚಿಸುತ್ತವೆ. ಜೇನುನೊಣಗಳ ಉಪಸ್ಥಿತಿಯಿಂದಾಗಿ ವಿವಿಧ ಬೆಳೆಗಳಲ್ಲಿನ ಇಳುವರಿಯು ಶೇಕಡವಾರು 20 ರಿಂದ 100 ರವರಗೆ ಹೆಚ್ಚಾಗುವುದು ದೃಡಪಟ್ಟಿದೆ. ವಿವಿಧ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಮಾವು, ಸೇಬು, ಸೀಬೆ ಹಾಗೂ ತರಕಾರಿ ಬೆಳೆಗಳಾದ ಟೊಮಾಟೊ, ಸೀಮೆಬದನೆ, ಸೌತೆ, ಕುಂಬಳ, ಹಾಗಲ ಇವುಗಳೆಲ್ಲವೂ ಜೇನುನೊಣಗಳ ಪರಾಗಸ್ಪರ್ಶದಿಂದ ಪ್ರಯೋಜನ ಹೊಂದುವ ಕೆಲವು ಉದಾಹರಣೆಗಳು.

ಬೆಳೆಗಳ ಇಳುವರಿ

ಜೇನುನೊಣಗಳ ಪರಾಗಸ್ಪರ್ಶದಿಂದ ಬೆಳೆಗಳ ಇಳುವರಿಯ ಹೆಚ್ಚಳದಿಂದಾಗುವ ಲಾಭವನ್ನು ರೈತರು ಗಣನೆಗೆ ತೆಗೆದುಕೊಂಡಲ್ಲಿ ಅದು ಜೇನು ಕುಟುಂಬದಿಂದ ದೊರೆಯಬಹುದಾದ ಎಲ್ಲಾ ಉತ್ಪನ್ನಗಳ ಒಟ್ಟು ಬೆಲೆಯ ಸುಮಾರು 20 ಪಟ್ಟಿಗಳಿಗಿಂತಲೂ ಅಧಿಕವಾಗಿರುತ್ತದೆ. ಜೇನು ಕೃಷಿ ಆರಂಭಿಸುವುದರಿAದ ರೈತರು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೆಚ್ಚು ಲಾಭ ಗಳಿಸಬಹುದು.

ಲೇಖಕರು:

ಪಂಕಜ ಬಿ.ಡಿ., ನಾಗರಾಜ್ ಗೋಕಾಂವಿ., ಭರತ್ ಕುಮಾರ್ ಟಿ.ಪಿ., ಡಾ.ಸುಕನ್ಯಾ ಟಿ.ಎಸ್., ಡಾ.ಗಿರೀಶ್ ಆರ್., ಡಾ.ಯೋಗೀಶಾರಾಧ್ಯ ಆರ್.

LEAVE A REPLY

Please enter your comment!
Please enter your name here