ಬೆಂಗಳೂರು: ಜೂನ್ ೧೬ (ಯು.ಎನ್.ಐ.) ಬೆಂಗಳೂರಿನ ಜಿಕೆವಿಕೆಯಲ್ಲಿ ಜೂನ್ 18 ರಿಂದ ಜೂನ್ 24ರವರೆಗೆ ಸಸ್ಯ ಸಂತೆ ಆಯೋಜಿಸಲಾಗಿದೆ ಎಂದು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆಯ ಕೃಷಿವಿಜ್ಞಾನಿ ಡಾ. ಎಲ್. ಜಗದೀಶ್ ತಿಳಿಸಿದ್ದಾರೆ.
ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಆವರಣ, ಜಿಕೆವಿಕೆ ವೆಸ್ಟ್ ಗೇಟ್ ಬೆಂಗಳೂರು ಇಲ್ಲಿ ಸಸ್ಯ ಸಂತ ನಡೆಯುತ್ತದೆ. ದಿನಾಂಕ 18 ಜೂನ್ 2022 ರಂದು ಸಸ್ಯ ಸಂತೆಯ ಉದ್ಘಾಟನೆಯ ಜೊತೆಗೆ ವಿಶ್ವ ಪರಿಸರ ದಿನಾಚರಣೆ ಹಾಗೂ ವನ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುತ್ತೇವೆ. ಇದರ ಉದ್ಘಾಟನೆಯನ್ನು ಚಲನಚಿತ್ರ ನಟ ಹಾಗೂ ಕಿರುತರೆ ನಾಯಕಿ ಕು; ರಂಜನಿ ರಾಘವನ್ ಅವರು ಉದ್ಘಾಟಿಸುತ್ತಾರೆ ಎಂದು ಡಾ. ಜಗದೀಶ್ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗಣ್ಯರಿಂದ ಗಿಡ ನೆಡುವ ಕಾರ್ಯಕ್ರಮ, ಹಣ್ಣು, ತರಕಾರಿ, ಸುಗಂಧ ದ್ರವ್ಯ, ಮತ್ತು ಪುಷ್ಪ ಸಸಿಗಳು, ಕೈ ತೋಟದ ಬೀಜಗಳು, ಮೌಲ್ಯವರ್ಧಿತ ಮಣ್ಣು, ಹಣ್ಣಿನ ನೊಣಕ್ಕೆ ಆಕರ್ಷಕ ಬಲೆಗಳು (ಮಿಥೈಲ್ ಯುಜಿನಾಲ್ & ಕ್ಯೂ ಕ್ಯೂರ್ ಬಲೆಗಳು), ಎರೆಹುಳು ಗೊಬ್ಬರ, ತೋಟಗಾರಿಕೆ ಮಾಹಿತಿ ಕೈಪಿಡಿ, ತೋಟಗಾರಿಕೆಯ ವಿವಿಧ ಪರಿಕರಗಳು ಮತ್ತು ಮೌಲ್ಯವರ್ಧಿತ ಸಂಸ್ಕರಿಸಿದ ಪದಾರ್ಥಗಳ ಮಾರಾಟವಿರುತ್ತದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
ಡಾ. ಎಸ್.ಎಲ್ .ಜಗದೀಶ್
ಸಹ ಸಂಶೋಧನಾ ಮತ್ತು ವಿಸ್ತರಣಾ ನಿರ್ದೇಶಕರು
ಪ್ರಾದೇಶಿಕ ತೋಟಗಾರಿಕಾ ಸಂಶೋಧನೆ ಮತ್ತು ವಿಸ್ತರಣಾಕೇಂದ್ರ, ಬೆಂಗಳೂರು – 560065 ದೂರವಾಣಿ: 080-29720521 ಇಮೈಲ್: [email protected]
Good to hear. About this.keep me informed for future ones