ಜೇನುಕುಟುಂಬಗಳನ್ನು ನಾಶ ಮಾಡಬೇಡಿ

0
workshop on honybees

ಸಾಂಪ್ರದಾಯಿ ರೀತಿಯಲ್ಲಿ ಜೇನು ಸಂಗ್ರಹಣೆ ಮಾಡುವುದರಿಂದ ಜೇನುಕುಟುಂಬಗಳು ನಾಶವಾಗುವ ಸಾಧ್ಯತೆಗಳು ಅಧಿಕ. ಆದ್ದರಿಂದ ಈ ಕಾರ್ಯ ಮಾಡುವಾಗ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದು ಬೆಂಗಳೂರು ಕೃಷಿವಿಶ್ವವಿದ್ಯಾಲಯದ ಕುಲಪತಿ ಡಾ. ರಾಜೇಂದ್ರಪ್ರಸಾದ್ ಸಲಹೆ ನೀಡಿದದರು.

ಅವರು ಇಂದು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಮತ್ತು ಅಖಿತ ಭಾರತ ಸುಸಂಘಟಿತ ಜೇನುನೋಣ ಮತ್ತು ಪರಾಗಸ್ಪರ್ಶಗಳ ಸಂಶೋಧನಾ ಪ್ರಾಯೋಜನೆ, ಕರ್ನಾಟಕ ರಾಜ್ಯ ತೋಟಗಾರಿಕೆ ಮಿಷನ್ ಏಜೆನ್ಸಿ. ತೋಟಗಾರಿಕೆ ಇಲಾಖೆ,  ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ  ಸಂಯುಕ್ತ ಆಶ್ರಯದಲ್ಲಿ “ಅಧಿಕ ಬೆಳೆ ಇಳುವರಿ ಮತ್ತು ಸುಸ್ಥಿರ ಅದಾಯಕ್ಕಾಗಿ ಜೇನುಕೃಷಿ” ರಾಜ್ಯಮಟ್ಟದ ಜೇನು ಕೃಷಿ ತಾಂತ್ರಿಕ ವಿಚಾರ ಸಂಕಿರಣ ಮತ್ತು ಮಧುಮೇಳದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಸಾಂಪ್ರದಾಯಿಕ ಶೈಲಿಯಲ್ಲಿ ಜೇನು ಸಂಗ್ರಹಿಸುವಾಗ ಜೇನುಹುಟ್ಟು ಅಥವಾ ಗೂಡುಗಳಿಗೆ ಬೆಂಕಿ ನೀಡುವ ಅಥವಾ ದಟ್ಟವಾದ ಹೊಗೆ ಹಾಕಲಾಗುತ್ತದೆ. ಇದರಿಂದ ಜೇನುಗೂಡುಗಳಲ್ಲಿರುವ ಸೈನಿಕ ನೊಣಗಳು, ರಾಣಿಜೇನು ಸಾವನ್ನಪುತ್ತವೆ. ಇಂಥ ವಿಧಾನಗಳನ್ನು ಸತತವಾಗಿ ಅನುಕರಿಸುವುದರಿಂದ ಜೇನುಕುಟುಂಬಗಳು ಅಳಿಯುತ್ತವೆ. ಆದ್ದರಿಂದ ಇಂಥ ವಿಧಾನಗಳನ್ನು ಅನುಸರಿಸಬಾರದು. ಜೇನು ಸಂಗ್ರಹಣೆಗಾರರು ಮತ್ತು ಜೇನುಕುಟುಂಬಗಳಿಗೂ ತೊಂದರೆಯಾಗದಂತೆ ಜೇನು ಸಂಗ್ರಹಿಸುವ ವಿಧಾನಗಳು ಅಭಿವೃದ್ಧಿಯಾಗಿವೆ. ಅವುಗಳನ್ನು ಅನುಕರಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟರು.

ಇಡೀ ರಾಷ್ಟ್ರದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದಲ್ಲ್ಲಿಲಿ  ಮಾತ್ರ ಜೇನು ಕೃಷಿ ಬಗ್ಗೆ ಪ್ರತ್ಯೇಕ ವಿಭಾಗವಿರುತ್ತದೆ. ಕರ್ನಾಟಕ ರಾಜ್ಯವು ಸಾವಯವ ಜೇನುತುಪ್ಪ ಉತ್ಪಾದನೆಯಲ್ಲಿ ರಾಷ್ಟ್ರದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಬೇರೆ ಕೃಷಿ ಉತ್ಪನ್ನಗಳಿಗೆ ಹೋಲಿಸಿದಾಗ ಜೇನುತುಪ್ಪಕ್ಕೆ ಉತ್ತಮ ಮಾರುಕಟ್ಟೆ ವ್ಯವಸ್ಥೆಯಿದೆ. ಇದು ಇನ್ನೂ ಅತ್ಯುತ್ತಮಗೊಂಡು ಹೊರ ದೇಶಗಳಿಗೂ ರಫ್ತುಗೊಂಡರೆ ಉತ್ತಮ ಎಂದು ತಿಳಿಸಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆಶಯದಂತೆ ರೈತರ ಆಧಾಯ ದ್ವಿಗುಣಗೊಳ್ಳಲು ಜೇನು ಕೃಷಿಯನ್ನು ಸಹ ಒಂದು ಪೂರಕ ಕಸುಬಾಗಿ ಕೈಗೊಳ್ಳುವುದು ಅನಿವಾರ್ಯ. ಜೇನು ಸಾಕಣೆಯಿಂದ ಬೆಳೆಗಳ ಇಳುವರಿ ಹೆಚ್ಚುವುದರ ಜೊತೆಗೆ ಜೇನುತುಪ್ಪ ಪಡೆದು ಹೆಚ್ಚಿನ ಆಧಾಯ ಗಳಿಸಬಹುದು ಮತ್ತು ಪರಿಸರವನ್ನೂ ಉಳಿಸಬಹುದು. ಈ ದಿಶೆಯಲ್ಲಿ  ಉತ್ತಮ ಆಧಾಯಪಡೆಯಲು ಜೇನುಕೃಷಿಕರೆಲ್ಲ ಒಂದಾಗಿ ಸಹಕಾರ ಸಂಘದ ಮಾದರಿಯಲ್ಲಿ ಬೆಳೆಗಾರರ ಫೆಡರೇಷನ್ ಆರಂಭಿಸುವದು ಸೂಕ್ತವೆಂದು ಸಲಹೆ ನೀಡಿದರು.

workshop on honybees

ಕಾರ್ಯಕ್ರಮದಲ್ಲಿ  ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರಾದ ಹೇಮಲತಾ,  ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ  ಸಹಾಯಕ ನಿರ್ದೇಶಕ  ಮೊಸಸ್, ಕೃಷಿ ವಿವಿ ವಿಸ್ತರಣಾ ನಿರ್ದೇಶಕ. ಎಂ.ಎಸ್. ನಟರಾಜು, ಡೀನ್ ಡಾ. ಎಂ. ಬೈರೇಗೌಡ, ಹಾಗೂ ವಿದ್ಯಾರ್ಥಿ ಕ್ಷೇಮ ವಿಭಾಗದ ಡೀನ್   ಡಾ. ಆರ್.ಸಿ. ಗೌಡ,  ಜೇನುಕೃಷಿ ವಿಭಾಗದ ಮುಖ್ಯಸ್ಥರಾದ ಡಾ. ಜಿ.ಸಿ. ಕುಬೇರಪ್ಪ ಇವರು  ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here