ನೀರು ಸಂಗ್ರಹಣಾ ಕೊಳಗಳಲ್ಲಿ ಮೀನು ಮರಿ ಸಾಕಣೆ

0

ಮೀನುಮರಿ ಬಿತ್ತನೆಗೆ ಪೂರ್ವಸಿದ್ಧತೆಗಳು

ಮಣ್ಣಿನ ಕೊಳಗಳಾದರೆ, ಮಧ್ಯಭಾಗದಲ್ಲಿ 10 ಅಡಿ ಉದ್ದ, 5 ಅಡಿ ಅಗಲ ಮತ್ತು 2 ಅಡಿ ಆಳವಿರುವಂತೆ ಗುಳಿಯನ್ನು ಮಾಡಬೇಕು. ಕೊಳದ ಹೊರ ತೂಬಿಗೆ ಸಣ್ಣ ಕಣ್ಣಿನ ಪ್ಲಾಸ್ಟಿಕ್ ಪರದೆಯನ್ನು ಕಟ್ಟಬೇಕು. ಕಲ್ಲಿನ ಚಪ್ಪಡಿ ಅಥವಾ ಸಿಮೆಂಟಿನಿAದ ನಿರ್ಮಿತವಾದ ಕೊಳಗಳಾದರೆ ಹೊರ ತೂಬಿನ ಒಳತುದಿಯ ಸುತ್ತ 1ಳಿ ಅಡಿ ನೀರು ಸದಾ ನಿಲ್ಲುವಂತೆ ಸಿಮೆಂಟ್ ದಿಂಡನ್ನು ಕಟ್ಟಿ ಅದರ ಮೇಲ್ಭಾಗಕ್ಕೆ ಸಣ್ಣ ಕಣ್ಣಿನ ಪರದೆಯನ್ನು ಅಳವಡಿಸಬೇಕು. ಪರದೆಗಳನ್ನು ಆಗಾಗ ಸ್ವಚ್ಛಗೊಳಿಸಬೇಕು.

ಕೊಳದ ತಳಕ್ಕೆ ಸುಮಾರು 30 ಸೆಂ.ಮೀ. ದಪ್ಪದಷ್ಟು ಕೆಂಪು ಮಣ್ಣನ್ನು ಹರಡಬೇಕು. ಹೊರತೂಬಿನ ಬದಿಯಲ್ಲಿಯೇ ಕೊಳವೆ ಬಾವಿಯ ನೀರು ಒಂದು ಕಲ್ಲಿನ ಚಪ್ಪಡಿಯ ಮೇಲೆ ಸಿಡಿದುಬೀಳುವಂತೆ ಮಾಡಬೇಕು. ಕೊಳಗಳಲ್ಲಿ ಗಿಡಗಂಟೆಗಳು ಮತ್ತು ಪಾಚಿ ಬೆಳೆದಿದ್ದರೆ, ಅವುಗಳನ್ನು ಸಂಪೂರ್ಣವಾಗಿ ತೆಗೆದುಹಾಕಿ ಸ್ವಚ್ಛಮಾಡಬೇಕು.

ಕೊಳದ ತಳಕ್ಕೆ ಪ್ರತಿ ಚ.ಮೀ.ಗೆ 100 ಗ್ರಾಂನAತೆ ಸುಣ್ಣವನ್ನು ಹಾಕಬೇಕು. ಹಕ್ಕಿ ಪಕ್ಷಿಗಳು ಮೀನು ಮರಿಗಳನ್ನು ತಿನ್ನದಂತೆ ತಡೆಯಲು ಕೊಳದ ಮೇಲೆ ಬಲೆ ಅಥವಾ ಪ್ಲಾಸ್ಟಿಕ್ ದಾರವನ್ನು ಕಟ್ಟಬೇಕು.ಹಾವು ಮತ್ತು ಕಪ್ಪೆಗಳನ್ನು ತಡೆಯಲು ಪ್ಲಾಸ್ಟಿಕ್ ತಾಟನ್ನು ಕೊಳದ ಸುತ್ತ ಕಟ್ಟಬೇಕು.

ಹಸಿ ಸಗÀಣಿಯನ್ನು ಪ್ರಾರಂಭದಲ್ಲಿ ಪ್ರತಿ ಚ. ಮೀ. ಗೆ 400 ಗ್ರಾಂ. ನಂತೆ ಕೊಳದ ಹೊರ ತೂಬಿನ ವಿರುದ್ಧ ದಿಕ್ಕಿನ ಮೂಲೆಯಲ್ಲಿ ರಾಶಿ ಹಾಕಬೇಕು.ಕೊಳವೆ ಬಾವಿಗಳ ನೀರಿನಲ್ಲಿ ಕರಗಿದ ಆಮ್ಲಜನಕ ಕಡಿಮೆ ಇರುತ್ತದೆ. ಇದನ್ನು ಹೋಗಲಾಡಿಸಲು ಒಳ ತೂಬಿಗೆ ಸಣ್ಣ ರಂಧ್ರವಿರುವ ಪೈಪನ್ನು ಅಳವಡಿಸಿ ನೀರನ್ನು ಬಿಡುವುದರಿಂದ ಆಮ್ಲಜನಕ ಉತ್ಪತ್ತಿಯಾಗುತ್ತದೆ.

ಮೀನುಮರಿ ಬಿತ್ತನೆ

ಸಗಣಿಯನ್ನು ಹಾಕಿದ ಒಂದು ವಾರದ ನಂತರ ಮೀನು ಮರಿಗಳನ್ನು ಬಿತ್ತನೆ ಮಾಡಬೇಕು. ಸಂಗ್ರಹಣಾ ಕೊಳಗಳಲ್ಲಿ ಬಿತ್ತನೆ ಮಾಡಲು ಸಾಮಾನ್ಯಗೆಂಡೆ ಮೀನು ಸೂಕ್ತವಾದ ತಳಿ. ಅಜೋಲ್ಲ, ಲೆಮ್ನ ಮತ್ತು ಹುಲ್ಲಿನ ಸೌಕರ್ಯವಿರುವವರು ಹುಲ್ಲುಗೆಂಡೆ ತಳಿಯನ್ನು ಸಹ ಬಿತ್ತನೆ ಮಾಡಬಹ್ಮದು. ಪ್ರೆöÊ ಮರಿಗಳನ್ನು ಪ್ರತಿ ಚ.ಮೀ.ಗೆ 20 ರಿಂದ 30 ರಂತೆ ಬಿತ್ತನೆ ಮಾಡಬೇಕು.

ಆಹಾರ ಹಾಗು ಗೊಬ್ಬರದ ನಿರ್ವಹಣೆ

ಕಡಲೇಕಾಯಿ ಹಿಂಡಿ ಪುಡಿ ಮತ್ತು ಅಕ್ಕಿ ತೌಡನ್ನು ಸಮಾಪ್ರಮಾಣದಲ್ಲಿ ಮಿಶ್ರಣಮಾಡಿ ಪ್ರತಿ ದಿನ ಪ್ರತಿ 1000 ಮೀನು ಮರಿಗಳಿಗೆ ಈ ಕೆಳಕಂಡAತೆ ನೀಡÀಬೇಕು.

ಅವಧಿ ಪ್ರಮಾಣ (ಗ್ರಾಂ.ಗಳಲ್ಲಿ)

ಮೊದಲನೇ 15 ದಿನಗಳು 25

16 – 30 ದಿನಗಳು 50

31 – 45 ದಿನಗಳು 100

46 – 60 ದಿನಗಳು 150

ಹುಲ್ಲುಗೆಂಡೆ ಮೀನು ಮರಿಗಳಿಗೆ ಲೆಮ್ನ, ಅಜೋಲ್ಲ ಹಾಗೂ ಎಳೆಯ ಸೀಮೆ ಹುಲ್ಲನ್ನು ಸಣ್ಣದಾಗಿ ಕತ್ತರಿಸಿ ಪುಡಿ ಮಾಡಿ ಹಾಕಬೇಕು ಹಾಗೂ ಸದಾ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಆಹಾರದ ಪುಡಿಯನ್ನು ನೀರಿನ ಮೇಲೆ ಪ್ರಸರಣವಾಗುವಂತೆ ದಿನಕ್ಕೆ 2 ಸಲ ಅಂದರೆ ಬೆಳಿಗ್ಗೆ 9 ಗಂಟೆಗೆ ಹಾಗೂ ಸಾಯಂಕಾಲ 5 ಗಂಟೆಗೆ ಹಾಕಬೇಕು.

ಮೋಡದ ವಾತಾವರಣವಿರುವಾಗ, ಮಳೆ ಬರುತ್ತಿರುವಾಗ, ಹಾಗೂ ಚಳಿ ಇರುವಾಗ ಕಡಿಮೆ ಆಹಾರ ಹಾಕಬೇಕು. ಕೊಳಕ್ಕೆ ನೀರು ತುಂಬಿಸುತ್ತಿರುವಾಗ ಮತ್ತು ಹೊರ ತೆಗೆಯುವಾಗ ಆಹಾರ ಹಾಕುವುದನ್ನು ನಿಲ್ಲಿಸಬೇಕು.

ಪ್ಲಾಂಕ್ಟಾನ್ ಸಾಂದ್ರತೆÀ ಮತ್ತು ನೀರಿನ ಬಣ್ಣದ (ಸೂಕ್ತ ಬಣ್ಣ: ತಿಳಿಹಸಿರು) ಆಧಾರದ ಮೇಲೆ ಹಸಿ ಸಗಣಿಯನ್ನು ಪ್ರತಿ ವಾರ ಚ.ಮೀ.ಗೆ 100 ಗ್ರಾಂ. ನಂತೆ ಹಾಕಬೇಕು. ನೀರು ದಟ್ಟ ಹಸಿರು ಬಣ್ಣವಿದ್ದರೆ ಗೊಬ್ಬರ ಹಾಕುವುದನ್ನು ನಿಲ್ಲಿಸಬೇಕು.

ನೀರಿನ ಒಳ್ಳೆಯ ಗುಣಮಟ್ಟ ಕಾಪಾಡಿಕೊಂಡರೆ ಸಾಮಾನ್ಯವಾಗಿ ರೋಗರುಜಿನಗಳ ಭಾದೆ ಇರುವುದಿಲ್ಲ. ಮೀನುಮರಿಗಳನ್ನು ಹಿಡಿಯುವುದು : ಎರಡು ತಿಂಗಳ ಅವಧಿಯಲ್ಲಿ ಮೀನು ಮರಿಗಳು 70 ರಿಂದ 100 ಮಿ.ಮೀ. ಉದ್ದ ಬೆಳೆಯುತ್ತವೆ. ಕೊಳದ ನೀರನ್ನು ಕಡಿಮೆಮಾಡಿ ಎಳೆ ಬಲೆಯ ಸಹಾಯದಿಂದ ಮೀನು ಮರಿಗಳನ್ನು ಸಂಪೂರ್ಣವಾಗಿ ಹಿಡಿದು ಮಾರಾಟ ಮಾಡಬೇಕು, ಇಲ್ಲವೆ ಮರಿಗಳನ್ನು ಸ್ವಂತ ಮೀನು ಸಾಕಾಣೆಗೆ ಬಳಸಬಹುದು.

ಆರ್ಥಿಕತೆ

ಪ್ರತಿ 100 ಚ.ಮೀ. ವಿಸ್ತೀರ್ಣದ ಸಂಗ್ರಹಣಾ ಕೊಳದಲ್ಲಿ ಚ.ಮೀ.ಗೆ 20 ರಂತೆ 2000 ಮೀನು ಮರಿಗಳನ್ನು ಬಿತ್ತನೆ ಮಾಡಿದಾಗ ಶೇಕಡ 80 ರಷ್ಟು ಅಂದರೆ ಸುಮಾರು 1600 ಮರಿಗಳು ಬದುಕುಳಿಯುತ್ತವೆ. ಉತ್ತಮ ಪೋಷಣೆ ಮಾಡಿದ್ದಲ್ಲಿ ಶೇಕಡ 90 ರಿಂದ 95 ರವರೆಗೆ ಬದುಕುಳಿಯುವಿಕೆಯನ್ನು ಪಡೆಯಬಹುದು. ವರ್ಷದಲ್ಲಿ 4-5 ಬೆಳೆಗಳನ್ನು ತೆಗೆದಾಗ ರೂ. ಉತ್ತಮ ಲಾಭ ಪಡೆಯಬಹುದು.

ಡಾ.ಕೆ.ಬಿ.ರಾಜಣ್ಣ, ಡಾ.ಮುತ್ತಪ್ಪ.ಖಾವಿ2 ಮತ್ತು ಡಾ.ವಿಜಯಕುಮಾರ.ಎಸ್

LEAVE A REPLY

Please enter your comment!
Please enter your name here