ಕೃಷಿ ಜಗತ್ತಿನ ಸರಳ ಗಣಿತ ಗೊತ್ತೆ

0
ಲೇಖಕರು: ಧನಂಜಯ ಜೀವಾಳ, ಮೂಡಿಗೆರೆ

ಬೇರೆಲ್ಲ ಕ್ಷೇತ್ರಗಳಿಗಿಂತ ಕೃಷಿಕ್ಷೇತ್ರ ಸೂಕ್ಷ್ಮ. ಏಕೆಂದರೆ ದಿನನಿತ್ಯವೂ ಪ್ರಕೃತಿಯೊಂದಿಗಿನ ಒಡನಾಟ. ಇಂಥ ಜಗತ್ತಿನ ಸರಳ ಗಣಿತದ ಬಗ್ಗೆ ತಿಳಿದಿರಬೇಕಾದ್ದು ಅತ್ಯವಶ್ಯಕ. ನಾನು ಕಾಫಿ ಬೆಳೆಗಾರ ಆದ್ದ ಕಾರಣ ಕಾಫಿ ಬೆಳೆಯನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದೇನೆ. ನೀವು ಸಹ ನೀವು ಬೆಳೆಯುತ್ತಿರುವ ಬೆಳೆಗಳ ಸರಳ ಗಣಿತದ ಲೆಕ್ಕಾಚಾರ ಮಾಡಬಹುದು.

118 ಕೆ.ಜಿ. ಹಸಿ ಕಾಫಿ ಹಣ್ಣುಗಳಿಂದ 50 ಕೆ.ಜಿ. ಚೆರ್ರಿ ಸಿಗುತ್ತದೆ.  ಅದನ್ನ ಹಲ್ಲಿಂಗ್ ಮಾಡಿದ್ರೆ 27 ಕೆ.ಜಿ ಕಾಫಿ ಬೀಜ ಸಿಗುತ್ತದೆ.  ಅದನ್ನು ಹುರಿದು ಪುಡಿ  ಮಾಡಿದ್ರೆ 20 ಕೆ.ಜಿ. ಕಾಫಿಪುಡಿ ಸಿಗುತ್ತೆ. 1 ಕೆ.ಜಿ. ಹಸಿ ಹಣ್ಣು ಅಂದ್ರೆ ಸುಮಾರು   800 ಹಣ್ಣುಗಳು ಬೇಕು.   118 ಕೆ.ಜಿ. ಅಂದ್ರೆ 94400 ಹಣ್ಣುಗಳು ಅಷ್ಟು ಹಣ್ಣಾಗಲು ಕನಿಷ್ಟ 1 ಲಕ್ಷ ಹೂ  ಅರಳಬೇಕು.  ಅಂದರೆ ಅಷ್ಟು ಹೂಗಳನ್ನು ಜೇನುಗಳು ಮತ್ತು ಇನ್ನಿತರ ಕೀಟಗಳು ಪರಾಗಸ್ಪರ್ಶ ಮಾಡಬೇಕು.

ಒಂದು ಕಪ್ ಕಾಫಿ ಮಾಡಲು 5 ಗ್ರಾಂ   ಕಾಫಿ ಪುಡಿ ಬೇಕು.   20 ಕೆ. ಜಿ. ಕಾಫಿ ಪುಡಿಗೆ 1 ಲಕ್ಷ  ಹೂ ಅರಳಬೇಕು.  1 ಕೆ.ಜಿ.ಪುಡಿಗೆ 5000 ಹೂ ಬೇಕು.  ಅಂದರೆ ಒಂದು ಕಪ್‌ ಕಾಫಿಯಾಗಲು 250  ಹೂಗಳನ್ನು ಕೀಟಗಳು ಪರಾಗಸ್ಪರ್ಶ   ಮಾಡಬೇಕು.

ನಮ್ಮನಮ್ಮ ಬದುಕು  ನಾವು ಪಡೆದುಕೊಂಡಿರುವ ಶಿಕ್ಷಣದ ಮೇಲೆ, ಸಂಬಳದ ಮೇಲೆ,  ಕೂಡಿಟ್ಟ ಆಸ್ತಿ ಮೇಲೆ ಅವಲಂಬಿತವಾಗಿದೆ ಎಂದೇ ಯೋಚಿಸುತ್ತೇವೆ. ವಾಸ್ತವದಲ್ಲಿ ಬದುಕು ಜೇನ್ನೊಣ, ಇರುವೆ, ಗೆದ್ದಲು, ಜೇಡ, ಚಿಟ್ಟೆ, ದುಂಬಿಗಳ ರೆಕ್ಕೆ ಬಡಿತದ ಋಣದಲ್ಲಿದೆ.

ಇದು ಒಂದು ಚಿಕ್ಕ ಉದಾಹರಣೆ ಅಷ್ಟೇ. ಪ್ರತೀ ಸಸ್ಯದ ಬದುಕಿನಲಿ ಒಂದಲ್ಲ ಒಂದು ಕೀಟವಿದೆ. ಪ್ರತೀ ಜೀವಿಯ ಬದುಕಿಗೆ ಆಧಾರವಾಗಿ ಒಂದಲ್ಲ ನೂರಾರು ಸಸ್ಯಗಳಿವೆ. ಈ ಜಗತ್ತನ್ನು ನಡೆಸುತ್ತಿರುವುದು ಅಪೂರ್ವ ಸಾಮರ್ಥ್ಯದ, ಅನನ್ಯ ಲಕ್ಷಣದ ಅಜೇಯ ಕೀಟಗಳು.

ಆದ್ದರಿಂದ ಈ ಮುಂದಿನವುಗಳನ್ನು ಬಳಸಬೇಡಿ

Pesticides

Insecticide

Germicide

Fungicide

and

weedicides.

ಎಲ್ಲವನ್ನೂ ನಾವೇ ಅನುಭವಿಸಬೇಕಿಲ್ಲ. ನಾವು ಇವತ್ತೇ ಸಾಯದಿಲ್ವಲ್ಲ. ಇನ್ನೂ ಹಲವು ದಿನ ಬದುಕಿರುತ್ತೇವಲ್ಲ. ಅವತ್ತಿಗೂ ಬೇಕಲ್ಲ. ನಮಗೇ ಅಲ್ಲದಿದ್ದರೂ ನಮ್ಮಂಥ ಕೋಟ್ಯಾಂತರ ಜೀವಿಗಳು ಈ ಭೂಮಿಯಲಿ ಬದುಕಬೇಕಲ್ಲ. ಇನ್ನೂ ಕೋಟಿಕೋಟಿ ವರ್ಷ !

ಕೀಟ ಜಗತ್ತಿನ ಅಗಾಧ ಅನಾವರಣ ೨೦೨೩ರ  ನವಂಬರ್ ಒಂದರಿಂದ ಮೂರರ ವರೆಗೆ ಹಾಸನದ ಗೋಮತಿ ಕಲ್ಯಾಣ ಮಂಟಪದಲಿ ನಡೆಯುತ್ತಿದೆ. ಬನ್ನಿ,  ವಿಸ್ಮಯಕಾರಿ ಕೀಟ ಜಗತ್ತಿನಲ್ಲೊಂದು ಸುತ್ತು ಹಾಕಿ.

ಲೇಖಕರು: ಧನಂಜಯ ಜೀವಾಳ, ಮೂಡಿಗೆರೆ

LEAVE A REPLY

Please enter your comment!
Please enter your name here