ಬೆಳೆಗೆ ಬೋರಾನ್ ಬೇಕೇ ಬೇಕು !

0
ಲೇಖಕರು: ವಿದ್ಯಾ ಮಹೇಶ್

ಯಾವುದೇ ಬೆಳೆಯಲ್ಲಿ ಮೊಗ್ಗು – ಹೂವು – ಕಾಯಿ ಉದುರುತ್ತಿವೆ ಅಂದಾದರೆ ಅದಕ್ಕೆ ಪ್ರಮುಖ ಕಾರಣ ಬೋರಾನ್ ಕೊರತೆ. ಬೋರಾನ್ ಅಂದ್ರೆ ಏನು? ಹೇಗಿರುತ್ತೆ? ಅದರ ಕೆಲಸ ಏನು? ಮುಂತಾದ ವಿವರ ನಿಮಗಾಗಿ….

Boron (ಬೋರಾನ್)

ನಮ್ಮ ದೇಹಕ್ಕೆ ಹೇಗೆ ವಿಟಮಿನ್ಗಳು ಬೇಕೋ ಹಾಗೆ ಬೆಳೆಗಳಿಗೂ ಕೆಲವೊಂದು ಅಂಶಗಳು ತುಂಬ ಕಡಿಮೆ ಪ್ರಮಾಣದಲ್ಲಿ ಬೇಕು.ಬೋರಾನ್ ಧಾತುಗಳು ಬೆಳೆಗಳ ಸಮತೋಲಿತ ಪೋಷಕಾಂಶಗಳಲ್ಲಿ ಒಂದು. ಬೋರಾನ್ ಅನ್ನು ಹೇಗೆಂದರೆ ಹಾಗೆ ಬಳಸಲ್ಲ.ಇದ್ರ ಬಳಕೆ ತುಸು ಹೆಚ್ಚಾದ್ರು ಹೂವು ಹಣ್ಣಿನ ನಷ್ಟ ರೈತನಿಗೆ.

ಭೂಮಿಯಲ್ಲಿ ಸಿಗೋ ಎಲ್ಲಾ ಬೋರಾನ್ ಅಂಶಗಳೂ ಯಾವುದೋ ಕಾಲದಲ್ಲಿ ಉಲ್ಕೆಗಳ ಮೂಖೇನ ಬಂದು ಸೇರಿದ್ದು. ಭೂಮಿಯಲ್ಲಿ ಎರಡು ವಿಧದ ಬೋರಾನ್ ಲಭ್ಯವಿದೆ:

ಒಂದು ಸೋಡಿಯಂ ಬೋರೇಟ್ – ಗಿಡಗಳ ಬೆಳವಣಿಗೆ ಅತಿ ಮುಖ್ಯ. ಇನ್ನೊಂದು ಕ್ಯಾಲ್ಸಿಯಂ ಬೋರೇಟ್ – ಹೂ ಹಣ್ಣುಗಳ ಬೆಳವಣಿಗೆಗೆ ಅವಶ್ಯಕ.

ಬೆಳೆಗಳಿಗೆ ಬೋರಾನ್ ಯಾಕೆ ಬೇಕು :

 *ಮಣ್ಣಿನಿಂದ ಕ್ಯಾಲ್ಸಿಯಂ ಹೀರಿಕೊಳ್ಳಲು.

 *ಪರಾಗ ಸ್ಪರ್ಶಕ್ಕೆ ಅತಿ ಮುಖ್ಯ.ಇದಿಲ್ಲದೆ ಪರಾಗ ರೇಣುಗಳು ಮೊಳೆಯಲ್ಲ.

 *ಗಿಡಗಳಲ್ಲಿ ಸಾರಜನಕದ ಚಯಾಪಚಯ.

 *ಹಾರ್ಮೋನ್ ಉತ್ಪತ್ತಿ.

* ಕೋಶಗಳ ವಿಭಜನೆ ಮೂಲಕ ಗಿಡಗಳ ಬೆಳವಣಿಗೆ.

* ಸಕ್ಕರೆ ಮತ್ತು ಪಿಷ್ಟಗಳ ಪರಿಚಲನೆ.

* ಗಿಡದ ಪ್ರತಿ ಕೋಶಗಳ ವಿಭಜನೆ ಈ ಮೂಲಕ ಅವುಗಳ ಬೆಳವಣಿಗೆ.

ಭೂಮಿಯಲ್ಲಿ ಪ್ರತಿ ಒಂದು ಕೆಜಿ ಮಣ್ಣಿಗೆ 12 ಮಿಲಿ ಗ್ರಾಂ ನಷ್ಟು ಬೋರಾನ್ ಇರಬೇಕು.

0.14 ಮಿಲಿ ಗ್ರಾಂ ಗಿಂತ ಕಡಿಮೆ ಇದ್ದರೆ ಮಾರುಕಟ್ಟೆ ಯಲ್ಲಿ ಸಿಗುವ ಬೋರೀಕ್ ಆಮ್ಲ ಅಥವಾ ಬೋರಾಕ್ಸ್  ಪುಡಿಯನ್ನು ಅದರಲ್ಲೇ ಸೂಚಿಸಿರುವಂತೆ ನೀಡಬೇಕು.

ಈ ಬೋರಾನ್ ಪ್ರಾಣಿ ಪಕ್ಷಿಗಳ ದೇಹದಲ್ಲಿ ಇರಲ್ಲ.ಇದರಿಂದ ಬೇರೆ ಪೋಷಕಾಂಶಗಳಂತೆ  ಭೂಮಿ ಸೇರಲ್ಲ.

ಬೋರಾನ್ ಕೊರತೆಯ ಲಕ್ಷಣಗಳು :

*ಗಿಡ ಬೆಳವಣಿಗೆಯ ಭಾಗಗಳು ಸಾಯುತ್ತವೆ.

*ಹೂ ಹಣ್ಣು ಮೂಡದೆ ಇರುವುದು.

*ಬೀಟ್ ರೂಟ್ ಹಾಗು ಗಡ್ಡೆ ಕೋಸುಗಳಲ್ಲಿ ಗೆಡ್ಡೆಯು ಕಾಯಿಲೆ ಬಿದ್ದು ಒಣಗಿ ಉರುಟಿಕೊಳ್ಳುತ್ತೆ.

  ಕೆಲವರ ಅನಿಸಿಕೆಯಂತೆ ಕೆಲವೊಂದು ಬೆಳೆಗಳಿಗಷ್ಟೆ ಬೋರಾನ್ ಬೇಕು ಅಂತಾರೆ.ಆದ್ರೆ ಬಹುತೇಕ ಎಲ್ಲಾ ಬೆಳೆಗಳಿಗೂ ಬೋರಾನ್ ಬೇಕು.

ಬೋರಾನ್ ಅನ್ನು ಬೆಳೆಗಳಿಗೆ ನೀಡುವ ಬಗೆ:

ಮಾರುಕಟ್ಟೆಯಲ್ಲಿ ಸಿಗುವ ಬೋರೀಕ್ ಆಮ್ಲ ದ್ರವರೂಪದಲ್ಲಿದ್ದು, ಇದರಲ್ಲಿ ಶೇಕಡಾ 10 ಪ್ರತಿಶತ ಬೋರಾನ್ ಇರುತ್ತದೆ. ಇದನ್ನು ನೀರಿನೊಟ್ಟಿಗೆ ಸೇರಿಸಿ ಎಲೆಗಳಿಗೆ ಸಿಂಪಡಿಸಬೇಕು. ಹರಳಿನ ರೂಪದಲ್ಲಿ ಸಿಗುವ ಬೋರೇಟ್ ಪುಡಿಯನ್ನು ಮಣ್ಣಿಗೆ   ಕಲೆಸಬಹುದು.  ಮಣ್ಣಿನ ತೇವಾಂಶದಲ್ಲಿ ಕರಗಿ ಬೇರುಗಳ ಮೂಲಕ ಗಿಡಗಳನ್ನು ಸೇರುತ್ತೆ.

ವಿಶೇಷ ಸೂಚನೆ :

ಮೊದಲು ಮಣ್ಣಿನ  ಪರೀಕ್ಷೆ ಮಾಡಿಸಿ ನಂತರವಷ್ಟೇ ಎಷ್ಟು ಪ್ರಮಾಣದಲ್ಲಿ ಬೋರಾನ್ ನೀಡಬೇಕು ನಿರ್ಧರಿಸಿ. ಮಣ್ಣಿನ ಬಗೆ,ಮಣ್ಣಿನಲ್ಲಿರುವ ಸುಣ್ಣದ ಅಂಶ   ಮಳೆಯ ಪ್ರಮಾಣ, ಯಾವ ರೀತಿಯ ಬೆಳೆಗೆ ಎಷ್ಟು ಬೋರಾನ್ ಹೀಗೆ ತಿಳಿದೇ ಮುಂದುವರಿಯಿರಿ. ಅಗತ್ಯಕಿಂತ ಹೆಚ್ಚಾಗಿ ನೀಡಿದರೆ ಗಿಡಗಳಿಗೆ ವಿಷಕಾರಿಯಾಗಿ ಪರಿಣಮಿಸುತ್ತೆ. ಇದನ್ನು ಕಳೆನಾಶಕವಾಗಿಯು ಬಳಸಬಹುದು.

LEAVE A REPLY

Please enter your comment!
Please enter your name here