ಹವಾಮಾನ ಮುನ್ಸೂಚನೆ ; ಗಮನಾರ್ಹ ಕನಿಷ್ಟ ತಾಪಮಾನ ಸಾಧ್ಯತೆ

0

ದಾಖಲಾದ ಹವಾಮಾನ:

ಬೆಂಗಳೂರು: ನವೆಂಬರ್ 20:  ರಾಜ್ಯದಾದ್ಯಂತ ಒಣಹವೆ ಇತ್ತು.   ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕನಿಷ್ಠ ಉಷ್ಣಾಂಶ 8.5 ಡಿ.ಸೆ. ಬೀದರ್ ನಲ್ಲಿ  ದಾಖಲಾಗಿದೆ.

22 ನೇ ನವೆಂಬರ್ 2022 ರ ಬೆಳಗ್ಗೆ ವರೆಗಿನ ರಾಜ್ಯದ ಹವಾಮಾನ ಮುನ್ಸೂಚನೆ:  ಮುಂದಿನ 24 ಘಂಟೆಗಳು: ರಾಜ್ಯದಾದ್ಯಂತ ಒಣ ಹವೆ ಇರುವ ಬಹಳಷ್ಟು ಸಾಧ್ಯತೆ ಇದೆ. ಮುಂದಿನ 48 ಘಂಟೆಗಳಲ್ಲಿಯೂ  ರಾಜ್ಯದಾದ್ಯಂತ ಒಣ ಹವೆ ಇರುವ ಬಹಳಷ್ಟು ಸಾಧ್ಯತೆ ಇದೆ. ಗುಡುಗು ಮುನ್ಸೂಚನೆ ಇಲ್ಲ.

ಕನಿಷ್ಠ ತಾಪಮಾನ ಮುನ್ನೆಚ್ಚರಿಕೆ:  ಮುಂದಿನ 48 ಘಂಟೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ ಅತಿ ಗಮನಾರ್ಹವಾಗಿ ಕಡಿಮೆಯಂತೆ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಹಾಗೂ ಕರಾವಳಿಯ ಒಂದೆರಡು ಕಡೆಗಳಲ್ಲಿ ಕಂಡುಬರುವ ಸಾಧ್ಯತೆ ಇದೆ. ಸಾಮಾನ್ಯಕ್ಕಿಂತ ಗಮನಾರ್ಹವಾಗಿ ಕಡಿಮೆಯಂತೆ ಕರಾವಳಿಯ ಹಾಗೂ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಕಂಡುಬರುವ ಸಾಧ್ಯತೆ ಇದೆ.

ಮೀನುಗಾರರಿಗೆ ಎಚ್ಚರಿಕೆ ಇಲ್ಲ.ಮುಂದಿನ 24 ಘಂಟೆಗಳ ಹೊರನೋಟದ ಪ್ರಕಾರ ರಾಜ್ಯದ ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆ ಇಲ್ಲ.

22 ನೇ ನವೆಂಬರ್ 2022 ರ ಬೆಳಗ್ಗೆ ವರೆಗಿನ ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮುನ್ಸೂಚನೆ:

ಮುಂದಿನ 24 ಗಂಟೆಗಳು: ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿರುತ್ತದೆ.  ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಷಿಯಸ್ ಇರುವ ಸಾಧ್ಯತೆಗಳಿರುತ್ತದೆ.

ಮುಂದಿನ 48 ಗಂಟೆಗಳು:  ಬೆಂಗಳೂರು ನಗರದಲ್ಲಿ ಮೋಡ ಕವಿದ ವಾತಾವರಣವಿರುತ್ತದೆ.  ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆಗಳಿರುತ್ತದೆ. ಗರಿಷ್ಠ ಉಷ್ಣಾಂಶ 25 ಮತ್ತು ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಷಿಯಸ್ ಇರುವ ಸಾಧ್ಯತೆಗಳಿರುತ್ತದೆ.

LEAVE A REPLY

Please enter your comment!
Please enter your name here