ಮೀನುಗಾರರು ಆರ್ಥಿಕವಾಗಿ ಸಬಲರಾಗಲು 5000 ಮೀನುಗಾರರ ಮನೆಗಳಿಗೆ ಮಂಜೂರಾತಿ ನೀಡಿದೆ. ಕಾಲಮಿತಿಯಲ್ಲೇ ಈ ಮನೆಗಳನ್ನು ಪೂರ್ಣಗೊಳಿಸಬೇಕು. ಜನವರಿಯೊಳಗೆ ಪೂರ್ಣ ಗೊಳಿಸಿದರೆ ಖುದ್ದಾಗಿ ಬಂದು ಮೀನುಗಾರರಿಗೆ ಹಂಚಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಎಸ್. ಬೊಮ್ಮಾಯಿ ಹೇಳಿದರು.
ಅಕ್ಟೋಬರ್ 16 ರಂದು 2022ನೇ ಸಾಲಿನ ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಅವರು ಉದ್ಘಾಟಿಸಿ, ಮಾತನಾಡಿದರು.
ಮೀನುಗಾರಿಕೆ ಬೃಹತ್ ಉದ್ಯಮ
ಮೀನುಗಾರಿಕೆ ಬೃಹತ್ ಉದ್ಯಮವಾಗಿ ಬೆಳೆದಿದೆ. ಮೀನು ಬೆಳೆ ಯುವುದರಿಂದ, ಸಾಕುವುದು, ಆಹಾರ ಉತ್ಪಾದನೆಗೆ ಮಾಡಿ, ಮೀನಿನ ಸಂಗ್ರಹ ಹಾಗೂ ಸಾಗಾಣಿಕೆ ಮಾಡಿ ಬಹಳ ದೊಡ್ಡ ಚಟುವಟಿಕೆ ಗಳು ಮೀನುಗಾರಿಕೆ ಒಳಗೊಂಡಿದೆ. ಇದರಿಂದ ಸಾವಿರಾರು ಜನ ಉದ್ಯೋಗದಲ್ಲಿ ತೊಡಗಲು ಸಾಧ್ಯವಿದೆ. ಮೀನುಗಾರಿಕೆಯಲ್ಲಿ ಸಮುದ್ರ ಮೀನುಗಾರಿಕೆ ಇದೆ. ನಮ್ಮ ಮೀನುಗಾರರು ಸಾಕಷ್ಟು ಸಾಹಸವನ್ನು ಮಾಡಬೇಕಾಗಿದೆ.
ಒಳನಾಡು ಮೀನುಗಾರಿಕೆಯೂ ಅತ್ಯಂತ ಮಹತ್ವ ಪಡೆದುಕೊಂಡಿದೆ. ಮೀನಿನ ಆಹಾರದ ಮಾರಾಟದ ಬೆಲೆ ಬಹಳ ಕಡಿಮೆ ಇದೆ. ಮೀನು ಹಿಡಿದು ಎಷ್ಟು ಅವಧಿಯೊಳಗೆ ಜನರಿಗೆ ಮುಟ್ಟಿಸುತ್ತೇವೆ ಎನ್ನುವುದು ಮುಖ್ಯ. ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಸ್ಥಳೀಯವಾಗಿ ಮೀನುಗಾರಿಕೆ ಮಾಡಿ ಉತ್ಪಾದನೆ ಮಾಡಿದರೆ, ಅಲ್ಲಿ ತಾಜಾ ಮೀನುಗಳನ್ನು ನೀಡಬಹುದು.
ಸಮುದ್ರದ ಮೀನುಗಳಿಗೂ, ಉತ್ಪಾದಿಸುವ ಮೀನುಗಳಿಗೂ ವ್ಯತ್ಯಾಸವಿದೆ. ನೀರು ಮತ್ತು ಅದರ ಒಟ್ಟು ಪ್ರದೇಶ, ಮಣ್ಣಿನ ಸಾರ ಮುಂತಾದ ವಿಚಾರಗಳಿವೆ. ಸಂಶೋಧಕರು ಒಳನಾಡು ಮೀನುಗಾರಿಕೆಯಲ್ಲಿ ದೊಡ್ಡ ಪ್ರಮಾಣದ ಸಂಶೋಧನೆ ಮಾಡುತ್ತಿದ್ದಾರೆ ಎಂದರು.