Home Blog Page 97
ತರಕಾರಿ ಬೆಳೆಗಳನ್ನು ಬಾಧಿಸುವ ಹಲವಾರು ಕೀಟಗಳಿವೆ. ಇವುಗಳನ್ನು ನಿಯಂತ್ರಿಸದಿದ್ದರೆ ನಷ್ಟ ಕಟ್ಟಿಟ್ಟ ಬುತ್ತಿ. ಹೀಗೆ ಬಾಧಿಸುವ ಕೀಟಗಳಲ್ಲಿ ಬ್ಯಾಕ್ಟ್ರೋಸೆರಾ ಕುಕುರ್ಬಿಟೇ ಪ್ರಮುಖ. ಇದನ್ನು ಸಾಮಾನ್ಯವಾಗಿ ಕಲ್ಲಂಗಡಿ ನೊಣ ಎಂದು ಕರೆಯಲಾಗುತ್ತದೆ) ಇದಲ್ಲದೇ ಇನ್ನೂ 226 ಉಪ ಜಾತಿ ಕೀಟಗಳಿವೆ. ಇವುಗಳು ಇದು ಸುಗ್ಗಿಯ ಪೂರ್ವ ಹಾನಿಯನ್ನು ಉಂಟುಮಾಡುತ್ತದೆ ಮತ್ತು ಈ ಕೀಟಗಳನ್ನು ಯಾವುದೇ ಕೀಟನಾಶಕದಿಂದ ನಿಯಂತ್ರಿಸಲಾಗುವುದಿಲ್ಲ ಎಂಬುದು ಗಮನಾರ್ಹ. ರಾಸಾಯನಿಕ ಕೀಟನಾಶಕಗಳನ್ನು ಬಳಸುವುದರಿಂದ ಪರಿಸರಕ್ಕೆ ಆಗುವ ಹಾನಿ ಅಪಾರ. ಇದನ್ನು ಅರಿತಿರುವ ಬ್ಯಾರಿಕ್ಸ್‌ ಸಂಸ್ಥೆ, ರಾಸಾಯನಿಕ ಕೀಟ ಬಳಸದೇ ತರಕಾರಿ ನೊಣಗಳನ್ನು ನಿಯಂತ್ರಿಸುವ ಸಾಧನಗಳನ್ನು...
ನವಣೆ ಅನ್ನ ಉಂಡವನು ಹೈವಾನನಾಗಿರುವನು’ ಎನ್ನುವುದು ಉತ್ತರಕರ್ನಾಟಕದ ಪ್ರಚಲಿತದ ಗಾದೆಮಾತು.ನವಣೆ ಬೆಳೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಾ ಸಾಗಿದೆ. ಇಂದಿನ ವಾಣಿಜ್ಯ ಬೆಳೆಗಳಾದ ಕಬ್ಬು, ಮೆಕ್ಕೆಜೋಳ ತಂಬಾಕು ಈ ಬೆಳೆಯ ಕ್ಷೇತ್ರವನ್ನು ಆಕ್ರಮಿಸಿವೆ. ಇದನ್ನು ಆಶ್ರಯಿಸಿ ಬರುವ ಪಕ್ಷಿಗಳ ಸಂತತಿಯಲ್ಲೂ ಕಡಿಮೆಯಾಗಿವೆ. ಉತ್ತರಕನಾಟಕದ ಪ್ರಮುಖ ಹಬ್ಬವಾದ ಶೀಗೆ ಹುಣ್ಣಿಮೆಯ ಹುರಕ್ಕಿ ಹೋಳಿಗೆ ಹಾಗೂ ನವಣಿಯಿಂದ ಮಾಡಿದ ತಂಬಿಟ್ಟು,ರೊಟ್ಟಿಯ ಖಾದ್ಯ ಬಹಳ ಪ್ರಸಿದ್ದ. ಇಂತಹ ಮರೆಯಾಗುತ್ತಿರುವ ಸಿರಿಧಾನ್ಯಗಳನ್ನು ಮತ್ತೆ ಪ್ರಚಲಿತಕ್ಕೆ ತರುವ ಕೆಲಸವನ್ನು ಬೈಲಹೊಂಗಲ ತಾಲೂಕಿನ ಚಿಕ್ಕಬಾಗೇವಾಡಿಯ ರೈತ ಕಲ್ಲಪ್ಪ ಪಂಡಿತಪ್ಪ ನೇಗಿನಹಾಳ ಮಾಡುತ್ತಿದ್ದಾರೆ. ಸಾವಯವ ಕೃಷಿಕರಾದ...
ಒಗರು, ಸಿಹಿ ಮಿಶ್ರಿತ, ತಿಂದರೆ ಬಾಯೆಲ್ಲ ನೇರಳೆ ಬಣ್ಣ. ಇಂಥ ನೇರಳೆ ಹಣ್ಣನ್ನು ಇಷ್ಟಪಡದರೇ ಇಲ್ಲ ಎನ್ನಬಹುದು. ರಾಜ್ಯದ ದಕ್ಷಿಣ ಭಾಗದಲ್ಲಿ ನೇರಳೆ, ಉತ್ತರ ಭಾಗದಲ್ಲಿ ನೇರಲ ಎಂದು ಕರೆಯಿಸಿಕೊಳ್ಳುವ ಈ ಹಣ್ಣಿನ ಮರಗಳು ಕೇವಲ ಹತ್ತದಿನೈದು ವರ್ಷಗಳ ಹಿಂದೆ ಕಾಡು ಬೆಳೆ. ಹೆದ್ದಾರಿ ಬದಿಗಳಲ್ಲಿ ಸಾಮಾನ್ಯವಾಗಿ ಇದನ್ನು ಕಾಣಬಹುದಾಗಿತ್ತು. ಹೊಲದ ಬದುಗಳ ಅಂಚಿನಲ್ಲಿ ಎಲ್ಲಿಯೋ ಅಲ್ಲೊಂದು ಇಲ್ಲೊಂದು ಮರ ಕಾಣುತ್ತಿದ್ದವು. ಇಂಥ ನೇರಳೆಗೆ ಈಗ ಭಾರಿ ಡಿಮ್ಯಾಂಡ್ ದೇಹದ ಆರೋಗ್ಯ ಕಾಪಾಡುವ ಹಣ್ಣು ನೇರಳೆ ಹಣ್ಣು ಬಾಯಿರುಚಿಗಷ್ಟೆ ಅಲ್ಲ, ದೇಹದ ಆರೋಗ್ಯವನ್ನೂ ಕಾಪಾಡುವಂಥ ಹಣ್ಣು....
ಹಸುಗಳು,  ಕೋಳಿಗಳು, ಮೇಕೆ, ಕುರಿ, ಟಗರು ಇತ್ಯಾದಿ ಸಾಕಣೆ ಮಾಡುವಾಗ ಅವುಗಳ ಆರೋಗ್ಯರಕ್ಷಣೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮುತುವರ್ಜಿ ವಹಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ಅವುಗಳು ಸಾಂಕ್ರಮಿಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಹೈನುಗಾರಿಕಾ ಘಟಕಗಳನ್ನು, ಕುಕ್ಕುಟ ಕೇಂದ್ರ (ಕೋಳಿ ಸಾಕಣೆ)ಗಳನ್ನು ನಿರ್ವಹಣೆ ಮಾಡುವುದು ಸರಳವಾದ ಸಂಗತಿಯಲ್ಲ. ಅಪಾರ ಪರಿಶ್ರಮ, ಸಮಯ ಬೇಕಾಗುತ್ತದೆ. ಹೀಗೆ ಮಾಡದಿದ್ದರೆ ಹಾಕಿದ ಭಾರಿ ಬಂಡವಾಳ ನಷ್ಟವಾಗುವ ಸಾಧ್ಯತೆಗಳು ಇರುತ್ತವೆ. ಇವುಗಳ ಸಾಕಣೆದಾರರು ಜಾನುವಾರುಗಳ ಆರೋಗ್ಯದ ಬಗ್ಗೆ ಸಾಕಷ್ಟು ಮುತುವರ್ಜಿ ವಹಿಸುತ್ತಾರೆ. ಈ ದಿಶೆಯಲ್ಲಿ ನೊಣಗಳನ್ನು ದೂರ ಸರಿಸಲು ಅವರು ಪ್ರಯತ್ನಪಡುತ್ತಾರಾದರೂ ತುಸು...
ಪದೇ ಪದೇ ಕುಸಿಯುವ ಈರುಳ್ಳಿ ಬೆಲೆ ರೈತರನ್ನು ಕಂಗೆಡಿಸಿದೆ. ಬೇಡಿಕೆ ಮತ್ತು ಪೂರೈಕೆಯಲ್ಲಿನ ಏರುಪೇರಿಗೆ ಸಿಕ್ಕು, ಹೆಚ್ಚು ದಿನ ಬಾಳಿಕೆ ಬರದ ಈರುಳ್ಳಿಯನ್ನು ದೀರ್ಘಾವಧಿ ಕಾಪಾಡುವುದು ಒಂದು ಕಲೆಯೇ. ಇಂತಹ ಕಲೆಯನ್ನು ಕರಗತ ಮಾಡಿಕೊಂಡು ದರ ಕುಸಿತಕ್ಕೆ ಸೂಕ್ತ ಪ್ರತಿತಂತ್ರ ಎಣೆದು, ದಿಢೀರ್ ನಷ್ಟದಿಂದ ಪಾರಾಗುವ ಇಲ್ಲವೇ ನಷ್ಟವನ್ನು ಮಂದೂಡುವ, ತಗ್ಗಿಸಿಕೊಳ್ಳುವ ರೈತರ ಪ್ರಯತ್ನಗಳು ಅಲ್ಲಲ್ಲಿ ಕೈ ಹಿಡಿದಿವೆ. ಬೆಲೆ ಕುಸಿತದ ಬಿಕ್ಕಟ್ಟಿಗೆ ಬಳ್ಳಾರಿ ಜಿಲ್ಲೆಯ ಸಂಡೂರಿನ ಈರುಳ್ಳಿ ರೈತರ ಸಮಯ ಪ್ರಜ್ಞೆ, ಕೌಶಲ್ಯ ಮತ್ತು ಜಾಣ್ಮೆ ಕುರಿತು ಸ್ವರೂಪಾನಂದ ಎಂ. ಕೊಟ್ಟೂರು...
ಉತ್ತಮ ಪರಿಸರವನ್ನು ನಿರ್ವಹಣೆ ಮಾಡಲು ಅಪಾಯಕಾರಿ ರಾಸಾಯನಿಕ ರಹಿತ ಕೀಟನಶಕಗಳನ್ನು ಬಳಸದಿರುವುದು ಸಹ ಇಂದಿನ ತುರ್ತು ಅಗತ್ಯವಾಗಿದೆ. ಈ ದಿಶೆಯಲ್ಲಿ ಬೆಂಗಳೂರಿನಲ್ಲಿ ಸುಸಜ್ಜಿತ ಕೇಂದ್ರ ಸಂಶೋಧನಾಲಯ ಹೊಂದಿರುವ ಬ್ಯಾರಿಕ್ಸ್ ಸಂಸ್ಥೆ ಸಾಕಷ್ಟು ಸಾಧನಗಳನ್ನು ಅಭಿವೃದ್ಧಿಪಡಿಡಿಸಿದೆ. ಈ ಲೇಖನದಲ್ಲಿ ಹಣ್ಣುಗಳನ್ನು ಬಾಧಿಸುವ ಕೀಟಗಳನ್ನು ಆಕರ್ಷಿಸುವ ಬಲೆಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಬ್ಯಾರಿಕ್ಸ್ ಕ್ಯಾಚ್ ಫ್ರೂಟ್ ಫ್ಲೈ ಟ್ರ್ಯಾಪ್ ಅನ್ನು 83 ಉಪ ಜಾತಿಗಳೊಂದಿಗೆ ಬ್ಯಾಕ್ಟ್ರೋಸೆರಾ ಡೋರ್ಸಾಲಿಸ್ನ ಕೀಟಗಳನ್ನು ಆಕರ್ಷಿಸಲು ಮತ್ತು ಬಲೆಗೆ ಆಕರ್ಷಿಸಲು ಬಳಸಬಹುದು. ಸಾಮಾನ್ಯವಾಗಿ ಈ ಕೀಟಗಳನ್ನು ಫ್ರೂಟ್ ಫ್ಲೈ ಎಂದು ಕರೆಯಲಾಗುತ್ತದೆ, ಇದು...
ಲೇಖನದ ಚಿತ್ರಗಳು: ಶಿವಶಂಕರ್‌ ಬಣಗಾರ್ ವಿಜಯನಗರ ಜಿಲ್ಲೆ ಅಪ್ಪಟ ಬಯಲು ಸೀಮೆ. ಆದರೂ ಅಲ್ಲಲ್ಲಿ ನೂರಾರು ಹೆಕ್ಟೇರ್ ಕಾಯ್ದಿಟ್ಟ ಅರಣ್ಯಗಳವೂ ಇವೆ. ದುರಾದೃಷ್ಠವಶಾತ್ ಅವೆಲ್ಲ ಕಡಿದಿಟ್ಟ ಅರಣ್ಯಗಳಾಗುತ್ತಿವೆ. ಫಲವಾಗಿ ಕಾದ ಕಾವಲಿಯಂತಹ ತಾರ್ ರಸ್ತೆಗಳು, ನೆತ್ತಿ ಸುಡುವಷ್ಟು ರಣ ಬಿಸಿಲಿಗೆ ಬೆವರುತ್ತಾ, ಬಿಸಿಗಾಳಿ ಉಸಿರಾಡುತ್ತಾ, ನಿಟ್ಟುಸಿರು ಬಿಡುತ್ತಾ ಪ್ರಯಾಣಿಸಬೇಕಾದ ಕರ್ಮ ಇಲ್ಲಿಗೆ ಬರುವವರದ್ದು. ಆದರೆ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳು-ಅಡವಿ ಆನಂದ ದೇವನಹಳ್ಳಿ ರಸ್ತೆಯ ಇಕ್ಕೆಲಗಳಲ್ಲಿ ಒತ್ತುಕಟ್ಟು, ದಟ್ಟ ಹಾಗೂ ದಷ್ಟಪುಷ್ಟವಾಗಿ ಬೆಳೆದ ಸಾಲು ಮರಗಳು ಆಕರ್ಷಿಸಿ, ಬೆರಗುಗೊಳಿಸುತ್ತವೆ. ಈಗ ಇದ್ದ ಕಾಡನ್ನೇ ಉಳಿಸಿಕೊಳ್ಳುವುದೇ...
ಭಾರತ ದೇಶದಲ್ಲಿ ಆಹಾರ ಉತ್ಪಾದನೆ ಏರಿಕೆಯಾದಂತೆ ರೈತರ ಆದಾಯ ಕುಸಿತವಾಗುತ್ತಿದೆ.ದೇಶಕ್ಕೆ 'ಆಹಾರ ಭದ್ರತೆ' ನೀಡುತ್ತಿರುವ ರೈತರಿಗೆ 'ಆರ್ಥಿಕ ಭದ್ರತೆ' ಇಲ್ಲದೇ ಹೋಗುತ್ತಿರುವ ಬಗ್ಗೆ ಗಂಭೀರವಾಗಿ ಯೋಚಿಸಿ ಕೃಷಿ ಕ್ಷೇತ್ರವನ್ನು ರೈತರು ಹೇಗೆ ಪರಿಗಣಿಸಬೇಕು?ಕೃಷಿಯನ್ನು ಪೂರ್ಣಕಾಲಿಕ ಉದ್ಯೋಗವಾಗಿ ಮತ್ತು ರೈತರ ಜೀವನಕ್ಕೆ ಬೇಕಾಗುವ ಸಂಪೂರ್ಣ ಆದಾಯದ ಮೂಲವಾಗಿ ತೆಗೆದುಕೊಳ್ಳಬಹುದೇ? ಕೃಷಿಯನ್ನು ಆಹಾರ ಭದ್ರತೆ ದೃಷ್ಟಿಯಿಂದ ಮುಂದುವರೆಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾಗಿ ರೈತರ ಆರ್ಥಿಕ ಭದ್ರತೆಯನ್ನು ನೋಡುವುದು ಅನಿವಾರ್ಯವಾಗಿದೆ. ಆಹಾರ ಭದ್ರತೆ ಹೆಸರಿನಲ್ಲಿ ಪ್ರತಿಯೊಂದು ದೇಶಗಳು ಅಗತ್ಯಕ್ಕಿಂತ ಹೆಚ್ಚಾಗಿ ಉತ್ಪಾದನೆ ಮಾಡುತ್ತಿರುವುದರಿಂದ ಮತ್ತು ಉತ್ಪಾದನೆ ಮಟ್ಟ...
ರಾಜ್ಯದ ಕೃಷಿ  ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕ ಪದವಿಗಳ ಶೇಕಡ ೫೦ರಷ್ಟು ಸೀಟುಗಳನ್ನು ರೈತರ ಮಕ್ಕಳಿಗಾಗಿ ಕೃಷಿ ಕೋಟಾದಡಿ ಮೀಸಲಿಡಲಾಗಿದೆ. ಈ ಕುರಿತಾದ ವಿಡಿಯೋವನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್ ಅವರು ಬಿಡುಗಡೆ ಮಾಡಿದರು. ಇದೇ ಸಂದರ್ಭದಲ್ಲಿ ಕುಲಸಚಿವರಾದ ಡಾ: ಬಸವೇ ಗೌಡ, ವಿಸ್ತರಣಾ ನಿರ್ದೇಶಕಾರದ ಡಾ, ಕೆ. ನಾರಾಯಣಗೌಡ ಹಾಗೂ ಹಿರಿಯ ವಾರ್ತಾತಜ್ಞರಾದ ಡಾ. ಕೆ. ಶಿವರಾಮು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ಇದೇ ಪ್ರಪ್ರಥಮ ಭಾರಿಗೆ ರೈತ ಕುಟುಂಬದ ಪಿ.ಯು.ಸಿ.ಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಯಾರಿಸಿದ ಕಿರು ವಿಡಿಯೋವನ್ನು ಕೃಷಿ ವಿಶ್ವವಿದ್ಯಾನಿಲಯದ ಅಧಿಕೃತ...
ತೋಟಗಳಲ್ಲಿ, ಕಾಡುಗಳಲ್ಲಿ ತನ್ನಷ್ಟಕ್ಕೇ ತಾನೇ ಹುಟ್ಟಿ ಬೆಳೆಯುವ ಈ ಮೆಣಸನ್ನು ಲವಂಗ ಮೆಣಸು, ಚೂರು ಮೆಣಸು, ಗಾಂಧಾರಿ ಮೆಣಸು, ನುಚ್ಚು ಮೆಣಸು, ಸಣ್ಣಮೆಣಸು, ಕಾಂತರಿ ಜೀರಿಗೆ ಮೆಣಸು ಹೀಗೆ ಆಯಾ ಪ್ರದೇಶಕ್ಕೆ ಹೊಂದಿಕೊAಡು ಹಲವಾರು ಹೆಸರುಗಳಿಂದ ಗುರುತಿಸುತ್ತಾರೆ. ಥೈಲಾಂಡ್ ಮೂಲದ ಈ ಮೆಣಸಿನ ವ್ಶೆಜ್ಞಾನಿಕ ಹೆಸರು ‘ಕ್ಯಾಪ್ಸಿಕಂ ಚೈನೀಸ್. ಇಂಗ್ಲೀಷಿನಲ್ಲಿ ಬರ್ಡ್ ಐ ಚಿಲ್ಲಿ ಅಂತಲೂ ಕರೆಯುತ್ತಾರೆ, ೧ ರಿಂದ ೨ ಸೆಂಟಿ ಮೀಟರ್ ನಷ್ಟು ಸಣ್ಣ ಗಾತ್ರ. ಆದರೆ ಬಲು ಖಾರ. ಹಣ್ಣಾದಾಗ ಸುಂದರ ಕೆಂಪು ಬಣ್ಣ. ಈ ಮೆಣಸಿನಕಾಯಿ ಹಳ್ಳಿ...

Recent Posts