ನೊಣಗಳ ಬಾಧೆ ತಡೆಯಲು ಶಕ್ತಿಶಾಲಿ ಸಾಧನ !

3

ಹಸುಗಳು,  ಕೋಳಿಗಳು, ಮೇಕೆ, ಕುರಿ, ಟಗರು ಇತ್ಯಾದಿ ಸಾಕಣೆ ಮಾಡುವಾಗ ಅವುಗಳ ಆರೋಗ್ಯರಕ್ಷಣೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಮುತುವರ್ಜಿ ವಹಿಸಲೇಬೇಕಾಗುತ್ತದೆ. ಇಲ್ಲದಿದ್ದರೆ ಅವುಗಳು ಸಾಂಕ್ರಮಿಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ.

ಹೈನುಗಾರಿಕಾ ಘಟಕಗಳನ್ನು, ಕುಕ್ಕುಟ ಕೇಂದ್ರ (ಕೋಳಿ ಸಾಕಣೆ)ಗಳನ್ನು ನಿರ್ವಹಣೆ ಮಾಡುವುದು ಸರಳವಾದ ಸಂಗತಿಯಲ್ಲ. ಅಪಾರ ಪರಿಶ್ರಮ, ಸಮಯ ಬೇಕಾಗುತ್ತದೆ. ಹೀಗೆ ಮಾಡದಿದ್ದರೆ ಹಾಕಿದ ಭಾರಿ ಬಂಡವಾಳ ನಷ್ಟವಾಗುವ ಸಾಧ್ಯತೆಗಳು ಇರುತ್ತವೆ. ಇವುಗಳ ಸಾಕಣೆದಾರರು ಜಾನುವಾರುಗಳ ಆರೋಗ್ಯದ ಬಗ್ಗೆ ಸಾಕಷ್ಟು ಮುತುವರ್ಜಿ ವಹಿಸುತ್ತಾರೆ. ಈ ದಿಶೆಯಲ್ಲಿ ನೊಣಗಳನ್ನು ದೂರ ಸರಿಸಲು ಅವರು ಪ್ರಯತ್ನಪಡುತ್ತಾರಾದರೂ ತುಸು ಹೊತ್ತಿನಲ್ಲೇ ನೊಣಗಳು ಮತ್ತೆ ಹಾಜರಾಗುತ್ತವೆ.

ನೊಣಗಳನ್ನು ದೂರ ಮಾಡಲು ರಾಸಾಯನಿಕ ದ್ರಾವಣಗಳನ್ನು ಹೆಚ್ಚು ಬಳಸುವಂತಿಲ್ಲ. ಇದರಿಂದ ಜಾನುವಾರು, ಕೋಳಿಗಳ ಆರೋಗ್ಯದ ಮೇಲೆಯೂ ದುಷ್ಪರಿಣಾಮಗಳಾಗುತ್ತವೆ.ನೊಣಗಳಿಂದಲೇ ೬೦ಕ್ಕೂ ಹೆಚ್ಚು ಬಗೆಯ ರೋಗಗಳು ಹರಡುತ್ತವೆ. ಬಹುಬೇಗನೆ ಸಾಂಕ್ರಮಿಕವಾಗುತ್ತವೆ ಹೀಗೆಂದು ಜಾನುವಾರು, ಕೋಳಿ ಸಾಕಣೆ ಕೇಂದ್ರಗಳ ಪರಿಸರದೊಳಗೆ ನೊಣಗಳು ಪ್ರವೇಶಿಸದಂತೆ ಮಾಡಲು ಸಾಧ್ಯವೆ… ? ಸಾಧ್ಯವಿಲ್ಲ. ಹೇಗಾದರೂ ಅವುಗಳು ಒಳಗೆ ಬರುತ್ತವೆ. ಹೀಗೆ ಬಂದರೂ ಅವುಗಳಿಂದ ತೊಂದರೆಯಾಗದಂತೆ, ಅವುಗಳು ಬೇರೆಡೆ ಆಕರ್ಷಿತವಾಗಿ ಬಂಧಿಯಾಗಿ ಕೊನೆಯಾಗುವಂತೆ ಮಾಡಲು ಸಾಧ್ಯವೆ…? ಖಂಡಿತ ಸಾಧ್ಯ ಎಂದು “ಬ್ಯಾರಿಕ್ಸ್‌” ಸಂಸ್ಥೆ ತೋರಿಸಿದೆ.

ಕೀಟ ನಿಯಂತ್ರಣಗಳಿಗಾಗಿ ಪರ‍್ಯಾಯ ವಿಧಾನಗಳನ್ನು ಅನ್ವೇಷಿಸುವ “ಬ್ಯಾರಿಕ್ಸ್” ಸಂಸ್ಥೆಯ  ಮುಖ್ಯಸ್ಥ ಲೋಕೇಶ್ ಮಾಕ್ಕಮ್‌ ಅವರು.“ಜಾನುವಾರು, ಕೋಳಿ ಸಾಕಣೆ ಘಟಕಗಳಲ್ಲಿ ಅಲ್ಲಿನ ಪರಿಸರಕ್ಕೆ ಕಿಂಚಿತ್ತೂ ತೊಂದರೆಯಾಗದಂಥ ರೀತಿಯಲ್ಲಿ ನೊಣಗಳನ್ನು ಆಕರ್ಷಿಸಿ ಅವುಗಳು ಅಲ್ಲಿಯೇ ಬಂಧಿಯಾಗಿ ಸಾವನ್ನಪ್ಪುವಂತೆ ಮಾಡುವ ಡೊಮೊ ಟ್ರಾಪ್ ಗಳನ್ನು ಅನ್ವೇಷಿಸಿ, ಅಭಿವೃದ್ಧಿಪಡಿಸಿದ್ದೇವೆ. ಇದು ನೂರಕ್ಕೆ ನೂರರಷ್ಟು ಯಶಸ್ವಿಯಾಗಿದೆ” ಎನ್ನುತ್ತಾರೆ.

ಘಟಕಗಳ ವಿಸ್ತಾರಕ್ಕೆ ತಕ್ಕಂತೆ ಈ ಹೌಸ್ ಫ್ಲೈ ಟ್ರಾಪ್ ಅಥವಾ ಡೊಮೊ ಟ್ರ‍್ಯಾಪ್ ಗಳನ್ನಿಡಬಹುದು. ಸಣ್ಣಘಟಕಗಳಾದರೆ ಒಂದು ಅಥವಾ ಎರಡು ಸಾಕು. ಈ ಟ್ರಾಪ್ ಗಳ ಬಳಕೆ ವಿಧಾನವೂ ಅತ್ಯಂತ ಸರಳ. ಜೊತೆಗೆ ಗ್ರಾಮೀಣ ಪ್ರದೇಶಗಳ ರೈತರನ್ನು ಗಮನದಲ್ಲಿಟ್ಟುಕೊಂಡು ಅವರ ಕೈಗೆಟಕುವ ಬೆಲೆಯನ್ನು ನಿಗದಿಪಡಿಸಲಾಗಿದೆ. ದೀರ್ಘ ಬಾಳಿಕೆಯ ಈ ಟ್ರ‍್ಯಾಪ್ ಗಳ ಪ್ರಯೋಜನ ಪಡೆದು ಯಶಸ್ವಿಯಾಗಿ ಹೈನುಗಾರಿಕೆ, ಕೋಳಿ ಸಾಕಣೆ ಘಟಕಗಳ ಆರೋಗ್ಯ ನರ‍್ವಹಣೆ ಮಾಡಬಹುದು” ಎಂದು ಅವರು ಅಭಿಪ್ರಾಯಪಡುತ್ತಾರೆ.

ರಾಸಾಯನಿಕಗಳನ್ನು ಸಿಂಪಡಿಸುವುದರಿಂದ ಸುತ್ತಲಿನ ಪರಿಸರಕ್ಕೂ, ಬೆಳೆಗಳಿಗೂ ಹಾನಿಯುಂಟಾಗುತ್ತದೆ. ಮೇಲ್ಮಟ್ಟದಲ್ಲಿರುವ ಜಲದ ಜೊತೆಗೆ ಅಂತರ್ಜಲವೂ ಕಲುಷಿತವಾಗುತ್ತದೆ. ಆದ್ದರಿಂದ ಇಂಥ ದುಷ್ಪರಿಣಾಮಗಳು ಉಂಟಾಗದಂತೆ ನೊಣಗಳನ್ನು ನಿಯಂತ್ರಿಸಬೇಕಾದ ಅವಶ್ಯಕತೆ ಇದೆ. ಈ ಹಿನ್ನೆಲೆಯಲ್ಲಿ, ಬ್ಯಾರಿಕ್ಸ್ ಕೃಷಿ ಸಂಶೋಧನಾ ಕೇಂದ್ರವು ಜೈವಿಕ ಮಾದರಿಯ ನೊಣಗಳ ಬಲೆ ನಿರ್ಮಾಣ ಮಾಡಿದೆ ಎಂದು ಲೋಕೇಶ್ ಮಾಕ್ಕಮ್ ವಿವರಿಸುತ್ತಾರೆ.

ಇದು ಮೂರು ಪ್ರತ್ಯೇಕ ಬಿಡಿಭಾಗಗಳನ್ನು ಜೋಡಿಸಿರುವ ಪುಟ್ಟ ಬಾಕ್ಸ್ ಮಾದರಿಯಲ್ಲಿ ಇರುವ ಬಲೆ. ಇದನ್ನು ಹೌಸ್ ಫ್ಲೈ ಡೊಮೊ ಟ್ರ‍್ಯಾಪ್ ಎಂದು ಕರೆಯಲಾಗುತ್ತದೆ. ಇದರ ನಿರ್ವಹಣೆ ಅತೀ ಸರಳ. ಕೈರೊ ಲ್ಯೂರ್ ಪೌಚ್ ಕಟ್ ಮಾಡಿ ಅದರಲ್ಲಿರುವ ಪೌಡರ್ ಅನ್ನು ಬೇಸ್ ಬೌಲ್ಗೆ ನೀರಿನೊಂದಿಗೆ ಹಾಕಬೇಕು. ಇದನ್ನು ಕಲಕಿದ ನಂತರ ಬೌಲ್ ಮೇಲೆ ಕೋನ್ಫಿಕ್ಸ್ ಮಾಡಬೇಕು.ಇದರ ರೀಮ್ ಸುತ್ತಲೂ ಫೆರೊ ಲ್ಯೂರ್ ಹಚ್ಚಬೇಕು. ನಂತರ ಕೋನ್ ಮೇಲೆ ಪಾರದರ್ಶಕ ಬಾಕ್ಸ್ ಹಾಕಿದರೆ ನೊಣಗಳ ಬಲೆ ಸಿದ್ಧ. ಈ ಬಲೆಯಲ್ಲಿರುವ ಕೈರೊ, ಲ್ಯೂರ್ ಮತ್ತು ಫೆರೊ ಲ್ಯೂರ್ ಸೂಸುವ ವಾಸನೆಗೆ ನೊಣಗಳು ಆಕರ್ಷಿತವಾಗುತ್ತವೆ. ಬೇಸ್ಬೌಲ್ ನಲ್ಲಿರುವ ದೊಡ್ಡ ರಂಧ್ರಗಳ ಮೂಲಕ ಒಳಪ್ರವೇಶಿಸಿ ಫೆರೋ ಲ್ಯೂರ್ ಹಚ್ಚಿದ ಕೋನ್ ಭಾಗಕ್ಕೆ ಬರುತ್ತವೆ.ಕೋನ್ ಭಾಗಕ್ಕೆ ಬಂದಮೇಲೆ ಇವುಗಳು ಆಚೆ ಹೋಗಲು ಸಾಧ್ಯವೇ ಇಲ್ಲದಂತೆ ಬಲೆಯನ್ನು ವಿನ್ಯಾಸ ಮಾಡಲಾಗಿದೆ.

ಒಂದೆರಡೇ ದಿನಗಳಲ್ಲಿ ಬಲೆಯೊಳಗೆ ಅಪಾರ ಸಂಖ್ಯೆಯ ನೊಣಗಳು ಬಂಧಿಯಾಗುತ್ತವೆ. ನಂತರ ಬಲೆಯ ಕ್ಯಾಪ್ ತೆಗೆದು ಸತ್ತ ನೊಣಗಳನ್ನು ಹೊರಚೆಲ್ಲಿ ಅದರ ಮೇಲೆ ಮಣ್ಣು ಮುಚ್ಚಬೇಕು. ನಂತರ ಬಲೆಯ ಭಾಗಗಳನ್ನು ನೀರಿನಿಂದ ತೊಳೆದು ಲ್ಯೂರ್ ಹಾಕಬೇಕು. ಇದರಿಂದ ಮತ್ತೆ ನೊಣಗಳನ್ನು ಆಕರ್ಷಿಸಲು ಬಲೆ ಸಿದ್ಧವಾಗುತ್ತದೆ.ಪರಿಸರಕ್ಕೆ ಹಾನಿಕಾರಕವಲ್ಲದ, ಸುಲಭ, ಸರಳ ರೀತಿಯ, ಕಡಿಮೆ ವೆಚ್ಚದ ಇಂಥ ಬಲೆಯನ್ನು ಬಳಸುವುದರಿಂದ ನೊಣಗಳ ಹಾವಳಿಯನ್ನು ತಡೆಯಬಹುದು. ಆ ಮೂಲಕ, ಕೋಳಿ ಮತ್ತು ಜಾನುವಾರುಗಳ ಸಾಕಣೆ ಸ್ಥಳಗಳ ಸ್ವಚ್ಚತೆಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ, ಅವುಗಳ ಆರೋಗ್ಯ ಕಾಪಾಡಲು ಸಾಧ್ಯ. ಜೊತೆಗೆ ಹೈನುಗಾರಿಕೆ ಕೇಂದ್ರಗಳಲ್ಲಿನ ಉತ್ಪನ್ನಗಳು ಕಲುಷಿತವಾಗದಂತೆ ತಡೆಯಲು ಸಾಧ್ಯ.

ಜಾನುವಾರುಗಳ ಸಾಕಣೆ ಕೇಂದ್ರದಲ್ಲಿ ಮಾತ್ರವಲ್ಲ; ಸಿದ್ಧ ಆಹಾರ ತಯಾರಿಕಾ ಘಟಕಗಳಲ್ಲಿ, ಬೇಕರಿ, ಹೋಟೆಲ್, ಜ್ಯೂಸ್ ತಯಾರಿಕ ಸೆಂಟರುಗಳಲ್ಲಿ, ಆಸ್ಪತ್ರೆಗಳಲ್ಲಿ, ಮನೆಗಳಲ್ಲಿಯೂ ನೊಣ ಹಿಡಿಯುವ ಬಲೆಯನ್ನು ಪರಿಣಾಮಕಾರಿಯಾಗಿ ಬಳಸಬಹುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 99008 00033

3 COMMENTS

  1. ಅತ್ಯುತ್ತಮ ಮಾರ್ಗದರ್ಶಿ ವೇದಿಕೆ.ತಮ್ಮ ಲೇಖನಗಳು ಸಾಧ್ಯವಾದಷ್ಟೂ ವೈಜ್ಞಾನಿಕವಾಗಿರಲಿ.ಅಲ್ಲದೆ ವಾಸ್ತವಕ್ಕೆ ಸಮೀಪವಾಗಿರಲಿ.
    ಧನ್ಯವಾದಗಳು.

  2. ನಮಸ್ತೆ sir ನೀವು ತಯಾರಿಸಿದ ಇ ಡೆಮೋ ಟ್ರ್ಯಾಪ್ ನಿಂದ ರೈತರಿಗೆ ತುಂಬಾ ಸಹಾಯವಾಗಿದೆ, ನಿಮಗೆ ತುಂಬು ಹೃದಯದ ಧನ್ಯವಾದಗಳು, ನೀವು ತಯಾರಿಸಿದ ಇ ಸಾಧನ ದಿಂದ ರೈತರಿಗೆ ತುಂಬಾ ಉಪಯೋಗ ವಾಗಿದೆ. ಇದರಿಂದ ಕೊಟ್ಟಿಗೆಯಲ್ಲಿ ನ ನೊಣ ಗಳನ್ನು ಕೊಲ್ಲಬಹುದು, ಜಾನುವಾರುಗಳು ಮೇಯಲು ಹೋದಾಗ, &ಉಳುಮೆಗೆ ಹೋದಾಗ ಅ ಸಮಯದಲ್ಲಿ ನೊಣ ಗಳು ಕಡಿತಕ್ಕೆ ರೈತರಿಗೆ ಏನು ಮಾಡಲು ತೋಚುತಿಲ್ಲಾ ಹಾಗಾಗಿ ಅವರಿಗೆ ಸಲಹೆ ನೀಡಿ ಧನ್ಯವಾದಗಳು.

LEAVE A REPLY

Please enter your comment!
Please enter your name here