ರಾಜ್ಯದ ಕೃಷಿ  ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕ ಪದವಿಗಳ ಶೇಕಡ ೫೦ರಷ್ಟು ಸೀಟುಗಳನ್ನು ರೈತರ ಮಕ್ಕಳಿಗಾಗಿ ಕೃಷಿ ಕೋಟಾದಡಿ ಮೀಸಲಿಡಲಾಗಿದೆ. ಈ ಕುರಿತಾದ ವಿಡಿಯೋವನ್ನು ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಕುಲಪತಿ ಡಾ. ಎಸ್. ರಾಜೇಂದ್ರಪ್ರಸಾದ್ ಅವರು ಬಿಡುಗಡೆ ಮಾಡಿದರು.

ಇದೇ ಸಂದರ್ಭದಲ್ಲಿ ಕುಲಸಚಿವರಾದ ಡಾ: ಬಸವೇ ಗೌಡ, ವಿಸ್ತರಣಾ ನಿರ್ದೇಶಕಾರದ ಡಾ, ಕೆ. ನಾರಾಯಣಗೌಡ ಹಾಗೂ ಹಿರಿಯ ವಾರ್ತಾತಜ್ಞರಾದ ಡಾ. ಕೆ. ಶಿವರಾಮು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಪ್ರಪ್ರಥಮ ಭಾರಿಗೆ ರೈತ ಕುಟುಂಬದ ಪಿ.ಯು.ಸಿ.ಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ತಯಾರಿಸಿದ ಕಿರು ವಿಡಿಯೋವನ್ನು ಕೃಷಿ ವಿಶ್ವವಿದ್ಯಾನಿಲಯದ ಅಧಿಕೃತ ಯೂಟೂಬ್ ಚಾನಲ್‌ನಲ್ಲಿ ಅಫ್‌ಲೋಡ್ ಮಾಡಲಾದ ಲಿಂಕ್ https://youtu.be/xo9J1a3fGvE ಮೂಲಕ ವೀಕ್ಷಿಸಬಹುದು.

ವಿಡಿಯೋದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಕೃಷಿ ವಿಶ್ವವಿದ್ಯಾಲಯ, ಧಾರವಾಡ, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಯಚೂರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ, ಶಿವಮೊಗ್ಗ, ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ಹಾಗೂ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್‌ನ ವಿವಿಧ ಮಹಾವಿದ್ಯಾಲಯಗಳ ವಿವರ, ಸಲ್ಲಿಸಬೇಕಾದ ದಾಖಲಾತಿಗಳು, ಪ್ರಾಯೋಗಿಕ ಪರೀಕ್ಷೆಯ ಒಟ್ಟು ಅಂಕಗಳು, ವಿಷಯಗಳಿಗೆ ಮೀಸಲಾದ ಅಂಕಗಳು ಇನ್ನು ಮುಂತಾದ ಉಪಯುಕ್ತ ಮಾಹಿತಿಯನ್ನು ಒಳಗೊಂಡಿರುತ್ತದೆ.

ಈ ವಿಡಿಯೋವನ್ನು ಎದ್ದೇಳು ರೈತ ಎಂಬ ಯೂಟೂಬ್ ಚಾನಲ್‌ನ https://www.youtube.com/watch?v=2dNGRJC9g1Y ಲಿಂಕ್‌ನಲೂ ಸಹ ವೀಕ್ಷಿಸಬಹುದು.ಈ  ವಿಡಿಯೋವನ್ನು ಕೃಷಿ ಮಾಹಿತಿ ಘಟಕ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಹೊರತಂದಿದೆ.

3 COMMENTS

LEAVE A REPLY

Please enter your comment!
Please enter your name here