Home Blog Page 123
ನೆಮ್ಮದಿಗೆ ಕಂಟಕ ಬಂದಿದ್ದು ಮನುಷ್ಯರಿಂದಲ್ಲ. ಮಂಗಗಳಿಂದ. ಇವುಗಳಿಂದ ತೋಟಗಾರಿಕೆ ಬೆಳೆಗಳನ್ನು ರಕ್ಷಿಸಿಕೊಳ್ಳು ಇವರು ಮಾಡದ ಉಪಾಯಗಳೇ ಇರಲಿಲ್ಲ. ಕೆಲವು ಸಮಯ ಕೆಲಸ ಮಾಡುತ್ತಿದ್ದ ಅವುಗಳು ನಂತರ ನಿಷ್ಪ್ರಯೋಜಕವಾಗುತ್ತಿದ್ದವು. ಆಗ ಮಂಗಗಳನ್ನು ಹತೋಟಿ ಮಾಡಲು ಲೇಸರ್ ಗನ್ ಪರಿಣಾಮಕಾರಿ ಎಂದು ತಿಳಿಯಿತು.
ಇಲಿ ಮತ್ತು ಹೆಗ್ಗಣಗಳು ಮೂಲತಃ ಅನುಮಾನದ ಪ್ರಾಣಿಗಳು. ಉಗ್ರ ವಾಸನೆಯ ವಿಷಗಳನ್ನು ಬೇಗ ಪತ್ತೆಹಚ್ಚಿ ದೂರ ಉಳಿಯುತ್ತವೆ. ಆದ್ದರಿಂದಲೇ ಇಲಿಗಳನ್ನು ಕೊಲ್ಲಲ್ಲು ಉಪಯೋಗಿಸುವ ರಾಸಾಯನಿಕ ವಿಷಗಳು ಅಷ್ಟೊಂದು ಯಶಸ್ವಿಯಾಗುವುದಿಲ್ಲ. ಇದರ ಬದಲಿಗೆ ಗೊಬ್ಬರಗಿಡ ಬಳಸಿ ಇಲಿ – ಹೆಗ್ಗಣಗಳನ್ನು ಸಮರ್ಥವಾಗಿ ನಿಯಂತ್ರಿಸಬಹುದು. ಕೃಷಿಕರೆಲ್ಲರಿಗೂ ಗ್ಲಿರಿಸೀಡಿಯಾ ಸೊಪ್ಪು ಪರಿಚತ. ಇದನ್ನು ಗೊಬ್ಬರದಗಿಡ ಎಂದು ಕರೆಯುತ್ತಾರೆ. ವಾಸ್ತವವಾಗಿ ಈ ಸಸ್ಯವನ್ನು ಗ್ರೀಕ್ ದೇಶದ ಜನರು ಇಲಿ – ಹೆಗ್ಗಣಗಳನ್ನು ನಿಯಂತ್ರಿಸಲು ಬಳಸುತ್ತಿದ್ದರು. ಗ್ರೀಕ್ ಭಾಷೆಯಲ್ಲಿ ಗ್ಲಿರಿ ಎಂದರೆ ಇಲಿ ಎಂದರ್ಥ. ಇಂಥ ಗುಣ ಹೊಂದಿರುವುದರಿಂದಲೇ ಗೊಬ್ಬರದ ಗಿಡವನ್ನು...
'ಹಿತಮಿತ ನೀರು, ಪೋಷಕಾಂಶ ಮತ್ತು ಕೀಟ ನಿರ್ವಹಣೆಗೆ ಜೈವಿಕ ವಿಧಾನ ಅಳವಡಿಸಿಕೊಂಡರೆ ಅತ್ಯುತ್ತಮವಾಗಿ ಮಾವು ಬೆಳೆಯಬಹುದು. ಈ ಮೂರು ತತ್ವಗಳನ್ನು ಅಳವಡಿಸಿಕೊಂಡು ಸಾವಯವ ಪದ್ಧತಿಯಲ್ಲಿ ಮಾವು ಬೆಳೆಯುತ್ತಿದ್ದೇನೆ. ಫಸಲು ಬರುತ್ತಿದ್ದಂತೆಯೇ ಬೇಡಿಕೆ ಹೆಚ್ಚುತ್ತದೆ' ಎಂದು ಆತ್ಮವಿಶ್ವಾಸದಿಂದ ಗಂಗಾಧರಯ್ಯ ಸ್ವಾಮಿ ಹೇಳುತ್ತಾರೆ. ಇವರು ತುಮಕೂರು ಜಿಲ್ಲೆ, ಕುಣಿಗಲ್ ತಾಲೂಕಿನ ಗಿಡದಪಾಳ್ಯ ಗ್ರಾಮದ ತೋಟಗಾರಿಕೆ ಬೆಳೆಗಾರರು. ಹದಿನೈದು ಎಕರೆ ಜಮೀನಿನಲ್ಲಿ ಮಾವು ತೋಟ ಇದೆ. ರಸಪೂರಿ, ಬಾದಾಮಿ, ಮಲ್ಲಿಕಾ, ದಶೇರಿ ಇತ್ಯಾದಿ ತಳಿ ಮರಗಳಿವೆ. ಗಂಗಾಧರಯ್ಯ ಸ್ವಾಮಿ ಅವರ ತಂದೆ ಸಸಿಯಿಂದ ಸಸಿಗೆ 30 ಅಡಿ ಅಂತರ...
ಟಿಶ್ಯೂಕಲ್ಚರ್ ಅಭಿವೃದ್ಧಿ ಅತ್ಯಂತ ಸೂಕ್ಷ್ಮತೆಯ ಕೆಲಸ. ಈ ಸರಣಿಯ ಯಾವುದೇ ಹಂತದಲ್ಲಿ ಲೋಪ ಉಂಟಾದರೂ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂಥ ಸ್ಥಿತಿ. ನುರಿತ ತಂತ್ರಜ್ಞರು, ಕಾರ್ಮಿಕರ ಅವಶ್ಯಕತೆ. ಅಪಾರ ಸಂಖ್ಯೆಯಲ್ಲಿ ಅಭಿವೃದ್ಧಿಪಡಿಸಿದ ಸಸಿಗಳಿಗೆ ಶೀಘ್ರವಾಗಿ ಮಾರುಕಟ್ಟೆ ಒದಗಿಸುವಿಕೆ ಇವೆಲ್ಲದಕ್ಕೂ ಅವಶ್ಯಕವಾಗಿರುವ ಭಾರಿ ಬಂಡವಾಳ, ಇವೆಲ್ಲದರ ಜೊತೆಗೆ ಬಹುದೊಡ್ಡದೊಡ್ಡ ಕಂಪನಿಗಳ ಜೊತೆಯಲ್ಲಿ ನಿರಂತರ ಸ್ಪರ್ಧೆ. ಇವೆಲ್ಲವನ್ನೂ ಸಮನ್ವಯಗೊಳಿಸಿಕೊಂಡು ಅಚ್ಚರಿಪಡುವಂಥ ಸಾಧನೆ ಮಾಡುವುದು ಸಾಧಾರಣ ಸಂಗತಿಯಲ್ಲ. ಇಳಕಲ್ ಸೀರೆ ಜಗತ್ಪ್ರಸಿದ್ಧ. ಬಾಗಲಕೋಟೆ ಜಿಲ್ಲೆಯ ಈ ಊರಿನ ಯುವಕ ಶೈಲೇಶ್ ಅವರು ಕಂಡ ಕನಸುಗಳು ಅಪಾರ....
ಗೇರು ಅಥವಾ ಗೋಡಂಬಿ ಕೃಷಿ. ಪ್ರಯೋಜನಗಳು ಅನೇಕ. ಕರಾವಳಿಗರಿಗೆ ಗೇರು ಕೃಷಿಯು ಒಂದು ವರದಾನ. ಹಲವಾರು ಮಹಿಳೆಯರಿಗೆ ಜೀವನಾಧಾರ; ಬದುಕಿಗೆ ದಾರಿದೀಪ. ಬಹುತೇಕ ಹೆಣ್ಣುಮಕ್ಕಳು ಗೇರು ಸಂಸ್ಕರಣೆಯನ್ನು ಗುಡಿ ಕೈಗಾರಿಕೆಯಾಗಿ ಮಾಡಿಕೊಂಡು ಜೀವನ ನಿರ್ವಹಿಸುತ್ತಿರುವ  ಹಲವಾರು ಉದಾಹರಣೆಗಳನ್ನು  ನೋಡಬಹುದು. ಗೇರು ಸಂಸ್ಕರಣೆಯ ದೊಡ್ಡ ದೊಡ್ಡ ಉದ್ಯಮಗಳಿಂದು ಮೌಲ್ಯವರ್ಧಿತ  ಉತ್ಪನ್ನಗಳಲ್ಲಿ ತೊಡಗಿಸಿಕೊಂಡಿವೆ. ಬಹುಶಃ  ಈ ನಡುವೆ ಗೇರು ಸಂಸ್ಕರಣೆಯನ್ನು ವ್ಯಾಪಾರೀಕರಣಗೊಳಿಸಿದ ಕಾರಣದಿಂದ ಅವರಿಗೆ ಸರಕಾರದಿಂದ ಸಿಗುವ ಹೆಚ್ಚಿನ ಸವಲತ್ತುಗಳಿಗೆ ಕಡಿವಾಣ ಬಿದ್ದಿದೆ. ಆದರೆ ಕೃಷಿ ವಲಯಕ್ಕೆ ಸಿಗುವ ಎಲ್ಲಾ ಸವಲತ್ತುಗಳು ಸಿಗುತ್ತಿವೆ.  ಗೇರು ಬೀಜಕ್ಕೆ, ಅದರ...
ಕಳೆದೆ ಮೂರು ದಶಕಗಳಿಂದ ಬೆಳೆಗಳಿಗೆ ಸಸ್ಯರೋಗ-ಕೀಟ ರೋಗ ಬಾಧೆ ಹೆಚ್ಚಾಗುತ್ತಿದೆ. ಇದಕ್ಕೆ  ಕಾರಣವಾದ ಸಂಗತಿಗಳು ಸಾಕಷ್ಟಿವೆ. ಇವುಗಳಲ್ಲಿ  ಬಹುತೇಕ ರೈತರು ಮಾಗಿ ಉಳುಮೆ ಮಾಡುವುದನ್ನು ಮರೆತಿರುವುದು ಪ್ರಮುಖ ಕಾರಣ. ಇದನ್ನು ಮಾಡುವುದರಿಂದ ಅನೇಕ ರೀತಿಯ ಪ್ರಯೋಜನಗಳಿವೆ. ಆದ್ದರಿಂದಲೇ ಹಿರಿಯರು ' ಬಡವನ ಮಾಗಿ ಉಳುಮೆ ಸಾಹುಕಾರನ ಗೊಬ್ಬರಕ್ಕೆ ಸಮಾನ' ಎಂದೇ ಕರೆಯುತ್ತಿದ್ದರು. ಬಿರುಸಾದ ಬೇಸಿಗೆ ಮಳೆ ಬರುವುದಕ್ಕೆ ಮುಂಚೆ ಜಮೀನನ್ನು ಚೆನ್ನಾಗಿ ಉಳುಮೆ ಮಾಡುವುದು ಸೂಕ್ತ. ಮಾರ್ಚ್ 15 ರಿಂದ ಏಪ್ರಿಲ್ 15 ಇದಕ್ಕೆ ಸೂಕ್ತ ಕಾಲಘಟ್ಟ ಎನ್ನಬಹುದು. ಏಪ್ರಿಲ್ 15ರ ಅಸುಪಾಸಿನಲ್ಲಿ ಸಾಮಾನ್ಯವಾಗಿ...
ಹೈನುಗಾರಿಕೆಯೆಂದರೆ ಯಥೇಚ್ಛವಾಗಿ ಹಿಂಡಿ (ಪಶು ಆಹಾರ) ಖರೀದಿಸಿ ಹಸುಗಳಿಗೆ ನೀಡುವುದಲ್ಲ. ಬದಲು ಯಾವ ರೀತಿಯಲ್ಲಿ ಹಿಂಡಿಯ ಬಳಕೆ ಕಡಿಮೆಗೊಳಿಸಬಹುದು ಎಂಬುದು ಮುಖ್ಯ. ದುಬಾರಿಯಾದ ಹಿಂಡಿ/ದಾಣಿಯನ್ನು ಸಾಧ್ಯವಾದಷ್ಟು ಕಡಿಮೆ ಉಪಯೋಗಿಸಿ ಹೈನುಗಾರಿಕೆ ಕೈಗೊಳ್ಳುವಂತಾದರೆ ಆದಾಯ ಹೆಚ್ಚುತ್ತದೆ. ಬಹುತೇಕ ಹೈನುಗಾರರು ಹಿಂಡಿ ಖರೀದಿಸುವುದರಲ್ಲಿ ತೋರುವ ಉತ್ಸಾಹವನ್ನು ಮೇವು ಬೆಳೆಸಿಕೊಳ್ಳುವುದರಲ್ಲಿ ತೋರಿಸುವುದಿಲ್ಲ. ಉತ್ತಮ ದರ್ಜೆ ಒಣ ಮತ್ತು ಹಸಿರು ಮೇವನ್ನು ನೀಡುವುದರಿಂದ ದುಬಾರಿ ಹಿಂಡಿಯ ಅಗತ್ಯ  ಕಡಿಮೆಯಾಗುತ್ತದೆ. ಹಸಿರು ಮೇವು: ಹೈನುರಾಸುಗಳಿಗೆ ಒಳ್ಳೆಯ ಗುಣಮಟ್ಟದ ಹಸಿರು ಮೇವು ಅಗತ್ಯ. ಇವುಗಳಲ್ಲಿ ರೈತ ತನ್ನ ಕೃಷಿಪದ್ಧತಿ ಮತ್ತು ಅನುಕೂಲ ನೋಡಿಕೊಂಡು...
ಉತ್ತರ ಕರ್ನಾಟಕದಲ್ಲಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸಲು ಕುರಿ ತರುಬಿಸುವಿಕೆ ಕ್ರಮ ಇಳಿಮುಖವಾಗುತ್ತಿದೆ. ರೈತರು ರಾಸಾಯನಿಕ ಗೊಬ್ಬರದ ಹಿಂದೆ ಬಿದ್ದಿರುವುದರಿಂದ ಈ ಪದ್ಧತಿ ಮರೆತಂತಿದೆ. ಇನ್ನಿತರೆ ಭಾಗಗಳಲ್ಲಿ ಕುರಿಗೊಬ್ಬರವನ್ನೇ ಬಳಸುತ್ತಾರಾದರೂ ಅದು ಹೆಚ್ಚು ಪರಿಣಾಮಕಾರಿಯಲ್ಲ. ಮಣ್ಣಿನ ಫಲವತ್ತತೆ ಹೆಚ್ಚಿಸಲು ಕುರಿ ಸಹಾಯಕ. ತರುಬಿಸುವಿಕೆಯಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. (ತರುಬಿಸುವಿಕೆ ಎಂದರೆ ಕುರಿಯ ಹಿಂಡನ್ನು ಜಮೀನಿನಲ್ಲಿ ಬಿಟ್ಟು ಹಿಕ್ಕೆ ಹಾಗೂ ಮೂತ್ರವನ್ನು ವಿಸರ್ಜಿಸುವಂತೆ ಮಾಡುವುದು) ಹಿಕ್ಕೆ ಪೌಷ್ಟಿಕ ಗೊಬ್ಬರವಾಗಿ, ಮೂತ್ರ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 16 ಬಗೆಯ ಪೋಷಕಾಂಶಗಳಿವೆ. ನೇಪಾಳದ ಕೃಷಿ ಸಂಶೋಧನಾ ಸಂಸ್ಥೆ ನಡೆಸಿದ ಪ್ರಯೋಗದಿಂದ...
ಗ್ರಾಮೀಣ ಭಾಗಕ್ಕೆ ಗೋಬರ್ ಗ್ಯಾಸ್ ಹೊಸದೇನಲ್ಲ. ಆದರಿದು ಮನೆ ಬಳಕೆಗೆ ಮಾತ್ರ ಸೀಮಿತವಾಗಿತ್ತು. ಇದನ್ನು ನೀರೆತ್ತುವ ಪಂಪ್ಸೆಟ್ಗಳಿಗೆ ಬಳಸಿದರೆ ಹೇಗೆ? ಹೌದು, ಈ ರೀತಿಯ ಒಂದು ಪ್ರಯತ್ನ ಕೃಷಿ ವಿವಿಯ ಹಿರಿಯ ಸಂಶೋಧಕೃಷಿ ವಿ. ಕುಮಾರ ಗೌಡ ಮಾಡಿದ್ದಾರೆ. ಹೆಸರು ಜೈವಿಕ ಅನಿಲ ಘಟಕ. ಕರೆಂಟ್ ಕಣ್ಣಾ ಮುಚ್ಚಾಲೆಗೆ ಬೇಸತ್ತ ರೈತರಿಗೆ ಗೋಬರ್ ಗ್ಯಾಸ್ ಕೈ ಹಿಡಿಯಬಹುದು. ಇದರಿಂದ ಹೆಚ್ಚಿನ ಪ್ರಮಾಣದ ವಿದ್ಯುತ್ ಲಭ್ಯ. ಗೋಬರ್ ಗ್ಯಾಸ್ನಲ್ಲಿ ಶೇ. 60ರಷ್ಟು ಮಾತ್ರ ಮೀಥೆಲ್ ಅಂಶ ಇರುತ್ತೆ. ಮಿಕ್ಕಿದ್ದು ಕಾರ್ಬನ್ ಡೈ ಆಕ್ಸೆ„ಡ್. ಇದನ್ನು...
ತರಕಾರಿಗಳ ಕೃಷಿಗೆ ಪ್ರೋತ್ಸಾಹ ಅಗತ್ಯವಿರುವುದನ್ನು ರಾಜ್ಯ ಸರ್ಕಾರ ಗಮನಿಸಿದೆ. ಈ ಹಿನ್ನೆಲೆಯಲ್ಲಿ ಬೆಳೆಗಾರರಿಗೆ ಅಗತ್ಯ ಸಹಾಯಧನವನ್ನು ನೀಡಲು ನಿರ್ಧರಿಸಿದೆ. ಈಗಾಗಲೇ ರಾಜ್ಯದಲ್ಲಿ ಕೃಷಿಭಾಗ್ಯ ಯೋಜನೆ ಜಾರಿಯಲ್ಲಿದೆ. ಇದೇ ಯೋಜನೆಯಡಿ ಈ ಸಹಾಯಧಾನವನ್ನು ನೀಡಲು ನಿರ್ಧರಿಸಿದ್ದು 2018-19 ನೇ ಸಾಲಿನಲ್ಲಿ ''ತರಕಾರಿ ಬೀಜಗಳ ಕಿಟ್ ವಿತರಣೆ'' ಕಾರ್ಯಕ್ರಮ ಅನುಷ್ಠಾನಕ್ಕೆ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆ ವ್ಯಾಪ್ತಿಗೆ ರಾಜ್ಯದ ಎಲ್ಲ ಜಿಲ್ಲೆಗಳು ಒಳಪಡುತ್ತವೆ. 15.00 ಕೋಟಿ ರೂ.ಗಳನ್ನು ವಿನಿಯೋಗಿಸಿ ಉತ್ತಮ ರೀತಿಯಲ್ಲಿ ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಈ ಯೋಜನೆ ಅನುಷ್ಠಾನದ ಜವಾಬ್ದಾರಿಯನ್ನು ತೋಟಗಾರಿಕೆ ಇಲಾಖೆಗೆ ವಹಿಸಲಾಗಿದೆ.  ಪ್ರತಿ ಒಂದು...

Recent Posts