ಪ್ರಸ್ತುತ RCEP ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲ. ಆದರೆ ಸಹಿ ಹಾಕುವುದೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿಲ್ಲ. ಇದರಿಂದ ಅಪಾಯದ ತೂಗುಕತ್ತಿ ನೆತ್ತಿಯ ಮೇಲಿದೆ ಎಂಬ ಭೀತಿಯೂ ಇದೆ. ಒಂದು ವೇಳೆ ದೇಶವಿರುವ ಆರ್ಥಿಕ ಸಾಮರ್ಥ್ಯದ ಸ್ಥಿತಿಯಲ್ಲಿ ಈ ಒಪ್ಪಂದಕ್ಕೇನಾದರೂ ಒಪ್ಪಿಕೊಂಡರೆ ಏನೆಲ್ಲ ಆಗಬಹುದು ಎಂಬುದನ್ನು ಲೇಖಕರು ಪರಿಪರಿಯಾಗಿ ವಿವರಿಸಿದ್ದಾರೆ. ಮುಕ್ತ ವ್ಯಾಪಾರ ನೀತಿಯಿಂದ ಅಮೆರಿಕಾದಂಥ ಆರ್ಥಿಕ ಬಲಿಷ್ಠ ರಾಷ್ಟ್ರದಲ್ಲಿ ಉಂಟಾಗಿರುವ ಸ್ಥಿತಿಯನ್ನೂ ವಿವೇಚಿಸಿದ್ದಾರೆ.
ಚೈನಾದಿಂದ 2000ನೇ ಇಸವಿಯಿಂದೀಚೆಗೆ ಅಮೆರಿಕಾ ರಾಷ್ಟ್ರಕ್ಕೆ ಪಾದರಕ್ಷೆಗಳು, ನೀರು ನಿರೋಧಕ ಉಡುಪುಗಳು ನಿರಂತರವಾಗಿ, ಅನಿಯಮಿತ ಪ್ರಮಾಣದಲ್ಲಿ ರಫ್ತಾಗುತ್ತಿವೆ. ಮಾರುಕಟ್ಟೆಯಲ್ಲಿ...
ಕೃಷಿ ವಿಶ್ವವಿದ್ಯಾಲಯಗಳ ಸ್ಥಾಪನೆ ಮೂಲ ಉದ್ದೇಶವೇ ಬೋಧನೆ –ಸಂಶೋಧನೆ – ವಿಸ್ತರಣೆ. ಪ್ರತಿಯೊಂದು ಕಾರ್ಯವೂ ಪರಸ್ಪರ ತಳಕು ಹಾಕಿಕೊಂಡಿದೆ. ಯಾವುದರೊಂದರ ಎಳೆ ತಪ್ಪಿದರೂ ಮೂಲಲಯದ ಹಳಿ ತಪ್ಪುತ್ತದೆ. ಇಂಥ ಕಾರ್ಯಗಳು ಹಳಿತಪ್ಪದಂತೆ ನೋಡಿಕೊಳ್ಳುವ ಜವಾಬ್ದಾರಿ ವಿಶ್ವವಿದ್ಯಾಲಯದ ಉನ್ನತ ಸ್ಥಾನಗಳಲ್ಲಿ ಇರುವವರ ಮೇಲಿರುತ್ತದೆ. ಇಂಥ ಒಂದು ಮಹತ್ತರ ಜವಾಬ್ದಾರಿಯಾದ ವಿಸ್ತರಣಾ ನಿರ್ದೇಶಕರ ಸ್ಥಾನದಲ್ಲಿದ್ದ ಡಾ. ಎಂ.ಎಸ್. ನಟರಾಜ್ ಅವರು ಅಕ್ಟೋಬರ್ 31, 2019ರಂದು ಸೇವೆಯಿಂದ ನಿವೃತ್ತರಾದರು.ಈ ಸಂದರ್ಭದಲ್ಲಿ "ಅಗ್ರಿಕಲ್ಚರ್ ಇಂಡಿಯಾ" ಅವರನ್ನು ಮಾತನಾಡಿಸಿತು. ತಮ್ಮ ಸುದೀರ್ಘ ಸೇವೆ ಅನುಭವಗಳನ್ನು ಅವರು ಹಂಚಿಕೊಂಡಿದ್ದಾರೆ- ಸಂಪಾದಕರು
ಮೂಲತಃ ನಾನು...
Milk that which is equal to nectar (Amruth) and Mahal represented the office which manages Wild Cattle of the Royal Palace. Originally Karuhatti’ establishment of Vijayanagar Viceroy at Srirangapatna consisted of selected breed of Cows brought from Vijayanagar, has initiated the Cattle development activity for the supply of milk and milk products to the palace, some time during 1512.
During...
ಅತೀ ಉತ್ಪಾದನೆ ನಾಗಲೋಟದಲ್ಲಿ ತೊಡಗಿದ್ದೇವೆ. ಏಕೆ, ಏನು, ಏತ್ತ ಎಂದು ಆಲೋಚಿಸಲೇ ಹೋಗುತ್ತಿಲ್ಲ. ಉತ್ಪಾದನೆಯೇನೊ ಅತಿಯಾಯ್ತು, ಅವುಗಳನ್ನು ಏನು ಮಾಡೋದು; ಬಡಪಾಯಿ ಭಾರತ, ಅದರಂಥ ರಾಷ್ಟ್ರಗಳಿಗೆ ತಂದು ಸುರಿಯೋದು, ಇಲ್ಲಿರುವವರನ್ನು ಬೀದಿಪಾಲು ಮಾಡೋದು. ಇಂಥ ಒಪ್ಪಂದಗಳಿಗೆ ಆರ್.ಸಿ.ಇ.ಪಿ. ಎಂಬ ಉದ್ದದ ಆಕರ್ಷಕ ಹೆಸರುಗಳು. ಈ ಬಾರಿಯೇನೊ ಭಾರತದ ಗ್ರಾಮೀಣರು ಜೋರಾಗಿಯೇ ಪ್ರತಿಭಟಿಸಿದ್ದಾರೆ. ಇದರಿಂದ ಕೇಂದ್ರ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕಲು ಹಿಂಜರಿದಿದೆ. 15 ರಾಷ್ಟ್ರಗಳು ಸಹಿ ಹಾಕಿವೆ; ಭಾರತವೂ ಯಾವಾಗ ಬರುತ್ತದೊ ಎಂದು ತುದಿಗಾಲಲ್ಲಿ ಕಾಯುತ್ತಿವೆ. ಇಂಥ ಸಂದರ್ಭದಲ್ಲಿ ಇಂಥ ಅನಾಹುತಗಳಿಗೆಲ್ಲ ಕಾರಣವಾಗುವ...
शिकायतों के बिना एक समारोह आयोजित करना मुश्किल है। ऐसी स्थिति में कृषि मेला जैसा कार्यक्रम को निभाना और भी निभाना किस तरह मुश्किल होगा सोचिये | आरंभिक चरण में दिखाई नहीं दिखाई देनेवाले समस्याएं व्यावहारिक चरण में दिखाई दे सकती हैं। किस तरह की समस्याएं आसकती है, समस्याओंको कैसे सुधारे? इन सब अंशो पे ध्यान दिया जाय तो,...
RCEP ಬಗ್ಗೆ ನಾನು ಅಭಿಪ್ರಾಯ ಹೇಳುವುದಿಲ್ಲ. ಅಂಕಿ ಅಂಶ ಕೊಡುತ್ತೇನಷ್ಟೆ! ಆಸ್ಟ್ರೇಲಿಯಾ ದಲ್ಲಿ ವರ್ಷಕ್ಕೆ ಒಂಬೈನೂರಾ ಮೂವತ್ತು ಕೋಟಿ ಲೀಟರು ಹಾಲು ಉತ್ಪಾದನೆ ಆಗುತ್ತದೆ. ಜನಸಂಖ್ಯೆ ಎರಡೂವರೆ ಕೋಟಿ. ಒಬ್ಬರು ಸರಾಸರಿ ನೂರೈವತ್ತು ಲೀಟರು ಹಾಲು ಕುಡಿಯುತ್ತಾರೆ ಎಂದು ಅಂದಾಜಿಸಲಾಗಿದೆ.
ಮುನ್ನೂರೈವತ್ತು ಕೋಟಿ ಲೀಟರ್ ಹಾಲು ಖರ್ಚಾದರೂ ವರ್ಷಕ್ಕೆ ಒಂಬೈನೂರು ಕೋಟಿ ಹತ್ತಿರತ್ತಿರ ಲೀಟರುಗಳು ಹಾಗೇ ಉಳಿಯುತ್ತದೆ. ಹಾಲು ಉತ್ಪಾದಕರಿಗೆ ಲೀಟರಿಗೆ ನಲವತ್ತೇಳು ಸೆಂಟ್ ಹಣ (ಇಪ್ಪತ್ತೆರಡು ರೂ) ಕೊಡಲಾಗುತ್ತದೆ. ದೊಡ್ಡ ದೊಡ್ಡ ಶೈತ್ಯಾಗಾರ ಹಡಗುಗಳಲ್ಲಿ ಹಾಲನ್ನು ಇಂಡಿಯಾಗೆ ಸಾಗಿಸಲು ಲೀಟರಿಗೆ ಹೆಚ್ಚೆಂದರೆ ಒಂದು...
ಬೆಂಗಳೂರಿನ ಗಾಂಧೀ ಕೃಷಿವಿಜ್ಞಾನ ಕೇಂದ್ರದ ಆವರಣದಲ್ಲಿ ನಾಲ್ಕುದಿನ ನಡೆದ ಕೃಷಿಮೇಳ ಇಂದು ತೆರೆಕಂಡಿತು. ಹಬ್ಬದ ದಿನವಾಗಿದ್ದರೂ ಅಪಾರ ಸಂಖ್ಯೆಯಲ್ಲಿ ರೈತರು, ಆಸಕ್ತರು ಭೇಟಿ ನೀಡಿದ್ದು ವಿಶೇಷವಾಗಿತ್ತು. ರೈತರು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡರು. ತಾಕುಗಳಿಗೆ ಭೇಟಿನೀಡಿ ಪ್ರಾತ್ಯಕ್ಷಿಕೆಗಳನ್ನು ವೀಕ್ಷಿಸಿದರು. ಕೃಷಿವಿಜ್ಞಾನಿಗಳೊಂದಿಗೆ ಚರ್ಚಿಸಿದರು.
ಸಮಾರೋಪ ಸಮಾರಂಭದಲ್ಲಿ ಉಪ ಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಅಶ್ವಥನಾರಾಯಣ, ಸಚಿವ ಮಾಧುಸ್ವಾಮಿ, ಸಂಸದ ಬಚ್ಚೇಗೌಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಗೋವಿಂದ ಕಾರಜೋಳ ಅವರು “ದಶಕಗಳ ಹಿಂದೆ ಮಾಡುತ್ತಿದ್ದ ಕೃಷಿಪದ್ದತಿಗಳು ವೈವಿಧ್ಯಮಯವಾಗಿತ್ತು. ಕೃಷಿಕರು ಬಿತ್ತನೆಬೀಜಗಳಿಗಾಗಿ ಇತರರ ಮೊರೆ ಹೋಗುತ್ತಿರಲಿಲ್ಲ. ನಾನಾ ವಿಧದ...
ಆರ್.ಸಿ.ಇ.ಪಿ. ಒಪ್ಪಂದ ಜಾರಿಯಾಗದಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಸಂಸದರ ನಿಯೋಗ ಕರೆದೊಯ್ಯಲಾಗುವುದೆಂದು ಮುಖ್ಯಮಂತ್ರಿ ಹೇಳಿದ್ದಾರೆ. ಸಂಸದರನ್ನು ಕರೆದುಕೊಂಡು ಹೋಗುವುದಕ್ಕೂ ಮೊದಲು ರೈತ ಮುಖಂಡರು, ಕೃಷಿಕ್ಷೇತ್ರದ ತಜ್ಞರು, ವಿರೋಧ ಪಕ್ಷಗಳ ಪ್ರಮುಖರ ಸಭೆ ಕರೆದು ಚರ್ಚಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಬೆಂಗಳೂರು ನಗರದ ಜಿಕೆವಿಕೆಯಲ್ಲಿ ನಡೆದ ಕೃಷಿಮೇಳದ ಎರಡನೇ ದಿನದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಹಸಿವಿನಿಂದ ಬಳಲುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಹಸಿವು ನಿವಾರಣೆಯಾಗದೆ ಹೋದರೆ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆಹಾರ ಧಾನ್ಯಗಳು, ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳ ಉತ್ಪಾದನೆ...
ಬೆಂಗಳೂರು ಕೃಷಿಮೇಳಕ್ಕೆ ಬಂದವರು ವಿಶ್ವವಿದ್ಯಾಲಯವೇ ಮುತುವರ್ಜಿ ವಹಿಸಿ ವ್ಯವಸ್ಥೆ ಮಾಡುವ ಸಾಂಪ್ರದಾಯಿಕ ಶೈಲಿಯ ಊಟ ಮಾಡದೇ ಹಿಂದಿರುಗಲಾರರು. ಬೆಂಗಳೂರಿನ ಪಾರಂಪಾರಿಕ ಶೈಲಿಯ ಆಹಾರವೇ ಅದಕ್ಕೆ ಕಾರಣ. ವಿದೇಶಿಯರು ಸಹ ಇಲ್ಲಿನ ಊಟದ ರುಚಿಗೆ ಮಾರು ಹೋಗಿದ್ದಾರೆ.
ಇಂದು ಕೃಷಿಮೇಳದ ಉದ್ಘಾಟನೆ. ಮೇಳವನ್ನು ನೋಡಿ, ಕೃಷಿಜ್ಞಾನ ಹೆಚ್ಚಿಸಿಕೊಳ್ಳಲು ನಾಡಿನ ಮೂಲೆಮೂಲೆಯಿಂದ ಕೃಷಿಕರು-ಆಸಕ್ತರು ಬಂದಿದ್ದರು. ಮಧ್ಯಾಹ್ನದ ವೇಳೆಗೆ ಅವರೇಕಾಳು ಸಾರಿನ ಘಮ ಎಲ್ಲೆಡೆ ಹರಡಿತು. ಆ ಹೊತ್ತಿಗೆ ಹೊಟ್ಟೆಯೂ ತಾಳ ಹಾಕತೊಡಗಿತು. ಊಟ ಬಡಿಸುವ ಪೆಂಡಾಲಿನ ಮುಂದೆ ಆಗಲೇ ಬಹು ಉದ್ದದ ಕ್ಯೂ. ಒಂದು ಊಟಕ್ಕೆ 50...