ಲೆಮನ್ ಗ್ರಾಸ್ ಸಸ್ಯವು ಪ್ರಾಚೀನ ಕಾಲದಿಂದಲೂ ಆಹಾರದಲ್ಲಿ ಬಳಸಲಾಗುತ್ತಿದೆ. ಇದು ನೋವು ಮತ್ತು ಊತವನ್ನು ನಿವಾರಿಸಲು, ಜ್ವರವನ್ನು ಕಡಿಮೆ ಮಾಡಲು, ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಸುಧಾರಿಸಲು, ಗರ್ಭಾಶಯ ಮತ್ತು ಮುಟ್ಟಿನ ಹರಿವನ್ನು ಉತ್ತೇಜಿಸಲು ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವ ಸಸ್ಯವಾಗಿದೆ.
ಮೂತ್ರಪಿಂಡದ ಸಮಸ್ಯೆ ಗುಣಪಡಿಸಲು ಲೆಮನ್ ಗ್ರಾಸ್ ರಾಮಬಾಣವಾಗಿದೆ. ಇದನ್ನು ಸಿಟ್ರೋನೆಲ್ಲಾ, ಚೈನಾ ಹುಲ್ಲು, ಭಾರತೀಯ ನಿಂಬೆ ಹುಲ್ಲು, ಮಲಬಾರ್ ಹುಲ್ಲು ಮತ್ತು ಕೊಚ್ಚಿನ್ ಹುಲ್ಲು ಎಂದೂ ಕರೆಯಲಾಗುತ್ತದೆ. ಲೆಮನ್ ಗ್ರಾಸ್ ದಕ್ಷಿಣ ಏಷ್ಯಾದ ಅಡುಗೆ ಮನೆಗಳಲ್ಲಿ ಅತ್ಯಂತ ಜನಪ್ರಿಯವಾಗಿ ಬಳಸುವ ಪದಾರ್ಥಗಳಲ್ಲಿ ಒಂದಾಗಿದೆ. ಇದು ನಿಂಬೆ ಪರಿಮಳವನ್ನು ಹೊಂದಿದೆ, ಇದನ್ನು ಚಹಾ, ಸಾರು, ಕಷಾಯ ತಯಾರಿಸುವಲ್ಲಿ ಬಳಸಲಾಗುತ್ತದೆ.
ಲೆಮನ್ ಗ್ರಾಸ್ ಗಿಡಮೂಲಿಕೆಯು ತನ್ನ ವಿಶಿಷ್ಟ ರುಚಿ ಮತ್ತು ಆರೋಗ್ಯಕರ ಪ್ರಯೋಜನಗಳಿಗೂ ಹೆಸರುವಾಸಿ. ಆದ್ದರಿಂದ, ಮನೆಗಳಲ್ಲಿ ಅದರ ಔಷಧೀಯ ಪ್ರಾಮುಖ್ಯತೆಗಾಗಿ ಸಾಮಾನ್ಯ ಶೀತ, ಕೆಮ್ಮು, ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಇತರ ಅದೇ ರೀತಿಯ ಪರಿಸ್ಥಿತಿಗಳಂತಹ ವಿವಿಧ ಸಮಸ್ಯೆಗಳಿಗೆ ಇದನ್ನು ಪರಿಹಾರವಾಗಿ ಬಳಸಲಾಗುತ್ತದೆ.
ಲೆಮನ್ ಗ್ರಾಸ್ ಮೂತ್ರಪಿಂಡಗಳಿಗೆ ಪ್ರಯೋಜನಕಾರಿ
ಇದು ವಿಶೇಷವಾಗಿ ನಮ್ಮ ಮೂತ್ರಪಿಂಡಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಲೆಮನ್ ಗ್ರಾಸ್ ನಮ್ಮ ದೇಹದೊಳಗಿನ ವಿಷವನ್ನು ಹೊರಹಾಕುತ್ತದೆ. ಏಕೆಂದರೆ ಇದು ಮೂತ್ರವರ್ಧಕ ಗುಣಗಳನ್ನು ಹೊಂದಿದೆ. ಸಾಮಾನ್ಯ ವ್ಯಕ್ತಿಯು ದಿನಕ್ಕೆ 10 ರಿಂದ 12 ಬಾರಿ ಶೌಚಾಲಯಕ್ಕೆ ಹೋಗುವುದು ಸರಿ ಎಂದು ಪರಿಗಣಿಸಲಾಗುತ್ತದೆ. ನಿಂಬೆ ಹುಲ್ಲು ಮೂತ್ರಪಿಂಡಗಳನ್ನು ಸ್ವಚ್ಛವಾಗಿಡುತ್ತದೆ.
ರಕ್ತ ಪರಿಚಲನೆಯಲ್ಲಿ ಸುಧಾರಣೆ
ಲೆಮನ್ ಗ್ರಾಸ್ ಕೆಂಪು ರಕ್ತ ಕಣಗಳ ಮೇಲೆ ಪರಿಣಾಮ ಬೀರಲು ಹೆಸರುವಾಸಿ. ಇದರ ಚಹಾ ಕುಡಿಯುವ ಮೂಲಕ ಎಲ್ಲಾ ಆರೋಗ್ಯಕರ ಪ್ರಯೋಜನಗಳನ್ನು ಪಡೆಯಬಹುದು. ಈ ನೈಸರ್ಗಿಕ ಗಿಡಮೂಲಿಕೆಯನ್ನು ನಿಯಮಿತವಾಗಿ ಸೇವಿಸಿದರೆ ಕೆಂಪು ರಕ್ತ ಕಣಗಳನ್ನು ಉತ್ಪಾದಿಸುತ್ತದೆ.
ಲೆಮನ್ ಗ್ರಾಸ್ ಅನ್ನು ಆಹಾರದಲ್ಲಿ ಬಳಸುವುದರಿಂದ ದೇಹದಲ್ಲಿ ಉತ್ತಮ ರಕ್ತದ ಹರಿವನ್ನು ಪ್ರೋತ್ಸಾಹಿಸುತ್ತದೆ. ದೇಹದ ವ್ಯವಸ್ಥೆಯಾದ್ಯಂತ ರಕ್ತ ಪರಿಚಲನೆ ಇದ್ದಾಗ ಇತರ ಅಂಗಗಳು ಸಹ ಸರಿಯಾಗಿ ಕಾರ್ಯನಿರ್ವಹಿಸುತ್ತವೆ. ಇದರಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು.
ಹೊಟ್ಟೆ ಉಬ್ಬರ ನಿವಾರಣೆ
ಲೆಮನ್ ಗ್ರಾಸ್ ಹೊಟ್ಟೆ ಉಬ್ಬರದಿಂದ ಉಂಟಾಗುವ ನೀರಿನ ಧಾರಣವನ್ನು ನಿವಾರಿಸಬಹುದು. ಈ ಗಿಡಮೂಲಿಕೆಯು ಮೂತ್ರವರ್ಧಕವಾಗಿರುವುದರಿಂದ, ಮೂತ್ರಪಿಂಡವನ್ನು ಸ್ವಚ್ಚಗೊಳಿಸುತ್ತದೆ. ಇದು ದೇಹದಿಂದ ವಿಷವನ್ನು ಹೊರಹಾಕುತ್ತದೆ. ಇದು ದೇಹದಲ್ಲಿ ಅತಿಯಾದ ಸೋಡಿಯಂ ಅನ್ನು ಹೊರಹಾಕಲು ಸಹಕರಿಸುತ್ತದೆ.
ದೇಹದಲ್ಲಿ ಅತಿಯಾದ ಸೋಡಿಯಂ ಪಾರ್ಶ್ವವಾಯು, ಮೂತ್ರಪಿಂಡದ ಕಲ್ಲುಗಳು, ಕ್ಯಾನ್ಸರ್ ಮತ್ತು ಅಂತಹ ಇತರ ಗಂಭೀರ ಪರಿಸ್ಥಿತಿಗಳಿಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ಈ ಗಿಡಮೂಲಿಕೆಯು ಸೌಮ್ಯ ಮೂತ್ರಪಿಂಡದ ಪರಿಸ್ಥಿತಿಗಳನ್ನು ಗುಣಪಡಿಸುತ್ತದೆ ಮತ್ತು ಮೂತ್ರಪಿಂಡಗಳು ಸುಗಮವಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ.
ಲೇಖಕರು: ಡಾ. ಮಹಾಂತೇಶ್ ಜೋಗಿ, ಸಹಾಯಕ ಪ್ರಾಧ್ಯಾಪಕರು, ಕೃಷಿ ಕಾಲೇಕು, ಕಲ್ಬುರ್ಗಿ, ದೂರವಾಣಿ: 8105453873